ಕುಂದಾಪುರ: ಪ್ರತಿಯೊಬ್ಬರಲ್ಲಿಯೂ ಪರಿಸರ ಕಾಳಜಿ ಇದ್ದಾಗ ಮಾತ್ರ ಪರಿಸರ ಸ್ನೇಹಿ ಸಮಾಜ ನಿಮಾ೯ಣ ಮಾಡಲು ಸಾಧ್ಯವಿದೆ. ಮೊದಲು ನಾವು ಬದಲಾಗಬೇಕು. ಪರಿಸರ ಪೂರಕ ವಸ್ತುಗಳ ಬಳಕೆಯಿಂದ ನಮ್ಮ ಆರೋಗ್ಯದ ಜತೆಯಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಅವಕಾಶವಿದೆ ಎಂದು ಪತ್ರಕರ್ತ ಗಣೇಶ್ ಐಶ್ವರ್ಯ ಬೀಜಾಡಿ ಹೇಳಿದರು.ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸಕಾ೯ರಿ ಪ್ರಥಮ ದಜೆ೯ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಬಿಬಿಎ ವಿದ್ಯಾಥಿ೯ಗಳಿಂದ ಕಾಲೇಜಿನ ಸಭಾಭವನದಲ್ಲಿ ಜರುಗಿದ ಪರಿಸರ ಸ್ನೇಹಿ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು […]
ಉಡುಪಿ:ನ.20: ಕ್ರಿಸ್ತರಾಜರ ಹಬ್ಬದ ಪ್ರಯುಕ್ತ ಕ್ರೈಸ್ತ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ, ಆರಾಧನೆ ಮತ್ತು ಮೆರವಣಿಗೆ ಹಾಗೂ ಧರ್ಮಪ್ರಾಂತ್ಯದ ಉಗಮದ ದಶಮಾನೋತ್ಸವ ಸಮಾರಂಭ ರವಿವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥಡ್ರಲ್ ನಲ್ಲಿ ಭಕ್ತಿ ಭಾವದೊಂದೊಂದಿಗೆ ಜರುಗಿತು.ಪರಮ ಪ್ರಸಾದ ಮೆರವಣಿಗೆಯ ಬಲಪೂಜೆಯ ನೇತೃತ್ವ ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಇಂದು ನಾವು ಕ್ರಿಸ್ತ ರಾಜರ ಮಹೋತ್ಸವವನ್ನು ಆಚರಿಸುತ್ತಿದ್ದು ಯೇಸುಕ್ರೀಸ್ತರು ಪ್ರತಿಯೊಬ್ಬರು ಶಾಂತಿ ಮತ್ತು ಕ್ಷಮೆಯ ದೂತರಾಗಬೇಕು ಎನ್ನುವ ಸಂದೇಶವನ್ನು ತನ್ನ ಜೀವನದಲ್ಲಿ […]
ಸಂಗೀತ ಭಾರತಿ ಟ್ರಸ್ಟ್ ಕುಂದಾಪುರ ಮತ್ತು ಆರ್. ಕೆ. ಸಂಜೀವ ರಾವ್ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ಖಂಬದಕೋಣೆ ಆಶ್ರಯದಲ್ಲಿ ಕುಂದಾಪುರದ ಹೋಟೆಲ್ ಪಾರಿಜಾತದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ವಿದುಷಿ ಶ್ರೀಮತಿ ಸುಜಾತ ಗುರವ್ ಅವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಿತು.ತಬಲಾದಲ್ಲಿ ಟಿ. ರಂಗ ಪೈ ಮಣಿಪಾಲ, ಹಾರ್ಮೋನಿಯಂನಲ್ಲಿ ಶಶಿಕಿರಣ ಮಣಿಪಾಲ ಸಹಕರಿಸಿದ್ದರು.ಪ್ರಮೀಳಾ ಕುಂದಾಪುರ ಮಾತನಾಡಿ “ಶ್ರೀಮತಿ ಸುಶೀಲಾ ಸಂಜೀವ ರಾವ್, ಶ್ರೀಮತಿ ನಿರ್ಮಲಾ ಪ್ರಕಾಶ್ ರಾವ್ ಹಾಗೂ ಪ್ರಕಾಶ್ ರಾವ್ ಸ್ಮಾರಕವಾಗಿ ಸಂಗೀತ ಕಾರ್ಯಕ್ರಮ ನಿರಂತರವಾಗಿ […]
“ಇವತ್ತಿನ ನಮ್ಮ ದೈನಂದಿನ ಜೀವನದಲ್ಲಿ ದೇಹದಂಡನೆ ಕಡಿಮೆಯಾಗಿರುವುದರಿಂದ ವ್ಯವಸ್ಥಿತವಾದ ತರಬೇತಿ ಆಧರಿತ ಕ್ರೀಡೆಯ ಅಗತ್ಯವಿದೆ. ದಿನ ನಿತ್ಯವೂ ಅಲ್ಪ ಸಮಯವನ್ನಾದರೂ ನಾವು ದೇಹಬಲವನ್ನು ಹೆಚ್ಚಿಸುವಂಥ ಕಾರ್ಯಗಳಿಗೆ ನೀಡಬೇಕು” ಎಂದು ಕುಂದಾಪುರ ತಾಲೂಕು ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿಯವರಾದ ಶ್ರೀ ಕುಸುಮಾಕರ ಶೆಟ್ಟಿಯವರು ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕರೂ, ಬೈಂದೂರಿನ ಶಾಸಕರೂ ಆದ ಶ್ರೀ ಬಿ.ಎಮ್. ಸುಕುಮಾರ್ ಶೆಟ್ಟಿಯವರು ಶಾರೀರಿಕ ಧೃಢತೆಯ ಮೂಲಕ […]
ಅಂತರಾಷ್ಟ್ರೀಯ ಭಾರತೀಯ ಜೇಸಿಐನ ವಲಯ ಹದಿನೈದರ ಪ್ರತಿಷ್ಠಿತ ಘಟಕ ಬೆಳ್ಮಣ್ಣು ಜೇಸಿಐನ 43ನೇ ಪದಗ್ರಹಣ ಸಮಾರಂಭದಲ್ಲಿ ನಿರ್ಗಮನ ಅಧ್ಯಕ್ಷರಾದ ಜೇಸಿ. ವೀಣೇಶ್ ಅಮೀನ್ ಅವರಿಗೆ ಬೆಳ್ಮಣ್ಣು ಜೇಸಿಐ ಘಟಕದ ಪೂರ್ವಾಧ್ಯಕ್ಷರುಗಳಿಂದ ಅಭಿನಂದನಾ ಸನ್ಮಾನವನ್ನು ಬೆಳ್ಮಣ್ಣು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆಸಲಾಯಿತು.ಬೆಳ್ಮಣ್ಣು ಜೇಸಿಐನ ನೂತನ ಅಧ್ಯಕ್ಷರಾದ ಅಬ್ಬನಡ್ಕ ಸತೀಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ವಹಿಸಿದ್ದರು. ಕರ್ನಾಟಕ ಮೀನುಗಾರಿಕಾ ನಿಗಮ ಮಂಡಳಿಯ ನಿರ್ದೇಶಕರಾದ ಕಟಪಾಡಿ ಗೀತಾಂಜಲಿ ಸುವರ್ಣ, ಮೈಸೂರು ಎಸ್.ಐ.ಆರ್.ಡಿ. ತರಬೇತಿ ಸಂಯೋಜಕರಾದ ಸುಧಾಮಣಿ ಜೇಸಿಐ ವಲಯ 15ರ […]
