
ವರದಿ:ವಾಲ್ಟರ್ ಮೊಂತೇರೊ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಮಾರ್ಚ್ 24ರಂದು 19ನೇ ವರ್ಷದ ಅರ್ಧ ವಾರ್ಷಿಕ ಸಭೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.) ವತಿಯಿಂದ ಮಾರ್ಚ್ 24ರಂದು ಆದಿತ್ಯವಾರ ಮಧ್ಯಾಹ್ನ 3 ಘಂಟೆಗೆ ಸರಿಯಾಗಿ ಸಂಘದ ಆಡಳಿತ ಕಛೇರಿ ಅಬ್ಬನಡ್ಕದ ಕುಂಟಲಗುಂಡಿಯಲ್ಲಿ 19ನೇ ಅರ್ಧ ವಾರ್ಷಿಕ ಸಭೆಯು ಸಂಘದ ಅಧ್ಯಕ್ಷರಾದ ನಂದಳಿಕೆ ರಾಜೇಶ್ ಕೋಟ್ಯಾನ್‍ರವರ ಅಧ್ಯಕ್ಷತೆಯಲ್ಲಿ ಜರಗಲಿದೆ. ಸಂಘದ ಸದಸ್ಯರೆಲ್ಲರೂ ಕ್ಲಪ್ತ ಸಮಯದಲ್ಲಿ ಆಗಮಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕಾಗಿ ಸಂಘದ […]

ಕುಂದಾಪುರ ಸಂಜೀವಿನಿ ಸ್ವಸಹಾಯ ಸಂಘದಿಂದ ಮಹಿಳಾ ದಿನಾಚರಣೆ ಕುಂದಾಪುರ,ಮಾ.20 ಕುಂದಾಪುರ ರೋಜರಿ ಮಾತಾ ಇಗರ್ಜಿಯ ಸ್ವಸಹಾಯ ಸಂಘಗಳಲ್ಲಿ ಒಂದಾದ ಸಂಜೀವಿನಿ ಸ್ವಸಹಾಯ ಮಹಿಳಾ ಸಂಘವು ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಿತು.ಈ ಕಾರ್ಯಕ್ರಮಕ್ಕೆ ಪ್ರತಿಷ್ಠಿತ ಮನಿಷ್ ಆಸ್ಪತ್ರೆಯ ನಿರ್ದೇಶಕಿ ಪ್ರಸೂತಿ ತಜ್ನೆ ಡಾ|ಪ್ರಮೀಳಾ ನಾಯಕ್ ಮತ್ತು ಉಡುಪಿ ಕೇಂದ್ರಿಯ ಸ್ತ್ರೀ ಆಯೋಗದ ನಿರ್ದೇಶಕಿ ವಂ|ಭಗಿನಿ ಸಿಸ್ಟರ್ ಜಾನೆಟ್ ಫೆರ್ನಾಂಡಿಸ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭ ಕುಂದಾಪುರದಲ್ಲಿ ಸ್ವ ಉದ್ಯೋಗ ನೆಡೆಸಿ ಜನಸೇವೆ ಮಾಡುತ್ತಿರುವ ೩ ಮಂದಿ ಅಟೋ […]

ವರದಿ:ದಿ.ಬಿ.ಕ್ರಷ್ಣಮೂರ್ತಿ ಕುಂದಾಪುರದ ಕಡ್ಡಾಯ ಮತದಾನದ ಬಗ್ಗೆ ಅರ್ಹ ಮತದಾರರಲ್ಲಿ ವಿದ್ಯಾರ್ಥಿಗಳ ಮೂಲಕ ಜಾಗೃತಿ ELC sveep ಕಾರ್ಯಕ್ರಮದಡಿ ದಿನಾಂಕ 19-03-2019 ರಂದು ಕುಂದಾಪುರದ ಆರ್ ಎನ್ ಶೆಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ಕಡ್ಡಾಯ ಮತದಾನದ ಬಗ್ಗೆ ಅರ್ಹ ಮತದಾರರಲ್ಲಿ ವಿದ್ಯಾರ್ಥಿಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ನವೀನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದು, ಸಂಪನ್ಮೂಲ ವ್ಯಕ್ತಿ, ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಕೃಷ್ಣಮೂರ್ತಿ ಡಿಬಿ,ಮತದಾನ ಜಾಗೃತಿಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ […]

ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿಗೆ ನೂತನ ಪದಾಧಿಕಾರಿಗಳು -ಹೆರಿಕ್ ಗೊನ್ಸಾಲ್ವಿಸ್ ಅಧ್ಯಕ್ಷರಾಗಿ ಆಯ್ಕೆ ಕುಂದಾಪುರ,ಮಾ.19: ಕುಂದಾಪುರ ವಲಯ ಮಟ್ಟದ ಕಥೊಲಿಕ್ ಸಭಾಸಮಿತಿಗೆ ಹೊಸ ಪದಾಧಿಕಾರಿಗಳ ಚುನಾವಣೆಯು ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾಭವನದಲ್ಲಿ ಜರುಗಿತು. ಹೆರಿಕ್ ಗೊನ್ಸಾಲ್ವಿಸ್ ಗಂಗೊಳ್ಳಿ, ಈ ಸಾಲಿನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು, ಕಾರ್ಯದರ್ಶಿಯಾಗಿ ಲೀನಾ ತಾವ್ರೊ ಪಿಯುಸ್ ನಗರ್, ನಿಕಟ ಪೂರ್ವ ಅಧ್ಯಕ್ಷರು ಮೈಕಲ್ ಪಿಂಟೊ ಕೋಟಾ, ನಿಯೋಜಿತ ಅಧ್ಯಕ್ಷರಾಗಿ ಮೇಬಲ್ ಡಿಸೋಜಾ ಬಸ್ರೂರು, ಉಪಾಧ್ಯಕ್ಷರಾಗಿ ಎಲ್ಟನ್ ರೆಬೇರೊ ಗಂಗೊಳ್ಳಿ, ಸಹ ಕಾರ್ಯದರ್ಶಿಯಾಗಿ […]

ವರದಿ: ವಾಲ್ಟರ್ ಮೊಂತೇರೊ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ವಿಶ್ವ ಮಹಿಳಾ ದಿನಾಚರಣೆ, ಸನ್ಮಾನ ಸಮಾಜದಲ್ಲಿ ಪುರುಷರಷ್ಟೇ ಸ್ತ್ರೀ ಕೂಡ ಸಮಾನಳಾಗಿದ್ದು ಹೆಣ್ಣು ಈ ಸಮಾಜದ ಕಣ್ಣಾಗಿದ್ದಾಳೆ ಹೆಣ್ಣು ಇವತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಗಣನೀಯ ಸಾಧನೆಯನ್ನು ಮಾಡುತ್ತಿದ್ದಾಳೆ ಎಂದು ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ ಹೇಳಿದರು. ಅವರು ಶುಕ್ರವಾರ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ವತಿಯಿಂದ ಸಂಘದ ರಂಗಮಂದಿರದಲ್ಲಿ ಜರಗಿದ ವಿಶ್ವ ಮಹಿಳಾ […]

ಶ್ರೀ ಕ್ಷೇತ್ರ ಬೆಳ್ಮಣ್ಣು : ಮಾರ್ಚ್ 14 ರಿಂದ 18ರ ವರೆಗೆ ವರ್ಷಾವಧಿ ಜಾತ್ರಾ ಮಹೋತ್ಸವ ಇತಿಹಾಸ ಪ್ರಸಿದ್ಧ ಕಾರಣೀಕದ ಕ್ಷೇತ್ರ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಮಾರ್ಚ್ 14 ರಿಂದ 18ರ ವರೆಗೆ ಜರಗಲಿದೆ. ಮಾರ್ಚ್ 14 ಬುಧವಾರ ಬೆಳಿಗ್ಗೆ ಧ್ವಜಾರೋಹಣ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಊರ ಆಯನ, ಉತ್ಸವ ಬಲಿ ಮಾರ್ಚ್ 15 ಗುರುವಾರ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ತಪ್ಪಂಗಾಯಿ ಬಲಿ ಮಾರ್ಚ್ 16 ಶುಕ್ರವಾರ ಮಧ್ಯಾಹ್ನ […]

