
ಉಡುಪಿ: ಮುಂಬಯಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ದೊಡ್ಡ ದುರಂತದಿಂದ ಪಾರಾದ ಘಟನೆ ಬಾರ್ಕೂರು – ಉಡುಪಿ ನಿಲ್ದಾಣಗಳ ನಡುವೆ ನಡೆದಿದೆ. ಕೊಂಕಣ ರೈಲು ಮಾರ್ಗದಲ್ಲಿ ಬಾರಕೂರು ಹಾಗೂ ಉಡುಪಿ ನಿಲ್ದಾಣಗಳ ನಡುವೆ ಬೆಳಗ್ಗೆ 9:18ಕ್ಕೆ ಮಣಿಪಾಲದ ಪೆರಂಪಳ್ಳಿ ಬಳಿ ದೊಡ್ಡ ಮರವೊಂದು ಭಾರೀ ಮಳೆಯಿಂದ ಹಳಿಗೆ ಅಡ್ಡವಾಗಿ ಬಿದ್ದಿರುವುದನ್ನು ರೈಲಿನ ಲೋಕೋಪೈಲಟ್‌ಗಳು ತೀರಾ ಸಮೀಪದಲ್ಲಿ ಗಮನಿಸಿದ್ದರು. ತಕ್ಷಣವೇ ಅವರು ಎಮರ್ಜೆನ್ಸಿ ಬ್ರೇಕ್ ಅನ್ನು ಬಳಸಿ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು. ಹಳಿಯಲ್ಲಿ ಬಿದ್ದ ಮರ ಪೈಲಟ್‌ಗಳ […]

ಬಾರಕೂರು : ಕೆಲ ಒಂದು ಕೆಲಸದಲ್ಲಿ ಸ್ಥಳೀಯರು ಸಹಾಯ ಮಾಡಿದರೆ ಚೆನ್ನಾಗಿರುತ್ತದೆ ಮತ್ತು ಅದು ನಮ್ಮ ಕರ್ತವ್ಯವಾಗುತ್ತದೆ. ಕಳೆದವಾರ ಬಾರಕೂರಿನ ಹಾಳೆಕೋಡಿಯಲ್ಲಿ ಅಂತಾ ನೆರೆ ಬಂದಾಗ ಹಾಲೆಕೊಡಿಯಲ್ಲಿ ನಮ್ಮ ಮಿತ್ತರು ಉದಾರಣೆಯಾದರು. ಅಂದು ನೆರೆ ಬಂದ ದಿನ ನಾಗಬನದ ಹತ್ತಿರ ತೆಂಗಿನಮರವೊಂದು ಉರುಳಿ ಬಿತ್ತು, ಆದರೆ ಮರ ಬಿದ್ದಾಗ ವಿದ್ಯುತ್ ತಂತಿ ತುಂಡಾಗದೆ ವಿದ್ಯುತ್ ತಂತಿ ಮೇಲೆ ಸಿಕ್ಕಿ ಬಿದ್ದಿತ್ತು. ಮೆಸ್ಕಾಂನ ಸಿಬ್ಬಂದಿ ಮೂರು ಜನ ಸ್ಥಳಕ್ಕೆ ಧಾವಿಸಿದರು, ಆದರೆ ಮರವನ್ನು ತೆರವುಗೊಳಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. […]

ಕುಂದಾಪುರ ಎಜುಕೇಶನ್ ಸೊಸೈಟಿ ಪ್ರರ‍್ತಿತ ಎಚ್. ಎಮ್. ಎಮ್ ಹಾಗೂ ವಿ.ಕೆ.ಆರ್ ಶಾಲೆಗಳಲ್ಲಿ 2024-25 ರ ಶೈಕ್ಷಣಿಕ ರ‍್ಷದಲ್ಲಿ ಹೊಸದಾಗಿ ಸರ‍್ಪಡೆಗೊಂಡಿರುವ ಟೀಚರ್ ಟ್ರೈನಿಂಗ್ ವಿಭಾಗದ ಉದ್ಘಾಟನೆಯು ದಿನಾಂಕ : 22.07.2024 ಸೋಮವಾರದಂದು ಸಂಸ್ಥೆಯ ಪ್ರಾಂಶುಪಾಲರಾಗಿರುವ ಡಾ. ಚಿಂತನಾ ರಾಜೇಶ್ ರವರ ಮರ‍್ಗರ‍್ಶನದಲ್ಲಿ ನೆರವೇರಿತು. ಪರ‍್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಲತಾ. ಜಿ ಭಟ್ ರವರು ಮುಖ್ಯ ಅತಿಥಿಗಳಾಗಿ ಶಿಕ್ಷಕ ವಿದ್ಯರ‍್ಥಿಗಳಿಗೆ ಶುಭ ಹಾರೈಸಿದರು. ಶಿಕ್ಷಕ ವಿದ್ಯರ‍್ಥಿಗಳಿಗೆ ಪುಷ್ಪವನ್ನು ನೀಡುವ ಮೂಲಕ ಸ್ವಾಗತಿಸಲಾಯಿತು. ಡಾ. ಚಿಂತನಾ […]

