ಲಯನ್ಸ್ ಕ್ಲಬ್ ಬಾರ್ಕೂರು ರಾಷ್ಟ್ರೀಯ ಹೆಚ್.ಆರ್.ಪ್ರೈ ಸ್ಕೂಲ್ ಹನೇಹಳ್ಳಿಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು29 ಅಕ್ಟೋಬರ್, 2024 ರಂದು ಲಯನ್ಸ್ ಕ್ಲಬ್ ಆಯೋಜಿಸಿದ ಉಚಿತ ವೈದ್ಯಕೀಯ ತಪಾಸಣೆ ಶಿಬಿರದ ಕುರಿತು ವರದಿ ಮಾಡಿ.ಸಮುದಾಯದಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ರಕ್ತದೊತ್ತಡ, ಮಧುಮೇಹ ತಪಾಸಣೆ ಸೇರಿದಂತೆ ಉಚಿತ ವೈದ್ಯಕೀಯ ಸೇವೆ ಒದಗಿಸುವುದು ಶಿಬಿರದ ಉದ್ದೇಶವಾಗಿತ್ತು.ರಕ್ತದೊತ್ತಡ ತಪಾಸಣೆ, ಮಧುಮೇಹಕ್ಕೆ ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ಸಾಮಾನ್ಯ ಆರೋಗ್ಯ ಸಮಾಲೋಚನೆ ಅರಿವು ಮತ್ತು ಜೀವನಶೈಲಿಯ ಮಾರ್ಪಾಡುಗಳ ಕುರಿತು ಆರೋಗ್ಯ ಶಿಕ್ಷಣವನ್ನು ಶಿಬಿರದಲ್ಲಿ ಹಂಚಿಕೊಂಡರು.ಪುರುಷರು, […]
ಕುಂದಾಪುರದ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ಮಹಮ್ಮದ್ ರೈಫ್ ಇವರು ಮೂಡುಗೋಪಾಡಿಯಲ್ಲಿ ಜರುಗಿದ ‘ಸಾಹಿತ್ಯೋತ್ಸವ ‘ ದ ಅಂಗವಾಗಿ SSF ಸಂಘಟನೆಯ ಕುಂದಾಪುರ ಡಿವಿಶನ್ ಆಯೋಜಿಸಿದ ಇಂಗ್ಲೀಷ್ ಪ್ರಬಂದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ದಿನಪತ್ರಿಕೆ ವರದಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಸೋಶಲ್ ಟ್ವೀಟ್ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದು ಈ ಮೂರು ಸ್ಪರ್ಧೆಗಳಲ್ಲಿ ಉಡುಪಿಯಲ್ಲಿ ನಡೆಯುವ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ಇನ್ನೋರ್ವ […]
ಕುಂದಾಪುರ ; ದಿನಾಂಕ 26-10 – 2024 ರಂದು ಶ್ರೀ ವಾಣಿ ಪ್ರೌಢಶಾಲೆ, ನಡೂರಿನಲ್ಲಿ ಜರುಗಿದ 2024-25 ರ ಸಾಲಿನ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ವಸ್ತು ಪ್ರದರ್ಶನ ಶೈಕ್ಷಣಿಕ ಹಾಗೂ ಮಕ್ಕಳ ವೃತ್ತಿ ಶಿಕ್ಷಣ ಕಲಿಕೋತ್ಸವದಲ್ಲಿ ಭಾಗವಹಿಸಿದ ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯು ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಅರ್ಹತೆಯನ್ನು ಪಡೆದಿರುತ್ತದೆ. ವೃತ್ತಿ ಶಿಕ್ಷಣ ಶಿಕ್ಷಕಿ ಸೆಲಿನ್ ಡಿಸೋಜಾ ಹಾಗೂ ವಿದ್ಯಾರ್ಥಿನಿಯರಾದ ಕುಮಾರಿ ಭವ್ಯ ಹಾಗೂ ಕುಮಾರಿ ನೇಹಾ ಭಾಗವಹಿಸಿದ್ದರು. ರಾಜ್ಯಮಟ್ಟಕ್ಕೆ ಆಯ್ಕೆಯಾದ ತಂಡವನ್ನು […]
