ಕೋಲಾರ,ನ.16: ವಿದ್ಯಾರ್ಥಿಗಳು ಸಾಧನೆಯ ಮೂಲಕ ಸಾಕಾರಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಮಂಗಳ ಅವರು ತಿಳಿಸಿದರು.ತಾಲೂಕಿನ ಕ್ಯಾಲನೂರು ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನೀಡುವ ಹೃದಯ ಪೌಂಡೇಶನ್ ಬೆಂಗಳೂರು ವತಿಯಿಂದ ಪಿಂಕ್ ರೂಂ ಹಾಗೂ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಹೆಣ್ಣುಮಕ್ಕಳು ಋತುಮತಿ ಆದ ಸಂದರ್ಭದಲ್ಲಿ ಮುಜುಗರ ಆಗುವುದು ಬೇಡ ಅದೊಂದು ಸಹಜ ಜೈವಿಕ ಕ್ರಿಯೆ ಆಗಿದ್ದು ಅದನ್ನು ಸಮರ್ಥವಾಗಿ ಎದುರಿಸಬೇಕೆಂದ ಅವರು, ಈ ಬಗ್ಗೆ ಆತಂಕ ಪಡುವುದು ಬೇಡ ಎಂದರು.ನೀಡುವ ಹೃದಯ ಪೌಂಡೇಶನ್ನ ಸಂಸ್ಥಾಪಕ ಆಂಟೋನಿ ಸುಜಿತ್ […]
ಶ್ರೀನಿವಾಸಪುರ: ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಉದ್ಘಾಟಿಸಿದರು. “ದಿನನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಸಿ” ಗಡಿನಾಡಿನ ಜನರು ತಮ್ಮ ದಿನನಿತ್ಯದ ವ್ಯವಹಾರದಲ್ಲಿ ಕನ್ನಡ ಭಾಷೆ ಬಳಸುವುದರ ಮೂಲಕ ಭಾಷಾಭಿವೃದ್ಧಿಗೆ ಸಹಕರಿಸಬೇಕು. ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಟೊಂಕಕಟ್ಟಿ ನಿಲ್ಲಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಯಲ್ದೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ […]
ಕೋಲಾರ,ನ.14: ಡಿ.ಸಿ.ಸಿ ಬ್ಯಾಂಕ್ ಗೆ ಚುನಾವಣೆ ದಿನಾಂಕ ನಿಗದಿ ಮಾಡಿ ಸ್ಥಗಿತವಾಗಿರುವ ಸಾಲ ವಿತರಣೆ ಮಾಡಿ ಖಾಸಗಿ ಪೈನಾನ್ಸ್ ಹಾವಳಿಯಿಂದ ಗ್ರಾಮೀಣ ಪ್ರದೇಶದ ರೈತ ಕೂಲಿಕಾರ್ಮಿಕ ಹಾಗೂ ಮಹಿಳೆಯರನ್ನು ರಕ್ಷಣೆ ಮಾಡುವಂತೆ ರೈತ ಸಂಘದಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಕೋಳಿಗಳು ಹಾಗೂ ನಷ್ಟ ಬೆಳೆ ಸಮೇತ ಹೋರಾಟ ಮಾಡಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಡಿ.ಸಿ.ಸಿ ಬ್ಯಾಂಕ್ ಚುನಾವಣೆ ನಡೆಸದೆ ಇರಲು ಕಾರಣವೇನು? ಯಾರು ಬ್ಯಾಂಕಿನ ಅಭಿವೃದ್ದಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಹತ್ತು […]
