ಶ್ರೀನಿವಾಸಪುರ: ಅರಣ್ಯ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಪಟ್ಟಣದ ಹೊರವಲಯದಲ್ಲಿ 120 ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಿತು.ಪಟ್ಟಣದ ಹೊರವಲಯದ ಅರಣ್ಯ ಒತ್ತುವರಿ ಪ್ರದೇಶಕ್ಕೆ ಬುಧವಾರ ಬೆಳಿಗ್ಗೆ ಸುಮಾರು ಮೂರು ಗಂಟೆ ಸಮಯದಲ್ಲಿ ಜೆಸಿಬಿ ಹಾಗೂ ಇಟಾಚಿಗಳನ್ನು ನುಗ್ಗಿಸಿ, ಕೆಲವರು ಅಕ್ರಮವಾಗಿ ಬೆಳೆಯಲಾಗಿದ್ದ ಮಾವು, ನೇರಳೆ, ಹೊಂಗೆ ಮತ್ತಿತರ ಮರಗಳನ್ನು ಉರುಳಿಸಲಾಯಿತು. ಮಾವಿನ ತೋಟಗಳಲ್ಲಿ ನಿರ್ಮಿಸಲಾಗಿದ್ದ 3 ಕೃಷಿ ಹೊಂಡ, ನಿರ್ಮಾಣ ಹಂತದಲ್ಲಿದ್ದ 2 ಕೋಳಿ ಫಾರಂ ಹಾಗೂ 3 ಶೆಡ್ಗಳನ್ನು ನೆಲಸಮಗೊಳಿಸಲಾಯಿತು.ಕಾರ್ಯಾಚರಣೆಯಲ್ಲಿ 15 ಜೆಸಿಬಿ, […]
ಶ್ರೀನಿವಾಸಪುರ, ಆ-23, ಬರದಿಂದ ಬಸವಳಿದಿರುವ ಕೃಷಿ, ನೀರಾವರಿ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ನೀಡದ ಬೆಸ್ಕಂ ಅಧಿಕಾರಿಗಳ ರೈತ ವಿರೋಧಿ ದೋರಣೆ ಖಂಡಿಸಿ ಗುಣಮಟ್ಟದ 12 ತಾಸು ವಿದ್ಯುತ್ ನೀಡುವಂತೆ ರೈತ ಸಂಘದಿಂದ ಬೆಸ್ಕಂ ಕಚೇರಿ ಮುಂದೆ ತಲೆ ಮೇಲೆ ಕಲ್ಲು ಒತ್ತು ಕಣ್ಣಿಗೆ ಕಪ್ಪು ಕಟ್ಟಿಕೊಂಡು ಹೋರಾಟ ಮಾಡಿ ಬೆಸ್ಕಂ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.ಮುಂಗಾರು ಮಳೆ ಅಭಾವ ನೆಪದಲ್ಲಿ ಬೆಸ್ಕಂ ಅಧಿಕಾರಿಗಳು ಕೃಷಿ ಚಟುವಟಿಕೆಗಳಿಗೆ ಅಗತ್ಯ ವಿರುವ 12 ತಾಸು ವಿದ್ಯುತ್ ನೀಡದೆ ಲೋಡ್ ಷೆಡ್ಡಿಂಗ್ […]
ಶ್ರೀನಿವಾಸಪುರ: ತಾಲ್ಲೂಕಿನ ಯರ್ರಂವಾರಿಪಲ್ಲಿ ಗ್ರಾಮ ಪಂಚಾಯಿತಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ಎಸ್.ಸುಗುಣ ಹಾಗೂ ಉಪಾಧ್ಯಕ್ಷರಾಗಿ ನಾಗಮಣಿ ಆಯ್ಕೆಯಾಗಿದ್ದಾರೆ.ಅಧ್ಯಕ್ಷ ಸ್ಥಾನಕ್ಕೆ ಎಂ.ಎಸ್.ಸುಗುಣ, ವೈ.ಆರ್.ಶ್ರೀನಿವಾಸರೆಡ್ಡಿ, ಧರ್ಮ ನಾಮಪತ್ರ ಸಲ್ಲಿಸಿದ್ದರು. ಆದರೆ ವೈ.ಆರ್.ಶ್ರೀನಿವಾಸರೆಡ್ಡಿ ಮತ್ತು ಧರ್ಮ ತಮ್ಮ ನಾಮಪತ್ರ ವಾಪಸ್ ಪಡೆದ ಪರಿಣಾಮವಾಗಿ ಎಂ.ಎಸ್.ಸುಗುಣ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.ಒಟ್ಟು 16 ಮತಗಳ ಪೈಕಿ 9 ಮತ ಪಡೆದ ನಾಗಮಣಿ ಉಪಾಧ್ಯಕ್ಷರಾಗಿ ಗೆಲುವು ಸಾಧಿಸಿದರು. ಪ್ರತಿಸ್ಪರ್ದಿ ರವಣಮ್ಮ 7 ಮತ ಪಡೆದರು.ಚುನಾವಣಾಧಿಕಾರಿಯಾಗಿ ಕೃಷ್ಣಪ್ಪ, ಪಿಡಿಒ ಸಂಪತ್ […]
