
ಕೋಲಾರ:- ತಾಲ್ಲೂಕಿನ 18 ಕೇಂದ್ರಗಳಲ್ಲಿ ಮಾ.25 ರಿಂದ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 5029 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದು, ಪರೀಕ್ಷಾ ಕಾರ್ಯಕ್ಕೆ ನೇಮಕಗೊಂಡಿರುವ ಕೊಠಡಿ ಮೇಲ್ವಿಚಾರಕರು ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಸುಗಮ ಪರೀಕ್ಷೆ ನಡೆಸಿಕೊಡಿ ಎಂದು ತಾಲ್ಲೂಕು ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಮುನಿರತ್ನಯ್ಯಶೆಟ್ಟಿ ಕಿವಿಮಾತು ಹೇಳಿದರು.ನಗರದ ಅಲ್‍ಅಮೀನ್ ಶಾಲೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೇಮಕಗೊಂಡ ಕೊಠಡಿ ಮೇಲ್ವಿಚಾರಕರಿಗಾಗಿ ಹಮ್ಮಿಕೊಂಡಿದ್ದ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಕೇಂದ್ರಗಳಲ್ಲಿ ಮೂಲಸೌಲಭ್ಯಗಳ ಕುರಿತು ಬಿಇಒ ಎಸ್.ಎನ್.ಕನ್ನಯ್ಯ ಮಾರ್ಗದರ್ಶನದಲ್ಲಿ ಎಲ್ಲಾ ಅಗತ್ಯ […]

ಶ್ರೀನಿವಾಸಪುರ: ತಾಲೂಕಿನ ಇಲ್ದೋಣಿ ಗ್ರಾಮದ ಅಸ್ಲಾಂಪಾಷ ಎಂಬುವವರ ಸರ್ವೆ ನಂ 168ರ 4 ಎಕರೆ ಮಾವಿನ ತೋಟಕ್ಕೆ ಗುರುವಾರ ಮಧ್ಯ್ಯಾಹ್ನ ಆಕಸ್ಮಿಕ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಕೋಲಾರದಿಂದ ಅಗ್ನಿಶಾಮಕ ದಳವು ಸಮಯಕ್ಕೆ ಸರಿಯಾಗಿ ಬಂದು ಅಗ್ನಿನಂದಿಸುವ ಕಾರ್ಯದಲ್ಲಿ ಯಶ್ವಸಿಯಾಗಿದ್ದು, ಮಾವಿನ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ 3ಲಕ್ಷ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ ಅಗ್ನಿಶಾಮಕದಳದ ಅಧಿಕಾರಿ ಮಾಹಿತಿ ನೀಡಿದರು.

ಶ್ರೀನಿವಾಸಪುರ ತಾಲ್ಲೂಕಿನ ಗೌನಪಲ್ಲಿಯ ಆದಿರಾಜಹಳ್ಳಿ ಗ್ರಾಮದ ಎ.ಆರ್.ನಾಗರಾ ಜ್‍ರವರು ಬೆಂಗಳೂರಿನ ಬ್ಯಾಟರಾಯನಪುರ ಸಂಚಾರಿ ಠಾಣೆಯ ಪಿಎಸ್‍ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಇತ್ತೀಚೆಗೆ ಅವರ ಠಾಣಾ ವ್ಯಾಪ್ತಿಯಲ್ಲಿ ಸಂಪ್‍ಗೆ ಬಿದ್ದಿದ್ದ ಮಗು ಜೀವ ಉಳಿಸಿ ಕೋಲಾರ ಜಿಲ್ಲೆ ಹೆಮ್ಮೆಯ ಪುತ್ರರಾ ಗಿದ್ದಾರೆ. ಘಟನೆ ವಿವರ : ಬೆಂಗಳೂರಿನ ಬ್ಯಾಡರಹಳ್ಳಿಯ ಬಿಇಎ ಲ್ ಲೇಔಟ್‍ನಲ್ಲಿ ಮಾರ್ಚ್ 6 ರಂದು ಬುಧವಾರ ಮಧ್ಯಾಹ್ನ 3-30ರಲ್ಲಿ ಸುಮಾರಿಗೆ ಕರ್ತವ್ಯಕ್ಕೆ ಹಾಜರಾಗಲು ಮನೆಯಿಂದ ಪೋಲಿಸ್ ಠಾಣೆಗೆ ಕಡೆಗೆ ದ್ವಿಚಕ ವಾಹನದಲ್ಲಿ ಬರುತ್ತಿದ್ದರು. ಈ ವೇಳೆ […]

