ಕರ್ನಾಟಕ ಮೂರನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ, ಬೈಂದೂರು ಕ್ಷೇತ್ರದ ಶಾಸಕರಾಗಿ, ಸಹಕಾರಿ ಧುರೀಣರಾಗಿ, ಹೈನುಗಾರಿಕೆ, ಕೃಷಿ, ತೋಟಗಾರಿಕೆ ಕ್ಷೇತ್ರಗಳಲ್ಲಿ ಪ್ರಗತಿ ಪರ ಕಾರ್ಯಗಳಿಂದ ಜನಪ್ರಿಯರಾಗಿದ್ದ ದಿ. ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿಯವರ ಜನ್ಮದಿನ ಅಕ್ಟೋಬರ್ 1 ರಂದು “ಕೊಡ್ಗಿ ನೆನಪು” ಎಂಬ ಕಾರ್ಯಕ್ರಮ ಏರ್ಪಡಿಸಲಾಗಿದೆ.ಅಮಾಸೆಬೈಲು ಹಿರಿಯ ಪ್ರಾಥಮಿಕ ಶಾಲೆಯ ಎ. ಜಿ. ಕೊಡ್ಗಿ ಬಯಲು ರಂಗ ಮಂಟಪದಲ್ಲಿ ಮಧ್ಯಾಹ್ನ 3:30ಕ್ಕೆ ನಡೆಯುವ ಕಾರ್ಯಕ್ರಮವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರಕಾರದ ಸಚಿವರಾದ ಅಂಗಾರ, ಕೋಟ ಶ್ರೀನಿವಾಸ […]
ಉಡುಪಿ: ಕಥೊಲಿಕ್ ಸಭಾ ಪೆರಂಪಳ್ಳಿ ಘಟಕದಿಂದ ಪ್ರತಿಭಾ ಪುರಸ್ಕಾರ ಮತ್ತು ಭಾಷಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಪೆರಂಪಳ್ಳಿ ಚರ್ಚಿನ ಧರ್ಮಗುರು ಹಾಗೂ ಪೆರಂಪಳ್ಳಿ ಕಥೊಲಿಕ್ ಸಭಾ ಘಟಕದ ಅಧ್ಯಾತ್ಮಿಕ ನಿರ್ದೇಶಕರಾದ ವಂ|ಅನಿಲ್ ಡಿಸೋಜಾ ಬಹುಮಾನ ವಿತರಣೆ ಮಾಡಿ ಸಂದೇಶ ನೀಡಿದರು. ಕಥೊಲಿಕ್ ಸಭಾ ಘಟಕದ ಅಧ್ಯಕ್ಷ ಒಲಿವರ್ ಡಿಸೋಜಾ, ಕಾರ್ಯದರ್ಶಿ ಆಲ್ಬಿನ್ ಡಿಸೋಜಾ ಕೂಡ ಬಹುಮಾನಗಳನ್ನು ವಿತರಿಸಿದರು. ಭಾಷಣ ಸ್ಪರ್ಧೆಯ ನಾಲ್ಕು ವಿಭಾಗಗಳಿದ್ದು, ಇದರಲ್ಲಿ 36 ಮಂದಿ ಭಾಗವಹಿಸಿದ್ದು, 13 ಮಂದಿ ಮಕ್ಕಳು […]
ಬಾರ್ಕೂರು: ಭಾಗ್ಯವಂತ ಪಾದ್ರೆ ಪಿಯೊರ ವಾರ್ಷಿಕ ಹಬ್ಬವನ್ನು ಪ್ರಥಮವಾಗಿ ಇದೇ ಸಪ್ಟೆಂಬರ್ 23 ರಂದು ಬಾರ್ಕೂರು ಸಂತ ಪೀಟರ್ ಇಗರ್ಜಿಯಲ್ಲಿ ಆಚರಣೆ ಆರಂಭಗೊಂಡಿತು. ಬೆಂಗಳೂರಿನ ಕಾಪುಚಿನ್ ಧರ್ಮಗುರುಗಳಾದ ಫಾ| ನವೀನ್ ಡಿಸೋಜಾ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿ ಸಂದೇಶವನ್ನು ನೀಡಿದರು. ಬಲಿದಾನದ ತರುವಾಯ ಪಾದ್ರೆ ಪಿಯೊರ ಅವಶೇಷ (ಭಾಗವೊಂದನ್ನು) ಮೆರವಣಿಗೆಯನ್ನು ಮಾಡಲಾಯಿತು. ಕಾರ್ಕಳ ಸಂತ ಲಾರೆನ್ಸ್ ಮೈನರ್ ಬಾಸಿಲಿಕಾದ ರೆಕ್ಟರ್ ವಂ|ಫಾ| ಆಲ್ಬನ್ ಡಿಸೋಜಾರು ನವಿಕ್ರತ ಮಾಡಿದ ಚಾಪೆಲ್ ಮತ್ತು ಪಾದ್ರೆ ಪಿಯೊರ ಎರಡು ಪ್ರತಿಮೆಗಳನ್ನು (ಪ್ರತಿಕೃತಿಗಳು) […]
