
ಕುಂದಾಪುರ ; ಸಾಧಕರಿಗೆ ಸನ್ಮಾನ. ಮೂಳೆ, ಮತ್ತು ಕೀಲು ವೈದ್ಯಕೀಯದಲ್ಲಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಡಾ. ರಿಶೆಲ್ ರೆಬೆಲ್ಲೊ ಇವರಿಗೆ ಕುಂದಾಪುರ ತಾಲೂಕು ಮಹಿಳಾ ಒಕ್ಕೂಟದ ವತಿಯಿಂದ ತಾ. 26ರಂದು ಸನ್ಮಾನಿಸಲಾಯಿತು. ರಾಧಾದಾಸ್, ಎ ಎಸ್ ಎನ್ ಹೆಬ್ಬಾರ್, ರವಿಕಿರಣ್ ಮುರ್ಡೇಶ್ವರ, ಶಾಲೆಟ್ ರೆಬೆಲ್ಲೊ, ಸುಧಾಕರ ಶೆಟ್ಟಿ, ಶೇಖರ ಶೆಟ್ಟಿ, ತಿಲೋತ್ತಮ ನಾಯಕ್, ಪ್ರೇಮಾ ಎಚ್, ಸಿಡಿಪಿಒ ಉಮೇಶ ಕೋಟಿಯಾನ್ ಮತ್ತಿತರರು ಉಪಸ್ಥಿತರಿದ್ದರು.

ಕುಂದಾಪುರ ; ಕುಂದಾಪುರ ರಕ್ತ ನಿಧಿ ಕೇಂದ್ರದ ದಶಮಾನೋತ್ಸವದ ಸಂಭ್ರಮ* ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ನಡೆಸುತ್ತಿರುವ ರಕ್ತ ನಿಧಿ ಕೇಂದ್ರ ಪ್ರಾರಂಭವಾಗಿ ಹತ್ತು ವರ್ಷ ಪೂರೈಸಿದ ಸಂದರ್ಭದಲ್ಲಿ ಜ್ಯೋತಿ ಬೆಳಗಿಸಿ ಸಂಭ್ರಮಿಸಲಾಯಿತು. ರೆಡ್ ಕ್ರಾಸನ ಸಭಾಪತಿ ಎಸ್ ಜಯಕರ ಶೆಟ್ಟಿಯವರು ರಕ್ತ ನಿಧಿ ಕೇಂದ್ರದ ಸ್ಥಾಪನೆಯ ಘಟನಾವಳಿಗಳನ್ನು ನೆನಪಿಸಿಕೊಂಡರು. ಈ ಮಹತ್ಕಾರ್ಯಕ್ಕೆ ಸಹಕರಿಸಿದ, ಪ್ರೋತ್ಸಹಿಸಿದ ವ್ಯಕ್ತಿಗಳನ್ನು , ದಾನಿಗಳನ್ನು ಸ್ಮರಿಸಿಕೊಂಡರು. ಉಡುಪಿ ಜಿಲ್ಲೆಯ ಮೂರನೆ ರಕ್ತ ನಿಧಿ ಕೇಂದ್ರವಾದ ಇದು ಕುಂದಾಪುರ ತಾಲೂಕು ಮಾತ್ರವಲ್ಲದೇ […]

ಉದ್ಯಾವರ; ದಿವಂಗತ ಲಾರೆನ್ಸ್ ಡೆಸಾ ನಿಧನದಿಂದ ತೆರವಾಗಿದ್ದ ಉದ್ಯಾವರ ಗ್ರಾಮ ಪಂಚಾಯತ್ ಒಂಬತ್ತನೇ ಕ್ಷೇತ್ರದ ಉಪ ಚುಣಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀ ದಯಾನಂದ ಕೋಟ್ಯಾನ್ ಅವರು 114 ಮತಗಳ ಅಂತರದಿಂದ ವಿಜಯಿ ಆಗಿದ್ದಾರೆ.

ಕೋಟೇಶ್ವರ:ಸಂಘಟನೆ ಕಟ್ಟಿದವರಿಗೆ ಗೊತ್ತು ಅದರ ಕಷ್ಟ. ಆದರೆ ಕಷ್ಟವಿದ್ದರೂ ಸಂಘಟನೆಯ ಉದ್ದೇಶಗಳು ಸಾರ್ಥಕ್ಯಗೊಂಡಾಗ ಮನಸ್ಸಿಗೆ ಖುಷಿಯಾಗುತ್ತದೆ. ಇದರಿಂದ ಉಪಕಾರ ಪಡೆದ ಒಂದಷ್ಟು ಮಂದಿ ಈ ಸಂಘಟನೆಯನ್ನು ಬೆಳೆಸುವಲ್ಲಿ ಸಹಕರಿಸಬೇಕು ಎಂದು ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಮಚಂದ್ರ ಐತಾಳ್ ಗುಂಡ್ಮಿ ಹೇಳಿದರು.ಅವರು ಗಾಣಿಗ ಯುವ ಸಂಘಟನೆ ಮತ್ತು ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ಆಶ್ರಯದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ ವಲಯ ಅಧಿವೇಶನ, ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕ,ಕೊಡೆ ವಿತರಣೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ […]

ಕುಂದಾಪುರ, ಮೇ.27; ಸಂತ ಮೇರಿ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಗಳ ಸಹಯೋಗದಲ್ಲಿ ಶಿಕ್ಷಕರಿಗೆ ಆಯೋಜಿಸಿರುವ ಪುನರ್ಶ್ಚೆತನ ಕಾರ್ಯಗಾರವು ಶಾಲಾ ಸಭಾಂಗಣದಲ್ಲಿ ದಿನಾಂಕ 27/05/2025 ರಂದು ಪ್ರಾರ್ಥನ ಗೀತೆ ಹಾಗೂ ದೀಪ ಬೆಳಗಿಸುವುದರೊಂದಿಗೆ ಆರಂಭಗೊಂಡಿತು ಈ ಕಾರ್ಯಗಾರದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರು ಸ್ಥಳೀಯ ಚರ್ಚಿನ ಪ್ರಧಾನ ಧರ್ಮಗುರುಗಳು ಅತೀ ವಂದನೀಯ ಗುರುಗಳಾದ ಪೌಲ್ ರೇಗೋ ವಹಿಸಿದ್ದರು.ಪುನರ್ಶ್ಚೆತನ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ| ರಾಯನ್ ಮಥಾಯಸ್ ಇವರು ಹಲವಾರು ಚಟುವಟಿಕೆಗಳ ಮೂಲಕ ಶಿಕ್ಷಕರನ್ನು […]

ಉಡುಪಿ; ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ ಉಡುಪಿ ಇದರ ಮಹಾಸಭೆಯು 27.05.2025 ರಂದು ಸಹಕಾರಿಯ ನೋಂದಾಯಿತ ಕಚೇರಿಯಲ್ಲಿ ಅಧ್ಯಕ್ಷರಾದ ಶ್ರೀಮತಿ. ಜೆಸಿಂತಾ ಡಿ ಸೋಜ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭ ದೇವರ ಸ್ತುತಿಯೊಂದಿಗೆ ಪ್ರಾರ್ಥನೆಯನ್ನು ಶಾಖಾ ಸಿಬ್ಬಂದಿಗಳು ನೆರವೇರಿಸಿದರು. ಕಾರ್ಯಕ್ರಮಕ್ಕೆ ಶ್ರೀ ಗುರುಚರಣ ಇವರು ಸ್ವಾಗತಿಸಿದರು, ಲೆಕ್ಕ ಪರಿಶೋಧನಾ ವರದಿ ವಾಚನೆ ಮತ್ತು ನಿರೂಪಣೆಯನ್ನು ಮುಖ್ಯಕಾರ್ಯನಿರ್ವಾಹಕರಾದ ಶ್ರೀ ಜೀವನ್ ಡಿ ಸೋಜ ಇವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಶೈಲೇಶ್ […]

