ಕುಂದಾಪುರ, ಜೂ.13: ಕುಂದಾಪುರ ವಲಯದ ಹೊಸಂಗಡಿ ಸಮೀಪದ ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರದ ವಾರ್ಷಿಕ ಮಹಾಹಬ್ಬವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರ ನೇತ್ರತ್ವದಲ್ಲಿ ದಿವ್ಯ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು. ಈ ಹಬ್ಬವು ‘ನೀವು ತಪ್ಪದೇ ಪ್ರಾಥಿಸಿರಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಯಿತು. ಪ್ರಾರ್ಥನೆ ಒಂದು ಬಹಳ ಶಕ್ತಿದಾಯಕ ಅಸ್ತ್ರವಾಗಿದೆ, ಅದು ಸ್ವರ್ಗದ ದ್ವಾರಗಳನ್ನು ತೆರೆಯುವ ಕೀಲಿ ಕೈ ಆಗಿದೆ. ಆದರಿಂದ ತಪ್ಪದೆ ಪ್ರಾರ್ಥಿಸಿರಿ. ಎದೆ ಗುಂದದೆ ಪ್ರಾರ್ಥಿಸಿರಿ. ಪ್ರಾರ್ಥನೆಯ ಮೂಲಕ […]
ಕುಂದಾಪುರ, ಬೈಂದೂರು ತಾಲ್ಲೂಕಿನವರಾಗಿದು, ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಯಲ್ಲಿ ರಾಜ್ಯಮಟ್ಟದಲ್ಲಿ 10 ರೊಳಗೆ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು, ಗಿಳಿಯಾರು ಕುಶಲಹೆಗ್ಡೆ ಸ್ಮಾರಕ ಟ್ರಸ್ಟ್ ಪರವಾಗಿ ಜೂನ್ 19 ರಂದು ಗೌರವಿಸಲಾಗುತ್ತದೆ.ಸಾಧಕ ವಿದ್ಯಾರ್ಥಿಗಳು ತಮ್ಮ ಭಾವಚಿತ್ರ, ರ‍್ಯಾಂಕ್ ವಿವರದ ದಾಖಲೆಗಳನ್ನು ಯು.ಎಸ್.ಶೆಣೈ (9448120765), “ಕುಂದಪ್ರಭ” ನಾರಾಯಣಗುರು ಕಾಂಪೆಕ್ಸ್, ಕುಂದಾಪುರ ಇವರಿಗೆ ಕಳುಹಿಸಿಕೊಡಬೇಕೆಂದು ತಿಳಿಸಲಾಗಿದೆ.
ಉಡುಪಿ : 2ನೇ ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಐವನ್ ಡಿಸೋಜ ಇವರನ್ನು ಜೂ. 10ರಂದು ಉಡುಪಿ ಜಿಲ್ಲಾ ಕ್ರೈಸ್ತ ಸಮುದಾಯದವರು ಡಾನ್ ಬಾಸ್ಕೋ ಸಭಾಭವನದಲ್ಲಿ ಅಭಿನಂದಿಸಿದರು.ಅಭಿನಂದನಾ ಭಾಷಣ ಮಾಡಿದ ಉಡುಪಿ ಶೋಕ ಮಾತ ದೇವಾಲಯದ ಪ್ರಧಾನ ಧರ್ಮಗುರು ಫಾ. ಚಾರ್ಲ್ಸ್ ಮಿನೇಜಸ್, ಐವನ್ ಡಿಸೋಜರವರು ಸಮಾಜ ಮತ್ತು ಪಕ್ಷಕ್ಕೆ ನೀಡಿದ ಸೇವೆಗೆ ಸಿಕ್ಕ ಪ್ರತಿಫಲ. ಸರ್ಕಾರ ನಮ್ಮ ಕ್ರೈಸ್ತ ಸಮಾಜಕ್ಕೆ ನೀಡಿದ ಕೊಡುಗೆ. ಐವನ್ ಡಿಸೋಜ ಇವರ ಸೇವೆಯು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಲಿ […]