ಕುಂದಾಪುರ;ಹೋಲಿ ರೋಜರಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ದಿನಾಂಕ :30/10/2024 ರಂದು ಶಾಲಾ ಸಭಾಂಗಣದಲ್ಲಿ ವಿಜ್ರಂಬಣೆಯಿಂದ ಕನ್ನಡರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ನೃತ್ಯ, ನಾಟಕ, ಕೆ.ಎಸ್. ನಿಸಾರ್ ಅಹಮದ್‍ರವರ ನಿತ್ಯೋತ್ಸವ ಗೀತೆಗೆ ಧ್ವನಿಯನ್ನು ನೀಡಿದರು ಹಾಗೂ ಕರ್ನಾಟಕದ ವಿವಿಧ ಸಂಸ್ಕೃತಿಯ ವೇಷ ಭೂಷಣವನ್ನು ವಿದ್ಯಾರ್ಥಿಗಳು ಪದರ್ಶಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಸ್ ಶಾಂತಿ ಎ.ಸಿ.ಯವರಿಗೆ ಕರ್ನಾಟಕರಾಜ್ಯ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ ರುಪ್ಸಾ ಇವರಿಂದ ಕೊಡಲ್ಪಡುವ ರಾಜ್ಯ […]
ಮಂಗಳೂರು:ಕೊಂಕಣಿ ಕಥೊಲಿಕ್ ಉದ್ಯಮಿಗಳ, ವೃತ್ತಿಪರರ ಮತ್ತು ಕೃಷಿಕರ ಸಂಸ್ಥೆ ‘ರಚನಾ’ ನವೆಂಬರ್ 3ರಂದು ಬೆಳ್ಳಿ ಹಬ್ಬದ ಸಂಭ್ರಮ ಆಚರಿಸಲಿದೆ. ಭಾನುವಾರ ಸಂಜೆ 6 ಗಂಟೆಗೆ ಕುಲಶೇಖರದ ಕೊರ್ಡೆಲ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುಣೆಯ ಮಿಲಿಟರಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಮಾಂಡೆಂಟ್ ಆಗಿರುವ ರಿಯರ್ ಆ್ಯಡ್ಮಿರಲ್ ನೆಲ್ಸನ್ ಡಿಸೋಜ ಭಾಗವಹಿಸಲಿದ್ದಾರೆ. ಎನ್‍ಆರ್‍ಐ ಉದ್ಯಮಿ ಮೈಕಲ್ ಡಿಸೋಜ, ರೋಹನ್ ಕಾರ್ಪೋರೇಶನ್‍ನ ಚೇರ್’ಮ್ಯಾನ್ ರೋಹನ್ ಮೊಂತೇರೊ ಮುಖ್ಯ ಅತಿಥಿಯಾಗಿರುವರು. ಬೆಂಗಳೂರಿನ ಆರ್ಚ್ ಬಿಶಪ್ ಪೀಟರ್ ಮಚಾದೊ ಉದ್ಘಾಟಿಸಲಿದ್ದು, ಮಂಗಳೂರಿನ […]
ಕುಂದಾಪುರ (ಅ.28): ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ಎಂಎಂ ಹಾಗೂ ವಿಕೆಆರ್ ಶಾಲೆಗಳ ಟೀಚರ್ ಟ್ರೈನಿಂಗ್ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ನಿರೂಪಣೆಯ ಕೌಶಲ್ಯದ ಕುರಿತು ಕಾರ್ಯಾಗಾರ ನೆರವೇರಿತು.ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕಿಯರಾದ ಸ್ವಪ್ನ ಹಾಗೂ ಶ್ವೇತಾ ಇವರು ನಿರೂಪಣಾ ಕೌಶಲ್ಯದ ಕುರಿತು ಹಲವು ಮಾಹಿತಿಗಳನ್ನು ಪ್ರಾತ್ಯಕ್ಷಿತೆಯ ಮೂಲಕ ನೀಡಿದರು.ಪ್ರಾಂಶುಪಾಲೆ ಡಾ. ಚಿಂತನ ರಾಜೇಶ್ ಹಾಗೂ ಸಂಯೋಜಕಿ ರಜನಿ ಉಪಸ್ಥಿತರಿದ್ದರು. ಶಿಕ್ಷಕ ವಿದ್ಯಾರ್ಥಿನಿಯರಾದ ಸುಶ್ಮಿತಾ, ಮಾಲತಿ, ಹಾಗೂ ಜ್ಯೋತಿ ಕಾರ್ಯಕ್ರಮವನ್ನು ನಿರೂಪಿಸಿದರು.
ಅಕ್ಟೋಬರ್ 27 ರ ಭಾನುವಾರದಂದು ಬಜ್ಜೋಡಿಯ ಕನ್ಯಾಮಾತೆ ಚರ್ಚ್‌ನಲ್ಲಿ ಹಿರಿಯ ನಾಗರಿಕರ ದಿನಾಚರಣೆಯನ್ನು ಬಹಳ ಸಂತೋಷ ಮತ್ತು ಉಲ್ಲಾಸದಿಂದ ಆಚರಿಸಲಾಯಿತು, ಸುಮಾರು 100 ಪ್ಯಾರಿಷ್ ಹಿರಿಯರು ಆಚರಣೆಯಲ್ಲಿ ಭಾಗವಹಿಸಿದರು ಮತ್ತು ಅವರಲ್ಲಿ ಸುಮಾರು 35 ಮಂದಿ ತಮ್ಮ ಮನೆಗಳಲ್ಲಿ ಅಚರಿಸಿದರು. ಬೆಳಗ್ಗೆ 10.30ಕ್ಕೆ ಚರ್ಚ್‌ನಲ್ಲಿ ಧರ್ಮಗುರು ಫಾ. ಡೊಮಿನಿಕ್ ವಾಸ್ ಮತ್ತು ಫಾ. ಸಿರಿಲ್ ಮೆನೆಜಸ್ ಬಲಿದಾನವನ್ನು ಅರ್ಪಿಸಿದರು.. ಧರ್ಮೋಪದೇಶದ ಸಮಯದಲ್ಲಿ ಫಾ. ಡೊಮಿನಿಕ್ ವಾಸ್ ಅವರು ಹಿರಿಯರು ಹೇಗೆ ಸೊಗಸಾಗಿ, ಸಂತೋಷದಿಂದ ಮತ್ತು ಆರೋಗ್ಯಕರವಾಗಿ ಬೆಳೆಯಬೇಕು […]
ಶಂಕರನಾರಾಯಣ : ಕುಂದಾಪುರದ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲಿ ಮಂಚೂಣಿಯಲ್ಲಿರುವ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಪ್ರಾಥಮಿಕ (3&4ನೇ) ತರಗತಿ ಮಕ್ಕಳಿಗೆ ಒಂದು ದಿನದ ಅಬಾಕಸ್ ಸ್ಪರ್ಧೆ ಆಯೋಜಿಸಲಾಗಿತ್ತುಅತಿಕಡಿಮೆ ಸಮಯದಲ್ಲಿ ವಿವಿಧ ರೀತಿಯ ಮನೋಗಣಿತ ಲೆಕ್ಕಗಳನ್ನು ಮಾಡುವ ಮೂಲಕ ಸುಮಾರು 150 ಮಕ್ಕಳು ತಮ್ಮ ಪಾಲಕರ ಉಪಸ್ಥಿತಿಯಲ್ಲಿ ಎಲ್ಲರಿಂದ ಪ್ರಶಂಸೆಗೆ ಒಳಗಾದರೂಅತ್ಯಂತ ಕ್ರಿಯಾಶೀಲತೆಯಿಂದ ಆರಂಭಗೊಂಡ ಈ ಸ್ಪರ್ಧೆಯು ಎಲ್ಲರಿಂದ ಮೆಚ್ಚುಗೆಗಳಿಸಿತುಶಿಕ್ಷಣದಲ್ಲಿ ಸದಾ ನವೀನತೆಯನ್ನು ಪರಿಚಯಿಸುತ್ತಿರುವ ಆಡಳಿತಮಂಡಳಿಯ ಕ್ರಿಯಾಶೀಲತೆಯನ್ನು ಪೋಷಕರು ಕೊಂಡಾಡಿದರುತಮ್ಮ ಮಕ್ಕಳ ಮನೋಗಣಿತದ ಬುದ್ಧಿಮತ್ತೆಯನ್ನು ಕಣ್ಣಾರೆ ಕಂಡ ಎಲ್ಲಾ ಪಾಲಕರು […]
ಶಂಕರನಾರಾಯಣ : ಕುಂದಾಪುರ ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನದೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಸತೀಶ್, ರತ್ನಕುಮಾರ್ ಮತ್ತು ಪ್ರಿಯಾಂಕಾ ತರಬೇತಿ ನೀಡಿರುತ್ತಾರೆ. ಫಲಿತಾಂಶದ ಯಾದಿ ಧನ್ವಿತ್, 80 ಮೀಟರ್ ಹರ್ಡಲ್ಸ್ ದ್ವಿತೀಯ , ಉದ್ದಜಿಗಿತ, ದ್ವಿತೀಯ (ಜಿಲ್ಲಾಮಟ್ಟಕ್ಕೆ ಆಯ್ಕೆ)ನಿನಾದ್ 600 ಮೀಟರ್ ಓಟ, ತೃತೀಯ , 400 ಮೀಟರ್ ಓಟ ತೃತೀಯಸಂಪ್ರೀತ್ 100 ಮೀಟರ್ ಓಟ ತೃತೀಯಬೃಂದಾ 3000 ಮೀಟರ್ […]