ಕುಂದಾಪುರ, ಜು.24: ಆನಗಳ್ಳಿ ಕಳುವಿನ ಹತ್ತಿರ ಆನಗಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಇಂದು (ಜು.24) ಬೀಸಿದ ಭಾರೀ ಗಾಳಿ ಮಳೆಯಿಂದ, ಸ್ಥಳೀಯರಾದ ಜಾರ್ಜ್ ಬರೆಟ್ಟೊ ಇವರ ಜಾಗದಲ್ಲಿ ೩ ಅಡಿಕೆ ಮರಗಳು ಮತ್ತು ಒಂದು ತೆಂಗಿನ ಮರ ಬಿದ್ದು ಹಲವು ಸಾವಿರ ರೂಪಾಯಿಗಳ ಸೊತ್ತು ನಶ್ಟ ಉಂಟಾಗಿದೆ.ತೆಂಗಿನ ಮರವು ತುಂಡಾಗಿ ಜಾರ್ಜ್ ಬರೆಟ್ಟೊ ಇವರ ಹಳೆಯ ಮನೆ ಮೇಲೆ ಬಿದ್ದು, ತಗಡಿನ ಛಾವಣಿಗೆ ಮತ್ತು ಮನೆಯ ಬಾವಿಗೆ ಕೂಡ ಹಾನಿಯಾಗಿದೆ. ಬಾವಿಯ ಎರಡು ಕಂಬಗಳಿಗೆ ಹಾನಿಯಾಗಿದಲ್ಲದೆ, ಪಂಪ್‌ಸೆಟ್ಟಿಗೂ ಹಾನಿಯಾಗಿದ್ದು […]

ಕೋಟ, ಜು. 22: ಮಣೂರು-ಪಡುಕರೆ ಭಾಗದಲ್ಲಿ ಈ ಬಾರಿ ಕಡಲ್ಕೊರೆತ ತೀವ್ರಗೊಂಡಿದ್ದರಿಂದ ಮೀನುಗಾರಿಕೆ ಇಲಾಖೆ ಎಂಜಿನಿಯರ್ ಡಯಾಸ್ ಹಾಗೂ ಮಾಜಿ ಸಚಿವ. ಜಯಪ್ರಕಾಶ್ ಹೆಗ್ಡೆ ಸ್ಟಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದ್ದಾರೆ. ಇಲ್ಲಿನ. ಜಿ.ಎ. ಕಾಂಚನ್ ರಸ್ತೆ ಹಾಗೂ ಲಿಲ್ಲಿ ಫೆರ್ನಾಂಡಿಸ್ ರಸ್ತೆಯಲ್ಲಿ ಸುಮಾರು 300 ಮೀಟರ್‌ನಷ್ಟುಸ್ಥಳದಲ್ಲಿ ಶಾಸ್ವತ ತಡೆಗೋಡೆ ಇಲ್ಲ, ಹಾಗಾಗಿ ಪ್ರತಿ ವರ್ಷ ಇಲ್ಲೆ ಸಮಸ್ಯೆ ಎದುರಾಗುತ್ತದೆ. ಕಳೆದ ಮಳೆಗಾಲದಲ್ಲಿ ತೀವ್ರವಾದ ಕಡಲ್ಕೊರೆತ ಉಂಟಾಗಿತ್ತು. ಕಡಲ ಅಲೆಗಳ ಹೊಡೆತಕ್ಕೆ ಇಲ್ಲಿನ ಸಂಪರ್ಕ ರಸ್ತೆ ಕಡಿತವಾಗುವ […]

