ಶ್ರೀನಿವಾಸಪುರ : ತಾಲೂಕಿನಲ್ಲಿ ಅರಣ್ಯ ಇಲಾಖೆವತಿಯಿಂದ ಒತ್ತುವರಿ ತೆರವು ಕಾರ್ಯಚರಣೆ ಸಮಯದಲ್ಲಿ ಹಾಗು ಬೆಳೆಗಳು ನಷ್ಟವಾದಾಗ ಆ ತೋಟಗಳಿಗೆ ಬೇಟಿ ನೀಡಿದ್ದೆವು ಆಲ್ಲದೆ ರೈತರಿಗೆ ಭೂಮಿಯನ್ನು ಉಳಿಸುವ ಉದ್ದೇಶದಿಂದಲೂ ಸಹ ನಾವು ಅರಣ್ಯ ಇಲಾಖೆ ಹಾಗು ಸರ್ಕಾರದ ವಿರುದ್ಧ ಹೋರಾಟಗಳನ್ನು ಮಾಡಿದ್ದೀವಿ. ಅಲ್ಲದೆ ಅರಣ್ಯ ಇಲಾಖೆ ಡಿಎಫ್‍ಓ ಏಡಿಕೊಂಡಲು ನಮ್ಮ ದೂರು ದಾಖಲಿಸಿದ್ದರು. ಅದರೂ ಸಹ ನಾವು ಅದೆನ್ನೆಲ್ಲಾ ಲೆಕ್ಕಿಸಿದೆ ರೈತ ಭೂಮಿಯನ್ನು ಉಳಿಸಲು ಹೋರಾಟ ಮಾಡಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು […]
ಭಾರತೀಯ ಪರಂಪರೆಯಲ್ಲಿ ಸಂತೆ ಇಂದಿಗೂ ಪ್ರಸ್ತುತ ಶ್ರೀನಿವಾಸಪುರ: ಭಾರತೀಯ ಸಾಂಸ್ಕøತಿಕ ಪರಂಪರೆಯಲ್ಲಿ ಸಂತೆ ಹಾಸುಹೊಕ್ಕಾಗಿದೆ. ವಾರದ ಸಂತೆಯಲ್ಲಿ ಗ್ರಾಮೀಣ ಹುಟ್ಟುವಳಿಗಳನ್ನು ಮಾರಾಟ ಮಾಡುವ ಪ್ರಾಚೀನ ಆರ್ಥಿಕ ವ್ಯವಸ್ಥೆ ಇಂದಿಗೂ ಮುಂದುವರಿದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಾಹಿತಿ ಆರ್.ಚೌಡರೆಡ್ಡಿ ಹೇಳಿದರು.ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ವಾಣಿಜ್ಯ ಉತ್ಸವ ಹಾಗೂ ಕಾಲೇಜು ಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಜಾನಪದ ಹಾಗೂ ಸಾಹಿತ್ಯ ಚರಿತ್ರೆಯಲ್ಲಿ ಸಂತೆಗೆ ಮಹತ್ವದ ಸ್ಥಾನ ನೀಡಲಾಗಿದೆ. ಸಂತೆಗೆ ಸಂಬಂಧಿಸಿದ ಜಾನಪದ […]
ಶ್ರೀನಿವಾಸಪುರ : ಕಂದಾಯ ಅಧಿಕಾರಿ ಎನ್.ಶಂಕರ್ ಮಾತನಾಡಿ ಪಟ್ಟಣ ಹಳೆ ಸಾರ್ವಜನಿಕ ಆಸ್ಪತ್ರೆಯ ಆವಣರದಲ್ಲಿನ 93 ವಾಣಿಜ್ಯ ಪುರಸಭೆ ಮಳಿಗೆಗಗಳು ಇದ್ದು, ಆ ಮಳಿಗೆಗೆಗಳನ್ನು ಕೆಯುಐಡಿಎಫ್‌ಸಿ ಬ್ಯಾಂಕ್ ನಿಂದ ಸಾಲ ಮಾಡಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಹರಾಜು ಮೂಲಕ ಅಂಗಡಿಗಳನ್ನು ಹರಾಜು ದಾರರಿಗೆ ನೀಡಲಾಗಿದೆ. ಯಾವ ಅಂಗಡಿಯೂ ಖಾಲಿ ಇಲ್ಲ. ಆ ಮಳಿಗೆಗಳಲ್ಲಿನ ಕೆಲ ಅಂಗಡಿಗಳು ಲಕ್ಷಾಂತಾರ ರೂಗಳು ಬಾಡಿಗೆ ಬಾಕಿ ಇದ್ದು, ಗುರುವಾರ ದಾಳಿ ನಡೆಸಿ 10 ಮಳಿಗೆಗೆಗಳಿಗೆ ಬೀಗಮುದ್ರೆ ಹಾಕಲಾಯಿತು ಎಂದರು. ಪುರಸಭೆ ಅಧ್ಯಕ್ಷ […]
