
ಕುಂದಾಪುರ (ಜನವರಿ 12) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿ ಶ್ರೀನಿತ್ ಶೇಟ್ ಮಂಗಳೂರಿನಲ್ಲಿ ಜನವರಿ 6 ಮತ್ತು 7ರಂದು ನಡೆದ 6ನೇ ಕುದುರೆಮುಖ್ ಟ್ರೋಫಿ, ಆಲ್ ಇಂಡಿಯಾ ಓಪನ್ ಫೈಡ್ ರೆಟೆಡ್ ರಾಪಿಡ್ ಚೆಸ್ ಟೂರ್ನಮೆಂಟ್ 2024ರ ಫೈನಲ್ ರಾಂಕಿಂಗ್ ಲಿಸ್ಟ್ ನ ಕೆಟಗರಿಯಲ್ಲಿ ಅತ್ಯುತ್ತಮ ಏಳು ಚೆಸ್ ಆಟಗಾರರಲ್ಲಿ ಒಬ್ಬನಾಗಿ, ಕರ್ನಾಟಕದ ಶ್ರೀನಿತ್ ಶೇಟ್ ಭಾಗವಹಿಸಿ, 9 ಸುತ್ತಿನಲ್ಲಿ 4 […]

ಸೇಂಟ್ ಆಗ್ನೆಸ್ ಪಿಯು ಕಾಲೇಜ್ 2023-’24 ರ ಹೊರಹೋಗುವ ಬ್ಯಾಚ್ಗೆ ಬೀಳ್ಕೊಡುಗೆ ಕಾರ್ಯಕ್ರಮವು ನಿಜವಾಗಿಯೂ ಮೋಡಿಮಾಡುವ ಕಾರ್ಯಕ್ರಮವಾಗಿದ್ದು, ಸಭೆಯನ್ನು ಸ್ವಾಗತಿಸಿದ ಡೈನಾಮಿಕ್ ಎಂಸೆಸ್ ರೋಚೆಲ್ ಮತ್ತು ನಿಚೆಲ್ ಅವರು ನಿಷ್ಪಾಪವಾಗಿ ಆಯೋಜಿಸಿದ್ದಾರೆ. ಈವೆಂಟ್ ಭಾವಪೂರ್ಣವಾದ ಟಿಪ್ಪಣಿಯಲ್ಲಿ ಎಬ್ಬಿಸುವ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು, ನಂತರದ ಹೃತ್ಪೂರ್ವಕ ಕ್ಷಣಗಳಿಗೆ ಧ್ವನಿಯನ್ನು ಹೊಂದಿಸುತ್ತದೆ. ಇದರ ನಂತರ ನಿಮ್ಮ ಕನಸುಗಳನ್ನು ನಂಬಿ ಮತ್ತು ಅದಕ್ಕಾಗಿ ಶ್ರಮಿಸುವ ಸ್ಕಿಟ್ ನಡೆಯಿತು. ಸನೋವರ್ ಮತ್ತು ಪ್ರಾಪ್ತಿ ಅವರು ಆಕರ್ಷಕ ಆಟಗಳ ಮೂಲಕ ಕೂಟಕ್ಕೆ ಶಕ್ತಿ ತುಂಬಿದರು, […]

ಕರ್ನಾಟಕ ಸರ್ಕಾರದ ಆದೇಶದಂತೆ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಪ್ರಾಧಿಕಾರಕ್ಕೆ ಶ್ರೀಮತಿ ಜೂಡಿತ್ ಮೆಂಡೊನ್ಸಾ ತಲ್ಲೂರುಇವರನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿ ಕರ್ನಾಟಕ ಸರಕಾರ ನೇಮಿಸಿದೆ. ಸಿಂಡಿಕೇಟ್ ಮಂಡಳಿಯು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯಾಗಿದ್ದು ಆರ್ಥಿಕ ಶೈಕ್ಷಣಿಕ ಹಾಗೂ ಇತರೆ ಅಗತ್ಯ ನೀತಿ ಕಾಯಿದೆಗಳನ್ನು ಅನುಷ್ಠಾನಗೊಳಿಸುವ ಮಂಡಳಿಯಾಗಿರುತ್ತದೆ. ಇದರ ಅವಧಿ ಮೂರು ವರ್ಷಗಳಾಗಿದ್ದು ಮಂಡಳಿಯಲ್ಲಿ 6 ಸರಕಾರದಿಂದ ನಾಮ ನಿರ್ದೇಶನಗೊಂಡ ಸದಸ್ಯರಿರುತ್ತಾರೆ. 2 ಸಾಮಾನ್ಯ 1 ಮಹಿಳೆ 1 ಪರಿಶಿಷ್ಟ ಜಾತಿ 1 ಹಿಂದುಳಿದ ವರ್ಗದ ಮತ್ತು 1 ಅಲ್ಪಸಂಖ್ಯಾತ ಸದಸ್ಯರಾಗಿದ್ದಾರೆ. […]