ಶ್ರೀನಿವಾಸಪುರ, ಆ.20: ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ಸಮರ್ಪಕ ವಿದ್ಯತ್ ನೀಡದೆ ಬೆಸ್ಕಾ ಅಧಿಕಾರಿಗಳ ರೈತ ವಿರೋದಿ ದೋರಣೆ ಖಂಡಿಸಿ ಗುಣಮಟ್ಟದ 10 ತಾಸು ವಿದ್ಯತ್ಗಾಗಿ ಆಗಸ್ಟ್ 23 ರ ಬುಧವಾರ ನಷ್ಟ ಬೆಳೆ ಸಮೇತ ಬೆಸ್ಕಾಂ ಇಲಾಖೆ ಮುತ್ತಿಗೆ ಹಾಕಲು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ರೈತ ಸಂಘಧ ಸಭೆಯಲ್ಲಿ ತಿರ್ಮಾನಿಸಲಾಯಿತು.ಬರದಿಂದ ಬಸವಳಿದಿರುವ ರೈತರ ಕೃಷಿ ಪಂಪ್ಸೆಟ್ಗಳಿಗೆ 7 ತಾಸು ವಿದ್ಯುತ್ ಪೂರೈಕೆ ಮಾಡದೆ ರೈತರನ್ನು ಕಂಗೆಡಿಸುತ್ತಿರುವ ಲೋಡ್ ಶೆಡ್ಡಿಂಗ್ ಸೃಷ್ಠಿಸಿರುವ ಬೆಸ್ಕಾಂ ಅಧಿಕಾರಿಗಳ ವಿರುದ್ದ ರೈತ ಸಂಘದ […]
ಶ್ರೀನಿವಾಸಪುರ: ಶಿಸ್ತು, ಸಮಯ ಪಾಲನೆ ಹಾಗೂ ಪರಿಶ್ರಮ ಇದ್ದಲ್ಲಿ ಸಾಧನೆಯ ಹಾದಿಯಲ್ಲಿ ಸಾಗುವುದು ಸುಲಭವಾಗುತ್ತದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಕಾಲೇಜುಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ. ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷನಾಗಿ, ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಾದ ಸಹಕಾರ ನೀಡುತ್ತೇನೆ. ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು. […]
ಶ್ರೀನಿವಾಸಪುರ 1 : ವಿದ್ಯಾರ್ಥಿಗಳು ಪ್ರತಿ ದಿನ ಒಳ್ಳೇಯ ಪೌಷ್ಟಿಕ ಆಹಾರವನ್ನು ಪಡೆದು ಯೋಗಬ್ಯಾಸವನ್ನು ಮಡುತ್ತಾ , ಆರೋಗ್ಯವಂತ ಜೀವನವನ್ನು ನಡೆಸುವಂತೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸಲಹೆ ನೀಡಿದರು.ತಾಲೂಕಿನ ಲಕ್ಷ್ಮೀಪುರ ಪ್ರೌಡಶಾಲೆಯಲ್ಲಿ ಶುಕ್ರವಾರ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಕಾರ್ಯಕ್ರಮದಲ್ಲಿ ಮೊಟ್ಟೆ ವಿತರಣಾ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ಕಡುಬಡತನದಿಂದ ಇರುವ ವಿದ್ಯಾಥಿಗಳು ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದು, ಆ ವಿದ್ಯಾಥಿಗಳ ಕುಟುಂಬಗಳು ಆರ್ಥಿಕವಾಗಿ ಹಿಂದುಳಿದ್ದು, ಆಹಾರಕ್ಕಾಗಿಯೂ ಪರದಾಡುತ್ತಿದ್ದು ಇದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದೆ ಎಂದು […]
