
ಉದ್ಯಾವರ : ಕರ್ನಾಟಕ ರಾಜ್ಯೋತ್ಸವದ ಸಂಭ್ರಮವನ್ನು ಉದ್ಯಾವರ ಲಯನ್ಸ್ ಕ್ಲಬ್ ಸನ್ ಶೈನ್ ಸ್ಥಳೀಯ ಸಂಪಿಗೆ ನಗರ ರಿಕ್ಷಾ ಚಾಲಕ ಮಾಲಕರೊಂದಿಗೆ ಸಂಭ್ರಮದಿಂದ ಆಚರಿಸಿದರು. ಪ್ರತಿಷ್ಠಿತ ಎಂಸಿಸಿ ಬ್ಯಾಂಕ್ ಉದ್ಯೋಗಿ ಲಯನ್ ರಿತೇಶ್ ಡಿಸೋಜ ಕರ್ನಾಟಕ ರಾಜ್ಯೋತ್ಸವದ ಮಹತ್ವವನ್ನು ತಿಳಿಸಿದರು. ಬಳಿಕ ಎಲ್ಲಾ ಆಟೋರಿಕ್ಷಾ ಚಾಲಕರಿಗೆ ಮತ್ತು ಆಗಮಿಸಿದ ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಧ್ವಜ ಮತ್ತು ಶಾಲು ನೀಡಲಾಯಿತು. ಈ ಸಂದರ್ಭದಲ್ಲಿ ಭೂ ನ್ಯಾಯ ಮಂಡಳಿಯ ಸದಸ್ಯ ಲಯನ್ ರೊಯ್ಸ್ ಫೆರ್ನಾಂಡಿಸ್, ಲಯನ್ಸ್ ಕ್ಲಬ್ ಉದ್ಯಾವರ ಸನ್ […]

ಕಲ್ಯಾಣಪುರ. 1 ನೇ ನವೆಂಬರ್, 2024ಃ ಮೌಂಟ್ ರೋಸರಿ ಚರ್ಚ್‌ನಲ್ಲಿ ಆಚರಣೆಗಳಣನ್ನು ನೆಡೆಸಲಾಯಿತು. ಸಕಲ ಸಂತರ ದಿನ ವಾಹನಗಳ ಆಶೀರ್ವಚನ, 69 ನೇ ಕರ್ನಾಟಕ ರಾಜ್ಯೋತ್ಸವ ಮತ್ತು ದೀಪಾವಳಿ, ನಾಲ್ಕು ಆಚರಣೆಗಳಣನ್ನು ನೆಡೆಸಲಾಯಿತು. ಹಬ್ಬದ ಪವಿತ್ರ ಮಾಸಾಚರಣೆಯ ನಂತರ, ಪ್ರಧಾನ ಧರ್ಮಗುರು ರೆ.ಡಾ.ರೋಕ್ ಡಿಸೋಜಾ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು, ಪ್ರಯಾಣಿಸುವವರಿಗೆ ಸುರಕ್ಷತೆ ಮತ್ತು ದೈವಿಕ ರಕ್ಷಣೆಯ ಮಹತ್ವವನ್ನು ಒತ್ತಿಹೇಳಿದರು ಮತ್ತು ಸಹಾಯಕ ವಿಕಾರ್ ರೆ.ಫಾ.ಆಲಿವರ್ ಸಿ. ನಜರೆತ್ ಅವರೊಂದಿಗೆ ವಾಹನಗಳಿಗೆ ಪವಿತ್ರ ಜಲದಿಂದ ಆಶೀರ್ವದಿಸಿದರು. ಕಥೋಲಿಕ್ […]

ಮಂಗಳೂರು; ಅಕ್ಟೋಬರ್ 31, 2024 ರಂದು, ಬೆಥನಿ ಎಜುಕೇಶನಲ್ ಸೊಸೈಟಿ ಮಂಗಳೂರು ಪ್ರಾಂತ್ಯವು ವಾಮಂಜೂರಿನ ಸೇಂಟ್ ರೇಮಂಡ್ ಕೆಜಿ ಬ್ಲಾಕ್‌ನಲ್ಲಿ ಹಾಸ್ಟೆಲ್ ಮಕ್ಕಳ ಕೂಟವನ್ನು ಆಯೋಜಿಸಿ. ‘ಮಕ್ಕಳಲ್ಲಿ ಸಕಾರಾತ್ಮಕ ಮನೋಭಾವ ಮತ್ತು ಮನಸ್ಥಿತಿಯನ್ನು ಬೆಳೆಸುವುದು’ ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿರುವ ಉನ್ನತ ಮಟ್ಟದ ಸಭೆಗಾಗಿ ಹಾಸ್ಟೆಲರ್‌ಗಳು ಒಟ್ಟುಗೂಡಿದರು. ಈ ಬಹು ನಿರೀಕ್ಷಿತ ಈವೆಂಟ್ ಯುವ ಮನಸ್ಸುಗಳಿಗೆ ತಮ್ಮ ಜೀವನದಲ್ಲಿ ಆಶಾವಾದ ಮತ್ತು ಸ್ಥಿತಿಸ್ಥಾಪಕತ್ವದ ಶಕ್ತಿಯನ್ನು ಅನ್ವೇಷಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸಿತು. ಹಾಸ್ಟೆಲ್ ಮಕ್ಕಳು ಮತ್ತು ವಾರ್ಡನ್‌ಗಳಿಗೆ ಹೃತ್ಪೂರ್ವಕ ಸ್ವಾಗತದೊಂದಿಗೆ […]