ಕೋಲಾರ : ವ್ಯಕ್ತಿಯ ಕೊಲೆ ಪ್ರಕರಣದಲ್ಲಿ 4 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 2 ಲಕ್ಷ 32 ಸಾವಿರ ರೂ. ದಂಡ ವಿಧಿಸಿ ಇಲ್ಲಿನ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪುನೀಡಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 06-06-2017 ರಂದು ಆವಣಿ ಗ್ರಾಮದ ನಾಗಭೂಷಣ್ ಎಂಬುವರನ್ನು ಆಸ್ತಿ ವಿವಾದದ ಹಿನ್ನಲೆಯಲ್ಲಿ ಕೊಲೆ ಮಾಡಲಾಗಿತ್ತು, ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಅದೇ ಗ್ರಾಮದ ನಾರಾಯಣಸ್ವಾಮಿ, ಗೋಪಾಲ್, ಸುರೇಶ್, ಶಿವಪ್ಪ ಈ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. […]

ಶ್ರೀನಿವಾಸಪುರ : ಪಟ್ಟಣದ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಛೇರಿ ಮುಂದೆ ಬುಧವಾರ ಶ್ರೀನಿವಾಸಪುರ ತಾಲೂಕು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಬಳಗದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಬಳಗದ ರಾಜ್ಯಾಧ್ಯಾಧ್ಯಕ್ಷ ಕೋದಂಡರಾಮ ಮಾತನಾಡಿ ತಾಲೂಕಿನ ಗಾಂಡ್ಲಹಳ್ಳಿ ಗ್ರಾಮದಲ್ಲಿನ ದಲಿತ ಕಾಲೋನಿಯಲ್ಲಿ ಸರ್ಕಾರಿ ರಸ್ತೆಗೆ ಹನುಮಯ್ಯ ಬಿನ್ ಲೇಟ್ ಮುನಿಬೈರಪ್ಪ ಮತ್ತು ಮಕ್ಕಳು ಸೇರಿ ಸರ್ಕಾರಿ ರಸ್ತೆಗೆ ಅಡ್ಡಲಾಗಿ ಕಾಂಪೌಡ್ ಮತ್ತು ಮನೆಯ ಶೆಡ್‍ನ್ನು ನಿರ್ಮಿಸುತ್ತಿದ್ದು, ಇದರಿಂದ ದಲಿತ ಕಾಲೋನಿ ನಿವಾಸಿಗಳು ಮೂಲಭೂತ ಸೌಕರ್ಯಗಳನ್ನು ಪಡೆಯಲು ತುಂಬಾ ತೊಂದರೆಯಾಗಿ ಮತ್ತು ಸುಮಾರು […]

ಶ್ರೀನಿವಾಸಪುರ, ಮಾ-13, ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಅನಧಿಕೃತ ಹುದ್ದೆಗಳನ್ನು ಸೃಷ್ಟಿ ಮಾಡುತ್ತಿರುವ ಶಿಶು ಅಭಿವೃದ್ದಿ ಅಧಿಕಾರಿ ವಿರುದ್ದ ಕಾನೂನು ಕ್ರಮ ಕೈಗೊಂಡು, ಶಿಥಲಗೊಂಡಿರುವ ಅಂಗನವಾಡಿ ಕೇಂದ್ರಗಳ ದುರಸ್ತಿಗೆ ಅನುದಾನ ಬಿಡುಗಡೆ ಮಾಡಿ ಮಕ್ಕಳ ಆಹಾರವನ್ನು ಕಾಳಸಂತೆಯಲ್ಲಿ ಮಾರಾಟ ದಂದೆ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡಬೇಕೆಂದು ರೈತ ಸಂಘದಿಂದ ಶಿಶು ಅಭಿವೃದ್ದಿ ಇಲಾಖೆ ಮುಂದೆ ಹೋರಾಟ ಮಾಡಿ ಶಿಶು ಅಭಿವೃದ್ಧಿ ಅಧಿಕಾರಿ ನವೀನ ಮುಖಾಂತರ ಉಪ ನಿರ್ದೇಶಕರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.ಸರ್ಕಾರ ನಿಯಮದ ಪ್ರಕಾರ ಅಂಗನವಾಡಿ […]

