
ಕುಂದಾಪುರ: ಕುಂದಾಪುರ ನಗರದಲ್ಲಿ ಸೋಮವಾರ ಸಂಜೆ ನಡೆದ ಮೂರು ಕಡೆಯ ನವರಾತ್ರಿ ಶಾರದೆ ವಿಸರ್ಜನಾ ಮೆರವಣಿಗೆ ಹಾಗೂ ದರ್ಗಾದ ಉರೂಸ್ ಕಾರ್ಯಕ್ರಮದ ವೇಳೆ ಹಿಂದೂ ಮುಸ್ಲೀಂ ಭಾವೈಕ್ಯತೆ, ಸೌಹಾರ್ಧತೆ, ಪರಸ್ಪರ ಸಹಕಾರ ಕಂಡುಬಂತು. ಕುಂದಾಪುರದ ಶ್ರೀರಾಮಮಂದಿರ ದೇವಸ್ಥಾನ, ವೆಂಕಟರಮಣ ದೇವಸ್ಥಾನ, ರಕ್ತೇಶ್ವರಿ ದೇವಸ್ಥಾನದ ನವರಾತ್ರಿಯ ಶಾರದಾ ದೇವಿ ವಿಸರ್ಜನಾ ಮೆರವಣಿಗೆ ಮತ್ತು ಕುಂದಾಪುರದ ಜೆ.ಎಮ್ ರಸ್ತೆಯ ಹಝ್ರತ್ ಸುಲ್ತಾನ್ ಸಯ್ಯಿದ್ ಯೂಸುಫ್ ವಲಿಯುಲ್ಲಾಹಿ ದರ್ಗಾದ ವಾರ್ಷಿಕ ಕುಂದಾಪುರ ಉರೂಸ್ ಮುಬಾರಕ್ ಕಾರ್ಯಕ್ರಮ ಸೋಮವಾರ ಸಂಜೆ ಏಕಕಾಲದಲ್ಲಿ ಜರುಗಬೇಕಿತ್ತು. […]

ಕುಂದಾಪುರ ತಾಲೂಕು ಬೇಳೂರು ಗ್ರಾಮದಲ್ಲಿ ಕೃಷಿ ಕೆಲಸ ಮುಗಿಸಿ ಸಂಜೆಯ ವೇಳೆ ಕೈಕಾಲು ತೊಳೆಯಲು ಹೊಳೆಗೆ ಇಳಿದಿದ್ದ ಯುವಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಪ್ರಶಾಂತ ಆಚಾರ್ಯ (22) ಮೃತಪಟ್ಟ ಯುವಕನಾಗಿದ್ದಾನೆ. ಸ್ಥಳೀಯನಾದ ಪ್ರಶಾಂತ ಆಚಾರ್ಯ ಸ್ನೇಹಿತರೊಂದಿಗೆ ತೋಟದ ಸಸಿ ಬುಡ ಹದ ಮಾಡುವ ಕೆಲಸಕ್ಕಾಗಿ ತೆರಳಿದ್ದು, ಕೆಲಸ ಮುಗಿಸಿ ಸಂಜೆ 5:45ರ ಸುಮಾರಿಗೆ ಕೈಕಾಲು ತೊಳೆಯಲು ಕೊಮೆ ಹೊಳೆ ಆರ್ ಬೆಟ್ಟು ಗುಂಡಿ ಎಂಬಲ್ಲಿ ಇಳಿದಾಗ […]

ಭಂಡಾರ್ಕರ್ಸ್ ಕಾಲೇಜಿನ ಮಹತ್ವದ ಸಮುದಾಯ ಯೋಜನೆ “ರೇಡಿಯೋ ಕುಂದಾಪುರ 89.6 ಎಫ್ ಎಮ್ “ಸಿದ್ಧಗೊಳ್ಳುತ್ತಿದ್ದು ತಾಂತ್ರಿಕ ಕಾರ್ಯ ಪೂರ್ಣಗೊಳ್ಳುತ್ತಿದೆ.ಈ ಬಾನುಲಿ ಕೇಂದ್ರ 25 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕೇಳಬಹುದಾಗಿದ್ದು, ಧ್ವನಿ ಪರೀಕ್ಷೆ ಯಶಸ್ವಿಯಾಗಿದೆ.ಕುಂದಾಪುರ ತಾಲೂಕಿನ ಜನರು ದೇಶ ವಿದೇಶದಲ್ಲಿದ್ದರು ರೇಡಿಯೋ ಕುಂದಾಪುರ ಕೇಳುವಂತೆ ಮಾಡುವ ಆಪ್ ರೂಪಿಸಲಾಗುತ್ತಿದ್ದು ದೆಹಲಿಯ ತಂತ್ರಜ್ಞರು ಈ ಬಗ್ಗೆ ಸಿದ್ಧತೆ ನಡೆಸುತ್ತಿದ್ದಾರೆ. ಉದ್ದೇಶ : ಜನರ ನಾಡಿ ಮಿಡಿತದ ಮಾಧ್ಯಮವಾಗಿ ಎಲ್ಲಾ ಸಮುದಾಯದ ಆಚಾರ ವಿಚಾರಗಳ ಸಾಂಸ್ಥಿಕವಾಗಿ ವಿಚಾರ ವಿನಿಮಯ ಮಾಡುವುದು. ಎಲ್ಲಾ ಸಮುದಾಯದ […]