ಕಥೊಲಿಕ್ ಸಭಾ-ಸಿಟಿ ವಲಯ ವತಿಯಿಂದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ಅಧಿಕಾರ ಸ್ವೀಕರಿಸಿದ ಶ್ರೀಯುತ ಸ್ಟ್ಯಾನಿ ಆಲ್ವಾರೀಸ್, ಅಕಾಡೆಮಿಯ ಸದಸ್ಯರಾದ ರೊನಾಲ್ಡ್ ಕ್ರಾಸ್ತಾ, ನವೀನ್ ಲೋಬೊ , ಸಪ್ನಾ ಕ್ರಾಸ್ತ ಹಾಗೂ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮಂಗಳೂರು ಇಲ್ಲಿನ ಪ್ರಾಂಶುಪಾಲರು ಮತ್ತು ಸಹನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿ, ಇದೀಗ ಪ್ರಾಥಮಿಕ ಶಿಕ್ಷಣ, ಆಯುಕ್ತರ ಕಛೇರಿ ಬೆಂಗಳೂರು ಇದರ ನಿರ್ದೇಶಕರಾಗಿ ಪದೋನ್ನತಿ ಹೊಂದಿದಶ್ರೀಯುತ ಸಿಪ್ರಿಯಾನ್ ಮೊಂತೆರೋ ಇವರಿಗೆ ಅಭಿನಂದನಾ ಕಾರ್ಯಕ್ರಮ ದಿನಾಂಕ […]

ಭಂಡಾರ್‍ಕಾರ್ಸ್ ಕಾಲೇಜು ರೇಡಿಯೋ ಕುಂದಾಪ್ರ 89.6 ಎಫ್. ಎಂ. ಹಾಗೂ ‘ಕುಂದಪ್ರಭ’ ಸಂಸ್ಥೆ ಆಶ್ರಯದಲ್ಲಿ ರೇಡಿಯೋ ಕುಂದಾಪ್ರ ಸಮುದಾಯ ಬಾನುಲಿ ಕೇಂದ್ರದಲ್ಲಿ ಏರ್ಪಡಿಸಿದ ಕುಂದಾಪ್ರ ಕನ್ನಡ ಹಾಡುಗಾರಿಕೆ-ಕವನ ವಾಚನ ಸ್ಪರ್ಧೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಸಂಭ್ರಮ ಪಟ್ಟರು.ಹೆಣೆ ನೀ ಮಿಡ್ಕುದ್ಯಾಕೆ? ಅಲ್ ಹಾಂಗಾಯ್ತಂಬ್ರ, ಮಳಿಗಾಲ ಬಂತ್ಕಾಣಿ, ನಮ್ ಭಾಷಿ ನಮ್ಗ್ ಬೇಕ್, ಕೇಳ್ಕಣಿ, ತಿಳ್ಕಣಿ, ದಮ್ಮಯ್ಯ ಹೊಡಿಬ್ಯಾಡ, ಹುಟ್ದಾರ್ಬಿ ಕಂಡದ್ದೆ ಗೋಳ್, ಹೊಯ್ ಏಗಳಿಕ್ ಬಂದದ್ದ್?, ಹೇಳುಕೆ ನಮ್ಗೆ ನಾಚ್ಕಿ ಆತ್ತಲೆ?, ಚಂದ್ ಗೋಂಪಿ […]

Exordium 2K24, the eagerly anticipated freshers day event at St Agnes PU College, was held on 19th July 2024 with great enthusiasm and excitement. Freshers Day was a memorable event filled with talent, enthusiasm, and camaraderie. It provided a platform for students to showcase their skills and creativity, setting a promising tone for the academic […]

ಕುಂದಾಪುರ, ಜು.21: ಕೊಟೇಶ್ವರ ಕಟ್ಕರೆ ಕಾರ್ಮೆಲ್ ಮೇಳದ ಧರ್ಮಗುರುಗಳ ಬಾಲ ಯೇಸುವಿನ ಆಶ್ರಮದಲ್ಲಿ ತಮ್ಮ ಮೇಳದ ಪಾಲಕಿಯಾದ ಕಾರ್ಮೆಲ್ ಮಾತೆಯ ಹಬ್ಬವನ್ನು ಜು. 20 ರಂದು ಭಕ್ತಿಪೂರ್ವಕವಾದ ದಿವ್ಯ ಬಲಿದಾನ ಅರ್ಪಿಸುವ ಮೂಲಕ ಆಚರಿಸಲಾಯಿತು.ಹಬ್ಬದ ಬಲಿದಾನವನ್ನು ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಇವರ ನೇತ್ರತ್ವದಲ್ಲಿ ನಡೆಯಿತು. ಅವರು ಕಾರ್ಮೆಲ್ ಮಾತೆಯ ವಿಶೇಷತೆಯನ್ನು ತಿಳಿಸಿ “ಕಾರ್ಮೆಲ್ ಮಾತೆ, ಕಾರ್ಮೆಲ್ ಮೇಳದ ಧರ್ಮಗುರುಗಳಿಗೆ ಧರ್ಮಭಗಿನಿಯರಿಗೆ ಅವರು ಮೂಲ ಪ್ರೇರಣೆ, ಕಾರ್ಮೆಲ್ ಮಾತೆ ನಮ್ಮೆಲ್ಲರ ತಾಯಿ’ ಎಂದು ಕಾರ್ಮೆಲ್ […]