ಶ್ರೀನಿವಾಸಪುರ : ಕೋಲಾರ ಜಿಲ್ಲೆಯಾದ್ಯಾಂತ ಸರಿ ಸುಮಾರು 58 ಸಾವಿರ ಹೇಕ್ಟೇರ್ ಪ್ರದೇಶದಲ್ಲಿ ಮಾವುನ್ನು ಬೆಳೆಯುತ್ತಿದ್ದು, ಪ್ರತಿ ವರ್ಷ ಡಿಸೆಂಬರ್ ಮತ್ತು ಜನವರಿಯಲ್ಲಿ ಸಹಜವಾಗಿ ಹೂವು ಬರುವುದು ಆದರೆ ಹವಾಮಾನ ವೈಪರೀತ್ಯಾದಿಂದಾಗಿ ಈ ವರ್ಷ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಹೂವು ಬಂದು ಅತಿ ಕಡಿಮೆ ಶೇಕಡಾ 30% ರಷ್ಟು ಫಸಲಿನ ನಿರೀಕ್ಷೆಯಲ್ಲಿ ಇದ್ದ ರೈತರಿಗೆ ಹೂವು ಬಂದಾಗಿನಿಂದ ಇಲ್ಲಿಯ ತನಕ ಮಳೆ ಬಾರದೆ ಬಿಸಿಲಿನ ತಾಪಮಾನ ಹೆಚ್ಚಾಗಿ ಅಲ್ಪ ಸ್ವಲ್ಪ ಬಂದಿರುವ ಮಾವಿನ ಕಾಯಿ ಮರಗಳಲ್ಲೇ […]
ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರು ಸುಮಾರು 400 ಮಂದಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಇದು ಸೆಕ್ಸ್ ಸ್ಕ್ಯಾಂಡಲ್ ಅಲ್ಲ, ಮಾಸ್ ರೇಪ್. ಪ್ರಜ್ವಲ್ ಪರ ಮತಯಾಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದರು.ಶಿವಮೊಗ್ಗದ ಅಲ್ಲಮ ಪ್ರಭು ಕ್ರೀಡಾಂಗಣದಲ್ಲಿ ಆಯೋಜಿಸಿದ ಕಾಂಗ್ರೆಸ್ ಪಕ್ಷ ಪ್ರಜಾಧ್ವನಿ-2 ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.ಪ್ರಜ್ವಲ್ ರೇವಣ್ಣ ಅವರ ಕೃತ್ಯ ಬಗ್ಗೆ ಸ್ಪಷ್ಟ ಅರಿವಿದ್ದರೂ ಬಿಜೆಪಿ ಪಕ್ಷವು ಜನತಾ ದಳದೊಂದಿಗೆ ಮೈತ್ರಿ […]
ಹಾಸನ ಲೋಕಸಭೆ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರದೆನ್ನಲಾದ ಆಶ್ಲೀಲ ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಎ.1 ಆರೋಪಿಯಾದ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಬಂಧನ ಭೀತಿಯಿಂದ ತಮ್ಮ ಹೊಳೆನರಸೀಪುರ ನಿವಾಸದಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.ಅಶ್ಲೀಲ ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಕೆಲಸದಾಕೆ ನೀಡಿದ ದೂರಿನ ಹಿನ್ನೆಲೆಯಲ್ಲಿ ರೇವಣ್ಣ ಮತ್ತು ಅವರ ಪುತ್ರ, ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರೇವಣ್ಣ ಅವರು ಎ1 […]
ಬೆಂಗಳೂರು: ತಾಯಿ ಮಗಳ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ತಾಯಿ ಹಾಗೂ ಮಗಳು ಪರಸ್ಪರ ಚೂರಿಯಿಂದ್ ಇರಿದುಕೊಂಡ ಘಟನೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಗಳು ಸಾಹಿತಿ (18) ತಾಯಿಯಿಂದಲೇ ಕೊಲೆಯಾದವಳು ಸಾಹಿತಿ ಪಿಯುಸಿ ಚೆನ್ನಾಗಿಯೇ ಓದುತ್ತಿದ್ದಳು. ಆದರೆ ಇತ್ತೀಚೆಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ. ಎರಡು ವಿಷಯಕ್ಕೆ ಸಾಹಿತಿ ಹಾಜರಾಗಲಿಲ್ಲ ಹೀಗಾಗಿ ಫಲಿತಾಂಶ ಫೇಲ್ ಅಂತಾ ಬಂದಿದೆ. ಇದರಿಂದ ಮಗಳನ್ನು ಓದಿಸುತ್ತಿದ್ದ ಪದ್ಮಜಾ ಮಗಳು ಒಳ್ಳೆ ಮಾರ್ಕ್ ತೆಗೆಯಬೇಕು ಅಂತಾ ಆಸೆ ಪಟ್ಟಿದ್ದರು. ಆದ್ರೆ […]
ಕುಂದಾಪುರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇದೇ ಮೇ ತಿಂಗಳ 1 ಮತ್ತು 2 ರಂದು ರಾಜ್ಯಮಟ್ಟದ ಎರಡು ದಿನಗಳ ಸಾಂಸ್ಕೃತಿಕ, ತಾಂತ್ರಿಕ ಮತ್ತು ಮ್ಯಾನೇಜ್ಮೆಂಟ್ ಸ್ಪರ್ಧಾಕೂಟ ಸಾವಿಷ್ಕಾರ್ ನಡೆಯಲಿದೆ. ಈ ಒಂದು ಕಾರ್ಯಕ್ರಮದಲ್ಲಿ 20 ಕ್ಕೂ ಅಧಿಕ ಅಧಿಕ ಸ್ಪರ್ಧೆಗಳು ನಡೆಯಲಿದ್ದು ಸುಮಾರು 30 ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕೌಶಲ್ಯಥೆಯನ್ನು ತೋರಿಸಲಿದ್ದಾರೆ. ಎಲ್ಲಾ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನದ ಜೊತೆಗೆ ಸರ್ಟಿಫಿಕೇಟ್ ಕೂಡ ಸಿಗಲಿದೆ.ಕಾರ್ಯಕ್ರಮದ ರಂಗು ಏರಿಸಲು ಎರಡೂ ದಿನ, ಪ್ರಮುಖ […]
ರಾಯಚೂರು: ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬಿಸಲಿನ ತಾಪಕ್ಕೆ ನಿರ್ಜಲೀಕರಣ ಉಂಟಾಗಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಇಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಯಚೂರು ತಾಲೂಕಿನ ಚಿಕ್ಕಸುಗೂರು ಗ್ರಾಮದ ಹುಸೇನಮ್ಮ ಹಾಗೂ ಮಾರುತಿ ದಂಪತಿ ಮಕ್ಕಳಾದ ಆರತಿ (9) ಹಾಗೂ ಪ್ರಿಯಾಂಕಾ (7) ಮೃತ ದುರ್ದೈವಿಗಳು.ಪುತ್ರ ಲಕ್ಕಪ್ಪ (5)ಗೆ ರಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೂ ಮಾರುತಿ ತಂದೆ ಲಕ್ಷ್ಮಣ ಅವರನ್ನೂ ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು : ಬರ ಪರಿಹಾರ ನಿಧಿ ಬಿಡುಗಡೆ ವೇಳೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹಲವು ಸಚಿವರು ಮತ್ತು ಶಾಸಕರೊಂದಿಗೆ ಭಾನುವಾರ ಇಲ್ಲಿ ಧರಣಿ ನಡೆಸಿದರು. ಶೂನ್ಯತೆ ಮತ್ತು ವಂಚನೆಯ ಪ್ರತೀಕವಾದ ‘ಚೊಂಬು’ ಎಂಬ ದುಂಡನೆಯ ನೀರಿನ ಮಡಕೆಯನ್ನು ಹಿಡಿದುಕೊಂಡ ನಾಯಕರು, ಕಳೆದ ಹಲವು ದಶಕಗಳಲ್ಲಿ ಕಂಡರಿಯದಂತಹ ತೀವ್ರ ಬರ ಎದುರಿಸಲು ಸೂಕ್ತ ಪರಿಹಾರ ಬಿಡುಗಡೆ ಮಾಡದೆ ಕರ್ನಾಟಕಕ್ಕೆ ‘ಮೋಸ’ ಮಾಡಿದೆ ಎಂದು ಆರೋಪಿಸಿದರು. […]
ಬೆಂಗಳೂರು :ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಅವರು ಮಾಹಿತಿ ನೀಡಿದ್ದು, ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವೀಡಿಯೋ ತುಣುಕುಗಳು ಹರಿದಾಡುತ್ತಿವೆ. ಮೇಲ್ನೋಟಕ್ಕೆ ಮಹಿಳೆಯರ ಮೇಲೆ ಹಾಸನ ಸಂಸದರು ಲೈಂಗಿಕ ದೌರ್ಜನ್ಯ ಎಸಗಿರುವುದು ಕಂಡು ಬರುತ್ತಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. […]
ಚಾಮರಾಜನಗರ : ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಇಂಡಿಗನತ್ನ ಗ್ರಾಮದಲ್ಲಿ ಮತದಾನ ಮಾಡುವ ವಿಚಾರಕ್ಕೆಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಗಲಾಚೆಯಾಗಿದೆ ಮತಗಟ್ಟೆಯೇ ಧ್ವಂಸಗೊಂಡ ಅಹಿತಕರ ಘಟನೆ ಸಂಭವಿಸಿದೆ.ಮೂಲಸೌಕರ್ಯ ಒದಗಿಸುವವರೆಗೆ ಮತದಾನ ಮಾಡುವುದಿಲ್ಲ ಎಂದಿದ್ದರೂ ಕೆಲ ಗ್ರಾಮಸ್ಥರನ್ನು ಮತದಾನಕ್ಕೆ ಕರೆತಂದಿದ್ದು ಇದರಿಂದರೊಚ್ಚಿಗೆದ್ದ ಗ್ರಾಮಸ್ಥರು ಮತಕೇಂದ್ರದ ಮೇಲೆ ದಾಳಿ ಮಾಡಿದ್ದಾರೆ. ಹಾಡಿಯ ಜನರನ್ನು ಮನವೊಲಿಸಿ ಕರೆತಂದು ಮತದಾನ ಮಾಡಿಸಲು ಅಧಿಕಾರಿಗಳು ಮತಗಟ್ಟೆಗೆ ಕರೆದುಕೊಂಡು ಬಂದಿದ್ದರು.ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಇಂಡಿಗನತ್ತ ಗ್ರಾಮದ ಮತಗಟ್ಟಿಯನ್ನು ಸುತ್ತುವರಿದು ಮೂಲಸೌಕರ್ಯ ಕಲ್ಪಿಸುವವರಗೆ ಮತದಾನಮಾಡಬೇಡಿ ಎಂದು ಗ್ರಾಮಸ್ಸರು […]