ಶ್ರೀನಿವಾಸಪುರ 3 : ವಿವೇಕಾನಂದರು ಯುವಕರಿಗೆ ಮಾರ್ಗದರ್ಶಕರಾಗಿದ್ದರು ಎಂದು ಪ್ರಾಂಶುಪಾಲ ಸಿ.ಆರ್.ಪ್ರಾಣೇಶ್ ಹೇಳಿದರು.ಪಟ್ಟಣದ ಬಾಲಕೀಯರ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಶ್ರೀನಿವಾಸಪುರ ಘಟಕವತಿಯಿಂದ ರಾಷ್ಟೀಯ ಯುವಕರ ದಿನ ಮತ್ತು ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅಧ್ಯಾತ್ಮದ ಮೂಲಕ ತನ್ನ ಮನಸ್ಥಿತಿಯನ್ನು ಸಮತೋಲನವಾಗಿ ಇಟ್ಟುಕೊಳ್ಳಲು ಸಾಧ್ಯವೆಂಬುದನ್ನು ವಿವೇಕಾನಂದರ ಜೀನದಿಂದ ಅರಿಯಲು ಸಾಧ್ಯ ಎಂದರು. ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಮಾಹಿತಿ ನೀಡಿದರು.ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ತಾಲೂಕು ಅಧ್ಯಕ್ಷ ಜೆ.ಗೋಪಿನಾಥ್, ಉಪನ್ಯಾಸಕರಾದ ಎನ್.ವಾಸು, ಪಿ.ಎಸ್.ಮಂಜುಳ, ಸಾದಿಯಾ, […]
ಶ್ರೀನಿವಾಸಪುರ 1 : ನಿನ್ನೆಯಷ್ಟೆ (ಬುಧವಾರ) ಎಂಜಿರಸ್ತೆ ಬದಿಗಳಲ್ಲಿ ಅವರೇಕಾಯಿ ವ್ಯಾಪಾರ ವಹಿವಾಟು ಮಾಡದೆ, ಕೃಷಿ ಮಾರುಕಟ್ಟೆಯಲ್ಲಿ ಮಾಡುವಂತೆ ಎಚ್ಚರಿಕೆ ನೀಡಿದ್ದರೂ ಸಹ ಪುನಃ ಎಂಜಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವುದು ಸರಿಯಲ್ಲ ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ವ್ಯಾಪಾರಿಗಳ ವಿರುದ್ಧ ಗರಂ ಆಗಿ ರೇಗಾಡಿದರು.ಪಟ್ಟಣದ ಎಂಜಿ ರಸ್ತೆಯಲ್ಲಿ ಗುರುವಾರ ಅವರೆಕಾಯಿ ವ್ಯಾಪಾರ ವಹಿವಾಟನ್ನು ಮಾಡುತ್ತಿದ್ದ ವ್ಯಾಪಾರಿಗಳಿಗೆ ಪುನಃ ಎಚ್ಚರಿಕೆ ಕೊಟ್ಟು ಮಾತನಾಡಿದರು.ವ್ಯಾಪಾರಿಗಳು ಸಂಕ್ರಾತಿ ಹಬ್ಬದ ವರೆಗೂ ನಮಗೆ ಇಲ್ಲಿ ವ್ಯಾಪಾರ ವಹಿವಾಟು ಮಾಡಲು ಅವಕಾಶ ಕೊಡಿ ಎಂದು […]
ಶ್ರೀನಿವಾಸಪುರ 1 : ಕೊಲೆಯ ಹಿಂದೆ ಒಂದು ಸಂಚು ಇದ್ದು, ಕೊಲೆಯನ್ನು ಏಕೆ ಮಾಡಿದರು, ಯಾರು ಮಾಡಿಸಿದರು ಎಂಬುದನ್ನ ಆರೋಪಿಗಳಿಂದ ನಿಜವಾದ ಸತ್ಯವನ್ನು ಬಹಿರಂಗಗೊಳಿಸಬೇಕಿದೆ ಎಂದು ದಿವಗಂತ ಎಂ.ಶ್ರೀನಿವಾಸನ್ ಧರ್ಮಪತ್ನಿ ಡಾ|| ಚಂದ್ರಕಳಾಶ್ರೀನಿವಾಸನ್ ಒತ್ತಾಯಿಸಿದರು.ಪಟ್ಟಣದ ಮಾಜಿ ಜಿಲ್ಲಾಪಂಚಾಯಿತಿ ಅಧ್ಯಕ್ಷ ದಿ||ಎಂ.ಶ್ರೀನಿವಾಸನ್ ರವರ ಮನೆಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಎಂ.ಶ್ರೀನಿವಾಸನ್ ಅವರಿಲ್ಲದ ತಬ್ಬಲಿತನವು ನಮ್ಮ ಕುಟುಂಬ ವರ್ಗವನ್ನು ಎಷ್ಟು ಕಾಡುತ್ತಿದೆಯೋ ಅಷ್ಟೇ ತಬ್ಬಲಿತನವನ್ನು ನಮ್ಮ ಬಂಧು-ಬಳಗ ಹಾಗು ಸಮಸ್ತ ಸಾರ್ವಜನಕರ ಬಂಧುಗಳೂ ಅನುಭವಿಸುತ್ತಿದೆ. ಇಂತಹ ದೈರ್ಯಶಾಲಿ ಜನನಾಯಕನನ್ನು ನಮಗಾರಿಗೂ […]
ಶ್ರೀನಿವಾಸಪುರ : ಗ್ರಾಮಗಳ ಅಭಿವೃದ್ಧಿಗಾಗಿ ಎಲ್ಲ ಸದಸ್ಯರು ಕೈಜೋಡಿಸಿ, ಸಲಹೆ, ಸಹಕಾರ ನೀಡಬೇಕು ಎಂದು ಗ್ರಾ.ಪಂ .ಅಧ್ಯಕ್ಷ ಸಿ.ಎಸ್.ಶ್ರೀನಿವಾಸ್ ಸದಸ್ಯರನ್ನ ಮನವಿ ಮಾಡಿದರು.ತಾಲೂಕಿನ ಕಸಬಾ ಹೋಬಳಿಯ ಚಲ್ದಿಗಾನಹಳ್ಳಿ ಗ್ರಾಮದಲ್ಲಿನ ಗ್ರಾಮಪಂಚಾಯಿತಿ ಕಛೇರಿಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.ಗ್ರಾಮಗಳ ಅಭಿವೃದ್ಧಿಗಾಗಿ ಎಲ್ಲಾ ಸದಸ್ಯರಿಗೂ ಸಮಪಾಲುನೊಂದಿಗೆ ಅನುದಾನಗಳನ್ನು ಹಂಚಿಕೆ ಮಾಡಲಾಗುವುದು. ಎಲ್ಲಾ ಗ್ರಾಮಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರು, ಬೀದಿ ದೀಪಗಳು, ಚರಂಡಿಗಳ ನಿರ್ಮಾಣ, ಸ್ವಚ್ಚತೆ, ವಸತಿಯೋಜನೆಗಳಿಗೆ ಸಂಬಂದಿಸಿದಂತೆ ಗ್ರಾಮಪಂಚಾಯಿತಿಗೆ ಬರುವ ಅನುದಾನಗಳನ್ನು ಪಂಚಾಯಿತಿ ಅಭಿವೃದ್ಧಿಗಾಗಿ ಬಳಸಲು […]
ಶ್ರೀನಿವಾಸಪುರ : ಪಟ್ಟಣದ ಪುರಸಭೆ ಕಛೇರಿ ಪಕ್ಕದ ಮಾರುಕಟ್ಟೆ ಸಂಕೀರ್ಣದಲ್ಲಿ ಮಂಗಳವಾರ ಇವಿಯಂ ಜಾಗೃತಿ ತರಬೇತಿ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ಅಂಗಡಿ ವ್ಯಾಪಾರಿಗಳು ವಿವಿಪ್ಯಾಟ್ ನಲ್ಲಿ ತಾವು ದಾಖಲಿಸಿದ ಮತಗಳ ಬಗ್ಗೆ ಖಾತ್ರಿ ಪಡೆದರು. ಮತ್ತು ಇವಿಯಂ ಮತದಾನದ ಬಗ್ಗೆ ವಿಶ್ವಾಸವ್ಯಕ್ತಪಡಿಸಿದರು.ತರಬೇತಿಯನ್ನು ಸೆಕ್ಟರ್ ಅಧಿಕಾರಿ ಜಿ.ಕೆ. ನಾರಾಯಣಸ್ವಾಮಿ ನಡೆಸಿಕೊಟ್ಟರು. ಮಾಸ್ಟರ್ ಟ್ರೈನರ್ ವಿ.ತಿಪ್ಪಣ್ಣ, ಪುರಸಭೆ ಮುಖ್ಯಾಧಿಕಾರಿ ವೈ,ಎನ್.ಸತ್ಯನಾರಾಯಣ್, ವ್ಯವಸ್ಥಾಪಕ ನವೀನ್ಚಂದ್ರ, ಪುರಸಭೆ ಹಿರಿಯ ಸದಸ್ಯ ಬಿ.ವೆಂಕಟರೆಡ್ಡಿ, ಕಛೇರಿ ಸಿಬ್ಬಂದಿ ಎನ್.ಶಂಕರ್, ನಾಗೇಶ್ ಇದ್ದರು
ಕೋಲಾರ ಜ.09 ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರ ಮೇಲೆ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ಮಂಗಳವಾರ ನಗರದ ಹೊರವಲಯದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರವನ್ನು ವಜಾ ಗೊಳಿಸುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಅರುಣ್ ಪ್ರಕಾಶ್, ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ 6 ತಿಂಗಳಿನಿಂದ ಹಿಂದೂ ಸಂಘಟನೆಗಳು ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಕಿರುಕುಳ, ಸುಳ್ಳು ಮೊಕದ್ದಮೆ,ಜೈಲ್ […]