ಕುಂದಾಪುರ: ಜೂನ್ 10ರಂದು ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ “ಇಕೋಕ್ಲಬ್ ಉದ್ಘಾಟನೆ ಮತ್ತು ವಿಶ್ವಪರಿಸರ ದಿನಾಚರಣೆ” ಕಾರ್ಯಕ್ರಮ ನಡೆಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರದ ಸರಕಾರಿ ಜ್ಯೂನಿಯರ್ ಕಾಲೇಜಿನ ಉಪಪ್ರಾಂಶುಪಾಲರಾದ ಕಿರಣ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪರಿಸರ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೇ ವಿದ್ಯಾರ್ಥಿಗಳೆಲ್ಲರೂ ಜೀವನ ಪರ್ಯಂತ ಪರಿಸರ ಸಂರಕ್ಷಣೆಯ ಬಗೆಗೆ ಒಲವನ್ನು ತೋರಿಸಬೇಕು. ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಪರಿಸರದಿಂದ ಕೂಡಿದ ಸಮಾಜವನ್ನು ನಿರ್ಮಾಣ ಮಾಡಬೇಕು. ನೀರಿನ ದುರ್ಬಳಕೆಯನ್ನು ತಡೆಯಬೇಕು.ಹಾಗಿದ್ದರೆ ಮಾತ್ರ ಸಧೃಡ ಸಮಾಜ ನಿರ್ಮಾಣ […]
Mangluru :The Corridors of Rosa Mystica echoed with excitement as the Institution welcomed its newest members with open arms during the much-awaited Fresher’s Day celebration. The event, meticulously organized by the senior students and faculty, aimed to create a warm and inclusive atmosphere for the incoming First PUC students. The day commenced with a colourful […]
ಬ್ರಹ್ಮಾವರ : ಎಸ್ಎಂಎಸ್ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಸಂಚಿಕೆ ಬಿಡುಗಡೆ ದಿನಾಂಕ10-06-2024 ರಂದು ಎಸ್ ಎಮ್ ಎಸ್ ಪದವಿಪೂವ೯ ಕಾಲೇಜು ಬ್ರಹ್ಮಾವರದ ಸಭಾಂಗಣದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ “ ಇನ್ಸ್ಪಾಯರ್ “ನ ಬಿಡುಗಡೆ ಸಮಾರಂಭದ ಅಧ್ಯ ಕ್ಷತೆಯನ್ನು ಒ ಎಸ್ ಸಿ ವಿದ್ಯಾಯಸಂಸ್ಥೆಯ ಸಂಚಾಲಕರಾದ ರೆ. ಫಾ. ಎಮ್ ಸಿ ಮಥಾಯಿ ಅವರು ವಹಿಸಿದ್ದರು.ಅವರು ತಮ್ಮ ಅಧ್ಯಕ್ಷೀಯ ಭಷಣದಲ್ಲಿ ” ಈ ಸಂಚಿಕೆ ವಿದ್ಯಾರ್ಥಿಗಳ ಕ್ರೀಯಾಶೀಲತೆ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ”ಎಂದರು. ಬ್ರಹ್ಮಾವರದ ಉದ್ಯಮಿ ಹಾಗೂ ಬ್ರಹ್ಮಾವರ ತಾಲೂಕು […]