ಮಂಗ್ಳೂರು: ಅ.23: ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇವರು ಕಥೊಲಿಕ ಕೈಸ್ತ ಪತ್ರಕರ್ತರನ್ನು ಗುರುತಿಸುವ ಸಲುವಾಗಿ ಕಥೊಲಿಕ ಕ್ರೈಸ್ತ ಪತ್ರಕರ್ತರ ಸಹಮಿಲನ ಹಾಗೂ ಸನ್ಮಾನ ಕಾರ್ಯವನ್ನು ತಾರೀಖು 22-10-2023 ರಂದು ರವಿವಾರ ಸಾಯಂಕಾಲ ಮಂಗಳೂರಿನ ಜೆಪ್ಪು ಸಂತ ಅಂತೋಣಿಯವರ ಆಶ್ರಮದ ‘ಸಂಭ್ರಮ’ ಮಂಗಳೂರು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.ಕಾರ್ಯಕ್ರಮವನ್ನು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ|ಪೀಟರ್ ಪಾವ್ಲ್ ಸಲ್ಡಾನ್ಹಾರವರು ಇತರ ಗಣ್ಯರೊಂದಿಗೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಅಧ್ಯಕ್ಷರಾದ ಶ್ರೀ ಆಲ್ವಿನ್ ಡಿ […]

ಕುಂದಾಪುರ/ತಲ್ಲೂರು: ಶಾಲೆಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ ವೇಳೆ 7ನೇ ತರಗತಿಯ ವಿದ್ಯಾರ್ಥಿ ಪೃಥ್ವಿರಾಜ್ ಶೆಟ್ಟಿ (13) ಮೃತ ಪಟ್ಟ ದಾರುಣ ಘಟನೆ ಕುಂದಾಪುರದ ತಲ್ಲೂರಿನಲ್ಲಿ ನಡೆದಿದೆ. ದುರ್ದೈವಿ ಪೃಥ್ವಿರಾಜ್ ಶೆಟ್ಟಿಯ ಅಕ್ಕ ಕೂಡ ಕಳೆದ ವರ್ಷ ಪೃಥ್ವಿರಾಜ್ ಅವರ ಅಕ್ಕ ಅನುಶ್ರೀ ಕೂಡ ಮನೆಯಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಳು. ಅಕ್ಕನ ಸಾವಿನ ನೋವು ಮಾಸುವ ಮೊದಲೇ ಪೋಷಕರಿಗೆ ಮಗನ ಸಾವು ಮತ್ತಷ್ಟು ಆಘಾತ ಜೊತೆ ಬಹಳ ಸಂಗತಿಯಾಗಿದೆ. ಅಕ್ಷರ ದಾಸೋಹ ಯೋಜನೆ ಕುಂದಾಪುರದ ಸಹಾಯಕ ನಿರ್ದೇಶಕ […]

ಜಗತ್ಪ್ರಸಿದ್ಧ ಮಂಗಳೂರು ದಸರಾ ನಡೆಯುವ ಸೌಹಾರ್ದ ತಾಣ ಕುದ್ರೋಳಿ ಕ್ಷೇತ್ರಕ್ಕೆ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ವೇದಿಕೆಯ ಇತರ ಸದಸ್ಯರೊಂದಿಗೆ ಸೌಹಾರ್ದ ಭೇಟಿ ನೀಡಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪೂಜೆ ಪುರಸ್ಕಾರ ಹಾಗೂ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ವಿಶ್ವ ಮಾನವ ಸಂದೇಶ ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ದಿವ್ಯ ಹಸ್ತದಿಂದ ಪ್ರತಿಷ್ಠಾಪನೆಗೊಂಡ ಶ್ರೀ ಗೋಕರ್ಣಾನಾಥ ಕ್ಷೇತ್ರವು ಸರ್ವ ಧರ್ಮದ ಜನತೆಯ ಪ್ರೀತಿ ವಿಶ್ವಾಸಗಳಿಸುವ ಮೂಲಕ […]