ಕುಂದಾಪುರ. ನ.16: ಆಪೋಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಸಂಸ್ಥಾಪಕಿ ಮದರ್ ವೆರೋನಿಕಾರ ದ್ವಿಶತಮಾನೋತ್ಸವದ ಪುಣ್ಯಸ್ಮರಣೆಯ ಆರಂಭೋತ್ಸ ವನ್ನು ಜಗತ್ತಿನ ಎಲ್ಲಡೆ ಆರಂಭಿಸುವ ಹೊತ್ತಿನಲ್ಲಿ, ಕುಂದಾಪುರ ಸಂತ ಜೋಸೆಫ್ ಕಾರ್ಮೆಲ್ ಸಂಸ್ಥೆಯಲ್ಲಿಯೂ ಇಂದು ಚಾಲನೆ ನೀಡಲಾಯಿತು. ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ದಿವ್ಯ ಬಲಿದಾನವನ್ನು ಅರ್ಪಿಸಿ ಆರಂಭೋತ್ಸವಕ್ಕೆ ಚಾಲನೆ ನೀಡಿದರು. ಸಹಾಯಕ ಧರ್ಮಗುರು ವಂ| ಅಶ್ವಿನ್ ನೊರೊನ್ಹಾ ಸಹಬಲಿದಾನವನ್ನು ಅರ್ಪಿಸಿದರು. ಸಿಸ್ಟರ್ ವೆರೋನಿಕಾ 1823 ರಲ್ಲಿ ಒಟ್ಟೋಮನ್ ಸಾಮ್ರಾಜ್ಯದ ರಾಜಧಾನಿ ಇಸ್ತಾನ್ಬುಲ್ನಲ್ಲಿ […]
ಕೋಲಾರ: ಆಲೂಗಡ್ಡೆಗೆ ಬಾಧಿಸುತ್ತಿರುವ ಅಂಗಮಾರಿ ಹಾಗೂ ಬುಡ ರೋಗ ನಿಯಂತ್ರಣಕ್ಕೆ ಉಚಿತ ಔಷಧಿ ವಿತರಣೆ ಮಾಡಿ ನಷ್ಟವಾಗಿರುವ ಪ್ರತಿ ಎಕರೆಗೆ 2 ಲಕ್ಷ ಪರಿಹಾರ ನೀಡಬೇಕೆಂದು ರೈತಸಂಘದಿಂದ ರೋಗ ಬೆಳೆ ಸಮೇತ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.ಲಕ್ಷಾಂತರ ರೂಪಾಯಿ ಸಾಲದ ಜೊತೆಗೆ ಮನೆಯ ಹೆಂಡತಿ ಒಡವೆಯನ್ನು ಅಡ ಇಟ್ಟು ಬೆಳೆದಿರುವ 2 ಎಕರೆ ಆಲೂಗಡ್ಡೆ ಬೆಳೆ ಸಂಪೂರ್ಣವಾಗಿ ರೋಗಕ್ಕೆ ಬಲಿಯಾಗಿದೆ. ಲಕ್ಷ ಲಕ್ಷ ಹಣ ನೀಡಿ ಖರೀದಿ ಮಾಡಿ ಔಷಧಿಯಿಂದ ಕನಿಷ್ಠಪಕ್ಷ ಶೇ.10ರಷ್ಟೂ ಸಹ ರೋಗ […]
ವಿಶ್ವ ಮಧುಮೇಹ ದಿನದ ಅಂಗವಾಗಿ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಸ್ಯೂಟಿಕಲ್ ವಿಭಾಗ ಮತ್ತು ಕಾಲೇಜಿನ ರಾಘ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ದಿನಾಂಕ 13.11.2022 ರಂದು ‘ಮುಲ್ಲರ್ರನ್ನ್’ ಮ್ಯಾರಥಾನ್ ಓಟವನ್ನು ಆಯೋಜಿಸಲಾಯಿತು.ಮಂಗಳೂರಿನ ಸಂಚಾರಿ ಸಹಾಯಕ ಪೊಲೀಸ್ ಆಯುಕ್ತರಾದ ಗೀತಾ ಕುಲಕರ್ಣಿಯವರು ಮ್ಯಾರಥನ್ನ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು. ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳು ತಮ್ಮ ಉದ್ಘಾಟನಾ ಭಾಷಣದಲ್ಲಿ […]