ಕೋಲಾರ : ನೌಕರರು ತಮ್ಮ ಕೆಲಸಗಳಲ್ಲಿ ಬದ್ಧತೆ ತೋರಿಸಬೇಕು. ನಿಗಧಿತ ಅವಧಿಯಲ್ಲಿ ಕೊಟ್ಟಿರುವ ಗುರಿ ಸಾಧಿಸಬೇಕು. ಸಾರ್ವಜನಿಕರ ಪರವಾಗಿ ಕಾಳಜಿಯಿಂದ ಕೆಲಸ ಮಾಡಬೇಕು ರೈತರು ತಮ್ಮ ಜಮೀನುಗಳ ಮಾಹಿತಿಯನ್ನು ಫೂಟ್ಟ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳುವ ಮೂಲಕ ಬರ ಪರಿಹಾರ ಹಾಗೂ ವಿಮಾ ಪರಿಹಾರಗಳಂತಹ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸುವ ಮೂಲಕ ರೈತರ ಪ್ರತಿಯೊಂದು ಜಮೀನನ್ನು ಫೂಟ್ ತಂತ್ರಾಂಶದ ವ್ಯಾಪ್ತಿಗೆ ತರಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಸೂಚಿಸಿದರು. ಇಂದು ಜಿಲ್ಲಾಳಿತ […]
ಷ್ರೀನಿವಾಸಪುರ : 06-12-2024 ರಂದು ಸಂವಿಧಾನ ಶಿಲ್ಪಿ ಭಾರತ ರತ್ನ ಡಾ|ಬಿ.ಆರ್.ಅಂಬೇಡ್ಕರ್ ರವರ 68 ನೇ ಪುಣ್ಯ ತಿಥಿ ಸಂಬಂಧ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುಲಾಗುವುದು ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ಬುಧವಾರ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.6-12-2024 ರಂದು ಬೆಳಗ್ಗೆ 9.00 ಗಂಟೆಗೆ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ|ಬಿ.ಆರ್.ಅಂಬೇಡ್ಕರ್ ರವರ 68 ನೇ ಪುಣ್ಯ ತಿಥಿ ಸಂಬಂಧತಾಲ್ಲೂಕು ಕಛೇರಿಯ ಆವರಣದಲ್ಲಿರುವ ಡಾ|ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರಮಕ್ಕೆ ಶ್ರೀನಿವಾಸಪುರ ತಾಲ್ಲೂಕಿನ […]
ಶ್ರೀನಿವಾಸಪುರ : ಮಹತ್ವಾಕಾಂಕ್ಷಿ ಮಹಿಳೆಯರಿಗೆ ವಿಶೇಷವಾದ ಅವಕಾಶ ಇದಾಗಿದ್ದು, ಮಹಿಳೆಯರು ಪೂರ್ಣ ಸಮಯ ಅಥವಾ ಅರೆಕಾಲಿಕ ಏಜೆಂಟರಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಬೆಂಗಳೂರು-೨ ವಿಭಾಗದ ಕಾನೂನು ವ್ಯವಸ್ಥಾಪಕ ನರೇಂದ್ರಬಾಬು ತಿಳಿಸಿದರು.ಪಟ್ಟಣದ ಎಲ್‌ಐಸಿ ಉಪಶಾಖೆಯಲ್ಲಿ ಮಂಗಳವಾರ ಕೇಂದ್ರ ಸರ್ಕಾರದ ಯೋಜನೆಯಾದ ಬಿಮಾ ಸಖಿ-ಮಹಿಳಾ ಕೆರಿಯರ್ ಏಜೆಂಟ್ ಬಗ್ಗೆ ಮಾಹಿತಿ ನೀಡಿ ಚಾಲನೆ ನೀಡಿ ಮಾತನಾಡಿದರು.ವಿದ್ಯಾರ್ಹತೆಯ ಕನಿಷ್ಟ ಪಕ್ಷ ೧೦ ನೇ ತರಗತಿ ತೇರ್ಗಡೆಯಾಗುಬೇಕಾಗಿದ್ದು, ಮಹಿಳೆಯರು ನಿಮ್ಮ ಮನೆಯಲ್ಲಿಯೇ ಇದ್ದುಕೊಂಡು ಕೆಲಸ ಮಾಡುತ್ತಾ ಅನಿಯಮಿತ ಆದಾಯ ಹೊಂದುವ ಸುವರ್ಣಾವಕಾಶ. ಈ ಯೋಜನೆಗೆ […]