“ಐ. ಎಂಮ್. ಜೆ ಸೈನ್ಸ್ ಮತ್ತು ಕಾಮರ್ಸ್ ಕಾಲೇಜು ಮೂಡ್ಲಕಟ್ಟೆಯಲ್ಲಿ ನವರಾತ್ರಿ ಆಚರಣೆಯ ಶುಕ್ರವಾರ ಶಾರದಾ ಮತ್ತು ಆಯುಧ ಪೂಜೆಯನ್ನು ಭಕ್ತಿ ಮತ್ತು ಶ್ರದ್ದೆ ಇಂದ ಆಚರಿಸಲಾಯಿತು. ಐ. ಎಂಮ್. ಜೆ ಸಮೂಹ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಸಿದ್ದಾರ್ಥ್ ಜೆ ಶೆಟ್ಟಿ ಅವರು ಪೂಜಾ ವಿಧಿ ವಿದಾನವನ್ನು ನೆರವೇರಿಸಿದರು. ಇದೆ ಸಂದರ್ಭದಲ್ಲಿ ಐ. ಎಂಮ್. ಜೆ ವಿದ್ಯಾಸಂಸ್ಥೆಗೆ ಒಳಪಡುವ ಎಲ್ಲಾ ವಿಭಾಗದಲ್ಲೂ ಪ್ರತ್ಯೇಕವಾಗಿ ಪೂಜಾ ಕಾರ್ಯಗಳು ಜರುಗಿದವು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಉಪಾಪ್ರಾಂಶುಪಾಲರು, ಉಪನ್ಯಾಸಕರು ಮತ್ತು […]

ಭಗಿನಿ ಮೇರಿ ಅನಿಸೆಟಾ ಎಸಿ (85), ಶುಕ್ರವಾರ, ಅಕ್ಟೋಬರ್ 20, 2023 ರಂದು ಮಂಗಳೂರಿನ ಲೇಡಿಹಿಲ್ನಲ್ಲಿರುವ ಅನನ್ಸಿಯೇಷನ್ ಕಾನ್ವೆಂಟ್ನಲ್ಲಿ ನಿಧನರಾದರು. ಅವರು ಬೆಳ್ಳೂರು ಮೂಲದವರಾಗಿದ್ದು, ಅವರ ಮೂಲ ಹೆಸರು ಬೆನಿಟಾ ಸೆಲೆಸ್ತಿನಾ ರೊಡ್ರಿಗಸ್ ಆಗಿದ್ದು, ಅವರು ದಿವಂಗತ ಸಂತಾನ್ ರೋಡ್ರಿಗಸ್ ಮತ್ತು ದಿವಂಗತ ಮೊರ್ನೆಲ್ ಪಿರೇರಾ ಅವರ ಪುತ್ರಿಯಾಗಿದ್ದರು. ಅವರ ಪಾರ್ಥಿವ ಶರೀರವನ್ನು ಅಕ್ಟೋಬರ್ 22 ರಂದು ಭಾನುವಾರ ಮಧ್ಯಾಹ್ನ 1.00 ಗಂಟೆಯಿಂದ ಮಂಗಳೂರಿನ ಲೇಡಿಹಿಲ್ನಲ್ಲಿರುವ ಅನನ್ಸಿಯೇಶನ್ ಕಾನ್ವೆಂಟ್ ಚಾಪೆಲ್ನಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗುವುದು. ನಂತರ […]

ಬಸ್ರೂರು: ಸ್ಥಳೀಯ ಮಾರ್ಗೊಳಿ ಶೇಖ್ ಉಮ್ಮರ್ ವಲಿಯಲ್ಲಾ ದರ್ಗಾ ಶರೀಫ್ ನಲ್ಲಿ ೩೪ ನೇ ಉರೂಸ್ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ಜರುಗಿತು. ಮುಸ್ಮಿಂ ಬಾಂಧವರು ಮಾರ್ಗೊಳಿಯಿಂದ ಬಸ್ರೂರು ಪೇಟೆ ತನಕ ಮೆರವಣಿಗೆ ನೆಡೆಸಿದರು.