ಕೋಲಾರ:- ಹಿಂದಿ ಕಲಿಕೆಯಿಂದ ರಾಜ್ಯದ ವಿದ್ಯಾರ್ಥಿಗಳನ್ನು ವಂಚಿಸುವುದರಿಂದ ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅನ್ಯಾಯವಾಗಲಿದೆ ಈ ಹಿನ್ನಲೆಯಲ್ಲಿ ತೃತೀಯ ಭಾಷೆ ಜತೆಜತೆಗೆ ಪ್ರೌಢಶಾಲೆಯ ಎಲ್ಲಾ ಮಕ್ಕಳಿಗೂ ಎನ್ಎಸ್ಕ್ಯೂಎಫ್ ಅಡಿ ವೃತ್ತಿಕೌಶಲ ಯೋಜನೆ ಅನುಷ್ಟಾನಗೊಳಿಸುವಂತೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘ ಶಾಲಾ ಶಿಕ್ಷಣ ಉಪನಿರ್ದೇಶಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.ಜಿಲ್ಲೆಯ ವಿವಿಧ ಶಿಕ್ಷಕ ಸಂಘಟನೆಗಳ ನೇತೃತ್ವದಲ್ಲಿ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ವಿ.ವಿ.ರಾಮಕೃಷ್ಣಪ್ಪ, ಪ್ರಸಕ್ತ ಶೈಕ್ಷಣಿಕ ವರ್ಷದಿಂದ […]
ಶ್ರೀನಿವಾಸಪುರ : ಮಾವು ಬೆಳೆಯನ್ನು ನಂಬಿಕೊಂಡಿರುವ ರೈತರಿಗೆ ಮಾವು ಬೆಳೆಯು ಬಹುತೇಕ ಕೈಕೊಟ್ಟಿತ್ತು. ಆದರೆ ಈ ಭಾರಿ ಟೊಮೇಟೊ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದು ಟಮೋಟೋ ಬೆಳೆಯನ್ನು ಬೆಳೆದ ರೈತನಿಗೆ ಜಾಕ್ಪಾಟ್ಬೆಳೆಯನ್ನು ಬೆಳೆದ ರೈತನಿಗೆ ಒಂದು ರೀತಿಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದು, ರೈತನಿಗೆ ಜಾಕ್ಪಾಟ್ ಹೊಡೆಯುತ್ತಿದೆ. ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ಟೊಮೇಟೊ ವಹಿವಾಟು ಜೋರಾಗಿ ನಡೆಯಿತು. 15 ಕೆಜಿ ತೂಗುವ ಟೊಮೇಟೊ ಬಾಕ್ಸೊಂದು ರೂ. 850 ದವರೆಗೆ ಮಾರಾಟವಾಯಿತು.ತಾಲೂಕಿನ ಬುಹುತೇಕ ಟೊಮೇಟೊ ಬೆಳೆಗಳಿಗೆ ನುಶಿ ರೋಗವು ಹರಡಿದ್ದು […]
ಕೋಲಾರ:- ಕೋಲಾರ ಕ್ರೀಡಾ ಸಂಘದ ಗರಡಿಯಲ್ಲಿ ಕೃಷ್ಣಮೂರ್ತಿ ಮತ್ತು ಸುರೇಶಬಾಬುರವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಅಗ್ನಿಪಥ ಯೋಜನೆಯಡಿ ಸೈನ್ಯಕ್ಕೆ ಆಯ್ಕೆಗೊಂಡು ಇದೀಗ ಸೇನಾ ತರಬೇತಿ ಮುಗಿಸಿ ಕರ್ತವ್ಯಕ್ಕೆ ಹಾಜರಾಗಲು ಹೊರಟ ಅಗ್ನಿವೀರರಿಗೆ ಶುಭಹಾರೈಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.ನಗರದ ಜಯನಗರದ ಅಂಬೇಡ್ಕರ್ ಮಕ್ಕಳ ಉದ್ಯಾನವದಲ್ಲಿರುವ ಹುತಾತ್ಮ ಸೈನಿಕ ಸ್ಮಾರಕಕ್ಕೆ ಆಯ್ಕೆಯಾದ ಎಲ್ಲಾ ಅಗ್ನಿವೀರರು ಗೌರವ ವಂದನೆ ಸಲ್ಲಿಸುವ ಮೂಲಕ ತಮ್ಮ ಕರ್ತವ್ಯಕ್ಕೆ ತೆರಳಲು ಸಜ್ಜಾಗಿದ್ದು ವಿಶೇಷವಾಗಿತ್ತು.ಅಗ್ನಿವೀರರಾದ ಬಾಲಾಜಿ ಟಿ.ಎಚ್, ತೊರದೇವಂಡಹಳ್ಳಿಯ ವಿನಯ್ಟಿ.ಎಸ್., ಕುಂಬಾರಹಳ್ಳಿಯ ನಾಗರಾಜಪ್ರಸಾದ್, ತೊಟ್ಟಿಗಾನಹಳ್ಳಿಯ ಪವನ್ಎಸ್, ಬಾರಂಡಳ್ಳಿಯ ಶ್ರೀನಿವಾಸ […]
ಕೋಲಾರ / 14 ಜೂನ್ : ಕೋಲಾರದಲ್ಲಿ ನಿವೃತ್ತ ಪೊಲೀಸರಿಗೆ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ತುರ್ತು ಚಿಕಿತ್ಸೆಗೆ ಆಸ್ಪತ್ರೆಗಳ ಗುರ್ತಿಸಲು ಮನವಿ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ತುರ್ತು ಚಿಕಿತ್ಸೆ ಪಡೆಯಲು ಆಸ್ಪತ್ರೆಗಳನ್ನು ಗುರ್ತಿಸಿ ಸೇರ್ಪಡೆಗೊಳಿಸಲು ಕ್ರಮ ತೆಗೆದುಕೊಳ್ಳುವ ನಿವೃತ್ತ ಎ.ಎಸ್.ಐ. ಗೌರಿಪೇಟೆ ಕೆ.ಎನ್. ರವೀಂದ್ರನಾಥ್ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಮಾಡಿದರು.ಕೋಲಾರ ನಗರದ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಿವೃತ್ತ ನೌಕರರಿಗೆ ಏರ್ಪಡಿಸಿದ್ದ ಸಭೆಯಲ್ಲಿ ಮನವಿ ಪತ್ರವನ್ನು ನೀಡಿದರು.ಪೆÇಲೀಸ್ ಮಹಾ ನಿರೀಕ್ಷಕರಾದ ವೇದಮೂರ್ತಿ.ರೆ. ಐ.ಪಿ.ಎಸ್. ರವರ ಈ-ಮೇಲ್ ಪ್ಯಾಕ್ಸ್ ಸಂದೇಶ […]
ಶ್ರೀನಿವಾಸಪುರ: ವಿದ್ಯಾರ್ಥಿಗಳು ಸ್ವಂತ ಪರಿಶ್ರಮದ ಮೂಲಕ ಸಾಧನೆಯ ಹಾದಿಯಲ್ಲಿ ಸಾಗಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಮಾದರಿಯಾಗಿ ಬದುಕಬೇಕು, ವಿದ್ಯಾರ್ಥಿಗಳು ಪರಿಶ್ರಮದ ಮೂಲಕ ಉತ್ತಮ ಸಾಧನೆ ಮಾಡಬೇಕು ಎಂದು ಸೀಗೆಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಹೇಳಿದರು.ತಾಲ್ಲೂಕಿನ ನಂಬಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸ್ಥಳೀಯ ಹಾಗೂ ವೈ.ಹೊಸಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ತಾವೇ ನೀಡಿದ ಉತ್ತಮ ಗುಣಮಟ್ಟದ ಸಮವಸ್ತ್ರ ವಿತರಿಸಿ […]
ಶ್ರೀನಿವಾಸಪುರ : ಸರ್ಕಾರಿ ಶಾಲೆಕಾಲೇಜುಗಳು ಯಾವ ಖಾಸಗಿ ಶಾಲೆಕಾಲೇಜು ಗಳಿಗೂ ಕಡಿಮೆಯಿಲ್ಲ. ಎಂಬಂತೆ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಕಾಲೇಜುಗಳಲ್ಲಿ ಲಭ್ಯವಾಗುತ್ತಿದೆ ಎಂಬುದಕ್ಕೆ ಫಲಿತಾಂಶಗಳೇ ಸಾಕ್ಷಿಯಾಗಿವೆ.ವಿಶೇಷವಾಗಿ ಸರ್ಕಾರಿ ಶಾಲೆಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿಗಳಲ್ಲಿ ಸಂಸ್ಕಾರ,ಸಂಸ್ಕøತಿಗಳನ್ನು ಕಾಣಬಹುದು ಎಂದು ಬೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಲಕ್ಷ್ಮೀನಾರಾಯಣಮೂರ್ತಿ ಹೇಳಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಶುಕ್ರವಾರ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.ಉಪನ್ಯಾಸಕಿ ಶಾರದಮ್ಮ, ಬೆಸ್ಕಾಂ ಸಿಬ್ಬಂದಿಗಳಾದ ನಂಜುಂಡೇಶ್ವರ, ಶ್ರೀನಿವಾಸ್, ವೇಣು, ಮಮತಕಾಂತ್ರಾಜ್ ಶೇಠ್ ಇದ್ದರು.