ಮುಳಬಾಗಿಲು-ಆ-18 ಕೋಲಾರ ಜಿಲ್ಲೆಯಲ್ಲಿ ಬರಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಿ ಬರನಿರ್ವಹಣೆಗೆ ಸಾವಿರ ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಪ್ರತಿ ಪಂಚಾಯ್ತಿಗೊಂದು ಗೋಶಾಲೆ ತೆರೆಯಬೇಕೆಂದು ಮಾನ್ಯ ಮುಖ್ಯ ಮಂತ್ರಿಗಳನ್ನು ಒತ್ತಾಯಿಸಿ ಆ-21 ರ ಸೋಮವಾರ ಜಾನುವಾರುಗಳ ಸಮೇತ ರಾಜ್ಯ ಹೆದ್ದಾರಿ ವಡ್ಡಹಳ್ಳಿ ಕ್ರಾಸ್ ಬಂದ್ ಮಾಡಲು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದ ರೈತರು ಕೃಷಿ ಚಟುವಟಿಕೆಗೆ ಬಿತ್ತನೆ ಬೀಜ ರಸಗೊಬ್ಬರಗಳು ಖರೀದಿ ಮಾಡಿ ಕಾತುರದಿಂದ ಕಾಯುತ್ತಿರುವ ರೈತರ ಮೇಲೆ ವರುಣನ ಕೋಪ […]
ಕೋಲಾರ:- ಕೋಲಾರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ಯುವಕರು ಸೇನೆಗೆ ಆಯ್ಕೆಯಾಗುವ ಮೂಲಕ ದೇಶ ಸೇವೆಗೆ ತೆರಳಬೇಕು ಎಂದುಕೋಲಾರ ಕ್ರೀಡಾ ಸಂಘದ ಅಧ್ಯಕ್ಷರೂ ಹಾಗೂ ದಿಶಾ ಸಮಿತಿ ಸದಸ್ಯರಾದ ಸಾಮಾ ಅನಿಲ್ ಕುಮಾರ್ ಕರೆ ನೀಡಿದರು.ಕೋಲಾರ ಕ್ರೀಡಾಸಂಘದಿಂದ ತರಬೇತಿ ಪಡೆದು ಸೈನ್ಯಕ್ಕೆ ಆಯ್ಕೆಯಾದ ಅಗ್ನಿವೀರರಿಗೆ ಆತ್ಮೀಯವಾಗಿ ಸನ್ಮಾನಿಸಿ ಮಾತಾಡಿದ ಅವರು, ಬೇರೆ ಜಿಲ್ಲೆಗಳಂತೆ ಇಂದು ಕೋಲಾರ ಜಿಲ್ಲೆಯಿಂದ ಹೆಚ್ಚು ಯುವಕರು ಸೈನ್ಯಕ್ಕೆ ಸೇರುತ್ತಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ಸಂಗತಿ. ಈಗ ಆಯ್ಕೆಯಾದ ಅಗ್ನಿವೀರರು ಜಿಲ್ಲೆಯ ಯುವ ಸಮುದಾಯಕ್ಕೆ ಮಾದರಿಯಾಗಬೇಕು […]
ಕೋಲಾರ:- ಶೈಕ್ಷಣಿಕ ಇತಿಹಾಸದಲ್ಲೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯುಸಿಗೆ 2ನೇ ಪೂರಕ ಪರೀಕ್ಷೆ ನಡೆಸಲು ಸರ್ಕಾರ ಆದೇಶಿಸಿದ್ದು, ಅದರಂತೆ ಆ.21 ರಿಂದ ಜಿಲ್ಲೆಯ ಒಟ್ಟು 6 ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿರುವುದರಿಂದ ಸಕಲ ಸಿದ್ದತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿರುವ ಅವರು, ಕಳೆದ ಮಾರ್ಚ್ ವಾರ್ಷಿಕ ಪರೀಕ್ಷೆ, ಮೇ ಪೂರಕ ಪರೀಕ್ಷೆ ಹಾಗೂ ಹಿಂದಿನ ವರ್ಷಗಳಲ್ಲಿ ದ್ವಿತೀಯ ಪಿಯುಸಿ ಅನುತ್ತೀರ್ಣರಾದ ಅಭ್ಯರ್ಥಿಗಳು ಈ ಪರೀಕ್ಷೆ ಬರೆಯುತ್ತಿದ್ದು, ಕೋಲಾರ, […]