ಬ್ರಹ್ಮಾವರ : ಎಸ್ ಎಮ್ ಎಸ್ ಪ ಪೂ ಕಾಲೇಜಿನಲ್ಲಿ ಮಾದಕ ವ್ಯಸನ ಮುಕ್ತ ಮಾಹಿತಿ ಕಾರ್ಯಕ್ರಮ. ದಿನಾಂಕ 26/06/2024 ರಂದು ಅಂತರಾಷ್ಟ್ರೀಯ ಮಾದಕ ವಿರೋದಿ ದಿನದಂದು ನಶಾಮುಕ್ತ ಭಾರತ ಅಭಿಯಾನದಡಿ ಎಸ್ ಎಮ್ ಎಸ್ ಪದವಿ ಪೂರ್ವ ಕಾಲೇಜು ಬ್ರಹ್ಮಾವರ ಹಾಗೂ ಬ್ರಹ್ಮಾವರ ಅರಕ್ಷಕ ಠಾಣೆ ಇದರ ಜಂಟಿ ಆಶ್ರ ಯದಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ಮುಕ್ತ ಜೀವನ ಮತ್ತು ಅಕ್ರಮ ಕಳ್ಳಸಾಗಾಣೆ ಬಗ್ಗೆ ಮಾಹಿತಿ ಕಾರ್ಯಗಾರವನ್ನು ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಬ್ರಹ್ಮಾವರ ಅರಕ್ಷಕ ಠಾಣೆಯ […]
ಕುಂದಾಪುರ :ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಶಂಕರನಾರಾಯಣ ಯೋಗ ಶಿಕ್ಷಣವನ್ನು 2024-25ನೇ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಲಾಗಿದ್ದು ಇಂದು ನಡೆದ ಅಂತರಾಷ್ಟ್ರೀಯ ಯೋಗದಿನಾಚರಣೆಯ ಕಾರ್ಯಕ್ರಮದಲ್ಲಿ ಅದರ ಉದ್ಘಾಟನೆಯನ್ನು ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ, ಸಂಯೋಜಕರಾದ ಉಮೇಶ ಶೆಟ್ಟಿ,ಅವಿನಾ,ದಿವ್ಯಾ ಪೂಜಾರಿ ಮತ್ತು ಕುಸುಮಾ ಶೆಟ್ಟಿ ಜಂಟಿಯಾಗಿ ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ನೀಡುವುದರ ಮೂಲಕ ಉದ್ಘಾಟಿಸಿದರು ಎಲ್ ಕೆ ಜಿ ಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳು ಹೊಸ ಯೋಗಸಮವಸ್ತ್ರದೊಂದಿಗೆ ಸಂಭ್ರಮದಿಂದ ಯೋಗಾಸನದ ವಿವಿಧ ಆಸನಗಳನ್ನು ಪ್ರದರ್ಶಿಸಿದರುಯೋಗ ಶಿಕ್ಷಕ ರತ್ನಕುಮಾರ್ ಯೋಗದ […]
ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಶಾಲೆಯಲ್ಲಿ ಶಾಲಾ ಸಂಸತ್ತಿನ ಪದಗ್ರಹಣ ಕಾರ್ಯಕ್ರಮವು ಸಂಸ್ಥೆಯ ಆಡಳಿತಾಧಿಕಾರಿಗಳಾದ ಕುಮಾರಿ ಶಮಿತಾ ರಾವ್, ಕುಮಾರಿ ರೆನಿಟಾ ಲೋಬೊ ಮತ್ತು ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಆಯ್ಕೆಯಾದ ಪದಾಧಿಕಾರಿಗಳಿಗೆ ಶುಭ ಹಾರೈಸಿದರು ಶಾಲಾ ಸಂಸತ್ತಿಗೆ ಆಯ್ಕೆಯಾದ 5, 8 ಮತ್ತು 10ನೇ ತರಗತಿಯ ಪದಾಧಿಕಾರಿಗಳು ಪ್ರಮಾಣವಚನ ಸ್ವೀಕರಿಸಿದರು ಶಿಕ್ಷಕ ಜಗದೀಶ್ ಸ್ವಾಗತಿಸಿ ಶಿಕ್ಷಕಿಯರಾದ ದೀಪಾ ವಂದಿಸಿ ಚೈತ್ರಾ ಮೆಂಡನ್ ಮತ್ತು ಅವಿನಾ ಕಾರ್ಯಕ್ರಮ ನಿರೂಪಿಸಿದರು ವಿದ್ಯಾರ್ಥಿಗಳು ಹಾಗೂ […]
ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಶಿಕ್ಷಣ ಸಂಸ್ಥೆಯ ಹತ್ತನೇ ತರಗತಿ ಮತ್ತು ಪಿ ಯು ಸಿ ವಿದ್ಯಾರ್ಥಿಗಳಿಗೆ ಶಂಕರನಾರಾಯಣ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ನಾಸಿರ್ ಹುಸೇನ್ ಮತ್ತು ಶಂಭುಲಿಂಗಯ್ಯ ಇವರು ಮಾದಕ ವಸ್ತುಗಳ ಬಳಕೆ ಅದರಿಂದಾಗುವ ದುಷ್ಪರಿಣಾಮ, ಸಮಾಜದಲ್ಲಿ ಆಗುತ್ತಿರುವ ವಿವಿಧ ರೀತಿಯ ಮಾನಸಿಕ ಮತ್ತು ದೈಹಿಕ ಕಿರುಕುಳ, ಪೋಕ್ಸೋಕಾಯಿದೆ, ಮೊಬೈಲ್ ಅತಿಯಾದ ಬಳಕೆ, ಸೈಬರ್ ಕ್ರೈಂ ಮತ್ತು ಎಚ್ಚರ, ವಿದ್ಯಾರ್ಥಿಗಳು ಕೈಗೊಳ್ಳಬೇಕಾದ ಮುಂಜಾಗೃತೆ ಕುರಿತು ವಿವಿಧ ನಿದರ್ಶನಗಳ ಮೂಲಕ ಮಾಹಿತಿ ನೀಡಿ ಪೊಲೀಸ್ […]
ಮಂಗಳೂರು: ರೋಸಾ ಮಿಸ್ಟಿಕಾ ಪಿಯು ಕಾಲೇಜಿನಲ್ಲಿ ಹೂಡಿಕೆ ಸಮಾರಂಭ, ಎನ್‌ಎಸ್‌ಎಸ್ ಉದ್ಘಾಟನೆ ಮತ್ತು ಕ್ಲಬ್‌ಗಳ ಉದ್ಘಾಟನೆಯ ಶುಭ ಸಂದರ್ಭದಲ್ಲಿ, ಉತ್ಸಾಹ ಮತ್ತು ಹೆಮ್ಮೆಯ ಭಾವವು ಗಾಳಿಯಲ್ಲಿ ತುಂಬಿತ್ತು. ಸಮಾರಂಭವು ಗಂಭೀರ ಆವಾಹನೆಯೊಂದಿಗೆ ಪ್ರಾರಂಭವಾಯಿತು, ನಂತರ ಅಧ್ಯಕ್ಷರು, ಮುಖ್ಯ ಅತಿಥಿಗಳು ಮತ್ತು ವಿದ್ಯಾರ್ಥಿ ಪರಿಷತ್ ಸದಸ್ಯರು ದೀಪ ಬೆಳಗಿಸಿದರು. ಕಾಲೇಜು ಸಮುದಾಯಕ್ಕೆ ಸಮಗ್ರತೆ, ನಾಯಕತ್ವ ಮತ್ತು ಸೇವೆಯ ಮೌಲ್ಯಗಳನ್ನು ಎತ್ತಿಹಿಡಿಯುವುದಾಗಿ ಪ್ರತಿಜ್ಞೆ ಮಾಡುವ ಮೂಲಕ ಹೊಸದಾಗಿ ನೇಮಕಗೊಂಡ ವಿದ್ಯಾರ್ಥಿ ಪರಿಷತ್ತಿನ ಸದಸ್ಯರು ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಪ್ರಾರಂಭೋತ್ಸವವು ಪ್ರಾರಂಭವಾಯಿತು. […]
ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆಯನ್ನು ಶಾಶ್ವತವಾಗಿ ತಡೆಯಲು ಹಾಗೂ ದ್ವೀಪವಾಸಿಗಳ ಬದುಕಿನ ರಕ್ಷಣೆಗೆ ಒತ್ತಾಯಿಸಿ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್(ರಿ) ಮತ್ತುಸಮಾನ ಮನಸ್ಕ ಸಂಘಟನೆಗಳಿಂದ ಜಿಲ್ಲಾಧಿಕಾರಿಗಳ ಭೇಟಿ ಪಾವೂರು ಉಳಿಯ ದ್ವೀಪದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ಶಾಶ್ವತವಾಗಿ ತಡೆಗಟ್ಟಬೇಕು ಹಾಗೂ ಅಲ್ಲಿನ ದ್ವೀಪವಾಸಿಗಳ ಬದುಕನ್ನು ರಕ್ಷಿಸಬೇಕೆಂದು ಒತ್ತಾಯಿಸಿ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್(ರಿ) ಹಾಗೂ ದ.ಕ.ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ಆಶ್ರಯದಲ್ಲಿ ಇಂದು(24-06-2024) ದ.ಕ.ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಲಾಯಿತು. ಉಳ್ಳಾಲ ತಾಲೂಕು, […]
