ಕೋಲಾರ : ಜಿಲ್ಲೆಯ ಸಹಕಾರಿ ಬ್ಯಾಂಕ್‌ಗಳು ರೈತರ ಬಗ್ಗೆ ಮಾತೃ ಹೃದಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ತಿಳಿಸಿದರು. ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಹಕಾರ ಬ್ಯಾಂಕ್‌ಗಳ ಮುಖಾಂತರ ವಿವಿಧ ಬೆಳೆಗಳಿಗೆ ನೀಡಲಾಗುವ ಬೆಳೆ ಸಾಲದ ಮಿತಿಯನ್ನು ನಿರ್ಧರಿಸಲು ಕರೆಯಲಾಗಿದ್ದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಜಿಲ್ಲೆಯ ರೈತರು ಕಷ್ಟಜೀವಿಗಳಾಗಿದ್ದು, ಬೆಳೆ ಸಾಲ ಮರುಪಾವತಿಯಲ್ಲಿ ಬೇರೆ ಜಿಲ್ಲೆಗಳಿಗಿಂತ ಮುಂದೆ ಇದ್ದಾರೆ. ಜಿಲ್ಲೆಯಲ್ಲಿ ಯಾವುದೇ ಜೀವನದಿಗಳು ಹರಿಯುತ್ತಿಲ್ಲವಾದರೂ ಇಲ್ಲಿನ ವಾತಾವರಣ, ಮಣ್ಣಿನ ಫಲವತ್ತತೆಗೆ […]
ಕೋಲಾರ,ಜ.04: ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿರುವ ಪೊಲೀಸ್ ಹೊರ ಠಾಣೆಯನ್ನು ನರಸಾಪುರ ಕೇಂದ್ರ ಸ್ಥಾನದಲ್ಲಿಯೇನರಸಾಪುರ ಮದರ್ ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ನರಸಾಪುರ ಹೋಬಳಿಯ ಗ್ರಾಮಸ್ಥರು ಹಾಗೂ ಯುವ ಮುಖಂಡ ಎನ್.ವಿ.ಗೋಪಿ ಅವರ ನೇತೃತ್ವದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.ಕೋಲಾರ ತಾಲ್ಲೂಕು ನರಸಾಪುರ ಗ್ರಾಮದಲ್ಲಿ ಪೊಲೀಸ್ ಹೊರ ಠಾಣೆ ಇದ್ದು ಇದನ್ನು ಪೊಲೀಸ್ ಠಾಣೆಯಾಗಿ ಮೇಲ್ದರ್ಜೆಗೆ ಏರಿಸಬೇಕಾಗಿರುತ್ತದೆ. ಕಾರಣ ನರಸಾಪುರ ಕೈಗಾರಿಕಾ ಪ್ರದೇಶ ಸ್ಥಾಪನೆಗೊಂಡಿದ್ದು, ಕಾರ್ಖಾನೆಗಳು ಸ್ಪಾಪನೆಯಾಗಿ ಸುಮಾರು 10 ರಿಂದ 15 ವರ್ಷಗಳಾಗಿದ್ದು, ಪ್ರಸಿದ್ದ […]
ಶ್ರೀನಿವಾಸಪುರ: ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಲೋಕೋಪಯೋಗಿ ಇಲಾಖೆಯಿಂದ ಎಸ್‍ಎಫ್‍ಸಿ ವಿಶೇಷ ಅನುದಾನದಡಿ ಕೈಗೊಳ್ಳುವ ವಿವಿಧ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, ಪುರಸಭೆ ವ್ಯಾಪ್ತಿಯಲ್ಲಿ ಶಾಶ್ವತ ಕಾಮಗಾರಿ ಕೈಗೊಳ್ಳಲಾಗುವುದು. ಹೊಸದಾಗಿ ಪುರಸಭೆ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗಿರುವ ಎಚ್.ನಲ್ಲಪ್ಪಲ್ಲಿ, ಉನಿಕಿಲಿ, ಕೊಳ್ಳೂರು ಹಾಗೂ ಬೈರಪ್ಪಲ್ಲಿ ಹೊಸ ಬಡಾವಣೆಗಳ ಅಭಿವೃದ್ದಿಗೆ ಪ್ರಥಮ ಆಧ್ಯತೆ ನೀಡಲಾಗುವುದು ಎಂದು ಹೇಳಿದರು.ಈಗಾಗಲೆ ಪುರಸಭೆ ಹೊಸ ಬಡಾವಣೆಗಳ ಸರ್ವತೋಮುಖ ಅಭಿವೃದ್ಧಿ ಕೈಗೊಳ್ಳಲು ಸರ್ಕಾರದಿಂದ ರೂ.15 ಕೋಟಿ ಬಿಡುಗಡೆಯಾಗಿದೆ. ಒಟ್ಟು ರೂ.25 ಕೋಟಿ […]
ಕೋಲಾರ/ 02 ನರಸಾಪುರ ಭಾಗದ ಜನರ, ಕಾರ್ಮಿಕ, ಮಹಿಳಾ ಕಾರ್ಮಿಕರ ಬಹುದಿನಗಳ ಬೇಡಿಕೆಯಾದಂತಹ ನರಸಾಪುರ ಗ್ರಾಮದಲ್ಲಿ ಹೊಸ ಪೆÇಲೀಸ್ ಠಾಣೆಯನ್ನು ಮಂಜೂರು ಮಾಡುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ರವರಲ್ಲಿ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮನವಿ ನೀಡಿದರು.ಕೋಲಾರಕ್ಕೆ ಬುಧವಾರ ಆಗಮಿಸಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ರವರಿಗೆ ಮನವಿ ನೀಡಿ ಮನವಿಯಲ್ಲಿ. ಕೋಲಾರ ತಾಲ್ಲೂಕು. ನರಸಾಪುರ ಕೈಗಾರಿಕಾ ಪ್ರದೇಶದ ಭಾಗದಲ್ಲಿ ಜನಸಂಖ್ಯೆ […]
