ಬೆಂಗಳೂರು: ಭೂಗಳ್ಳತನ, ಭೂಮಿಗೆ ಸಂಬಂಧಿಸಿದ ವಂಚನೆ ತಡೆಯಲು ರಾಜ್ಯ ಸರ್ಕಾರ ಮುಂದಾಗಿದ್ದು, ಜಮೀನು ಮಾಲೀಕರ ಭಾವಚಿತ್ರದೊಂದಿಗೆ ಆರ್ಟಿಸಿಗೆ (ಪಹಣಿ) ಆಧಾರ್ ಕಾರ್ಡ್ ಜೋಡಣೆ ಕಡ್ಡಾಯಗೊಳಿಸಿದೆ. ಆರ್ಟಿಸಿಗೆ ಆಧಾರ್ ಕಾರ್ಡ್ ಸಂಖ್ಯೆ ಲಿಂಕ್ ಮಾಡಲು ಜುಲೈ ಅಂತ್ಯದವರೆಗೆ ಗಡುವು ನೀಡಿದೆ. ಕಂದಾಯ ಇಲಾಖೆ ‘ನನ್ನ ಆಧಾರ್ ಕಾರ್ಡ್ನೊಂದಿಗೆ ನನ್ನ ಆಸ್ತಿ ಸುಭದ್ರ’ ಯೋಜನೆ ಪ್ರಾರಂಭಿಸಿದೆ. ಪ್ರಯೋಜನಗಳೇನು?: ರೈತರು ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಹಲವು ಲಾಭಗಳಿವೆ. ಸರ್ಕಾರದ ಸವಲತ್ತುಗಳು ಸಂಪೂರ್ಣವಾಗಿ ದೊರೆಯುತ್ತವೆ. ರೈತರ ಮಾಹಿತಿ ದಾಖಲಿಸುವ ಜೊತೆಗೆ ಭೂ […]
ಜು. 22: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನೇತೃತ್ವದಲ್ಲಿ ಜು. 21 ರಂದು ನಂತೂರಿನ ಸಂದೇಶ ಪ್ರತಿಷ್ಠಾನದಲ್ಲಿ ಕೊಂಕಣಿ ಲೇಖಕರ ಸಂವಾದ ಕಾರ್ಯಕ್ರಮ ನಡೆಯಿತು. ಸಂವಾದ ಕಾರ್ಯಕ್ರಮದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಶ್ರೀಮತಿ ಐರಿನ್ ರೆಬೆಲ್ಲೋ,ಸಂದೇಶ ಪ್ರತಿಷ್ಠಾನದ ನಿರ್ದೇಶಕರಾದ ವಂದನೀಯ ಫಾ. ಸುದೀಪ್ ಪೌಲ್,ಅಕಾಡೆಮಿಯ ಸದಸ್ಯರುಗಳಾದ ನವೀನ್ ಲೋಬೊ, ಸಪ್ನಾ ಕ್ರಾಸ್ತಾ, ರೋನಾಲ್ಡ್ ಕ್ರಾಸ್ತಾ, ದಯಾನಂದ್ ಮಡ್ಕೆಕರ್ ಹಾಗೂ ಸಮರ್ಥ್ ಭಟ್ ಉಪಸ್ಥಿತರಿದ್ದರು. ಕೊಂಕಣಿಯ ಸರಿಸುಮಾರು 75ಕ್ಕೂ ಮಿಗಿಲಾಗಿ ಲೇಖಕರು ಹಾಗೂ […]
ಹಾವೇರಿ: ಸವಣೂರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಮನೆಯ ಮೇಲ್ಭಾವಣಿ ಕುಸಿದು ಸ್ಥಳದಲ್ಲೇ ಇಬ್ಬರು ಮಕ್ಕಳು ಹಾಗೂ ಮಹಿಳೆ ಮೃತಪಟ್ಟಿದ್ದು, ಮೂವರು. ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.ಗ್ರಾಮದ ಹರಕುಣಿ ಕುಟುಂಬಸ್ಥರ ಮನೆ ಮೇಲ್ಭಾವಣೆ ಕುಸಿದಿದೆ. ನಿದ್ರಿಸುತ್ತಿದ್ದ 18 ತಿಂಗಳ ಅವಳಿ ಮಕ್ಕಳಾದ ಅಮೂಲ್ಯ ಹಾಗೂ ಅನುಶ್ರೀ ಮತ್ತು ಮಕ್ಕಳ ಅತ್ತೆ ಚನ್ನಮ್ಮ (30)ಸ್ಥಳದಲ್ಲೇ ಮೃತಹಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮನೆ ಮಾಲೀಕ ಮುತ್ತು ದೊಡ್ಡಬಸಪ್ಪ ಹರಕುಣಿ (35), ಪತ್ನಿ ಸುನೀತಾ ಮುತ್ತು ಹರಕುಣಿ (25) ತಾಯಿ […]
