ಶ್ರೀನಿವಾಸಪುರ : ಸಭೆಯಲ್ಲಿ ಇಷ್ಟು ಜನ ಸೇರಿದ್ದೀರಿ, ನಾನು ಯಾರನ್ನು ನಂಬುವುದು ಯಾರನ್ನ ಬಿಡುವುದು ಎಂದು ಹೇಳುತ್ತಾ, ಇಷ್ಟು ಜನ ಬಂದು ಅನೇಕ ವಿಧಗಳಲ್ಲಿ ಪ್ರಯೋಜನೆಗಳನ್ನು ಪಡೆದು, ನನ್ನ ಸೋಲಿಸಿದ್ದೀರಿ ಎನ್ನುತ್ತಾ,ಎಂದು ಮಾಜಿ ಶಾಸಕ ಕೆ.ಆರ್.ರಮೇಶ್‌ಕುಮಾರ್ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ರಾಯಲ್ಪಾಡು ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಪರ ಮತಯಾಚನ ಸಭೆಯಲ್ಲಿ ಮಾತನಾಡಿದರು. ಕಳೆದ ೧೧ ತಿಂಗಳಿನಿAದ ನಾನು ತೋಟದಲ್ಲಿ ಕುರಿಗಳ ಜೊತೆ ಹಾಗೂ ತೋಟವನ್ನು ಸುತ್ತಾಡುತ್ತಾ ಕಾಲಕಳೆದಿದ್ದೇನೆ. ಅನೇಕ ಬಾರಿ ಯೋಚನೆ […]
ಶ್ರೀನಿವಾಸಪುರ : ಕುಡಿಯುವ ನೀರಿನ ಹಭಾವದಿಂದ ಕಂಗಾಲಾಗುತ್ತಿದ್ದ ಗ್ರಾಮಸ್ಥರ ದಾಹ ತೀರಿಸಲು ಮುಂದಾಗಿ ಬೋರ್ ವೆಲ್ ಕೊರಿಸುವ ವೇಳೆ ಪಕ್ಕದ ಜಮೀನಿನ ವಾಸಿಗಳು ಹಲ್ಲೆ ನಡೆಸಿರುವ ಘಟನೆ ಸಂಬಂಧ ರಾಯಲ್ಪಾಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲ್ಲೂಕಿನ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯ ಮೂಲಗೊಲ್ಲಪಲ್ಲಿ ಗ್ರಾಮದಲ್ಲಿ ಸುಮಾರು 10-15 ದಿನಗಳಿಂದ ನೀರಿನ ಹಭಾವ ಹೆಚ್ಚಾಗಿತ್ತು. ಈ ಸಂಬಂಧ ಗ್ರಾಮಸ್ತರು ಹಲವು ಭಾರಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಇನ್ನು ಈ ಸಂಬಂಧ ಗ್ರಾಮದ ಮುಖ್ಯ ರಸ್ತೆ ಹಾಗೂ ಕಾಲುವೆ ಮದ್ಯೆ […]
ಕೋಲಾರ:- ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ನಿಯೋಜಿತ ಸಮಿತಿ ಯೂಟೂಬ್, ಫೇಸ್ ಬುಕ್, ಇನ್ ಸ್ಟಾಗ್ರಾಂ, ಟ್ವಿಟ್ಟರ್ ಹಾಗೂ ವ್ಯಾಟ್ಸ್ ಆ್ಯಪ್‍ಗಳ ಮೇಲೆ ತೀವ್ರ ನಿಗಾ ಇಡಬೇಕು. ಜಾಹೀರಾತು ವೆಚ್ಚ ಕುರಿತು ಸಮಿತಿ ಕೂಲಂಕುಷವಾಗಿ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷಾ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಜಿಲ್ಲಾ ಮಾಧ್ಯಮ ಪರಿಶೀಲನಾ ಕೋಶ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಮನವರಿಕೆ ಮಾಡಿಕೊಂಡ ನಂತರವೇ ಸರ್ಟಿಫಿಕೇಟ್ ನೀಡಬೇಕು. ದೃಶ್ಯ ಮಾಧ್ಯಮ, […]
ಕೋಲಾರ:- ಜಿಲ್ಲಾದ್ಯಂತ ಒಟ್ಟು 19 ಕೇಂದ್ರಗಳಲ್ಲಿ ಮೊದಲ ದಿನದ 2024ರ ಸಾಮಾನ್ಯ ಪ್ರವೇಶ ಪರೀಕ್ಷೆ ಸುಗಮವಾಗಿ ನಡೆದಿದ್ದು, ಗುರುವಾರ ಬೆಳಗ್ಗೆ ಜೀವಶಾಸ್ತ್ರ ವಿಷಯಕ್ಕೆ 1413 ಮಂದಿ ಹಾಗೂ ಮಧ್ಯಾಹ್ನ ಗಣಿತಶಾಸ್ತ್ರ ವಿಷಯಕ್ಕೆ 438 ಮಂದಿ ಗೈರಾಗಿದ್ದು, ಯಾವುದೇ ಗೊಂದಲಕ್ಕೆ ಅವಕಾಶವಾಗಿಲ್ಲ ಮತ್ತು ಜಿಲ್ಲಾಧಿಕಾರಿಗಳು ಕೇಂದ್ರಗಳಿಗೆ ವೀಕ್ಷಣೆ ಮಾಡಿ ಪರಿಶೀಲಿಸಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ತಿಳಿಸಿದ್ದಾರೆ.ಜೀವಶಾಸ್ತ್ರ ವಿಷಯದ ಪರೀಕ್ಷೆಗೆ ಒಟ್ಟು 8325 ಮಂದಿ ಹೆಸರು ನೋಂದಾಯಿಸಿದ್ದು, ಅವರಲ್ಲಿ 6912 ಮಂದಿ ಹಾಜರಾಗುವ ಮೂಲಕ […]