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನವೆಂಬರ್ 1 ರಂದು ಭಂಡಾರ್ಕಾರ್ಸ್ ಕಾಲೇಜಿನ ಆವರ್ತ ವೇದಿಕೆ, ಮತ್ತು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇವರ ಸಹಯೋಗದಲ್ಲಿ 49ನೇ ರಾಜ್ಯೋತ್ಸವ ತಾಳಮದ್ದಳೆ ಹಾಗೂ ಈ ವರ್ಷದ (2024) “ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರ” ಪುರಸ್ಕೃತ ಬಡಗುತಿಟ್ಟು ಯಕ್ಷಗಾನದ ಯುವ ಕಲಾವಿದರಾದ ಚಂದ್ರಕಾಂತ ರಾವ್, ಮೂಡುಬೆಳ್ಳೆ ಅವರಿಗೆ ಪ್ರದಾನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಹೆಚ್.ಶಾಂತಾರಾಮ್ ಮಾತನಾಡಿ, ಇದು ಯಕ್ಷಗಾನ ಪುರಸ್ಕಾರ ಇದು ಪ್ರಶಸ್ತಿ ಅಲ್ಲ. […]

ಕುಂದಾಪುರ; ಯು.ಬಿ.ಎಂ.ಸಿ.ಮತ್ತು ಸಿಎಸ್ಐ ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ರಾಜ್ಯೋತ್ಸವವನ್ನು1.11.24 ರಂದು ಶಾಲಾ ಮೈದಾನದಲ್ಲಿ ಆಚರಿಸಲಾಯಿತು. ತ್ರಿವರ್ಣ ಧ್ವಜವನ್ನು ಶಾಲಾ ಮುಖ್ಯ ಶಿಕ್ಷಕಿ ಅನಿತಾ ಡಿ ಸೋಜಾ ಹಾರಿಸಿದರು. ರಾಷ್ಟ್ರ ಗೀತೆ ಹಾಗೂ ನಾಡ ಗೀತೆಯನ್ನು ಹಾಡಲಾಯಿತು. ಭುವನೇಶ್ವರಿ ದೇವಿಯ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮುಖ್ಯಶಿಕ್ಷಕಿಯವರು ವಿದ್ಯಾರ್ಥಿಗಳಿಗೆ ಕರ್ನಾಟಕದ ಸಂಸ್ಕೃತಿ ಹಾಗೂ ವೈಭವವನ್ನು ಉಳಿಸಿ ಬೆಳೆಸಲು ಕರೆ ನೀಡಿದರು. ಶಿಕ್ಷಕಿ ಸವಿತಾ ಆರ್ ಮತ್ತು ವಿದ್ಯಾರ್ಥಿನಿ ಚಾರ್ವಿಕ ಕರ್ನಾಟಕದ ಇತಿಹಾಸ ಹಾಗೂ ಮುಖ್ಯ ವ್ಯಕ್ತಿಗಳ […]

ಶಂಕರನಾರಾಯಣ : ಮದರ್ ತೆರೇಸಾ ಎಜುಕೇಶನ್ ಟ್ರಸ್ಟ್ ಪ್ರವರ್ತಿತ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಮತ್ತು ಮದರ್ ತೆರೇಸಾಸ್ ಪಿ ಯು ಕಾಲೇಜಿನಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು ಧ್ವಜಾರೋಹಣ ಗೈದು ಕನ್ನಡಾಂಭೆಯ ಭಾವಚಿತ್ರಕ್ಕೆ ದೀಪಬೆಳಗಿಸಿ ಪುಷ್ಪನಮನ ಸಲ್ಲಿಸಲಾಯಿತು ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ ಧ್ವಜಾರೋಹಣ ಗೈದು ಮಾತನಾಡಿ ಕನ್ನಡ ಭಾಷೆ ಕಲಿಯಲು ಸುಲಭ, ಮಾತನಾಡಲು ಸರಳ, ಕನ್ನಡ ಲಿಪಿ ನೋಡಲು ಅಂದ, ಕನ್ನಡ ಮಾತು ಕೇಳಲು ಚೆಂದ, ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆ ತನ್ನದೇ […]