ಮಹಿಳೆಯರಿಗೆ , ಶಾಲಾ ಬಾಲಕಿಯರಿಗೆ ಹಾಗೂ ಸಾರಿಗೆ ನಿಗಮಕ್ಕೆ ಶಕ್ತಿ ತಂದ ರಾಜ್ಯ ಸರ್ಕಾರದ ಮಹತ್ತರ ಯೋಜನೆ ಶಕ್ತಿ ಜಾರಿಯಾಗಿ ಇಂದಿಗೆ ಒಂದು ವರ್ಷ ತುಂಬಿದೆ. ಕುಂದಾಪುರ ಕೆಎಸ್ಆರ್ಟಿಸಿ ಡಿಪೋ ದ ಅಧಿಕೃತ ಮಾಹಿತಿ ಈ ಕೆಳಗಿನಂತಿದೆ 01 ) 2022-23 ರ ಒಟ್ಟು ವಾರ್ಷಿಕ ಆದಾಯ 41.54 ಕೋಟಿ ರೂ ಆಗಿದ್ದು ಶಕ್ತಿ ಯೋಜನೆಯು ಜಾರಿಗೊಂಡ ನಂತರ 2023-24 ನೇ ಸಾಲಿನಲ್ಲಿ 60.35 ಕೋಟಿ ರೂ ಆಗಿರುತ್ತದೆ.ಶಕ್ತಿ ಯೋಜನೆ ಬಳಕೆಯಿಂದ ಆದಾಯದಲ್ಲಿ 18.82 ಕೋಟಿ ರೂಪಾಯಿಯಂತೆ […]
ಕುಂದಾಪುರ : ಎಂ. ಸಿ. ಸಿ ಬ್ಯಾಂಕ್ ಲಿಮಿಟೆಡ್ ವತಿಯಿಂದ ದಿನಾಂಕ 10.06.2024 ರಂದು ಸಂತ ಜೋಸೆಫರ ಹಿರಿಯ ಪ್ರಾರ್ಥಮಿಕ ಶಾಲೆ ಕುಂದಾಪುರ ಇಲ್ಲಿನ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಈಗಾಗಲೇ ಎಂ. ಸಿ. ಸಿ ಬ್ಯಾಂಕ್ ಹಲವು ಯೋಜನೆಗಳನ್ನು ಕೈಗೊಂಡಿದೆ. ಅದರ ಒಂದು ಭಾಗವಾಗಿ ವಿದ್ಯಾರ್ಥಿಗಳನ್ನು ಹುರಿದುಂಬಿಸಲು ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಎಂ. ಸಿ. ಸಿ. ಬ್ಯಾಂಕ್ ಲಿಮಿಟೆಡ್ ಇದರ ಕುಂದಾಪುರ ಶಾಖೆಯ ವ್ಯವಸ್ಥಾಪಕರಾದ ಜ್ಯೋತಿ ಬರೆಟ್ಟೋ, ಬ್ಯಾಂಕ್ ಸಿಬ್ಬಂದಿಗಳಾದ […]
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಕೇಂದ್ರದ 2024-25ನೇ ಸಾಲಿನ ಚುನಾವಣೆಯು ದಿನಾಂಕ 09-06-2024ರಂದು ನಡೆಯಿತು. ಚುನಾವಣೆಯಲ್ಲಿ ಆಲ್ವಿನ್ ಡಿಸೋಜ, ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ಉಪಾಧ್ಯಕ್ಷರುಗಳಾಗಿ ಸ್ಟೀವನ್ ರೊಡ್ರಿಗಸ್ ಮತ್ತು ಜೊಸ್ಸಿ ಕ್ರಾಸ್ತಾ, ಕಾರ್ಯದರ್ಶಿಯಾಗಿ ಆಲ್ವಿನ್ ಪ್ರಶಾಂತ್ ಮೊಂತೇರೊ, ಸಹ ಕಾರ್ಯಾದರ್ಶಿಯಾಗಿ ಲವೀನಾ ಗ್ರೆಟ್ಟಾ ಡಿಸೋಜಾ, ಖಜಾಂಚಿಯಾಗಿ ಮೆಲ್ರಿಡಾ ಜೇನ್ ರೊಡ್ರಿಗಾಸ್, ಸಹಾ ಖಜಾಂಚಿಯಾಗಿ ವಿಲ್ಪ್ರೆಡ್ ಮೆಲ್ವಿನ್ ಆಲ್ವರಿಸ್, ಆಯ್ಕೆಯಾಗಿದ್ದಾರೆ. ಸ್ಟ್ಯಾನಿ ಲೋಬೊ ನಿಕಟ ಪೂರ್ವ ಅಧ್ಯಕ್ಷರಾಗಿರುತ್ತಾರೆ.