ಅಬ್ಬನಡ್ಕ: ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಹಾಗೂ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ನೇತೃತ್ವದಲ್ಲಿ ಆದಿತ್ಯವಾರ ಕುಂಟಲಗುಂಡಿಯಲ್ಲಿರುವ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ವೇದಿಕೆಯಲ್ಲಿ 17ನೇ ವರ್ಷದ ಅಬ್ಬನಡ್ಕ ಸಾರ್ವಜನಿಕ ಶ್ರೀ ಮಹಾಶಿವರಾತ್ರಿ ಸಂಭ್ರಮ, ದ್ವಿತೀಯ ವರ್ಷದ ಭಜನೋತ್ಸವ ಸಂಭ್ರಮ, ಸನ್ಮಾನ ಕಾರ್ಯಕ್ರಮ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ಸದಸ್ಯರೆಲ್ಲರನ್ನೂ ಸನ್ಮಾನಿಸಲಾಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ […]
ಕಾರ್ಕಳ, ಫೆ.21: ಇಲ್ಲಿನ ಪಾಕಳದ ಮಂಜರಪಲ್ಕೆ ಸಂತ ಅಂತೋನಿಯವರ ದೇವಾಲಯಕ್ಕೆ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಫೆ.21ರ ಮಂಗಳವಾರದಂದು ಜರುಗಿತು. ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೋ ಅವರು ಇತರ ಗಣ್ಯರೊಂದಿಗೆ ಶಿಲಾನ್ಯಾಸವನ್ನು ನೆರವೇರಿಸಿದರು. ಇಲ್ಲಿನ ಸೇಂಟ್ ಅಂತೋನಿ ದೇವಸ್ಥಾನವು ತನ್ನ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ, ದೇಗುಲಕ್ಕೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆಯು ತೀವ್ರವಾಗಿ ಬೆಳೆದಿದೆ, ಹೊಸ ಮತ್ತು ವಿಶಾಲವಾದ ದೇಗುಲದ ಅಗತ್ಯವನ್ನು ಪರಿಗಣಿಸಿ, ಹೊಸ ಕಟ್ಟಡದ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಯೋಜನೆಯ ಒಟ್ಟು ವೆಚ್ಚ 6.5 […]
ಕ್ರೈಸ್ತ ವಿದ್ಯಾಪೀಠ, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಋಷಿವನ, ಆಧ್ಯಾತ್ಮಿಕತೆಯ ಸಂಸ್ಥೆ-ಕುತ್ತಾರು ಇವುಗಳ ಜಂಟಿ ಆಶ್ರಯದಲ್ಲಿ 18 ಫೆಬ್ರವರಿ 2023 ರಂದು ರಾಷ್ಟ್ರೀಯ ಶಿಕ್ಷಣ ನೀತಿ 2020 ಎಂಬ ವಿಷಯದ ಮೇಲೆ ವಿಚಾರಸಂಕಿರಣವು ಜರಗಿತು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ. ಡಾ. ಪೀಟರ್ ಪಾವ್ಲ್ ಸಲ್ದಾನ್ಹಾರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣವು ಕೇವಲ ಒಂದು ತರಗತಿ ಅಥವಾ ಪಠ್ಯಪುಸ್ತಕಕ್ಕೆ ಸೀಮಿತವಾಗದೆ ಬದುಕುವ ಕಲೆಯನ್ನು ಕಲಿಸಬೇಕು ಹಾಗೂ ನಮ್ಮನ್ನು ಸಮಾಜದ ಕೆಡುಕುಗಳ ವಿಮೋಚನೆಗಾಗಿ ಪ್ರೇರೇಪಿಸಬೇಕು ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ […]