ವರದಿ:ವಾಲ್ಟರ್ ಮೊಂತೇರೊ ಜಿಲ್ಲಾಧಿಕಾರಿ ಸನ್ಮಾನ್ಯ ವಿದ್ಯಾ ಕುಮಾರಿ ಕೆ. ರವರು ನಂದಳಿಕೆ – ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ಗೆ ಕ್ರೀಡೋಪಕರಣ ಸಾಮಾಗ್ರಿಯನ್ನು ವಿತರಿಸಿದರು. ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ ಇವರ ಆಶ್ರಯದಲ್ಲಿ ಜರಗಿದ ಜಿಲ್ಲಾಮಟ್ಟದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಯುವಕ ಸಂಘಗಳಿಗೆ ನೀಡುವ ಕ್ರೀಡೋಪಕರಣ ಸಾಮಾಗ್ರಿಯನ್ನು ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಸನ್ಮಾನ್ಯ ವಿದ್ಯಾ ಕುಮಾರಿ ಕೆ. ರವರು ನಂದಳಿಕೆ – ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ […]

ವರದಿ:ವಾಲ್ಟರ್ ಮೊಂತೇರೊ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಪಲ್ಸ್ ಪೋಲಿಯೋ ಕಾರ್ಯಕ್ರಮ ಬೆಳ್ಮಣ್ಣು ಪ್ರಾಥಮಿಕ ಆರೋಗ್ಯ ಕೇಂದ್ರ, ಹೊಸಮಾರು ಅಂಗನವಾಡಿ ಕೇಂದ್ರ, ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ ಮತ್ತು ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ (ರಿ.)ನ ಸಹಯೋಗದಲ್ಲಿ ಬೆಳ್ಮಣ್ಣು ಹೊಸಮಾರು ಅಂಗನವಾಡಿ ಕೇಂದ್ರದಲ್ಲಿ 5 ವರ್ಷದ ಒಳಗಿನ ಮಕ್ಕಳಿಗೆ 2019ನೇ ಸಾಲಿನ ಪ್ರಥಮ ಹಂತದ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಜರಗಿತು. ನಂದಳಿಕೆ-ಅಬ್ಬನಡ್ಕ ಶ್ರೀ […]

ವರದಿ: ಸ್ಮಿತಾ ಡಿಸೋಜಾ ನಾಡ ಪಡುಕೋಣೆಯಲ್ಲಿ ಅಹ್ವಾನಿತ ವಾಲಿಬಾಲ್ ಪಂದ್ಯಾಟ: ಮಂಗಳೂರು, ಪಡುಕೋಣೆ ತಂಡಕ್ಕೆ ಪ್ರಶಸ್ತಿ ಕುಂದಾಪುರ, ಮಾ.13: ‘ಪಡುಕೋಣೆಯವರಾದ ದಿವಂಗತ ಸುಬ್ರಮ್ಹಣ್ಯ ಪುರಾಣಿಕರು ಶೈಕ್ಷಣಿಕ ಕ್ಷೇತ್ರದಲ್ಲಿ ಒಂದಷ್ಟು ಬಡ ವಿದ್ಯಾರ್ಥಿಗಳಿಗೆ ನೀಡಿದ ಸಹಾಯ ಹಸ್ತವನ್ನು ನೆನೆಪಿಸಿಕೊಳ್ಳುವುದರ ಜೊತೆಗೆ, ಅವರ ಹೆಸರಿನಲ್ಲಿ ಹೊನಲು ಬೆಳಕಿನ ಅಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟವನ್ನು ಸಂಘಟಿಸಿರುವುದು, ನಾವೆಲ್ಲಾ ದಿ.ಸುಬ್ರಮ್ಹಣ್ಯ ಪುರಾಣಿಕರವರಿಗೆ ಸಲ್ಲಿಸುವ ಗೌರವಾಗಿದೆ’ ಎಂದು ಸೈಂಟ್ ಅಂತೋನಿ ಚರ್ಚಿನ ಧರ್ಮಗುರು ವಂ|ಫ್ರೆಡ್ ಮಸ್ಕರೆನ್ಹಾಸ್ ಹೇಳಿದರು. ಅವರು ಭಾನುವಾರ ಪಡುಕೋಣೆ ಎಜುಕೇಶನ್ ಮತ್ತು […]