
1984-85ನೇ ಸಾಲಿನ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ಹಳೇ ವಿದ್ಯಾರ್ಥಿಗಳು ಸ್ಥಾಪಿಸಿದ ವಂದೇ ಮಾತರಂ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 14ನೇ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ನಡೆದು, ಸದಸ್ಯರಿಗೆ ಶೇ.12 ಡಿವಿಡೆಂಡ್ ಘೋಷಣೆ ಮಾಡಲಾಯಿತು.ವಂದೇ ಮಾತರಂ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಾಜಗೋಪಾಲ ಎಮ್. ಅಧ್ಯಕ್ಷತೆ ವಹಿಸಿ, ಸಂಘ ಉತ್ತಮ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದ್ದು, 4.40 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ ಎಂದು ಹೇಳಿದರು.ಸಂಘದ ನಿರ್ದೇಶಕರಾದ ದಿನೇಶ ನಾವಡ, ರಘುರಾಮ್ ಶೆಟ್ಟಿ ಸಿ, ಶಾಂತಿ ಕಾಮತ್ […]

25 ಆಗಸ್ಟ್ 2024 ರಂದು ಭಾನುವಾರ ಸೇಂಟ್ ರಾಫೆಲ್ ಚರ್ಚ್ ಬದ್ಯಾರ್ನಲ್ಲಿ ನೀರು ಕೊಯ್ಲು ಜಾಗೃತಿ ಕಾರ್ಯಕ್ರಮ ‘ಜಲಬಂಧನ್’ ನಡೆಯಿತು. ಮಾಸಾಚರಣೆಯ ನಂತರ, ಬಾವಿ ಮತ್ತು ಕೊಳವೆ ಬಾವಿಗಳನ್ನು ತೆರೆಯಲು ನೀರು ಕೊಯ್ಲು ಮಾಡುವ ವಿಧಾನಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಪ್ರಾಯೋಗಿಕ ಪ್ರಾತ್ಯಕ್ಷಿಕೆ ಅಧಿವೇಶನವನ್ನು ಯೋಜಿಸಲಾಗಿದೆ. ಈ ಸಂವಾದಾತ್ಮಕ ಅಧಿವೇಶನದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ನಂತರ ಚರ್ಚ್ ಸಭಾಂಗಣದಲ್ಲಿ ಜಾಗೃತಿ ಸಂವಾದವನ್ನು ಆಯೋಜಿಸಲಾಯಿತು ಮತ್ತು ಡಾ.ಯು.ಪಿ.ಶಿವಾನಂದ್ ಸಿಇಒ, “ಸುಧಿ” ಮಾಧ್ಯಮ ಸಮೂಹ ಬೆಳ್ತಂಗಡಿ ಸಂಪನ್ಮೂಲ […]

ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ದಿನಾಂಕ 26 ಆಗಸ್ಟ್ 2024 ರಂದು ಮಹಾನ್ ಮಾನವತಾವಾದಿಯಾಗಿರುವ ಮದರ್ ತೆರೇಸಾರವರ 114ನೇ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು ಸರಿಸುಮಾರು 45 ವರ್ಷಗಳ ಕಾಲ ಬಡವರ, ರೋಗಿಗಳ, ಅನಾಥರ ಮತ್ತು ಮರಣಸಂಕಟದಲ್ಲಿರುವವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಇವರು ಒಬ್ಬ ಮಾನವತಾವಾದಿಗಳಾಗಿ ಬಡವರ, ನಿರ್ಗತಿಕರ,ರೋಗಿಗಳ, ಅನಾಥರ, ವೃದ್ಧರ ಪರವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಇವರಿಗೆ ವಿಶ್ವದ ಅತ್ಯುನ್ನತ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಭಾರತರತ್ನ, ಗೋಲ್ಡನ್ […]

ಕುಂದಾಪುರದ ರಂಗನಹಿತ್ಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ಸಹಾಯನಿಧಿ ಚರ್ಚ್ರೋಡ್ ಫ್ರೆಂಡ್ಸ್ ಇವರ ಆಶ್ರಯದಲ್ಲಿ ರವಿವಾರ ನಡೆದ ಮುದ್ದು ರಾಧೆ, ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಸಹಾಯನಿಧಿ ಚರ್ಚ್ರೋಡ್ ಫ್ರೆಂಡ್ಸ್ ವತಿಯಿಂದ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಸಹಕರಿಸಿದ ಎಲ್ಲಾ ಸಹಾಯನಿಧಿ ಚರ್ಚ್ರೋಡ್ ಫ್ರೆಂಡ್ಸ್ನ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಪೋಷಕ ವೃಂದದವರಿಗೂ ವಂದಿಸಲಾಯಿತು.

ಕಾರ್ಕಳ, ಅ.27: ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸರು ಮೂರನೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅಭಯ್ ಎಂಬವನೆ ಬಂಧಿತ ಆರೋಪಿಯಾಗಿದ್ದು,ಈತ ಬಿಜೆಪಿ ಕಾರ್ಯಕರ್ತ ಎನ್ನಲಾಗಿದೆ, ಉಡುಪಿ ಅತ್ಯಾಚಾರ ಕೇಸನ್ನು ಲವ್ ಜಿಹಾದ್ ಎಂದು ಆರೋಪಿಸಿದ್ದ ಬಿಜೆಪಿ, ಹಿಂದೂ ಸಂಘಟನೆಗಳಿಗೆ ಅಭಯ್ ಬಂಧನ ಮುಖ ಭಂಗ ತಂದಿದೆ.ಅಲ್ಲದೆ ಅಭಯ್ ಅತ್ಯಾಚಾರಿ ಅಲ್ತಾಫ್ಗೆ ಡ್ರಗ್ಸ್ ಪೂರೈಕೆ ಮಾಡಿರುವುದು ತಿಳಿದು ಬಂದಿದ್ದು,ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.ಕಾರ್ಕಳದಲ್ಲಿ ಡ್ರಗ್ಸ್ ಬೆರೆಸಿದ ಮದ್ಯ ಕುಡಿಸಿ ಯುವತಿ ಮೇಲೆ ಅತ್ಯಾಚಾರ ಪ್ರಕರಣದ […]

ದಿನಾಂಕ 26.08.2024 ರಂದು ಮಂಜೇಶ್ವರದ ಪಾವೂರಿನಲ್ಲಿರುವ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರವು ತನ್ನ ನಿಸ್ವಾರ್ಥ ಸೇವೆಯ ಹದಿನೈದನೇ ವರ್ಷಗಳನ್ನು ಕಳೆದು ಹದಿನಾರನೇ ವರ್ಷಕ್ಕೆ ಪಾದಾರ್ಪಣೆ ಮಾಡಿತು. ಈ ಐತಿಹಾಸಿಕ ಕ್ಷಣದಲ್ಲಿ ಸ್ನೇಹಾಲಯದ ಸ್ಪೂರ್ತಿಯಾದ ಸಂತ ಮದರ್ ತೆರೆಸಾರವರ ಗ್ರೊಟ್ಟೊ ಇದರ ಉದ್ಘಾಟನೆ ಮತ್ತು ಆಶೀರ್ವಚನ ಕಾರ್ಯ ಅಂತೆಯೇ ಸಾಂಭ್ರಮಿಕ ಬಲಿಪೂಜೆಯನ್ನು, ಮಂಗಳೂರು ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಅತಿ ವಂದನೀಯ ಸ್ವಾಮಿ ಅಲೋಶಿಯಸ್ ಪಾವ್ಲ್ ಡಿ ಸೋಜಾರವರು ನೆರವೇರಿಸಿದರು.ತದನಂತರ ಗಂಟೆ 11:30 ಕ್ಕೆ ಸ್ನೇಹಾಲಯದ ಸಭಾಂಗಣದಲ್ಲಿ […]

ಕಾರ್ಕಳ,ಅ.27: ಕಾರ್ಕಳದಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಕೇಸ್ ಬಗ್ಗೆ ಪೋಲಿಸರು ನಿಷ್ಪಕ್ಷಪಾತ ತನಿಖೆ ಮಾಡಬೇಕು. ಯುವತಿಗೆ ಬಿಯರ್ ನಲ್ಲಿ ಅಮಲು ಪದಾರ್ಥವನ್ನು ಬೆರೆಸಿ ನಾಲ್ಕೈದು ಮಂದಿ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತ ಯುವತಿ ಕೇಸ್ ದಾಖಲಿಸಿದ್ದಾರೆ. ಅವಳ ಹೇಳಿಕೆಯಂತೆ ಆಕೆಗೆ ಮದ್ಯಪಾನ ಮಾಡುವ ಚಟವಿದೆಯಾ ಅನ್ನುವ ಬಗ್ಗೆ ಅನುಮಾನ ಮೂಡಿಸುತ್ತಿದೆ. ಬಿಯರ್ ಒಂದು ಮದ್ಯಪಾನದ ಪೇಯ ಇದಕ್ಕೆ ಅಮಲು ಪದಾರ್ಥ ಸೇರಿಸುವ ಅಗತ್ಯ ಏನು ಬಂತು? ಕುಡಿಯುವ ಚಟ ಯಾರಿಗಿತ್ತು ಮತ್ತು ಯಾವ ಮಟ್ಟಕ್ಕೆ ಇದೆ ಎಂದೂ […]

ಕುಂದಾಪುರ,ಅ. 27: ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯದಲ್ಲಿ ಸ್ತ್ರೀ ಆಯೋಗದ ಸಹಕಾರದಲ್ಲಿ ಸ್ವ ಸಹಾಯ ಸಂಘದ ಮಹಿಳೆಯರಿಗೆ 25/08/2024 ರಂದು ತರಭೇತಿ ಕಾರ್ಯಾಗಾರ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಡಯಾಸಿಸ್ ನ ಸಂಪದ ಸಂಬಂಧ ಸಂಸ್ಥೆಯ ಸಂಯೋಜಕರಾದ ಶ್ರೀ ಸ್ಟೇನ್ಲಿ ಫೆರ್ನಾಂಡಿಸ್ ರವರು ಹಾಜರಿದ್ದು, ಮಹಿಳೆಯರು ಚರ್ಚಿನಲ್ಲಿ ಆಯೋಜಿಸಿದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಸ್ವ ಇಚ್ಛೆಯಿಂದ ಭಾಗವಹಿಸಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಸಂಘದ ಘಟನಾವಳಿ ಪ್ರಕಾರ ಒಬ್ಬರು ಇನ್ನೊಬ್ಬರ ಸುಖ ದುಃಖದಲ್ಲಿ ಪಾಲ್ಗೊಂಡು ಘಟಕದ ಸ್ವ ಸಹಾಯ […]

ಕುಂದಾಪುರ : ಪಡುಕೋಣೆಯಲ್ಲಿ ನಡೆದ ನಡೆದ ರಕ್ತದಾನ ಶಿಬಿರದಲ್ಲಿ ಕಥೋಲಿಕ್ ಸಭಾದ ಅಧ್ಯಕ್ಷರಾದ ವಿನಯ್ ಡಿ ಅಲ್ಮೇಡ ರವರು ಅಧ್ಯಕ್ಷತೆಯನ್ನು ವಹಿಸಿದ್ದರು ಉದ್ಘಾಟಕರಾಗಿ ಪಡುಕೋಣೆ ಚರ್ಚಿನ ಧರ್ಮ ಗುರುಗಳಾದ ಫಾದರ್ ಫ್ರಾನ್ಸಿಸ್ ಕರ್ನೆಲಿಯೋ ಕಾರ್ಯಕ್ರಮವನ್ನು ಉದ್ಘಾಟಿಸಿದರು ಮುಖ್ಯ ಅತಿಥಿಯಾಗಿ ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನಾದ ಜೈಕರ್ ಶೆಟ್ಟಿ ಅವರು ಮತ್ತು ಡಾಕ್ಟರ್ ಸೋನಿ ಡಿಕೋಸ್ಟ ಆಗಮಿಸಿದ್ದರು ಗೌರವ ಉಪಸ್ಥಿತಿಯಾಗಿ ಆಗಮಿಸಿದ ರಾಜ್ಯ ಪ್ರಶಸ್ತಿ ವಿಜೇತ ಡಾಕ್ಟರ್ ಚಿಕ್ಕಮರಿ ಯವರಿಗೆ ಸನ್ಮಾನಿಸಲಾಯಿತು , ದಲಿತ ಸಂಘರ್ಷ ಸಮಿತಿ ನಾಡ ಸೇನಾಪುರ […]