ಕುಂಭಾಶಿ ಶ್ರೀ ವೆಂಕಟರಮಣ ಪ್ರಭು ಚಾರಿಟೇಬಲ್ ಟ್ರಸ್ಟ್, ಕಾವೇರಿ ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯಕ್ಕೆ “ಒಕ್ಸಿಜನ್ ಕಾನ್ಸಂಟ್ರೆಟರ್” ಹಸ್ತಾಂತರಿಸಲಾಯಿತು.ರೋಟರಿ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಕಾರ್ಯದರ್ಶಿ ಸಚಿನ್ ನಕ್ಕತ್ತಾಯ,ಮಾಜಿ ಅಧ್ಯಕ್ಷರುಗಳಾದ ಶಾಂತರಾಮ ಪ್ರಭು, ಡಾ. ವಿಶ್ವೇಶ್ವರ್ ಹಾಗೂ ಚಿತ್ರಕೂಟದ ಡಾ. ರಾಜೇಶ್ ಬಾಯರಿ, ಡಾ. ಅನುಲೇಖಾ ಬಾಯರಿ ಉಪಸ್ಥಿತರಿದ್ದರು.
ಶಿರ್ವ: ಇಂದು ಸ್ಪರ್ಧಾತ್ಮಕ ಯುಗದಲ್ಲಿ ಯುವಜನರು ತಮ್ಮ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆ, ಯೋಗ ಮತ್ತು ಕ್ರೀಡೆಯಲ್ಲಿ ತೊಡಗಿಸಿಕೊಂಡು ಆರೋಗ್ಯವಂತರಾಗಬೇಕು.ಯೋಗದಿಂದ ದೇಹ ಮತ್ತು ಮನಸ್ಸನ್ನು ನಿಯಂತ್ರಿಸಿಕೊಳ್ಳುವ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದೆಂದು ಶಿರ್ವ ವಲಯ ಪತಂಜಲಿ ಯೋಗ ಸಮಿತಿಯ ಯೋಗಗುರುಗಳಾದ ಶ್ರೀ ರಾಧಾಕೃಷ್ಣ ಪ್ರಭು ಅವರು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಯೋಗ ಮತ್ತು ಫಿಟ್ನೆಸ್ ಸೆಲ್ ಹಾಗೂ ಎನ್.ಸಿ.ಸಿ ಸಂಯುಕ್ತವಾಗಿ ಏರ್ಪಡಿಸಿದ ಯೋಗ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉದ್ಘಾಟಿಸಿ ಮಾತನಾಡಿದರು.ಆರೋಗ್ಯಯುತ ಯುವಜನರನ್ನು […]
ಇತ್ತೀಚೆಗೆ ನೇಪಾಳ ದೇಶದ ಪೊಕ್ರ ದಲ್ಲಿ ಆಯೋಜಿಸಲಾದ ಯೂತ್ ಗೇಮ್ ಇಂಟರ್ ನೇಶನಲ್ ಸಿರೀಸ್ 2022ನ ತ್ರೋ ಬಾಲ್ ಪಂದ್ಯಾಟದಲ್ಲಿ ಭಾರತ ತಂಡದ ನಾಯಕಿಯಾಗಿ ಚಿನ್ನದ ಪದಕ ಪಡೆದ ಸುಜಾತ ಕೆ ಎನ್.ಗೋಪಾಲ್ . ಬಸ್ರೂರು ಶಾರದಾ ಕಾಲೇಜಿನ ಮಾಜಿ ಚಾಂಪಿಯನ್ ಹಾಗೂ ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜಿನ ಮಾಜಿ ವಿದ್ಯಾರ್ಥಿನಿ ಯಾಗಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು,ಮೊಗವೀರ ಮಹಿಳಾ ಮಹಾಜನ ಸಂಘದ ಸದಸ್ಯರಾಗಿದ್ದಾರೆ.
ರೋಟರಿ ಕ್ಲಬ್ ಕುಂದಾಪುರ ದಕ್ಷಿಣವು ಮಾತೃ ಸಂಸ್ಥೆಯಾಗಿ ಕುಂದಾಪುರದ ಓಕ್ ವುಡ್ ಇಂಡಿಯನ್ ಶಾಲೆಯಲ್ಲಿ ಹೊಸದಾಗಿ ಇಂಟರ್ಯಾಕ್ಟ ಕ್ಲಬ್ ಪ್ರಾರಂಭಿಸಿದರು. ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಮಾಜಿ ರೋಟರಿ ಗವರ್ನರ್ ಅಭಿನಂದನ್ ಶೆಟ್ಟಿ, ಇಂಟರ್ಯಾಕ್ಟ ಸಂಯೋಜಕಿ ಜುಡಿತ್ ಮೆಂಡೋನ್ಸಾ, ರೋ. ಸುರೇಖಾ ಪುರಾಣಿಕ, ಶಾಲಾ ಪ್ರಿನ್ಸಿಪಾಲ್ ನೀತಾ ಶೆಟ್ಟಿ ಹಾಗೂ ಸಹನಾ ಶೆಟ್ಟಿ ಪಾಲ್ಗೊಂಡಿದ್ದರು.ರೋ. ಅಭಿನಂದನ್ ಶೆಟ್ಟಿ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಇಂಟರ್ಯಾಕ್ಟ ಕ್ಲಬ್ ನ ಧ್ಯೇಯ ಉದ್ದೇಶಗಳ ಬಗ್ಗೆ ತಿಳಿಸಿದರು.
ರೋಟರಿ ಕುಂದಾಪುರ ದಕ್ಷಿಣದ ಸದಸ್ಯರಾದ ರೋ. ಮನೋಹರ ಪಿ ತಮ್ಮ ಹುಟ್ಟು ಹಬ್ಬವನ್ನು ವಿಶೇಷ ಮಕ್ಕಳ ವಸತಿ ಶಾಲೆ ಮಾನಸ ಜ್ಯೋತಿಯಲ್ಲಿ ಹಣ್ಣು ಹಂಪಲು ಹಂಚಿ, ದೇಣಿಗೆಯನ್ನು ನೀಡಿ, ಮಕ್ಕಳೊಂದಿಗೆ ಆಚರಿಸಿಕೊಂಡರು.ರೋಟರಿ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಮಾಜಿ ಅಧ್ಯಕ್ಷರಾದ ವಾಸುದೇವ ಕಾರಂತ, ಕೆ.ಪಿ.ಭಟ್ , ಕಾರ್ಯದರ್ಶಿ ಸಚಿನ್ ನಕ್ಕತ್ತಾಯ,ರೋ. ಸುರೇಖಾ ಪುರಾಣಿಕ ,ಶ್ರೀಮತಿ ವಿಜಯಲಕ್ಷ್ಮಿ ಮನೋಹರ ಹಾಗೂ ಮಾನಸ ಜ್ಯೋತಿಯ ಶೋಭಾ ಮಧ್ಯಸ್ಥ ಪಾಲ್ಗೊಂಡಿದ್ದರು.