ಕುಂದಾಪುರ (ನವೆಂಬರ್ 01) : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲರು ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಧ್ವಜಾರೋಹಣದ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿ ತಾಯಿ ಭುವನೇಶ್ವರಿಯ ಭಾವ ಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ಗೈದರು. ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್ ಶಿಕ್ಷಕರಾಗಿರುವ ನಾವೆಲ್ಲರೂ ಕನ್ನಡ ಭಾಷೆಯ ಮೇಲೆ ಎಷ್ಟರ ಮಟ್ಟಿಗೆ ಹಿಡಿತವನ್ನು ಹೊಂದಿದ್ದೇವೆ ಎಂಬುದನ್ನು ಅವಲೋಕನ ಮಾಡಿಕೊಳ್ಳಲು ಇವತ್ತಿನ ದಿನ ಎನ್ನುವಂತದ್ದು […]

ಮಂಗಳೂರು; ಬಿಕರ್ನಕಟ್ಟೆಯ ಕಾರ್ಮೆಲ್ ಗುಡ್ಡದ ಬಾಲಯೇಸು ಪುಣ್ಯಕ್ಷೇತ್ರದಲ್ಲಿ ಬಿಕರ್ನಕಟ್ಟೆಯ ಸೈಂಟ್ ತೆರೇಸಾ ಆಫ್ ಅವಿಲಾ ಸಮುದಾಯದ ಒಸಿಡಿಎಸ್ ಘಟಕ ಮತ್ತು ಮಂಗಳೂರಿನ ಭಾರತೀಯ ಕ್ಯಾನ್ಸರ್ ಸೊಸೈಟಿಯು ಮಂಗಳೂರಿನ ಫಾದರ್ ಮುಲ್ಲರ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಹಯೋಗದಲ್ಲಿ 31 ಅಕ್ಟೋಬರ್ 2024 ರಂದು ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆಯನ್ನು ಆಯೋಜಿಸಿತ್ತು. OCDS ಸದಸ್ಯರಿಂದ ನೋಂದಣಿ ಪ್ರಾರಂಭವಾಗಿ, ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆ.ಫಾ. ಮೆಲ್ವಿನ್ ಡಿ’ಕುನ್ಹಾ, ಒಸಿಡಿ, ಸೈಂಟ್ ಜೋಸೆಫ್ ಮಠದ ಸುಪೀರಿಯರ್, ಬಿಕರ್ನಕಟ್ಟೆ, ಮಂಗಳೂರು. […]

ಕೋಟೆಶ್ವರ,ನ. 1; ಸ್ಥಳೀಯ ಸಂತ ಅಂತೋನಿ ಚರ್ಚಿನಲ್ಲಿ ಸರ್ವಧರ್ಮ ಸಮಿತಿಯ ನೇತೃತ್ವದಲ್ಲಿ ಧರ್ಮಕೇಂದ್ರದ ಸಮುದಾಯ ಮತ್ತು ಆಸುಪಾಸಿನ ಹಿಂದೂ ಬಾಂಧವರೊಂದಿಗೆ ಕೂಡಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಧರ್ಮಕೇಂದ್ರದ ಧರ್ಮಗುರು ಫಾ. ಪ್ರವೀಣ್ ಪಿಂಟೋ ‘ದೀಪಾವಳಿ ಬೆಳಕಿನ ಹಬ್ಬ, ಇದು ಕತ್ತಲೆಯ ಮೇಲೆ ಬೆಳಕಿನ ವಿಜಯ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯತನವನ್ನು ಸಂಕೇತಿಸುತ್ತದೆ, ಅಂದರೆ ನಮ್ಮ ಹ್ರದಯದೊಳೊಗೆ ಇರುವ ಕತ್ತಲೆ ಮಾಯವಾಗಿ ಬೆಳಕಾಗಬೇಕು, ಈ ದೀಪಾವಳಿ ನಮ್ಮೆಲ್ಲರ ಪ್ರೀತಿ ಭಾಂಧವ್ಯದ ಹಬ್ಬವಾಗಲಿ’ ಎಂದು ಆತ್ಮೀಯ ಸಂದೇಶ […]