ಕೋಲಾರ:- ಕುತಂತ್ರ, ತಂತ್ರಗಾರಿಕೆಗಳ ನಡುವೆ ನೈತಿಕತೆಗೆ ಸೋಲಾಗಿದ್ದು, ಇದರಿಂದ ನಾನು ಕಂಗಾಲಾಗಿಲ್ಲ, ಆತ್ಮವಿಶ್ವಾಸ ವೃದ್ದಿಯಾಗಿದ್ದು, ಶಿಕ್ಷಕರ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತೇನೆ, ನನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿನ ಸೋಲಿನಿಂದ ನಾನು ಧೃತಿಗೆಟ್ಟಿಲ್ಲ, ಮೂರು ಅವಧಿ ವಿಧಾನಪರಿಷತ್ ಸದಸ್ಯನಾಗಿ ಒಂದು ಅವಧಿ ಶಾಸಕನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ, ಯಾರಿಂದಲೂ ಲಂಚ ಪಡೆದಿಲ್ಲ ಎಂದು ಆತ್ಮವಿಶ್ವಾಸದಿಂದ ಹೇಳುತ್ತೇನೆ, ಶಿಕ್ಷಕರ […]
ಕೋಲಾರ,ಜೂ.14: ಸೆಹಗಲ್ ಪೌಂಡೇಶನ್ ವತಿಯಿಂದ ಕೋಲಾರ ಜಿಲ್ಲೆಯ 15 ರೈತ ಉತ್ಪಾದಕ ಸಂಸ್ಥೆಗಳ ಅತಿ ಬಡತನ ಕುಟುಂಬದ ಮಹಿಳೆಯರಿಗೆ ಜೀವನೋಪಯಕ್ಕಾಗಿ ಮತ್ತು ಆರ್ಥಿಕ ಸ್ಥಿತಿ ಸುದಾರಿಸಿಕೊಳ್ಳಲು ಕುರಿ ವಿತರಣೆ ಮತ್ತು ತರಬೇತಿ ಕಾರ್ಯಕ್ರಮವನ್ನು ಸೆಹಗಲ್ ಪೌಂಡೇಶನ್ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಸೆಹಗಲ್ ಪೌಂಡೇಶನ್ ಪ್ರಾಜೆಕ್ಟ್ ಲೀಡ್ ಶಿವಶರಣಪ್ಪ ಮಾತನಾಡಿ, ಯೋಜನೆಯ ಉದ್ದೇಶ ಮತ್ತು ಕುರಿ ಸಾಕಾಣಿಕೆ ಮುಖಾಂತರ ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ತಿಳಿಸಿದರು.ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಸುದರ್ಶನ್ ಕುರಿಸಾಕಾಣಿಕೆಯ ವಿವಿಧ ಅಂಶಗಳ ಕುರಿತು ತಿಳಿವಳಿಕೆ […]
ಶ್ರೀನಿವಾಸಪುರ : ಕಷ್ಟಗಳು ಎಂಬುದು ಎಲ್ಲರಿಗೂ ಬರುತ್ತದೆ ಆದರೆ ದುಶ್ಚಟಗಳಿಗೆ ಮೊರೆಹೋಗುವುದು ತಪ್ಪು ಎಂದು ಹೇಳಿ , ಕಷ್ಟ ಪಟ್ಟು ದುಡಿಮೆ ಮಾಡಿ ಕುಟುಂಬವನ್ನ ಪಾಲಿಸುವಂತೆ ಶಾಸಕ ಜಿ.ಕೆ.ವೆಂಟಶಿವಾರೆಡ್ಡಿ ಸಲಹೆ ನೀಡಿದರು.ತಾಲೂಕಿನ ಗುರವಲ್ಲೋಳ್ಳಗಡ್ಡ ಗ್ರಾಮಕ್ಕೆ ಬುಧವಾರ ಮೃತ ಕುಟುಂಬದ ಮನೆಗೆ ಬೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವಾನವನ್ನ ತಿಳಿಸಿ ಮಾತನಾಡಿದರು.ಮೃತರ ಅಂತ್ಯ ಸಂಸ್ಕಾರಕ್ಕಾಗಿ ಐವತ್ತು ಸಾವಿರ ರೂಗಳನ್ನು ನೀಡಿ , 1 ಲಕ್ಷರೂಗಳನ್ನು 11 ದಿವಸದೊಳಗೆ ಕುಟುಂಬಕ್ಕೆ ನೀಡುವುದಾಗಿ ಭರವಸೆ ನೀಡಿದರು.ಶ್ರೀನಿವಾಸಪುರ ಠಾಣೆಯ ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ, […]