ಕುಂದಾಪುರ (22.06.2024) : ಕುಂದಾಪುರ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಟೀಚರ್ ಎಜ್ಯುಕೇಶನ್ ವಿಭಾಗವನ್ನು ಆರಂಭಿಸಲಾಗಿದೆ. ಒಂದು ವರ್ಷದ ಅವಧಿಯ ಪ್ರೈಮರಿ ಟೀಚರ್ ಟ್ರೈನಿಂಗ್, ಮೊಂಟೆಸ್ಸರಿ / ನರ್ಸರಿ ಟೀಚರ್ ಟ್ರೈನಿಂಗ್, ಅರ್ಲಿ ಚೈಲ್ಡ್ ಹುಡ್ ಎಜ್ಯುಕೇಶನ್, ಕಮ್ಯುನಿಕೇಶನ್ ಸ್ಕಿಲ್ಸ್ ಅಂಡ್ ಇಂಗ್ಲಿಷ್ ಸ್ಪೀಕಿಂಗ್ ಹಾಗೂ ಕೌನ್ಸ್ ಲಿಂಗ್ ಅಂಡ್ ಗೈಡೆನ್ಸ್ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳನ್ನು ನೀಡಲಾಗುವುದು. ಬಿಎಸ್ಎಸ್ ವೃತ್ತಿಪರ ಶಿಕ್ಷಣ ಆಶ್ರಯದಲ್ಲಿ ನಡೆಸಲ್ಪಡುವ ಈ ಕೋರ್ಸ್ ಗಳಿಗೆ ಪ್ರವೇಶಾತಿ ಆರಂಭವಾಗಿದ್ದು, ಪಿಯುಸಿ ಮೇಲ್ಪಟ್ಟ […]
ಬೆಳ್ಮಣ್ಣು: ಬೆಳ್ಮಣ್ಣು ಜೇಸಿಐ, ಸಚ್ಚೇರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಲಯನ್ಸ್ ಕ್ಲಬ್ ಮುಂಡ್ಕೂರು ಕಡಂದಲೆ ಇದರ ಸಂಯುಕ್ತ ಆಶ್ರಯದಲ್ಲಿ ಸಚ್ಚೇರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ 10ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.ಉಡುಪಿ ಜಿಲ್ಲಾ ಪಂತಂಜಲಿ ಯೋಗ ಸಮಿತಿ ಕಾರ್ಯದರ್ಶಿಗಳಾದ ರಂಜಿತ್ ಕೆ. ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಗವು ಆರೋಗ್ಯ ಪೂರ್ಣ ಜೀವನಕ್ಕೆ ಸಹಖಾರಿಯಾಗಿದ್ದು ಪ್ರಮುಖವಾಗಿ ವಿದ್ಯಾರ್ಥಿಗಳಲ್ಲಿ ಮಾನಸಿಕ ಹಾಗೂ ದೈಹಿಕ ದೃಢತೆಯನ್ನು ಹೊಂದಲು ಸಹಕಾರಿ ಆಗುವುದೆಂದು ತಿಳಿಸಿದರು.
ಕುಂದಾಪುರ: ಜೂನ್ 21 ರಂದು ಭಂಡಾರಕಾರ್ಸ್ ಕಾಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಮತ್ತು IQAC,, ಭಾರತೀಯ ರೆಡ್ ಕ್ರಾಸ್, ಯೂಥ್ ರೆಡ್ ಕ್ರಾಸ್, ಏನ್ ಎಸ್ ಎಸ್, ಏನ್ ಸಿ ಸಿ, ರೇಂಜ್ ರ್ಸ್ ಮತ್ತು ರೋವರ್ಸ್,ಜೆ ಸಿ ಐ ಕುಂದಾಪುರ ಸಿಟಿ,ಯೋಗ ಬಂದು ಕುಂದಾಪುರ ಇವರ ಸಹಯೋಗದೊಂದಿಗೆ ಭಂಡಾರಕರ್ಸ್ ಕಾಲೇಜಿನ ಆರ್ ಏನ್ ಶೆಟ್ಟಿ ಸಭಾಂಗಣದಲ್ಲಿ ವಿಶ್ವ ಯೋಗ ದಿನ ಆಯೋಜಿಸಲಾಯಿತು.ಈ ಕಾರ್ಯಕ್ರಮದಲ್ಲಿ ಭಂಡಾರಕರ್ಸ್ ಕಾಲೇಜಿನ ಶುಭಕರಾಚಾರ್ಯ ಇವರು” ಮನುಷ್ಯನಿಗೆ ಜೀವನದಲ್ಲಿ ಮುಖ್ಯವಾಗಿ ಬೇಕಾದದ್ದು […]