ಕೋಲಾರ : ಯುವಕ ಯುವತಿಯರು ಈ ದೇಶದ ಬಹು ದೊಡ್ಡ ಆಸ್ತಿ ಅವರನ್ನು ಸರಿದಾರಿಗೆ ನಡೆಸಿಕೊಂಡು ಹೋಗಬೇಕಾದ್ದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ. ಕರ್ನಾಟಕ ರಾಜ್ಯವನ್ನು ವ್ಯಸನ ಮುಕ್ತ ರಾಜ್ಯ ಮಾಡುವುದು ಸರ್ಕಾರದ ಪ್ರಮುಖ ಗುರಿ ಎಂದು ರಾಜ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು ತಿಳಿಸಿದರು. ಇಂದು ಬಂಗಾರಪೇಟೆ ತಾಲ್ಲೂಕಿನ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬೂದಿಕೋಟೆ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಹೊಸ ಸರ್ಕಾರ ಬಂದ ನಂತರ ಕೋಲಾರ […]
ಶ್ರೀನಿವಾಸಪುರದ ಪುರಸಭೆ ಕಾರ್ಯಾಲಯದಲ್ಲಿ ಸೋಮವಾರ ಜಕಣಾಚಾರಿ ಜಯಂತಿ ಆಚರಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹಾಗೂ ಸಿಬ್ಬಂದಿ ಇದ್ದರು.
ಶ್ರೀನಿವಾಸಪುರ ತಾಲ್ಲೂಕಿನ ಕೇತಗಾನಹಳ್ಳಿ ಗ್ರಾಮzಲ್ಲಿ ಸೋಮವಾರ ಏರ್ಪಡಿಸಿದ್ದ ರೇಣುಕಾ ಯಲ್ಲಮ್ಮ ದೇವಿ ವಿಶೇಷ ಪೂಜಾ ಮಹೋತ್ಸವದ ಅಂಗವಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಶ್ರೀನಿವಾಸಪುರ: ಶಿಲ್ಪಿ ಜಕಣಾಚಾರಿ ಅವರಿಂದ ಕೆತ್ತಲ್ಪಟ್ಟಿರುವ ಶಿಲ್ಪಗಳು ಇಂದಿಗೂ ಜನರ ಮೆಚ್ಚುಗೆಗೆ ಪಾತ್ರವಾಗಿವೆ ಎಂದು ಉಪ ತಹಶೀಲ್ದಾರ್ ಕೆ.ಎಲ್.ಜಯರಾಂ ಹೇಳಿದರು.ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ, ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಜಯಂತಿ ಸಮಾರಂಭದಲ್ಲಿ ಜಕಣಾಚಾರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಕರ್ನಾಟಕ ಕಲೆಯ ತೊಟ್ಟಿಲಾಗಲು ಜಕಣಾಚಾರಿ ಅವರಂಥ ಶಿಲ್ಪಿಗಳು ಕಾರಣರಾಗಿದ್ದಾರೆ ಎಂದು ಹೇಳಿದರು.ವಾಸ್ತು ಶಿಲ್ಪ ಕಲಾ ಪ್ರಕಾರಕ್ಕೆ ಜಕಣಾಚಾರಿ ಮಾದರಿಯಾಗಿದ್ದಾರೆ. ಅವರ ಪರಂಪರೆ ರಾಜ್ಯದಲ್ಲಿ ಇನ್ನೂ […]
ಶ್ರೀನಿವಾಸಪುರ: ; ಜ.1: ಬಡವರ ಹಸಿವಿನ ಮೇಲೆ ಸರ್ಕಾರ ವ್ಯಾಪಾರ ಮಾಡುವುದನ್ನು ನಿಲ್ಲಿಸಬೇಕೆಂದು ರೈತಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಸರ್ಕಾರಗಳಿಗೆ ಎಚ್ಚರಿಕೆಯ ಜೊತೆಗೆ ಮನವಿ ಮಾಡಿದರು.ಹೊಸ ವರ್ಷ ಆಚರಣೆಯನ್ನು ತಾಲೂಕು ಕಚೇರಿ ಮುಂದೆ ರೈತರು ಬೆಳೆಯುವ ತರಕಾರಿಗಳನ್ನು ಉಚಿತವಾಗಿ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ವಿತರಣೆ ಮಾಡಿ ಮಾತನಾಡಿದ ಅವರು, ಈ ವರ್ಷ ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಿ ನಕಲಿ ಬಿತ್ತನೆ ಬೀಜ ಕೀಟನಾಶಕಗಳ ಹಾವಳಿಯಿಂದ ಮುಕ್ತಿಯಾಗಲಿ. ದುಡಿಮೆಗೆ ತಕ್ಕ ಬೆಲೆ ಸಿಗಲಿ ರೈತರ ಬದುಕು ಹಸನಾಗಲಿ […]