ಕೋಲಾರ : ಗ್ರಂಥಾಲಯಗಳು ಅರಿವಿನ ಜ್ಞಾನದೀವಿಗೆಗಳು. ಇಷ್ಟಪಟ್ಟು ಓದಲು ಬರುವವರಿಗೆ, ಜ್ಞಾನದ ಹೊಸ ಹೊಳಹನ್ನು ನೀಡುವ ಅಕ್ಷಯ ಭಂಡಾರಗಳಾಗಿವೇ. ಗ್ರಂಥಾಲಯಗಳ ಸಂಪನ್ಮೂಲಗಳು ಎಂದಿಗೂ ಎಲ್ಲಿಯೂ ಬತ್ತಿಹೋಗುವುದಿಲ್ಲ. ಪ್ರಾಚೀನ ಕಾಲದಲ್ಲಿ ಮುದ್ರಾಣಾಲಯಗಳಿರಲಿಲ್ಲ. ಆದ್ದರಿಂದ ಜ್ಞಾನವನ್ನು ಸಂಪಾದಿಸಲು ಬಹಳ ಕಷ್ಟಪಡಬೇಕಾಗುತ್ತಿತ್ತು. ಈಗ ಗ್ರಂಥಗಳು ನಮಗೆ ಬೇಕಾದ ವಿಷಯಗಳನ್ನು ತಿಳಿಸಲು ಸಿದ್ಧವಿರುವುವು. ನಾವು ಬೇಕಾದಾಗ ಗ್ರಂಥಾಲಯಕ್ಕೆ ಹೋಗಿ ಬೇಕಾದ ಗ್ರಂಥಗಳನ್ನು ಓದಿ ಜ್ಞಾನ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಅಭಿಪ್ರಾಯಾಪಟ್ಟರು. ಇಂದು ಜಿಲ್ಲಾ ಕೇಂದ್ರ ಗ್ರಂಥಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ […]
ಶ್ರೀನಿವಾಸಪುರ : ಪಟ್ಟಣದ ನ್ಯಾಯಾಲಯದ ವಕೀಲರು ನ್ಯಾಯಾಲಯದ ಕಲಾಪಗಳಿಗೆ ಹಾಜರಾಗದೆ ಅನಿರ್ಧಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಹಲವು ವರ್ಷಗಳ ವಕೀಲರ ಬೇಡಿಕೆಯಂತೆ ಪಟ್ಟಣದಿಂದ ಚಿಂತಾಮಣಿ ಸಂಪರ್ಕ ಕಲ್ಪಿಸುವ ರಸ್ತೆ ಕಾಲೋನಿ ಕ್ರಾಸ್ ಬಳಿ ೫ ಎಕರೆ ಪ್ರದೇಶದಲ್ಲಿ ಅಂದಾಜು ೧೫ ಕೋಟಿ ವೆಚ್ಚದಲ್ಲಿ ನೂತನ ನ್ಯಾಯಾಲಯ ಹಾಗೂ ನ್ಯಾಯಾಧೀಶರ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು ನೂತನವಾಗಿ ನಿರ್ಮಾಣವಾಗುತ್ತಿರುವ ನ್ಯಾಯಾಲಯದ ಕಲಾಪ ಆವರಣ ತುಂಬಾ ಚಿಕ್ಕದಾಗಿದೆಯೆಂದು ವಕೀಲರು ಬೇಸರ ವ್ಯಕ್ತಪಡಿಸಿ ಹಲವು ಬಾರಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದರು ಮನವಿ ಮಾಡಿದರೂ […]
ಶ್ರೀನಿವಾಸಪುರ : ಸಭೆಯಲ್ಲಿ ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳ ಸಾರ್ವಜನಿಕರು ಭಾಗವಹಿಸಿದ್ದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಜನ ಸಾಮಾನ್ಯರಿಗೆ ಎದುರಾಗುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಕೋಲಾರ ಜಿಲ್ಲಾ ಎಸ್ ಪಿ ಬಿ ನಿಖಿಲ್ ರವರು ತಿಳಿಸಿದರು.ತಾಲೂಕಿನ ಗೌನಿಪಲ್ಲಿ ಗ್ರಾಮದ ಎಸ್ಎಲ್ವಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನ ಸಂಪರ್ಕ ಸಭೆಯನ್ನು ಉದ್ಗಾಟಿಸಿ ಮಾತನಾಡಿದರು.ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗಡಿ ಮುಂಗಟ್ಟುಗಳಲ್ಲಿ ಹಾಗೂ ಮನೆಗಳ […]
ಶ್ರೀನಿವಾಸಪುರ:ಪುರಸಭಾ ಕಚೇರಿಯ ಸಭಾಂಗಣದಲ್ಲಿಂದು ಪುರಸಭಾ ಅಧ್ಯಕ್ಷರಾದ ಬಿ.ಆರ್. ಭಾಸ್ಕರ್ ರವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು. ಜಿಲ್ಲಾ ವಿಪತ್ತು ಉಪಶಮನ ನಿಧಿಯಡಿ ಪುರಸಭೆಗೆ ಹಂಚಿಕೆಯಾಗಿರುವ ರೂ.50.00 ಲಕ್ಷಗಳ ಅನುದಾನಕ್ಕೆ ಸಿದ್ಧಪಡಿಸಿರುವ ಕ್ರಿಯಾ ಯೋಜನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಿವಿಧ ಅನುದಾನದಡಿ ಸ್ವೀಕೃತಗೊಂಡ ಏಕಮಾತ್ರ ಟೆಂಡರ್ ಗಳನ್ನು ಸಭೆಯಲ್ಲಿ ಅನುಮೋದಿಸಲಾಯಿತು. ಇದೇ ಸಂದರ್ಭದಲ್ಲಿ ಪುರಸಭೆಯ ನೂತನ ನಾಮನಿರ್ದೇಶನ ಸದಸ್ಯರಾದ ಗಂಗಾಧರ್, ಶಫೀವುಲ್ಲಾ, ನರಸಿಂಹಮೂರ್ತಿ, ಹೇಮಂತ್ ಕುಮಾರ್, ಶಿವರಾಜ್ ರವರುಗಳನ್ನು ಸ್ವಾಗತಿಸಿ, ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಉಪಾಧ್ಯಕ್ಷರಾದ […]
ಕೋಲಾರ : ಸರ್ಕಾರಿ ದತ್ತು ಸಂಸ್ಥೆಯು 0-6 ವರ್ಷದೊಳಗಿನ ಕುಟುಂಬದ ಪ್ರೀತಿ ವಂಚಿತ, ಅನಾಥ, ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳ ಪುನರ್ವಸತಿಗೆ ನೆರವಾಗುವ ಒಂದು ಸೂಕ್ತ ಸಂಸ್ಥೆಯಾಗಿದೆಯೆಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಅಭಿಪ್ರಾಯಪಟ್ಟರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಿಷನ್ ವಾತ್ಸಲ್ಯ ಯೋಜನೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ವತಿಯಿಂದ ಹಮ್ಮಿಕೊಂಡಿದ್ದ, ಇಲಾಖೆಯ ವಿವಿಧ ಯೋಜನೆಗಳ ಎರಡನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, […]
ಶ್ರೀನಿವಾಸಪುರ : ಕನ್ನಡಬಾಷೆಯ ಬಗ್ಗೆ ಬಾಷಾಭಿಮಾನವಿರಲಿ ಆದರೆ ದುರಾಭಿಮಾನಬೇಡ ದೀಪದಿಂದ ದೀಪ ಬೆಳಗುವಂತೆ ಕನ್ನಡ ಭಾಷೆ ಪ್ರಪಂಚದಾದ್ಯಂತ ಪಸರಿಸಲಿ ಕನ್ನಡ ಭಾಷೆ ಶ್ರೀಮಂತವಾಗಿದ್ದು ಇದನ್ನು ಉಳಿಸಿ ಬೆಳಸುವ ಹೊಣಗಾರಿಕೆ ನಮ್ಮಲ್ಲೆರ ಮೇಲಿದೆ ಎಂದು ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ ಹೇಳಿದರು.ತಾಲೂಕಿನ ರೋಣುರು ಕ್ರಾಸ್ನ ವಿಐಪಿ ಶಾಲೆಯಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕನ್ನಡ ಭಾಷೆಯು ಮನೆ ಮಾತು ಆಗಬೇಕು. ಬೇರೆ ಬಾಷೆಯೊಂದಿಗೆ ಅಭಿಮಾನ ಇರಬೇಕು, ಕನ್ನಡ ಬಾಷೆಯ ಬಗ್ಗೆ ಹೆಚ್ಚು ಅಭಿಮಾನ ಇರಬೇಕು. ಪ್ರತಿ ದಿನ […]