ಕೋಲಾರ:- ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಇತ್ತೀಚೆಗೆ ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜಯ ಸಾಧಿಸಿರುವ ಸಂಸದೆ ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಿಯಾಂಕ ಗಾಂಧಿಯವರ ಗೆಲುವಿನಿಂದ ಕಾಂಗ್ರೆಸ್ ಪಕ್ಷದ ಶಕ್ತಿ ಇಮ್ಮಡಿಯಾಗಿದೆ, ರಾಹುಲ್ ಗಾಂಧಿಯವರೊಂದಿಗೆ ಪ್ರಿಯಾಂಕ ಗಾಂಧಿಯವರೂ ಲೋಕಸಭೆ ಪ್ರವೇಶಿಸಿರುವುದರಿಂದ ಕೇಂದ್ರ ಸರ್ಕಾರದ ಜನವಿರೋಧಿ ನಿಲುವುಗಳ ವಿರುದ್ದ ಹೋರಾಟ ನಡೆಸಲು ಬಲ ಬಂದಿದೆ ಎಂದು ಅಭಿಪ್ರಾಯಪಟ್ಟರು.ಮುಂದಿನ […]
ಶ್ರೀನಿವಾಸಪುರ : ತಾಲೂಕಿನ ಯಲ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಬೀದಿ ದೀಪ ಹಾಗೂ ಚರಂಡಿ ಸ್ವಚ್ಛತೆ ಇವುಗಳನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ಒದಗಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ. ಪಿ. ಶ್ರೀನಿವಾಸರೆಡ್ಡಿ ತಿಳಿಸಿದರು. ಶ್ರೀನಿವಾಸಪುರ ತಾಲೂಕಿನ ಯಲ್ಡೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಏರ್ಪಡಿಸಿದ್ದ ಗ್ರಾಮಸಭೆಯಲ್ಲಿ ಮಾತನಾಡುತ್ತಾ, ಇಂದಿನ ಸಭೆಯಲ್ಲಿ 2024-25ನೇ ಸಾಲಿನ ಎಮ್ ಎನ್ ಆರ್ ಇ ಜಿ ಎಯ ಅಂದಾಜು ಕ್ರಿಯಾಯೋಜನೆಗೆ ಹಾಗೂ ಗ್ರಾಮನೀರು […]
ಶ್ರೀನಿವಾಸಪುರ : ತಾಲ್ಲೂಕಿನ ಪುಲಗೂರಕೋಟೆ ಗ್ರಾಮ ಪಂಚಾಯತಿಯಲ್ಲಿ ಒಟ್ಟು 18 ಸದಸ್ಯರಿದ್ದು, ಅದರಲ್ಲಿ ಜೆಡಿಎಸ್ ಬೆಂಬಲಿತ 09 ಸದಸ್ಯರಿದ್ದು, ಕಾಂಗ್ರೆಸ್ ಬೆಂಬಲಿತ 09 ಸದಸ್ಯರಿದ್ದು, ಉಪಾಧ್ಯಕ್ಷರ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಅದರಲ್ಲಿ ಕಾಂಗ್ರೆಸ್ ಬೆಂಬಲಿತ ಉಪಾಧ್ಯಕ್ಷರ ಸ್ಥಾನಕ್ಕೆ ರೂಪಶ್ರೀನಿವಾಸ್ ರವರು ಒಬ್ಬರೇ ಇದಿದ್ದರಿಂದ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದರಿಂದಾಗಿ ಅವಿರೋಧವಾಗಿ ರೂಪಶ್ರೀನಿವಾಸ್ ರವರು ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಾಜೇಶ್ ತಿಳಿಸಿದರು .ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಕೆ. ಮಂಜುನಾಥ ಮಾತನಾಡಿ ನೂತನವಾಗಿ ಉಪಾಧ್ಯಕ್ಷರಾಗಿರುವ […]