
ಐಸಿಟಿ ಅಕಾಡೆಮಿಯ ಸಹಯೋಗದೊಂದಿಗೆ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಕುಂದಾಪುರದಲ್ಲಿ ಜಾವಾ ಅಭಿವೃದ್ಧಿ ಕುರಿತು ಇನ್ಫೋಸಿಸ್ ತರಬೇತಿ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ತರಬೇತಿಯು 100 ಗಂಟೆಯದು ಮತ್ತು 58 ವಿದ್ಯಾರ್ಥಿಗಳ ಎರಡು ಬ್ಯಾಚ್ಗಳಲ್ಲಿ ನಡೆಸಲಾಗುತ್ತದೆ. ಈ ತರಬೇತಿಯ ಮೇಲ್ವಿಚಾರಣೆ ಮಾಡಲು ಐಸಿಟಿ ಅಕಾಡೆಮಿಯ ಇನ್ಫೋಸಿಸ್ ಪ್ರಾಜೆಕ್ಟ್ ಸಂಯೋಜಕರಾದ ಶ್ರೀ ಪ್ರವೀಣ್ ಮತ್ತು ಐಸಿಟಿ ಸಂಯೋಜಕರಾದ ಶ್ರೀ ವಿಘ್ನೇಶ್ ಅವರು ಕೈಜೋಡಿರುತ್ತಾರೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳನ್ನು ಜಾವಾ ಅಭಿವೃದ್ಧಿಯಲ್ಲಿ ಅಗತ್ಯ ಕೌಶಲ್ಯಗಳೊಂದಿಗೆ ಸಬಲೀಕರಣ ಗೊಳಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ […]

ಮಾನವೀಯತೆಯ ಪ್ರತಿರೂಪವಾದ ಸಂತ ಮದರ್ ತೆರೇಸಾ ಅವರ 27 ನೇ ಸ್ಮರಣಾರ್ಥ ದಿನದ ಸ್ಮರಣಾರ್ಥ, “ಸಂವಿಧಾನದ ಆಶಯಗಳಲ್ಲಿ ಪ್ರೀತಿ ಮತ್ತು ಸಹಬಾಳ್ವೆಯ ಪಯಣ” ಎಂಬ ಜಿಲ್ಲಾ ಮಟ್ಟದ ವಿಚಾರ ಸಂಕಿರಣವನ್ನು ಸೆಪ್ಟೆಂಬರ್ 3, 2024 ರಂದು ಮಂಗಳವಾರ 10 ಗಂಟೆಗೆ ಕುದ್ಮುಲ್ ರಂಗರಾವ್ ಟೌನ್ ಹಾಲ್, ಮಂಗಳೂರಿನಲ್ಲಿ. ಈ ವಿಚಾರ ಸಂಕಿರಣವನ್ನು ಸಂತ ಮದರ್ ತೆರೇಸಾ ಫೋರಂ, ಮಂಗಳೂರು ಮತ್ತು ಸಮರಸ್ಯ ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ “ಎಲ್ಲೆಡೆ ಪ್ರೀತಿ ಹರಡಲಿ” ಎಂಬ ಬ್ಯಾನರ್ ಅಡಿಯಲ್ಲಿ ಆಯೋಜಿಸಲಾಗಿದೆ. ಈ […]

ಕುಂದಾಪುರ: ಹದಿಹರೆಯದ ಮಕ್ಕಳಲ್ಲಿ ಸಹಜವಾಗಿರುವಂಥ ಕೆಲವು ವರ್ತನೆ ಮತ್ತು ನಡತೆಗಳೇ ನಿಯಂತ್ರಣವಿಲ್ಲದೇ ಅತಿರೇಕಕ್ಕೇರಿದರೆ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಎಚ್.ಐ.ವಿ ಪಾಸಿಟಿವ್ ಬಗ್ಗೆ ಯುವಜನತೆ ಹೆಚ್ಚಿನ ಅರಿವು ಪಡೆದು ಜೀವನದಲ್ಲಿ ಮುನ್ನಡೆಯುವ ಅಗತ್ಯವಿದೆ ಎಂದು ಕುಂದಾಪುರದ ಸರಕಾರಿ ಆಸ್ಪತ್ರೆಯ ಆಪ್ತಸಮಾಲೋಚಕರಾದ ಶ್ರೀಮತಿ ನಳಿನಾಕ್ಷಿ ಇವರು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ 9ನೇ ತರಗತಿ ವಿದ್ಯಾರ್ಥಿನಿ ಕುಮಾರಿ ನಂದಶ್ರೀ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ ಇವರಿಗೆ ವಿಜ್ಞಾನ ಶಿಕ್ಷಕಿ ಚೈತ್ರಾ ಮಾರ್ಗದರ್ಶನ ನೀಡಿದ್ದು ಆಡಳಿತಮಂಡಳಿ, ಮುಖ್ಯಶಿಕ್ಷಕರು ಬೋಧಕ ಮತ್ತು ಬೋಧಕೇತರ ವೃಂದ ಶುಭ ಕೋರಿರುತ್ತಾರೆ.