ಕುಂದಾಪುರ: ಬದುಕಿನಲ್ಲಿ ಬರುವ ಸವಾಲುಗಳನ್ನು ಛಲದಿಂದ ಸ್ವೀಕರಿಸಿ ಎಂದು ಪದ್ಮಶ್ರೀ ಪುರಸ್ಕೃತ ಡಾ. ಕೆ ಎಸ್. ರಾಜಣ್ಣ ಅವರು ಹೇಳಿದರು.ಅವರು ಮೇಲೆ 26ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ “ಪ್ರೇರಣಾ ಉಪನ್ಯಾಸ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಜೀವನದಲ್ಲಿ ಎದುರಿಸುವ ಅವಮಾನ ಕೀಳರಿಮೆ ಸೋಲುಗಳನ್ನು ಗೆಲುವಿನ ಸಾಧನೆಗೆ ಸೋಪಾನ ಮಾಡಿಕೊಳ್ಳಬೇಕು. ಈ ಜೀವನ ನನ್ನ ಸೌಭಾಗ್ಯ ವಾಗಿದೆ. ದೇವರು ನನಗೆ ಕೊಟ್ಟ ವರವಾಗಿದೆ. ಪ್ರಪಂಚ ಹೇಗೆ ನೋಡಲಿ ನಮ್ಮ ಸಾಧನೆಯ ಗುರಿ ನಿಚ್ಚಳವಾಗಿರಬೇಕು. ಕೇವಲ ಗುರಿಯನ್ನು ಮಾತ್ರ […]

ಬೈಂದೂರು: ಮನೆಯಲ್ಲಿ ಸಾಕು ನಾಯಿಯನ್ನೇ ವ್ಯಕ್ತಿಯೋರ್ವ ಬೈಕ್ನ ಹಿಂಬದಿಯ ಸರಪಳಿಯಿಂದ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋದ ಅಮಾನವೀಯ ಘಟನೆ ಬೈಂದೂರಿನಲ್ಲಿ ನಡೆದಿದೆ.ಶನಿವಾರ ಸಂಜೆ ಸಮಯದಲ್ಲಿ ಬೈಂದೂರು ಪೇಟೆಯಿಂದ ಹೆದ್ದಾರಿ 66ರಲ್ಲಿ ಬೈಂದೂರು ಪಡುವರಿ ನಿವಾಸಿ ತನ್ನ ಸಾಕು ನಾಯಿಯನ್ನು ಬೈಕ್ನ ಹಿಂಬದಿ ಸರಪಳಿಯಿಂದ ಕಟ್ಟಿ 2 ಕಿ.ಮೀ. ದೂರದವರೆಗೆ ಎಳೆದೊಯ್ದಿದ್ದಾನೆ. ಇದನ್ನು ನೋಡಿದ ಸಾರ್ವಜನಿಕರು ಬೈಕನ್ನು ನಿಲ್ಲಿಸಿ ವಿಚಾರಿಸಿದಾಗ ಇದು ನಾನು ಮನೆಯಲ್ಲಿ ಸಾಕಿದ ನಾಯಿ ನೀವ್ಯಾರು ಕೇಳುವುದಕ್ಕೆ ಎಂದು ಪ್ರಶ್ನಿಸಿದ್ದಾರೆ. ಆ ಬಳಿಕ ಸಾರ್ವಜನಿಕರು ಆಕ್ರೋಶ […]

ಕುಂದಾಪುರ ಪ್ರಧಾನ ಅಂಚೆ ಕಚೇರಿಯಲ್ಲಿ ಪಂಚಗಂಗಾವಳಿ ಶಾಶ್ವತ ಅಂಚೆ ಮೊಹರು ಮೇ 23 ರಂದು ಬಿಡುಗಡೆಗೊಂಡಿತು. ಉಡುಪಿ ವಿಭಾಗದ ಅಂಚೆ ಇಲಾಖೆಯ ಅಧೀಕ್ಷಕ ರಮೇಶ ಪ್ರಭು ಅಧಿಕೃತವಾಗಿ ಅತಿಥಿಗಳ ಸಮ್ಮುಖದಲ್ಲಿ ಚಾಲನೆ ನೀಡಿದರು.“ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ‘ಪಂಚಗಂಗಾವಳಿ’ ಬಗ್ಗೆ ತುಂಬ ಕುತೂಹಲ ಹೊಂದಿದ್ದರು. ಕುಂದಾಪುರದ ಮಹತ್ವ ತಿಳಿಸುವ, ಮೊಹರು ಮಾಡಬೇಕೆಂಬ ಆಶಯ ನಮಗಿತ್ತು. ‘ಪಂಚಗಂಗಾವಳಿ’ ನದಿಗಳು ಕುಂದಾಪುರ ತಾಲೂಕಿನಲ್ಲಿ ಹರಿಯುತ್ತಿದ್ದು, ದೇಶದಲ್ಲೇ ವಿಶಿಷ್ಟ ಸ್ಥಾನ ಹೊಂದಿದೆ ಎಂದು […]