ಕುಂದಾಪುರ:ಇನ್ನರ್ ವ್ಹೀಲ್ ಕ್ಲಬ್ ಕುಂದಾಪುರ ದಕ್ಷಿಣ ಸ್ಥಾಪನೆಯಾಗಿ 25 ವರ್ಷ ಪೂರೈಸಿದ ಸವಿ ನೆನಪಿಗಾಗಿ ಈಗಾಗಲೇ ನಂದಿಕೇಶ್ವರ ಫ್ರೇಂಡ್ಸ್ ನಿರ್ಮಿಸಿದ್ದ ಗಡಿಯಾರ ಗೋಪುರವನ್ನು ಇನ್ನರ್ ವ್ಹೀಲ್ ಕ್ಲಬ್ಬಿನ ಸದಸ್ಯರು ವಿನೂತನ ರೀತಿಯ ಆಕರ್ಷಣೆ ಶೈಲಿಯಲ್ಲಿ ನವೀಕರಣಗೊಳಿಸಿದ್ದಾರೆ. ಇನ್ನರ್ ವ್ಹೀಲ್ ಕ್ಲಬ್ಬಿನ ಜಿಲ್ಲಾ ಸಭಾಪತಿ ಶ್ರೀಮತಿ ಕವಿತಾ ನಿಯತ್ ನವೀಕರಿಸಿದ ಗಡಿಯಾರ ಗೋಪುರ ಉದ್ಘಾಟಿಸಿ, ನಗರ ಸೌಂದರ್ಯ ಹೆಚ್ಚಿಸುವಲ್ಲಿ ವೃತ್ತಗಳು, ಗಡಿಯಾರ ಗೋಪುರಗಳು ಸಹಕಾರಿ ಎಂದು ಹೇಳಿದರು. ಇನ್ನರ್ ವ್ಹೀಲ್ ಕ್ಲಬ್ಬಿನ ಅಧ್ಯಕ್ಷರಾದ ಸುಮಾ ಪುತ್ರನ್ ಸ್ವಾಗತಿಸಿ, ಕಾರ್ಯದರ್ಶಿ […]
ರೋಟರಿ ಕುಂದಾಪುರ ದಕ್ಷಿಣದ ಮಾಜಿ ಅಧ್ಯಕ್ಷ ರೊ ಕೆ. ಪಾಂಡುರಂಗ ಭಟ್ ಬಸ್ರೂರಿನ ನಿವೇದಿತಾ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವೃತ್ತಿ ಮಾರ್ಗದರ್ಶನ ನೀಡಿ, ಶಾಲಾ ವಾಹನದ ನಿರ್ವಹಣೆಗೆ ಸಹಾಯ ಧನ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ಸುಬ್ಬು ಮಾಸ್ಟರ್ , ಇಂಟರ್ಯಾಕ್ಟ ಕ್ಲಬ್ಬಿನ ಸಂಯೋಜಕ ಪ್ರದೀಪ್ ಕುಮಾರ್ ಶೆಟ್ಟಿ, ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಗ೦ಗೊಳ್ಳಿ. ಫೆ. 20 : ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮೇಳನ “ಗಂಗಾವಳಿ” ಕಾರ್ಯಕ್ರಮದ ಎರಡನೇ ಗೋಷ್ಠಿಯಾಗಿ ಕವಿ ಗೋಷ್ಟಿ ನಡೆಯಿತು. ಈ ಕವಿ ಗೋಷ್ಟಿಯಲ್ಲಿ ಬರ್ನಾಡ್ ಡಿ’ಕೋಸ್ತಾ, ಅವರು “ಎಂತಹ ಕಂಪನ” ಭೂಕಂಪನದ ಬಗ್ಗೆ ಮಾರ್ಮಿಕವಾಗಿ ತಮ್ಮ ಕವಿತೆಯನ್ನು ಪ್ರಚುರ ಪಡಿಸಿದರು. ಜಗದೀಶ ದೇವಾಡಿಗ ಮುಳ್ಳಿಕಟ್ಟೆ ಸೌರ್ಹಾದತೆಯ ಬಗ್ಗೆ, ದೇವಿ ಪ್ರಸಾದ್ ಶೆಟ್ಟಿ ಬೈಲೂರು ಸಮಾಜದ ಬಗ್ಗೆ, ಶ್ರೀಮತಿ ಸುಪ್ರಸನ್ನಾ ನಕ್ಕತ್ತಾಯ ಕೋಟೇಶ್ವರ ಬಾಲ್ಯದ ಬಗ್ಗೆ, ನಾಗರಾಜ್ ಖಾರ್ವಿ ಕಂಚುಗೋಡು, ತಗ್ಗುವಿಕೆಯ ಬಗ್ಗೆ, ಜಗದೀಶ ದೇವಾಡಿಗ […]
ಗ೦ಗೊಳ್ಳಿ, ಫೆ. 20 : ಮತ್ಸ್ಯ ನಗರಿ ಗಂಗೊಳ್ಳಿಯಲ್ಲಿ ಕುಂದಾಪುರ ತಾಲೂಕು ೧೮ ನೇ ಸಾಹಿತ್ಯ ಸಮ್ಮೇಳನ ಫೆ. 19 ರಂದು ಇಲ್ಲಿನ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿಜ್ರಂಭಣೆಯಿಂದ ನಡೆಯಿತು ಸಮ್ಮೇಳನದ ಸರ್ವಾಧ್ಯಕ್ಷೆತೆ ವಹಿಸಿದ್ದ ನಿವ್ರತ್ತ ಅಧ್ಯಾಪಕ, ಸಾಹಿತಿ ಖ್ಯಾತ ಅಂಕಣಗಾರ ಕೋಣಿ ಶಿವಾನಂದ ಕಾರಂತರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ಕುಂದ ಕನ್ನಡ ಆಕಾಡೆಮಿ ಸ್ಥಾಪನೆಯಾಗ ಬೇಕು, ಹಾಗೇ ಕುಂದಾಕನ್ನಡ ಅಧ್ಯಯನ ಪೀಠ ಸ್ವಾಪನೆಯಾಗಬೇಕು, ಸರಕಾರ ತಮ್ಮ ಸರಕಾರಿ ಕನ್ನಡ ಶಾಲೆಗಳಿಗೆ ನೀಡುವ […]
ಶ್ರೀನಿವಾಸಪುರ: ಜನರು ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು. ಸ್ಥಳದಲ್ಲಿಯೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.ತಾಲ್ಲೂಕಿನ ಆನೆಪಲ್ಲಿ ಗ್ರಾಮದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಶನಿವಾರ ಏರ್ಪಡಿಸಿದ್ದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಹಣಿ, ದಾನಪತ್ರ, ಪಿಂಚಣಿ, ವಿಭಾಗ ಪತ್ರ, ಪೌತಿ ಖಾತೆ ಮುಂತಾದ ವಿಷಯಗಳಲ್ಲಿ ಯಾವುದೇ ಸಮಸ್ಯೆ ಇದ್ದಲ್ಲಿ ಸರಿಪಡಿಸಲಾಗುವುದು. ಎಲ್ಲ ಸರಿಯಿದ್ದಲ್ಲಿ ಸ್ಥಳದಲ್ಲಿಯೇ ಮಾಡಿಕೊಡಲಾಗುವುದು ಎಂದು ಹೇಳಿದರು.ಗ್ರಾಮದಲ್ಲಿ 62 ಕುಟುಂಬಗಳಿದ್ದು, 330 ಮತದಾರರಿದ್ದಾರೆ. […]
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ, ಸಮ್ಮೇಳನ ಸಮಿತಿ, ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪ. ಪೂ. ಕಾಲೇಜು ವಠಾರದಲ್ಲಿ ಇಂದು ಫೆ.19 ರಂದು ಏರ್ಪಡಿಸಿರುವ ಗಂಗಾವಳಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಗಂಗೊಳ್ಳಿ ಸರ್ವ ರೀತಿಯಲ್ಲಿ ಸಿದ್ಧಗೊಂಡಿದೆ. ವಿವಿಧ ಸಂಘಟನೆಗಳಿಂದ ಸ್ವಾಗತ ಕಮಾನುಗಳು, ಪ್ರಚಾರ ಫಲಕಗಳು ಅಳವಡಿಸಲ್ಪಟ್ಟಿದ್ದು ಕನ್ನಡ ಬಾವುಟಗಳಿಂದ ಬೀದಿ ಶೃಂಗಾರಗೊಂಡಿದೆ.ಸರಸ್ವತಿ ವಿದ್ಯಾಲಯ ವಠಾರದಲ್ಲಿ ಶಾಮಿಯಾನದ ಚಪ್ಪರ ಹಾಕಿಸಲಾಗಿದ್ದು, ಕಾಲೇಜಿನ ವಿಶಾಲ ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ವಸ್ತು ಹಾಗೂ ಪುಸ್ತಕ ಮಳಿಗೆಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. […]