JANANUDI.COM NETWORK ಮಹಾತ್ಮಗಾಂಧಿ ಪುಣ್ಯ ಸ್ಮರಣೆ ಕಾರ್ಯವನ್ನು ಬ್ಲಾಕ್ ಕಾಂಗ್ರೆಸ್ ಕಚೇರಿ ಯಲ್ಲಿ ಬೆಳಿಗ್ಗೆ 9.00 ಘಂಟೆಗೆ ನೆರವೇರಿಸಲಾಯಿತು. ಗಾಂಧಿ ಅಂದರೆ ಸತ್ಯ ಮತ್ತು ಅಹಿಂಸೆ. ಗೋಡ್ಸೆ ಅಂದರೆ ಅಸತ್ಯ ಮತ್ತು ಹಿಂಸೆ, ಒಳ್ಳೆಯ ವಿಚಾರಕ್ಕೆ ಕೆಟ್ಟವರ ಜೊತೆ ರಾಜಿ ಮಾಡಿಕೊಳ್ಳದಿರುವುದು ಗಾಂಧಿ ತತ್ವ ಎಂದು ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ತಿಳಿಸಿದರು. ಇತಿಹಾಸವನ್ನು ತಿರುಚಿ ಗಾಂಧಿ ಹೆಸರನ್ನು ಕೆಡಿಸುವ ಶಕ್ತಿಗಳ ವಿರುದ್ದ ಹೋರಾಡಬೇಕಾದರೆ, ಗಾಂಧಿ ಚಿಂತನೆಗಳನ್ನು ಪ್ರತಿಯೊಬ್ಬರೂ ಅನಿವಾರ್ಯವೆಂದು ಅಶ್ವತ್ ಕುಮಾರ್ ಹೇಳಿದರು. […]
ವರದಿ : ವಾಲ್ಟರ್ ಮೊಂತೇರೊ, ಬೆಳ್ಮಣ್ಣು ಬೆಳ್ಮಣ್ಣು ರೋಟರಿ ಕ್ಲಬ್ ಆತಿಥ್ಯದಲ್ಲಿ 3182 ಜಿಲ್ಲೆ ವಲಯ 5 ರಲ್ಲಿ ಒಳಗೊಂಡ ವಲಯ ಕ್ರೀಡಾಕೂಟ ಗೊಬ್ಬು ಗಮ್ಮತ್ 2021ಬೆಳ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜ್ ಕ್ರೀಡಾಂಗಣದಲ್ಲಿ ಇದೇ ಬರುವ ದಿನಾಂಕ 31ಜನವರಿ ಆದಿತ್ಯವಾರದಂದು ನಡೆಯಲಿದೆ.9 ಗಂಟೆಗೆ ಸರಿಯಾಗಿ ಉದ್ಘಾಟನಾ ಸಮಾರಂಭ ನಡೆಯಲಿದ್ದು ರೋ.ಡಾ ಭರತೇಶ್ ಮಾಜಿ ಜಿಲ್ಲಾ ಗವರ್ನರ್ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಸಭಾಧ್ಯಕ್ಷತೆಯನ್ನು ರೋಟರಿ ಕ್ಲಬ್ ಬೆಳ್ಮಣ್ಣು ಅಧ್ಯಕ್ಷರಾದ ರೋಟೇರಿಯನ್ ಸುಭಾಷ್ ಕುಮಾರ್ ನಂದಳಿಕೆ ವಹಿಸಲಿದ್ದು ಮುಖ್ಯ […]
JANANUDI.COM NETWORK ಕುಂದಾಪುರ,ಜ.29: ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಆಶ್ರಯದಲ್ಲಿ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ್, ಪ್ರಸಾದ್ ನೇತ್ರಾಲಯ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿವಾರಣ ವಿಭಾಗ ಉಡುಪಿ, ಇವರ ಸಂಯೋಕತ್ವದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಮತ್ತು ಆಯುರ್ವೇದ ಸೌಂದರ್ಯ ಮಾಹಿತಿ ಹಾಗೂ ತಪಾಸಣೆ ಶಿಬಿರವು ಜನವರಿ 17 ರಂದು ಕುಂದಾಪುರ ಸಂತ ಮೇರಿಸ್ ಪಿ.ಯು.ಕಾಲೇಜ್ ಸಭಾಂಗಣದಲ್ಲಿ ನಡೆದಿತ್ತು. ಈ […]
JANANUDI.COMNETWORK ಕುಂದಾಪುರ,ಜ. ಇಲ್ಲಿನ ಸಂತ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಕೀರ್ತನ್ ಹೆಣ್ಣು ಮಕ್ಕಳ ಕುರಿತು ಅರಿವು ಮೂಡಿಸಿದರು. ಸಂತ ಜೋಸೆಫ್ ಪ್ರಾಥಮಿಕ ಮತ್ತು ಪ್ರೌಢಶಾಲೆಯು ಈ ಕಾರ್ಯಕ್ರಮವನ್ನು ಜಂಟಿಯಾಗಿ ಆಚರಿಸಿದ್ದರು.ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕಿಯರು ಉಪಸ್ಥಿತರಿದ್ದರು. ಪ್ರೌಢಶಾಲೆ ಗೈಡ್ ಶಿಕ್ಷಕಿ ಸೆಲಿನ್ ಡಿಸೋಜಾ ಸ್ವಾಗತಿಸಿದರು. ಶಿಕ್ಷಕಿ ಶಾರದ ವಂದಿಸಿದರು.
ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ : ಕರ್ನಾಟಕ ರಾಜ್ಯದಲ್ಲಿ ಗೊಲ್ಲ ಅಥವಾ ಯಾದವ ಸಮುದಾಯದ ಸಂಘಟನೆ ತೀರಾ ದುರ್ಬಲವಾಗಿದೆ. ಇಲ್ಲಿ 35 ಲಕ್ಷ ಮಂದಿ ಗೊಲ್ಲ ಸಮುದಾಯದವರಿದ್ದರೂ ನಮಗೆ ರಾಜಕೀಯ ಪ್ರಾತಿನಿಧ್ಯ ಮತ್ತು ಸರ್ಕಾರಿ ಸೌಲಭ್ಯಗಳಿಲ್ಲ. ಗೊಲ್ಲ ಅಭಿವೃದ್ಧಿ ನಿಗಮವನ್ನು ಸರ್ಕಾರ ರಚಿಸಿದ್ದರೂ ಅಲ್ಲಿ ಕಾಡುಗೊಲ್ಲ ಎಂದು ನಮೂದಿಸಿದ್ದರಿಂದ ಯಾದವ ಜನಾಂಗದವರಾದ ಈ ರಾಜ್ಯದ ಗೊಲ್ಲರು ಸೌಲಭ್ಯವಂಚಿತರಾಗಿದ್ದಾರೆ. ಗೊಲ್ಲ ಎಂದರೆ ಕಾಡುಗೊಲ್ಲ ಮತ್ತು ಯಾದವ ಎಂದರೆ ಉತ್ತರ ಪ್ರದೇಶ ಮೂಲದವರೆಂದು ಸರ್ಕಾರ ಗುರುತಿಸುವುದರಿಂದ ದುರ್ಬಲ ವರ್ಗದವರಾದ ಕರ್ನಾಟಕದ […]
JANANUDI.COM NETWORK ಭಾರತ ದೇಶದ ಸಂವಿಧಾನವನ್ನು ಜಾರಿಗೆ ತಂದ ದಿನ ಗಣರಾಜ್ಯೋತ್ಸವ ದ ಆಚರಣೆಯನ್ನು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಬೆಳಿಗ್ಗೆ ಗಂಟೆ 9.00ಕ್ಕೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ, ಕೆ.ಎಫ್.ಡಿ.ಸಿ. ಮಾಜಿ ಅಧ್ಯಕ್ಷರಾದ ಬಿ. ಹಿರಿಯಣ್ಣರವರು , ಬ್ಲಾಕ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ , ಇಂಟಕ್ ಅಧ್ಯಕ್ಷ ರಾದ ಚಂದ್ರ ಅಮೀನ್, ಶಂಕರ ಪೂಜಾರಿ, ಆಶಾ ಕಾರ್ವೆಲ್ಲೋ, ಜ್ಯೋತಿ ಡಿ. ನಾಯ್ಕ, ಶೋಭಾ ಸಚ್ಚಿದಾನಂದ, ಅಬ್ದುಲ್ ಕೋಡಿ, ಅಶೊಕ್ ಸುವರ್ಣ, […]
JANANUDI.COM NETWORK ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನ-2021 ಆಚರಣೆಯ ಅಂಗವಾಗಿ ಮತದಾರರ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಿತು.ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ರೇಕಾ ಬನ್ನಾಡಿ ಮಾತನಾಡಿ ಮತದಾನ ನಮ್ಮ ಹಕ್ಕು. ಕೆಲವು ಕಡೆ ನಗರ ಪ್ರದೇಶಗಳಲ್ಲಿ ಮತದಾನದಿಂದ ವಿದ್ಯಾವಂತರೆನಿಸಿಕೊಂಡವರು ಮತದಾನದಿಂದ ಹಿಂದೆ ಉಳಿಯುತ್ತಾರೆ. ಹಾಗೆ ಕೆಲವು ಕಡೆ ಅವಿದ್ಯಾವಂತರಿಗೆ ಮತದಾನದ ಮಹತ್ವದ ಬಗ್ಗೆ ಸಾಕಷು ತಿಳುವಳಿಕೆ ಇರುವುದಿಲ್ಲ. ನಾವು ನೀವು ಮತದಾನದ ಮಹತ್ವವನ್ನು ಕುರಿತು ಅರಿವು […]
ವರದಿ : ಮಝರ್, ಕುಂದಾಪುರ ಹಸಿಮೀನು ವ್ಯಾಪಾರಸ್ಥರ ಗಂಗೊಳ್ಳಿ ಇದರ 2021-22 ರ ಮೇ ಸಾಲಿನ ನೂತನ ಅಧ್ಯಕ್ಷರಾಗಿ, ಶ್ರೀ ರಕ್ತೇಶ್ವರಿ ಫಿಶರೀಸ್‍ನ ಗಾಳಿ ಜನಾರ್ಧನ (ಧನು) ಖಾರ್ವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಘವೇಂದ್ರ ಖಾರ್ವಿ ಕಾರ್ಯದರ್ಶಿಯಾಗಿ ರವಿಶಂಕರ್ ಖಾರ್ವಿ , ಉಪಕಾರ್ಯದರ್ಶಿಯಾಗಿ ಮಂತಿ ರಾಘವೇಂದ್ರ ಖಾರ್ವಿ, ಕೋಶಾಧಿಕಾರಿಯಾಗಿ ದಿನೇಶ್ ಮುನ್ನಾ, ಲೆಕ್ಕಪರಿಶೋಧಕರಾಗಿ ಗಂಗಾಧರ ಖಾರ್ವಿ ಹಾಗೂ ಕಾರ್ಯಕಾರಿ ಸಮಿತಿಗೆ ಹತ್ತುಜನ ಸದಸ್ಯರು ಆಯ್ಕೆಗೊಂಡಿದ್ದಾರೆ.
JANANUDI.COM NETWORK ಕುಂದಾಪುರ,ಜ.23 ಕೊಟೇಶ್ವರ ಕಟ್ಕರೆಯ ಬಾಲ ಯೇಸುವಿನ ಕಾರ್ಮೆಲ್ ಮಠಾಶ್ರಮದಲ್ಲಿ ಬಾಲಾ ಯೇಸುವಿನ ವಾರ್ಷಿಕ ಮಹೊತ್ಸೋವವು ಜನವರಿ 23 ಶನಿವಾರದಂದು ಸಂಜೆ ಭಕ್ತಿ ಬಲಿದಾನದ ಮೂಲಕ ನಡೆಯಿತು. ಕಾರ್ಮೆಲ್ ಯಾಜಕ ಸಂಸ್ಥೆ ಕರ್ನಾಟಕ – ಗೋವಾದ ಪ್ರೋವಿನ್ಸೀಯಲ್ ಅತೀ ವಂ ಫಾ| ಪಿಯುಸ್ ಜೆಮ್ಸ್ ಡಿಸೋಜಾ ಇವರು ಉತ್ಸವದ ದಿವ್ಯ ಬಲಿಪೂಜೆಯನ್ನು ಅರ್ಪಿಸಿ ನಾವೆಲ್ಲಾ ಅಣ್ಣ ತಮ್ಮಂದಿರಂತೆ ಬಾಳಿದರೆ ದೇವರ ಮಕ್ಕಳಾಗುತ್ತೇವೆ’ ಎಂದು ಸಂದೇಶ ಸಾರಿ ‘ಯೇಸು ಸ್ವಾಮಿ, ತಮ್ಮ ರಕ್ತ ಸಂಬಂಧದ ಅಣ್ಣ ತಮಂದಿರು […]