ಕುಂದಾಪುರ: ದಿ. 11-01-2024 ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಪವಿಭಾಗಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಧಾನ ಮಂತ್ರಿ ಮಾತೃತ್ವ ಅಭಿಯಾನ ಅಂಗವಾಗಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡುವದರ ಮೂಲಕವಾಗಿ HIV, Syphilis, Hepatitis B ಕುರಿತು ಜಾಗೃತಿ ಮೂಡಿಸಿ ಗರ್ಭಿಣಿಯರಿಗೆ ಎಲ್ಲ ರೀತಿಯ ಆರೋಗ್ಯ ತಪಾಸಣೆ & ಪರೀಕ್ಷೆಗಳನ್ನು ಮಾಡಲಾಯಿತು. ಈ ಆಸ್ಪತ್ರೆಯ ಮುಖ್ಯ ಆಡಳಿತ ಶಸ್ತ್ರ ಚಿಕಿತ್ಸಕರಾದ ಡಾ. ರಾಬರ್ಟ್ ರೆಬೆಲ್ಲೋ, ತಾಲೂಕು ಆರೋಗ್ಯಾಧಿಕಾರಿಯವರಾದ ಡಾ. ಪ್ರೇಮಾನಂದ್, ಆಸ್ಪತ್ರೆಯ (ಪ್ರಭಾರ)ಶುಶ್ರುಷ ಅಧಿಕ್ಷಕರಾದ ಶ್ರೀಮತಿ ಅನ್ನಪೂರ್ಣ ಟಿ.ಆರ್ ಮತ್ತು […]

ಶ್ರೀನಿವಾಸಪುರ : ನಮ್ಮ ದೇಹದ ಪಂಚೇಂದ್ರಿಯಗಳಲ್ಲಿ ಕಣ್ಣುಗಳು ಒಂದು ಅಂಗವಾಗಿದ್ದು, ಕಣ್ಣಿನ ಆರೋಗ್ಯವನ್ನು ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಕೆ.ಮನು ಹೇಳಿದರು.ಪಟ್ಟಣದ ನ್ಯಾಯಾಲಯ ಸಭಾಂಗಣದ ಕಛೇರಿಯಲ್ಲಿ ಮಂಗಳವಾರ ಕಾನೂನು ಸೇವ ಪ್ರಾಧಿಕಾರ ಸಹಯೋಗದೊಂದಿಗೆ ಶ್ರೀನಿವಾಸಪುರ ರೋಟರಿ ಕ್ಲಬ್ವತಿಯಿಂದ ನಡೆದ ಕೋಲಾರದ ವಾಸನ್ ಕಣ್ಣಿನ ಆಸ್ಪತ್ರೆ ವತಿಯಿಂದ ನಡೆದ ಉಚಿತ ಕಣ್ಣಿನ ತಪಾಸಣ ಶಿಬಿರ ಹಾಗು ಯುವದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸ್ವಾಮಿ ವಿವೇಕಾನಂದರು ನಡೆದ ದಾರಿಯು ಒಳ್ಳೇಯ ದಾರಿಯಾಗಿದ್ದು, ಇಂದಿನ ಪೀಳಿಗೆಯು ಸ್ವಾಮಿ […]

ನಂದಳಿಕೆಃಕಾರ್ಕಳ ತಾಲೂಕಿನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸನ್ನಿಧಿಯಲ್ಲಿ ನಂದಳಿಕೆ ಚಾವಡಿ ಅರಮನೆ ಸುಂದರರಾಮ ಹೆಗ್ಡೆ ಯವರ ಶುಭ ಆಶೀರ್ವಾದದೊಂದಿಗೆ ಬೆಲ್ಮಣ್ಣು ಪುರುಷೋತ್ತಮ ಸ್ವಾಮಿಯವರ ನೇತೃತ್ವದಲ್ಲಿ ಬರುವ ದಿನಾಂಕ ಜನವರಿ 13ರ ಶನಿವಾರದಂದು ಬೆಳಿಗ್ಗೆ 5:30 ರಿಂದ ಇರುಮುಡಿ . ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಅಯ್ಯಪ್ಪ ದೇವರ ಮಹಾಪೂಜೆ ಮತ್ತು ಮಹಾ ಅನ್ನಸಂತರ್ಪಣೆ ನೆರವೇರಲಿರುವುದು.ಈ ದೇವತಾ ಕಾರ್ಯದಲ್ಲಿ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ವಿನಂತಿಸುವ ಅಯ್ಯಪ್ಪ ಭಕ್ತವೃಂದ ನಂದಳಿಕೆ.

