
ಶ್ರೀನಿವಾಸಪುರ: ಕೋಲಾರ ಜಿಲ್ಲೆಯ ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮ ಸಮಿತಿಗೆ ಶ್ರೀನಿವಾಸಪುರದ ಶಬ್ಬೀರ್ ಅಹ್ಮದ್ ಪಾಷಾ ಬಿನ್ ಮೊಹಮ್ಮದ್ ಬಶೀರ್ (ಜಾಕಿರ್ ಹುಸೇನ್ ಮೊಹಲ್ಲಾ, ಶ್ರೀನಿವಾಸಪುರ) ಅವರನ್ನು ಕರ್ನಾಟಕ ಸರ್ಕಾರ ಸದಸ್ಯರಾಗಿ ನೇಮಕ ಮಾಡಿದೆ. ಸಮಾಜಸೇವೆ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಶಬ್ಬೀರ್ ಅಹ್ಮದ್ ಪಾಷಾ ಅವರು, ಈ ಹಿಂದೆ ಕೋಲಾರ ಜಿಲ್ಲಾ ವಕ್ಫ್ ಸಲಹಾ ಸಮಿತಿಯಲ್ಲಿ ಸದಸ್ಯರಾಗಿದ್ದು, ಜೊತೆಗೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಾಮೀಣ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವರು, […]

ಶ್ರೀನಿವಾಸಪುರ ಮಾವಿನ ಸೀಸನ್ ಪ್ರಾರಂಭ – ಆರ್ಥಿಕ ಚಟುವಟಿಕೆಗೆ ಚುರುಕು, ಸ್ವಚ್ಛತೆಗೆ ಸವಾಲು ಇಂದಿರಾನಗರ ನಿವಾಸಿಗಳಿಂದ ಪುರಸಭೆಗೆ ಒತ್ತಾಯ ಎಪಿಎಂಸಿ ಮಾವು ಮಾರ್ಕೆಟ್ ಬಳಿ ತಕ್ಷಣ ಸ್ವಚ್ಛತೆ ಕ್ರಮ ಕೈಗೊಳ್ಳಿ ಶ್ರೀನಿವಾಸಪುರ: ಮಾವಿನ ಸೀಸನ್ ಪ್ರಾರಂಭವಾಗಿ ಪಟ್ಟಣದಲ್ಲಿ ಹೊಸ ಹುರುಪು ಮೂಡಿಸಿದ್ದು, ವ್ಯಾಪಾರ ಚಟುವಟಿಕೆ ಗರಿಗೆದರುತ್ತಿರುವ ಹೊತ್ತಿನಲ್ಲಿ, ಸಾರ್ವಜನಿಕರು ಸ್ವಚ್ಛತೆ ಕುರಿತಾಗಿ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಹೊರವಲಯದ ಎಪಿಎಂಸಿ ಮಾವು ಮಾರ್ಕೆಟ್ ಸಮೀಪದ ಇಂದಿರಾನಗರದ ನಿವಾಸಿಗಳು, ಮಾರುಕಟ್ಟೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಮಾವಿನ ವ್ಯಾಪಾರದಿಂದ ಪರಿಸರದಲ್ಲಿ ತೀವ್ರ ನೊಣ […]

ಶ್ರೀನಿವಾಸಪುರ : ಇಂದು ದೇಶದಲ್ಲಿ ನಾವೆಲ್ಲರೂ ನೆಮ್ಮದಿಯಾಗಿ ಇರಬೇಕಾದರೆ ಗಡಿಯಲ್ಲಿನ ನಮ್ಮ ಸೈನಿಕರು ನಮ್ಮನ್ನು ಹಗಲಿರಲು ಕಾಯುತ್ತಿದ್ದಾರೆ . ಕಳೆದ ತಿಂಗಳು ಏ.22 ರಂದು ಉಗ್ರರರು ಕಾಶ್ಮೀರದ ಪೆಹಲ್ಗಾಮ್‍ನಲ್ಲಿ ಕುಟುಂಬದ ಸದಸ್ಯರ ಎದುರೇ ಜಾತಿ ಕೇಳಿ ಕುಟುಂಬದ ಗಂಡಸರನ್ನು ಶೋಟ್ ಮಾಡಿರುವುದು ಖಂಡನೀಯ ಎಂದು ಬಿಜೆಪಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲರೆಡ್ಡಿ ಹೇಳಿದರು.ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಗುರುವಾರ ಬಿಜೆಪಿ ಪಕ್ಷ ಹಾಗು ಸಂಘ ಸಂಸ್ಥೆಗಳಿಂದ ನಡೆದ ತಿರಂಗ ಯಾತ್ರೆ ಅಂಗವಾಗಿ ಮಾಜಿ ಸೈನಿಕರನ್ನು ಸನ್ಮಾನಿಸಿ ಮಾತನಾಡಿದರು.ಯಾರು […]

ಶ್ರೀನಿವಾಸಪುರ : ಕೆರೆಗಳು ಸಾರ್ವಜನಿಕರ ಸ್ವತ್ತು. ಇದನ್ನ ಎಲ್ಲರೂ ಕಾಪಾಡಬೇಕಾಗಿದೆ. ಸರ್ಕಾರ ಸ್ವತ್ತಿಗೆ ಯಾವುದೇ ಕಾರಣಕ್ಕೂ ನೋಟಿಸ್ ಕೊಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿಗೆ ಸೋಮವಾರ ಬೇಟಿ ಮಾಡಿ ದಾಖಲೆಗಳನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ಮಾಡಿ ಮಾತನಾಡಿದರು.ಈಗಾಗಲೇ ಕೆರೆಗಳ ಸರ್ವೆ ಕಾರ್ಯನಡೆಯುತ್ತಿದ್ದು, ಸರ್ವೆ ಮಾಡಿ ಒತ್ತುವರಿಯಾಗಿದ್ದರೆ ಗುರ್ತಿಸಿ, ಒತ್ತುವರಿ ತೆರವುಗೊಳಿಸುವುದು. ಕಾರ್ಯನಡೆಯುತ್ತಿದ್ದು, ಒಂದು ವೇಳೆ ಆ ಕೆರೆ ಏನಾದರೂ ಜಿ.ಪಂ ಅದೀನದಲ್ಲಿ ಇದ್ದರೆ ಅದನ್ನ ಗ್ರಾ.ಪಂ. ಪಿಡಿಒ […]

ಶ್ರೀನಿವಾಸಪುರ : ರೈತರು ತಿಂಗಳಾನುಗಟ್ಟಲೆ ಬೆಳದ ಬೆಳೆಯನ್ನು ಮಾರುಕಟ್ಟೆ ತಂದು ಮಾರಾಟ ಮಾಡುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಸರಿಯಾದ ಮೂಲಭೂತ ಸೌಲಭ್ಯಗಳು ಇಲ್ಲದೆ ಇದ್ದು, ರೈತ ಸಂಕಷ್ಪ ಎದುರುಸುವಂತಾಗಿದೆ. ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಗುರುವಾರ ರೈತರ ಹಾಗು ಅಧಿಕಾರಿಗಳ ಕುಂದುಕೊರತೆ ಸಭೆ ನಡೆಸಿ ಮಾತನಾಡಿದರು.ಈ ಹಿನ್ನೆಲೆಯಲ್ಲಿ ಚರಂಡಿ, ರಸ್ತೆ, ಬೀದಿದೀಪಗಳು ಸರಿಯಾದ ವ್ಯವಸ್ಥೆ ಮಾಡಲು ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ. ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿವತಿಯಿಂದ ಈ ಮಾರುಕಟ್ಟೆ ಮೂಲಭೂತ ಸೌಲಭ್ಯಗಳನ್ನು ಸರಿಪಡಿಸಲು 20 ಲಕ್ಷ […]

ಶ್ರೀನಿವಾಸಪುರ : ಸುಮಾರು 2 ವರ್ಷಗಳಿಂದಲೂ ತಾಲೂಕಿನ ಯಾವುದೇ ಕೆರೆಗಳಿಗೆ ನೀರು ಹರಿಸುತ್ತಿಲ್ಲ. ಇದಕ್ಕೆ ಕಾರಣ ಗೊತ್ತಿಲ್ಲ? ಈ ನೀರು ಬರದೆ ಇರುವುದರಿಂದ ಅಂತರ್ಜಲಮಟ್ಟ ಕುಸಿದು , ಬೋರೆವೆಲ್‍ಗಳಲ್ಲಿ ನೀರು ಕಡಿಮೆಯಾಗುತ್ತಿದೆ. ಮತ್ತು ಅಂತರ್ಜಲ ವೃದ್ಧಿಯಾಗುತ್ತಿಲ್ಲ. ಇದರಿಂದ ರೈತಾಪಿ ವರ್ಗಕ್ಕೆ ವ್ಯವಸಾಯ ಮಾಡಲು ಮತ್ತು ಪ್ರಾಣಿ ಪಕ್ಷಿಗಳಿಗೆ ನೀರು ಉಣಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೂಡಲೆ ಕೆ.ಸಿ.ವ್ಯಾಲಿ ನೀರನ್ನು ತಾಲೂಕಿನ ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ, ಸಣ್ಣ ನೀರಾವರಿ ಸಚಿವರು ಮಧ್ಯಪ್ರವೇಶಿಸಿ ತಾಲೂಕಿನ ರೈತ ವರ್ಗಗಕ್ಕೆ ನ್ಯಾಯ ಒದಗಿಸಬೇಕು […]

ಶ್ರೀನಿವಾಸಪುರ : ಸರ್ಕಾರಿ ಶಾಲೆಗಳಲ್ಲಿ ಉತ್ತಮವಾಗಿ ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಜವಾಬ್ದಾರಿ ಹಾಗು ಶಿಕ್ಷಕರ ಜವಾಬ್ದಾರಿ ಇದೆ, ಇದರೊಂದಿಗೆ ಮಕ್ಕಳು ಹಾಗು ಪೋಷಕರು ಸಹಕರಿಸಬೇಕು . ಮಕ್ಕಳ ಚಟುವಟಿಕೆಗಳ ಬಗ್ಗೆ ಶಿಕ್ಷಕರು ನಿಗ ವಹಸಿಬೇಕಾಗಿದೆ. ಶಾಲೆಗೆ ಏನು ಅಗತ್ಯವಾಗಿ ಬೇಕಾಗಿರುವುದರ , ಬಗ್ಗೆ ಚರ್ಚೆ ಮಾಡಿ, ಯಾರಾದರೂ ದಾನಿಗಳು, ಹಳೇ ವಿದ್ಯಾರ್ಥಿಗಳ ಸಂಘ ಇದ್ದರೆ, ಅವರ ಸಹಾಯವನ್ನು ಪಡೆಯವಂತೆ ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.ಪಟ್ಟಣದ ತ್ಯಾಗರಾಜ ಬಡವಾಣೆಯ ಸರ್ಕಾರಿ ಉನ್ನತೀಕರಣ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಮ್ಮ ಶಾಲೆ, […]

ಶ್ರೀನಿವಾಸಪುರ, ತಾ.12: ಕೋಲಾರ ಜಿಲ್ಲೆಯ ಹಿಂದುಳಿದ ತಾಲ್ಲೂಕುಗಳ ಪೈಕಿ ಪ್ರಮುಖವಾದ ಶ್ರೀನಿವಾಸಪುರದಲ್ಲಿ ಆರೋಗ್ಯ ಸೇವೆಗಳ ದುಸ್ಥಿತಿ ಜನರ ಬದುಕಿಗೆ ಸಂಕಟ ತಂದೊಡ್ಡುತ್ತಿದೆ. ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ದಿನದಿಂದ ದಿನಕ್ಕೆ ತೀವ್ರಗೊಂಡಿದ್ದು, ಗ್ರಾಮೀಣ ಪ್ರದೇಶದ ಸಾವಿರಾರು ಜನತೆಗೆ ತುರ್ತು ಸೇವೆಗಳ ಅಭಾವವು ಅನಿವಾರ್ಯ ಸ್ಥಿತಿಯನ್ನೇ ನಿರ್ಮಾಣ ಮಾಡಿದೆ. ಈ ತಾಲ್ಲೂಕಿನಲ್ಲಿ ಸುಮಾರು 360 ಹಳ್ಳಿಗಳಿದ್ದು, ಇಲ್ಲಿನ ಗ್ರಾಮೀಣ ಜನತೆ ವೈದ್ಯಕೀಯ ಸೇವೆಗಾಗಿ ಬಹುಮಟ್ಟಿಗೆ ಸಾರ್ವಜನಿಕ ಆಸ್ಪತ್ರೆಯ ಮೇಲೆಯೇ ಅವಲಂಬಿತರಾಗಿದ್ದಾರೆ. ಆದರೆ, ಸ್ತ್ರೀರೋಗ ಮತ್ತು ಇ.ಎನ್.ಟಿ […]

ಶ್ರೀನಿವಾಸಪುರ : ಬುದ್ದಪೂರ್ಣಿಮೆಯ ಬುದ್ಧನ ಎಲ್ಲಾ ಜೀವಿಗಳ ಬಗ್ಗೆ ಕರಣೆ ಮತ್ತು ದಯೆಯ ಭೋದನೆಗಳನ್ನು ಪ್ರತಿಬಿಂಬಿಸುವ ಸಮಯ ಇದಗಾಗಿದೆ.ಎಂದು ಪೊಲೀಸ್ ಇನ್ಸ್‍ಪೆಕ್ಟರ್ ಎಂ.ಬಿ.ಗೊರವನಕೊಳ್ಳ ಹೇಳಿದರು.ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಕರ್ನಾಟಕ ದಲಿತ ಬುದ್ದ ಸೇನೆ ವತಿಯಿಂದ ಬುದ್ದ ಪೂರ್ಣಿಮಾ ಅಂಗವಾಗಿ ಬುದ್ದೋತ್ಸವ ಮತ್ತು ಭೀಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕೆಲವು ಬೌದ್ಧರು ಬುದ್ದ ಪೂರ್ಣಿಮೆಯಂದು ಶುದ್ಧೀಕರಣ ಮತ್ತು ಸ್ವಯಂ ಶಿಸ್ತಿನ ಒಂದು ರೂಪವಾಗಿ ಉಪವಾಸವನನ್ನು ಆಚರಿಸಲು ಆಯ್ಕೆ ಮಾಡಿಕೊಳ್ಳುತ್ತಾರೆ. ಬುದ್ದರವರ ಜೀವನ ಶೈಲಿ ಹಾಗು […]