ಅಂಕೋಲಾ:ಜುಲೈ 16 ರಂದು ನಡೆದ ಗುಡ್ಡ ಕುಸಿತದಲ್ಲಿ ಒಂದೇ ಕುಟುಂಬದ ಐವರು ಕಣ್ಮರೆಯಾಗಿದ್ದರು. ಐವರ ಪೈಕಿ ಮೂವರ ಮೃತದೇಹ ಪತ್ತೆಯಾಗಿತ್ತು. ಲಕ್ಷ್ಮಣ ನಾಯ್ಕ, ಪತ್ನಿ ಶಾಂತಿ ನಾಯ್ಕ, ಮಗ ರೋಶನ್ ನಾಯ್ಕ ಮೃತದೇಹ ಪತ್ತೆಯಾಗಿತ್ತು. ಇದೀಗ ಬಾಲಕಿ ಅವಂತಿಕಾ ಮೃತದೇಹ (6) ಕೂಡ ಪತ್ತೆಯಾಗಿದ್ದು, ಗ್ಯಾಸ್ ಟ್ಯಾಂಕರ್ ಚಾಲಕ ಮುರುಗನ್ ಮೃತದೇಹ ನದಿ ನೀರಿನಲ್ಲಿ ಪತ್ತೆಯಾಗಿದೆ. ಗಂಗಾವಳಿ ನದಿಯಲ್ಲಿ ಇಬ್ಬರು ಲಾರಿ ಚಾಲಕರ ಮೃತದೇಹ ಸಿಕ್ಕಿದೆ. ಅದರಲ್ಲೊಬ್ಬರನ್ನು ಗ್ಯಾಸ್ ಟ್ಯಾಂಕರ್ ಚಾಲಕ ಮುರುಗನ್ ಮೃತದೇಹ ಎಂದು ಗುರುತಿಸಲಾಗಿದೆ. […]
ಕುಂದಾಪುರ:ಗಂಡ ಹೆಂಡತಿಯ ಜಗಳದ ಕಾರಣ ಕಂಡ್ಲೂರು ಸಮೀಪದ ಸೇತುವೆಯಿಂದ ಮಂಗಳವಾರ ಅಪರಾಹ್ನ ವಾರಾಹಿ ನದಿಗೆ ಹಾರಿ, ನೀರಲ್ಲಿ ಕೊಚ್ಚಿಕೊಂಡು ಹೋಗಿರುವ ಹರೀಶ್ ಕಾಳಾವರ ಅವರ ಮೃತದೇಹ ಇಂದು ಅಪರಾಹ್ನ 2:30 ರ ವೇಳೆ ಕುಂದಾಪುರ ಸಂಗಮದ ಸಮೀಪ ನದಿ ತೀರದಲ್ಲಿ ಪತ್ತೆಯಾಗಿದೆ. ಕಂಡ್ಲೂರು ಠಾಣಾ ಎಸ್ಐ ನೂತನ್ ಹಾಗೂ ಸಿಬಂದಿ ಹುಡುಕಾಟ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.ಕುಂದಾಪುರದ ಅಗ್ನಿ ಶಾಮಕ ದಳದ ಸಿಬಂದಿಗಳು ಸ್ಥಳೀಯ ಶೌರ್ಯ ತಂಡದ ಸದಸ್ಯರು, ಕಾಳಾವರದ ತಂಡ, ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದಿಂದ […]
ಹಾಸನ, ಜು.೧೮: ಕಳೆದೊಂದೆರಡು ವಾರಗಳಿಂದ ಸಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯ ಕಾರಣದಿಂದಾಗಿ ಶಿರಾಡಿ ಘಾಟ್ ರಸ್ತೆಯಲ್ಲಿಇಂದು (ಗುರುವಾರ) ನಸುಕಿನ ಜಾವ ಏಕಾಏಕಿ ಮಣ್ಣು ಗುಡ್ಡ ಮಾರು3 ಸುಜುಕಿ ಕಂಪನಿಯ ಓಮಿಸಿ ಕಾರು ಮೇಲೆ ಬಿದ್ದಿದೆ.ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ದುರ್ಫಟನೆ ಸಂಭವಿಸಿದೆ. ಸಕಲೇಶಪುರ ತಾಲ್ಲೂಕಿನ, ಎತ್ತಿನಹಳ್ಳ ಬಳಿ ಭಾರಿ ಮಳೆಯಲ್ಲಿ ಚಪಿಸುತ್ತಿದ್ದ ಕಾರಿನ ಮೇಲೆ ಗುಡ್ಡ ಕುಸಿದಿದೆ. ಪರಿಣಾಮ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಓಮಿಸಿ ಕಾರು ಮಣ್ಣಿನಡಿ ಸಿಲುಕಿದೆ. […]