ಕುಂದಾಪುರ : ” ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಮಾತ್ರ ಸೀಮಿತ ಎಂಬಂತೆ ಬದುಕನ್ನು ಕಟ್ಟಿ ಕೊಳ್ಳುತ್ತಿದ್ದ ಕ್ಲಿಷ್ಟಕರ ಕಾಲದಲ್ಲಿ ಸಮಾನ ಮನಸ್ಕರ ಮಿಲನದಿಂದ ಸಮಾಜದಲ್ಲಿ ವಿದ್ಯಾಜ್ಯೋತಿಯನ್ನು ಬೆಳಗಿದ ಶ್ರೇಯಸ್ಸು ವಿದ್ಯಾರಂಗ ಮಿತ್ರ ಮಂಡಳಿಗೆ ಸಲ್ಲುತ್ತದೆ ಎಂದು ಬೈಂದೂರು ಪಟ್ಟಣ ಪುರಸಭೆಯ ಮುಖ್ಯಾಧಿಕಾರಿ ಸೂರ್ಯ ಕಾಂತ ಖಾರ್ವಿ ಹೇಳಿದರು ಅವರು ಕುಂದಾಪುರ ಖಾರ್ವಿ ಕೇರಿಯ ವಿದ್ಯಾರಂಗ ಹಾಗೂ ವಿದ್ಯಾನಿಧಿ ಯೋಜನೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಶುಭಾ ಶಂಸನೆ ನುಡಿಗಳನ್ನಾಡಿದರು. ಸಮಾರಂಭ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ದಾಮೋದರ ಖಾರ್ವಿಯವರು ಸ್ವಾಗತಿಸಿದರು […]

ಕುಂದಾಪುರ : ಕುಂದಪ್ರಭ ಆಶ್ರಯದಲ್ಲಿ ಪ್ರದಾನ ಮಾಡಲಾಗುವ ಕೋ.ಮ.ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 7 ರಂದು ಭಾನುವಾರ ಸಂಜೆ 4 ಗಂಟೆಗೆ ಕುಂದಾಪುರ ಸರಕಾರಿ ಪ.ಪೂ.ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಜರುಗಲಿದೆ.ಖ್ಯಾತ ವಿದ್ವಾಂಸ, ರಂಗ ನಿರ್ದೇಶಕ, ನಟ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಕರ್ನಾಟಕ ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ, ಕೋಟ ಶ್ರೀನಿವಾಸ ಪೂಜಾರಿ ಸಮಾರಂಭ ಉದ್ಘಾಟಿಸಲಿದ್ದಾರೆ. ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಪ್ರಶಸ್ತಿ […]

ಮಲ್ಪೆ-ವೀರಮಾರುತಿ ಫ್ರೆಂಡ್ಸ್ ತೆಂಕನಿಡಿಯೂರು ಇವರ ಆಶ್ರಯದಲ್ಲಿ ತೆಂಕನಿಡಿಯೂರು ಹೈಸ್ಕೂಲ್ ಮೈದಾನದಲ್ಲಿ ಮಲ್ಪೆ ವಲಯ ಮಟ್ಟದ ಕ್ರಿಕೆಟ್ ಪಂದ್ಯಾಟ ಹನುಮ ಟ್ರೋಫಿ-2023 ಜರುಗಿತು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮತ್ತು ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ “ಸೋಲು ಗೆಲುವಿಗಿಂತ ಕ್ರೀಡಾಸ್ಪೂರ್ತಿ ಬಹುಮುಖ್ಯ“ ಯುವಕರು ಕ್ರೀಡಾಸ್ಪೂರ್ತಿಯಿಂದ ಆಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ.ಈ ಹಿಂದೆ ಮಲ್ಪೆ ಪರಿಸರದ ಅನೇಕ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದು […]