
ಶ್ರೀನಿವಾಸಪುರ: ಎಲ್ಐಸಿ ಜೀವನ ಉತ್ಸವ ಪಾಲಿಸಿ, ಪಾಲಿಸಿದಾರರಿಗೆ ವರದಾನವಾಗಿದೆ ಎಂದು ಎಲ್ಐಸಿ ಉಪ ಶಾಖಾ ವ್ಯವಸ್ಥಾಪಕ ಎಸ್.ವಿ.ಪ್ರಸಾದ್ ಹೇಳಿದರು.ಪಟ್ಟಣದ ಎಲ್ಐಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಎಲ್ಐಸಿ ಜೀವನ ಉತ್ಸವ ಪಾಲಸಿ ಸೇವೆ ಉದ್ಘಾಟಿಸಿ ಮಾತನಾಡಿದ ಅವರು, ಪಾಲಿಸಿ ಮುಗಿದ ಬಳಿಕವೂ ಪಾಲಿಸಿದಾರರಿಗೆ ಜೀವನಪರ್ಯಂತ ಪಾಲಿಸಿಯ ಶೇ.10 ರಷ್ಟು ಹಣ ನೀಡುವುದು ಈ ಪಾಲಿಸಿ ವಿಶೇಷ ಎಂದು ಹೇಳಿದರು.ಪ್ರತಿನಿಧಿಗಳು ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ ಜೀವನ ಉತ್ಸವ ಪಾಲಿಸಿ ಪ್ರಚಾರ ಮಾಡಬೇಕು. ಈ ಪಾಲಿಸಿಯಿಂದ ಜನ ಸಾಮಾನ್ಯರಿಗೆ […]

ಶ್ರೀನಿವಾಸಪುರ: ಈಚೆಗೆ ಕೊಲೆಯಾದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸನ್ ಅವರ ಕೊಲೆ ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ವೆಂಕಟಸ್ವಾಮಿ ಆಗ್ರಹಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎಂ.ಶ್ರೀನಿವಾಸನ್ ಕೊಲೆ ಹೋರಾಟ ಸಮಿತಿಯಿಂದ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆ ಆರೋಪಿಗಳು ಜೈಲಿನಲ್ಲಿದ್ದಾರೆ. ಆದರೆ ಕೊಲೆಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳಿಗೆ ಗಿಳಿಪಾಠ ಒಪ್ಪಿಸುತ್ತಿದ್ದಾರೆ. ಆದ್ದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.ಎಂ.ಶ್ರೀನಿವಾಸನ್ […]

ಶ್ರೀನಿವಾಸಪುರ: ವಿಧಾನ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುತ್ತದೆ. ಪ್ರತಿಯೊಬ್ಬರೂ ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು ಎಂದು ಜೆಎಂಎಫ್ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಕೆ.ಮನು ಹೇಳಿದರು.ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಸಂವಿಧಾನ ಮಾನವತಾವಾದಿ ಡಾ. ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿಯ ಫಲವಾಗಿದೆ. ಪ್ರಜೆಗಳು ಸಂವಿಧಾನ ನೀಡಿರುವ ಹಕ್ಕುಗಳನ್ನು ಅನುಭವಿಸುವುರ ಜತೆಗೆ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಹೇಳಿದರು.ಸಂವಿಧಾನ ವಿವಿಧತೆಯಲ್ಲಿ ಏಕತೆ ಸಾಧಿಸಿರುವ ದೇಶದ ಜನರ ಬದುಕಿಗೆ ಮಾರ್ಗದರ್ಶನ […]

ಶ್ರೀನಿವಾಸಪುರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಏರ್ಪಡಿಸಿದದ ಸುಗ್ಗಿ ಸಂಭ್ರಮ ಹಾಗೂ ಕಾಲೇಜು ಸಂತೆ ಕಾರ್ಯಕ್ರಮವನ್ನು ಸಾಹಿತಿ ಆರ್.ಚೌಡರೆಡ್ಡಿ ಉದ್ಘಾಟಿಸಿದರು. ವಿದ್ಯಾರ್ಥಿಗಳು ವ್ಯಾವಹಾರಿಕ ಜ್ಞಾನ ಬೆಳೆಸಿಕೊಳ್ಳಬೇಕು ಶ್ರೀನಿವಾಸಪುರ: ಸುಗ್ಗಿ ಮತ್ತು ಸಂತೆ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಹಾಸುಹೊಕ್ಕಾಗಿವೆ. ಸುಗ್ಗಿಯ ಹಿಗ್ಗಿನಲ್ಲಿ ಸಂತೆ ಮಾಡುವುದು ಸಂಭ್ರಮದ ಸಂಕೇತವಾಗಿದೆ ಎಂದು ಸಾಹಿತಿ ಆರ್.ಚೌಡರೆಡ್ಡಿ ಹೇಳಿದರು. ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸುಗ್ಗಿ ಸಂಭ್ರಮ ಹಾಗೂ ಕಾಲೇಜು ಸಂತೆ […]

ಶ್ರೀನಿವಾಸಪುರ : ತಾಲೂಕಿನ ಹೊಗಳಗರೆ ಪಶು ಚಿಕಿತ್ಸಾಲಯ ಕೇಂದ್ರದಲ್ಲಿ ಶುಕ್ರವಾರ ಪಶುಇಲಾಖೆಯಿಂದ ಶ್ರೀನಿವಾಸಪುರ ತಾಲೂಕು ಬರಗಾಲ ಘೋಷಣೆಯಾಗಿರುವ ನಿಟ್ಟಿನಲ್ಲಿ ಸಿಆರ್ಎಫ್ ನಿಧಿಯಿಂದ ಬಂದಿರುವ ಮೇವಿನ ಬೀಜವನ್ನು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ವಿತರಿಸಿದರುಹೊಗಳಗರೆ ಪಶುಚಿಕಿತ್ಸಾಲಯ ಕೇಂದ್ರಕ್ಕೆ ಸಂಬಂದಿಸಿದಂತೆ 15 ಹಳ್ಳಿಗಳ ರೈತರಿಗೆ 75 ಕಿಟ್ಗಳನ್ನು ವಿತರಿಸಿದರು. ನೀರಾವರಿ ಇರುವ ಎಲ್ಲಾ ರೈತರಿಗೆ ನೀಡಲಾಗಿದೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ರೈತರಿಗೂ ನೀಡಲಾಗುವುದು ಎಂದು ಸ್ಥಳೀಯ ವೈದ್ಯಾಧಿಕಾರಿ ಬಿ.ಮಂಜುನಾಥರೆಡ್ಡಿ ಮಾಹಿತಿ ನೀಡಿದರು.ಇಒ ಎಸ್.ಶಿವಕುಮಾರಿ , ತಾಲೂಕು ಪಶುಪಾಲನ ಇಲಾಖೆ ಸಹಾಯಕ […]

ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿಯನ್ನು ಪುರಸಭೆಯನ್ನಾಗಿ ಮಾಡಬೇಕು ಎಂದು ಆಗ್ರಹಿಸಲು ಶುಕ್ರವಾರ, ಗ್ರಾಮಸ್ಥರ ಪರವಾಗಿ ವೈ.ಎನ್.ಅಮ್ಜದ್ ಖಾನ್ ಬೆಳಗಾವಿಯ ಸುವರ್ಣ ಸೌಧಕ್ಕೆ ಪಾದಯಾತ್ರೆ ಪ್ರಾರಂಭಿಸಿದರು. ಜಿ.ಕೆ.ರಾಜೇಂದ್ರ ಪ್ರಸಾದ್, ಬಿ.ಶ್ರೀನಿವಾಸ್, ನಾಗೇಶ್, ಕೃಷ್ಣಾರೆಡ್ಡಿ,

ಶ್ರೀನಿವಾಸಪುರದಲ್ಲಿ ಶಿಕ್ಷಣ ಪೌಂಡೇಶನ್ ವತಿಯಿಂದ ಶುಕ್ರವಾರ ತಾಲ್ಲೂಕಿನ ಗ್ರಂಥಾಲಯಗಳಿಗೆ ನೀಡಲಾದ ಲ್ಯಾಪ್ ಟ್ಯಾಪ್ ಮತ್ತಿತರ ಪರಿಕರಗಳನ್ನು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ವಿತರಿಸಿದರು. ತಾಲ್ಲೂಕು ಪಂಚಾಯಿತಿ ಇಒ ಎಸ್.ಶಿವಕುಮಾರಿ, ಪಡಿಒ ಕೆ.ಪಿ.ಶ್ರೀನಿವಾಸ್ ಸಂಯೋಜಕ ಪ್ರದೀಪ್, ವಿಜಯ್ ಕುಮಾರ್, ಎ.ಮಂಜು ಇದ್ದರು.

ಶ್ರೀನಿವಾಸಪುರ: ರೈತರು ಬರಗಾಲದಲ್ಲಿ ಜಾನುವಾರು ಮೇವು ಬೆಳೆದು ರಾಸು ಪಾಲನೆ ಮಾಡಬೇಕು. ಹೆಚ್ಚುವರಿ ಹಸಿರು ಮೇವನ್ನು, ಮೇವಿನ ಅಗತ್ಯವಿರುವ ರೈತರಿಗೆ ಮಾರಾಟ ಮಾಡಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ತಾಲ್ಲೂಕಿನ ಹೊಗಳಗೆರೆ ಗ್ರಾಮದ ಪಶು ಚಿಕಿತ್ಸಾಲಯದ ಆವರಣದಲ್ಲಿ ಶುಕ್ರವಾರ ಪಶುಪಾಲನಾ ಇಲಾಖೆಯಿಂದ ನೀಡಲಾದ ಮೇವಿನ ಬೀಜದ ಕಿಟ್ ವಿತರಿಸಿ ಮಾತನಾಡಿದ ಅವರು, ಈ ಬಾರಿ ಮಳೆ ಹಿನ್ನಡೆಯಿಂದಾಗಿ ತಾಲ್ಲೂಕಿನಲ್ಲಿ ಹಸಿರು ಮೇವಿನ ಸಮಸ್ಯೆ ಉಂಟಾಗಿದೆ ಎಂದು ಹೇಳಿದರು.ಕೃಷಿ ಕೊಳವೆ ಬಾವಿ ಹೊಂದಿರುವ ರೈತರು ಮೇವಿನ ಬೀಜದ ಕಿಟ್ ಪಡೆದು […]

ಶ್ರೀನಿವಾಸಪುರ: ಅಧಿಕಾರಿಗಳು ಸರ್ಕಾರದ ಸೌಲಭ್ಯಗಳನ್ನು ಪಕ್ಷಾತೀತವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಹೊಗಳಗೆರೆ ತೋಟಗಾರಿಕಾ ಕ್ಷೇತ್ರದ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ನಿವೇಶನ ರಹಿತ ಕುಟುಂಬಳ ಪಟ್ಟಿ ತಯಾರಿಸಬೇಕು ಎಂದು ಹೇಳಿದರು.ಕ್ಷೇತ್ರದಲ್ಲಿ ಕುಡಿಯುವ ನೀರು ಪೂರೈಕೆ, ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಆದ್ಯತೆ ನೀಡಬೇಕು. ಪಟ್ಟಣ ಹಾಗೂ ಗ್ರಾಮಗಳಲ್ಲಿ ನೈರ್ಮಲ್ಯ ಪಾಲನೆ ಮಾಡಬೇಕು. ಚರಂಡಿಗಳಿಂದ ನಾಗರಿಕ […]