ಕೋಲಾರ,ಜ,.08: ತಾಲೂಕಿನ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಸ್ವಯಂ ಘೋಷಿತ ಹಿರಿಯ ಸಹಕಾರಿಗಳಿಗೆ ಹಾಗೂ ಕಾಂಗ್ರೆಸ್ ಮುಖಂಡರಿಗೆ ರೈತ ಸಮುದಾಯವು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಿಎಂಆರ್ ಶ್ರೀನಾಥ್ ತಿಳಿಸಿದರು.ಭಾನುವಾರ ನಡೆದ ಟಿಎಪಿಸಿಎಂಎಸ್ ಚುನಾವಣೆಯ ಫಲಿತಾಂಶವನ್ನು ಕುರಿತು ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ರೈತರ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದ್ದ ಟಿಎಪಿಸಿಎಂಎಸ್ ಸಹಕಾರಿಗಳು ತಮ್ಮ ಸ್ವಾರ್ಥಕ್ಕೆ ಬಳಕೆಯಾಗಿದ್ದೇ ಹೆಚ್ಚು ಇಂತಹ ಸಂದರ್ಭದಲ್ಲಿ ಜಿಲ್ಲೆಯ ಸಹಕಾರಿಗಳ ಮಾರ್ಗದರ್ಶನದಲ್ಲಿ ಈ ಚುನಾವಣೆಯನ್ನು ಎದುರಿಸಲಾಗಿತ್ತು.ತಾಲೂಕಿನ ಟಿಎಪಿಸಿಎಂಎಸ್ ಸಹಕಾರಿ ಸಂಸ್ಥೆಯಲ್ಲಿ ಸುಮಾರು 1980 ರಲ್ಲಿ ನಡೆದ ಚುನಾವಣೆಯೇ […]
ಶ್ರೀನಿವಾಸಪುರ: ಶ್ರೀನಿವಾಸಪುರ ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ವೈ.ಆರ್.ನಾಗೇಂದ್ರಬಾಬು ರವರನ್ನ ಭಾನುವಾರ ದಾವಣಗರೆಯಲ್ಲಿ ನಡೆದ ಕರ್ನಾಟಕ ರಾಜ್ಯ ವಾಸವಿಕನ್ಯಕಾಪರಮೇಶ್ವರಿ ದೇವಾಲಯಗಳ ಒಕ್ಕೂಟ ಪ್ರಥಮ ಸಮಾವೇಶದಲ್ಲಿ ಮೆಡಲ್ ನೀಡುವುದರ ಮೂಲಕ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ವಾಸವಿಕನ್ಯಕಾಪರಮೇಶ್ವರಿ ದೇವಾಲಯದ ಒಕ್ಕೂಟದ ಅಧ್ಯಕ್ಷ ಪ್ರಭಾಕರ್, ಕರ್ನಾಟಕ ಆರ್ಯವೈಶ್ಯ ಮಹಾಸಭಾ ನಿರ್ದೇಶಕ ಎಸ್.ಆರ್. ಅಮರನಾಥ್, ಶ್ರೀನಿವಾಸಪುರ ಆರ್ಯವೈಶ್ಯ ಸಂಘದ ಸದಸ್ಯ ಎಸ್.ವಿ.ರಾಮನಾಥ್ ಇದ್ದರು
ಟೇಕಲ್ ಜ 8 : ಮಾಲೂರು ತಾಲ್ಲೂಕಿನ ಶಾಸಕರು ಹಾಗೂ ಕೋಚಿಮುಲ್ ಅಧ್ಯಕ್ಷರಾದ ಕೆ.ವೈ.ನಂಜೇಗೌಡರಿಗೆ ಸೋಮವಾರ ಅವರ ಮನೆ, ಜೆಲ್ಲಿ ಕ್ರಷರ್ ಹಾಗೂ ಆಪ್ತರ ಮನೆಗಳ ಮೇಲೆ ಮುಂಜಾನೆಯಿಂದಲೇ ಕೇಂದ್ರದ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವರ ಸ್ವಗ್ರಾಮ ಟೇಕಲ್ನ ಕೊಮ್ಮನಹಳ್ಳಿಯ ಮನೆಗೆ ಮುಂಜಾನೆ 5-30 ಗಂಟೆಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಶಾಸಕರು ಕಣ್ಣು ಬಿಡುವ ಹೊತ್ತಿಗೆ ಇಡಿ ಅಧಿಕಾರಿಯು ಮನೆಯೊಳಗೆ ಪ್ರವೇಶಿಸಿ ಅವರ ಬಳಿ ಎಲ್ಲಾ ಮಾಹಿತಿಯನ್ನು ಪಡೆದಿದ್ದಾರೆ. ಕೆಲವು ಮೂಲ […]