ಶ್ರೀನಿವಾಸಪುರ : ಪ್ರಪಂಚಕ್ಕೆ ಮಾವಿನ ರುಚಿಯನ್ನ ಕೊಡುತ್ತಿರುವ ಶ್ರೀನಿವಾಸಪುರ ಇಂದು ಡ್ರ್ಯಾಗನ್ ಫ್ರೊಟ್ನ ಸಂವೃದ್ಧಿ ಬೆಳೆಯನ್ನು ಬೆಳೆಯುವ ಮೂಲಕ ತಾಲೂಕಿನ ದೇವಲಪಲ್ಲಿ ಗ್ರಾಮದ ಐಟಿಐ ಓದಿರುವ ಯುವ ರೈತ ವಿ.ಆಂಜನೇಯ ಗಮನ ಸಳೆಯುತ್ತಿದ್ದಾರೆ.ತಾಲೂಕಿನಲ್ಲಿ ಯಾವುದೇ ರೀತಿಯಾದ ನದಿಗಳು, ನಾಲೆಗಳು ಇಲ್ಲದೆ ಕೇವಲ ಮಳೆ ಯಾಶ್ರಿತ ಬೆಳೆಗಳನ್ನು ಇನ್ನು ಕೆಲ ರೈತರು ಕೊಳವೆ ಬಾವಿಗಳನ್ನು ಬಳಸಿ ಬೆಳೆಗಳನ್ನು ಬೆಳೆಯುತ್ತಾರೆ. ಇನ್ನು ಕೆಲವರು ಕೊಳವೆ ಬಾವಿಗಳಲ್ಲಿ ಕಡಿಮೆ ನೀರು ಇದ್ದು , ಯಾವುದೇ ರೀತಿಯಾದ ಬೆಳೆಗಳನ್ನು ಬೆಳೆಯಲು ಸಾಧ್ಯವಾಗದೆ ಸಂಕಷ್ಟದಲ್ಲಿ […]
ಕುಂದಾಪುರ, ಜು.18: ಮಳೆಯ ಆರ್ಭಟದಿಂದ ಕುಂದಾಪುರ ನಗರದ, ಚಿಕ್ಕನ್ಸಾಲ್ ರಸ್ತೆಯ ಅಮರಸನ ಕಟ್ಟಡದ ಸಮೀಪದ ಸಮಾರು 200 ವರ್ಷದ ಬೃಹತ್ ಆಲದ ಮರ ಬೆಳಗಿನ ಜಾವ ಗಂಟೆಗೆ ಬುಡ ಸಮೇತವಾಗಿ ಉರುಳಿ ಬಿದ್ದಿದೆ. ಮರ ರಸ್ತೆ ಬದಿಗೆ ಬೀಳದೆ ರಸ್ತೆಯ ಇನ್ನೊಂದು ಪಕ್ಕದಲ್ಲಿ ಬಿದ್ದಿರುವುದರಿಂದ ಸಂಚಾರಕ್ಕೆ ಅಡಚಣೆಯಾಗಿಲ್ಲ. ಆದರೂ ಅಮರಸನ ಕುಟುಂಬದ ಮನೆಗೆ ಹೋಗುವ ಖಾಸಗಿ ರಸ್ತೆಯ ಮೇಲೆ ಬಿದ್ದಿದೆ. ಮರ ಈಷ್ಟು ವಿಶಾಲ ಆಗಿತ್ತೆಂದರೆ ಮರ ಬೀಳುವಾಗ ಅನತಿ ದೂರದಲ್ಲಿರುವ ಮರದ ಗೆಲ್ಲುಗಳು ವಿದ್ಯುತ್ ಟ್ರಾನ್ಸ್ಪಾರ್ಮರ್ […]
ಬೆಂಗಳೂರು ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ 22 ರವರೆಗೆ ಮಳೆಯಾಗಲಿದೆ. ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು 8 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ, ದಕ್ಷಿಣ ಕನ್ನಡ, ಉತ್ತರಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಈ 4 ಜಿಲ್ಲೆಗಳಿಗೆ ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಜುಲೈ 20 ರವರೆಗೆ ಆರೆಂಜ್ ಅಲರ್ಟ್ […]