ಬೆಳ್ಮಣ್ಣು: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ಜೇಸಿಐ ಬೆಳ್ಮಣ್ಣು, ಯುವ ಜೇಸಿ ವಿಭಾಗ ಮತ್ತು ಮಹಿಳಾ ಜೇಸಿ ವಿಭಾಗದ ನೇತೃತ್ವದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ರವಿವಾರ ಶ್ರೀ ಕೃಷ್ಣಾಷ್ಟಮಿಯ ಪ್ರಯುಕ್ತ ಕೃಷ್ಣವೇಷ ಸ್ಪರ್ಧೆ ಜರಗಿತು. ಸ್ಪರ್ಧೆಯಲ್ಲಿ 110 ಮಕ್ಕಳು ಭಾಗವಹಿಸಿದ್ದರು.ಜೇಸಿಐ ವಲಯಾಧಿಕಾರಿ ಪ್ರಶಾಂತ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ, […]

ಕುಂದಾಪುರ. ಆ.29: ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿಯ ಮೋಹನ ದಾಸ ಶೆಣೈ ಆಯ್ಕೆಯಾಗಿದ್ದಾರೆ, ಹಾಗೇ ಉಪಾಧ್ಯಕ್ಷೆಯಾಗಿ ಬಿಜೆಪಿಯ ವನಿತಾ ಬಿಲ್ಲವ ಆಯ್ಕೆಯಾಗಿದ್ದಾರೆ.ಮೀಸಲಾತಿಯ ಪ್ರಕಾರ ಅಧ್ಯಕ್ಷತೆಗೆ ಸಾಮಾನ್ಯ ವರ್ಗ ಹಾಗೂ ಉಪಾಧ್ಯಕ್ಷತೆ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಮೋಹನ ದಾಸ್ ಶೆಣೈ, ಕಾಂಗ್ರೆಸ್ ನಿಂದ ಚಂದ್ರಶೇಖರ್ ಖಾರ್ವಿ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ವನಿತಾ ಬಿಲ್ಲವ ಪಕ್ಷೇತರ ಅಭ್ಯರ್ಥಿ ಕಮಲ ಮಂಜುನಾಥ್ ಪೂಜಾರಿ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ 14 ಸದಸ್ಯಬಲ ಕಾಂಗ್ರೆಸ್ 8 […]

ಕುಂದಾಪುರ: ಮಧ್ವರಾಜ್ ಎನಿಮಲ್ ಕೇರ್ ಟ್ರಸ್ಟ್ ಮಲ್ಪೆ, ಇನ್ನರ್ ವ್ಹೀಲ್ ಮತ್ತು ರೋಟರಿ ಕ್ಲಬ್ ಕುಂದಾಪುರ ದಕ್ಷಿಣ, WVS India ಇವರ ಸಹಭಾಗಿತ್ವದಲ್ಲಿ ಕುಂದಾಪುರ ಸರಕಾರಿ ಪಶು ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 2 ರಿಂದ 6ರ ತನಕ, ಮನೆಯಲ್ಲಿ ಸಾಕಿದ ದೇಸಿ ನಾಯಿಗಳಿಗೆ(ಬೀದಿ ನಾಯಿ ಅಲ್ಲ) ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಈ ಶಸ್ತ್ರಚಿಕಿತ್ಸೆಯು ಉಚಿತವಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು ಸಂಘಟಕರ ಆಶಯ.ನಾಯಿಯ ಮಾಲಕರು ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಮುಂಚಿತವಾಗಿ ನೋಂದಾಯಿಸ ಬೇಕಾಗಿ ಕೋರಿದ್ದಾರೆ.8277390909, 9844790531

ಗಂಗೊಳ್ಳಿ: ಕೊಸೇಸಾಂವ್ ಅಮ್ಮನವರ ದೇವಾಲಯ ಗಂಗೊಳ್ಳಿಯಲ್ಲಿ ಆಗಸ್ಟ್ 18 ರಂದು ಕಥೋಲಿಕ್ ಸಭಾ, ಕಾರ್ಮಿಕರ ಆಯೋಗ ಮತ್ತು ನೀತಿ ಮತ್ತು ಶಾಂತಿ ಆಯೋಗದ ಸಹಯೋಗದೊಂದಿಗೆ ಕಾರ್ಮಿಕರ ದಿನ ಮತ್ತು ನ್ಯಾಯ ಮತ್ತು ನೀತಿಯ ದಿನದ ಆಚರಣೆಯನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಸಂತ ಲಾರೆನ್ಸ್ ಪದವಿ ಪೂರ್ವ ಕಾಲೇಜು ಮೂಡುಬೆಳ್ಳೆಯ ಪ್ರಾಂಶುಪಾಲರಾದ ಶ್ರೀಯುತ ಎಡ್ವರ್ಡ್ ಲಾರ್ಸನ್ ಡಿಸೋಜಾ ಹಾಗೂ ಉಡುಪಿ ಧರ್ಮ ಪ್ರಾಂತ್ಯದ ಕಾರ್ಮಿಕ ಆಯೋಗದ ನಿರ್ದೇಶಕರಾದ ಶ್ರೀಯುತ ಎಲ್ರಾಯ್ ಕಿರಣ್ ಕ್ರಾಸ್ತಾ ಉಪಸ್ಥಿತರಿದ್ದರು. ಶ್ರೀ ಲಾರ್ಸೆನ್ […]

ಕುಂದಾಪುರ,ಅ.28: ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಅ.26 ಸೋಮವಾರ ಸಂಜೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಜಾಕೋಬ್ ಡಿಸೋಜರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.ಸಭೆಯಲ್ಲಿ ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆ ಮಾತನಾಡಿ ಜಾಕೋಬ್ ಡಿಸೋಜ ಓರ್ವ ಸರಳ, ಸಜ್ಜನ ವ್ಯಕ್ತಿತ್ವವನ್ನು ಹೊಂದಿದ್ದು, ಕುಂದಾಪುರದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದೆ ಎಂದರು.ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷರಾದ ಶಿವರಾಮಶೆಟ್ಟಿ ಮಾತನಾಡಿ ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಜಾಕೋಬ್ ಡಿಸೋಜಾ, ಉತ್ತಮ ನಾಯಕರಾಗಿ ಪಾರದರ್ಶಕ ಆಡಳಿತವನ್ನು ಪುರಸಭೆ ಮತ್ತು […]