ಶ್ರೀನಿವಾಸಪುರ : ಕಾಂಗ್ರೆಸ್ ಸರ್ಕಾರ ಶಿಕ್ಷಕ, ಶಿಕ್ಷಣ, ವಿದ್ಯಾರ್ಥಿ ಹಾಗು ಶಿಕ್ಷಣ ಸಂಸ್ಥೆಗಳನ್ನು ಕಂಡರೆ ಅರ್ಲಜಿ. ಹಾಗಾಗಿ ಕಾಂಗ್ರೆಸ್ ಸರ್ಕಾರ ಶಿಕ್ಷಕರ ಪರವಾಗಿ ಯಾವುದೇ ಯೋಜನೆಗಳನ್ನು ತರುವುದಿಲ್ಲ ಎಂದು ಆಗ್ನೇಯ ಪದವಿದರ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಟೀಕಿಸಿದರು. ಪಟ್ಟಣದ ವೆಂಕಟೇಗೌಡ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಗ್ನೇಯ ಪಧವಿ ದರ ಕ್ಷೇತ್ರದ ಚುನಾವಣೆಯ ಪೂರ್ವಬಾವಿಯಾಗಿ ನಡೆದ ಸಭೆಯ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಯಾವ ಯಾವ ಕಾಲಘಟಕದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಳ್ವಿಕೆಗೆ ಬಂದಿದೆಯೋ ಅಷ್ಟೋ […]

ಕೋಲಾರ/ ಮಾರ್ಚ್ 12 (ಹಿ.ಸ) : ಮಹಿಳೆಯರ ಸಾಧನೆಗಳನ್ನು ಆಚರಿಸಲು ಮತ್ತು ತ್ಯಾಗಗಳನ್ನು ಸ್ಮರಿಸಲು ಮಾರ್ಚ್ ತಿಂಗಳು ಅತ್ಯಂತ ಪೂರಕವಾಗಿದೆ ಎಂದು ಕ.ಸಾ.ಪ ಜಿಲ್ಲಾಧ್ಯಕ್ಷ ಎನ್.ಬಿ.ಗೋಪಾಲಗೌಡ ಅಭಿಪ್ರಾಯಪಟ್ಟರು.ಅವರು ನಗರದ ಸರ್ಕಾರಿ ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ನಮ್ಮ ಜೀವನದಲ್ಲಿ ಪ್ರತಿಯೊಬ್ಬ ಮಹಿಳೆಯು ತನ್ನ ತ್ಯಾಗ, ನಾಯಕತ್ವ, ಬದ್ಧತೆ ಮತ್ತು ಸಹಾನುಭೂತಿಗೆ ಮನ್ನಣೆ ನೀಡಬೇಕು. ಜೀವನದಲ್ಲಿ ಮಹಿಳೆಯರು ವಿಶೇಷ ಮತ್ತು ಮೆಚ್ಚುಗೆಯನ್ನು ಅನುಭವಿಸುವಂತೆ ಮಾಡಲು […]

ಕೋಲಾರ / 12 ಮಾರ್ಚ್ : ನೆಹರು ಯುವ ಕೇಂದ್ರ ಕೋಲಾರ, ಬೆಂಗಳೂರು ಮಹಿಳಾ ಸಂಘ ಹಾಗೂ ಸಂಭ್ರಮ್ ಇನ್ಟ್‍ಟ್ಯೂಟ್ ಆಫ್ ನರ್ಸಿಂಗ್ ಕಾಲೇಜು ಇರವರುಗಳ ಸಹಯೋಗದಲ್ಲಿ ಸಂಭ್ರಮ್ ಕಾಲೇಜಿನಲ್ಲಿ ಕೆ.ಜಿ.ಎಫ್ ತಾಲ್ಲೂಕು ಮಟ್ಟದ ಕ್ರೀಡಾಕೂಟ ಹಾಗೂ ಮಹಿಳಾ ದಿನಾಚರಣೆಯನ್ನು ನ್ಯಾಯಾಧೀಶರಾದ 3ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾದೀಶರು ಗಣಪತಿ ಗುರುಸಿದ್ಧ ಬಾದಾಮಿ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನ್ಯಾಯಾಧೀಶರಾದ ಮುಜಫರ್ ಎ.ಮಂಜರಿ ಮಾತನಾಡಿ ಹೆಣ್ಣು ಕೇವಲ ಮಹಿಳೆ ಅಲ್ಲ. ಅವಳು ಒಂದು […]