ಶ್ರೀನಿವಾಸಪುರ: ಕೇಂದ್ರ ಲೋಕ ಸೇವಾ ಆಯೋಗ ನಡೆಸಿದ ನಾಗರೀಕ ಸೇವೆಗಳ ಪರೀಕ್ಷೆಗಳ ಫಲಿತಾಂಶದಲ್ಲಿ ಕೋಲಾರದ ಡಯಟ್ ನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಜಿ.ಎಂ. ಗಂಗಪ್ಪ ಮತ್ತು ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಆರ್. ಜಯಲಕ್ಷ್ಮೀ ದಂಪತಿಗಳ ಪುತ್ರಡಾ: ಜಿ. ಗೌತಮ್ ತನ್ನ ಐ.ಎ.ಎಸ್. ಪರೀಕ್ಷೆಯಲ್ಲಿ 939ನೇ ಶ್ರೇಣಿಯನ್ನು ಪಡೆದಿದ್ದು, ಇವರನ್ನು ರೋಟರಿ ಶ್ರೀನಿವಾಸಪುರ ಸೆಂಟ್ರಲ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಶ್ರೀನಿವಾಪುರ ಸೆಂಟ್ರಲ್‍ನ ಅಧ್ಯಕ್ಷರಾದ ಎಸ್.ಎನ್. ಮಂಜುನಾಥರೆಡ್ಡಿ, ಕಾರ್ಯದರ್ಶಿ ಎಸ್. ಶಿವಮೂರ್ತಿ, ಮಾಧ್ಯಮ ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ ನಿರ್ದೇಶಕರಾದ […]
ಕೋಲಾರ:- ಚುನಾವಣಾ ಪ್ರಕ್ರಿಯೆ ಯಾವುದೇ ಗೊಂದಲಗಳಿಲ್ಲದೇ ಸುಸೂತ್ರವಾಗಿ ನಡೆಯಲು ಮತದಾನ ಕಾರ್ಯಕ್ಕೆ ನೇಮಕಗೊಂಡಿರುವ ಮತಗಟ್ಟೆ ಸಿಬ್ಬಂದಿ ಕ್ರಮವಹಿಸಿ ಮತ್ತು ಮತಗಟ್ಟೆಯಲ್ಲಿ ಅಣಕುಮತದಾನ ಸಕಾಲಕ್ಕೆ ಮುಗಿಸಿ ನೈಜ ಮತದಾನಕ್ಕೆ ಸಿದ್ದತೆ ನಡೆಸಿಕೊಳ್ಳಿ ಎಂದು ತಹಸೀಲ್ದಾರ್ ಹರ್ಷವರ್ಧನ್ ಸೂಚಿಸಿದರು.ಬುಧವಾರ ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳಾಗಿ ನೇಮಕಗೊಂಡಿರುವ ಸಿಬ್ಬಂದಿಗೆ ನಡೆದ 2ನೇ ಹಂತದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅವರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷಾ, ವಿಭಾಗಾಧಿಕಾರಿ ವೆಂಕಟಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ತರಬೇತಿ […]
ಕೋಲಾರ; ಏ.17: ಅಂಗನವಾಡಿ ಕೇಂದ್ರಗಳಿಗೆ ಕಳಪೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿರುವ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ, ಮೌನವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಹಾಗೂ ಗರ್ಭಿಣಿಯರಿಗೆ ವಿತರಣೆ ಮಾಡುತ್ತಿರುವ ಆಹಾರಪದಾರ್ಥಗಳು ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು, ದನಕರುಗಳು ಸಹ ತಿನ್ನಲು ಯೋಗ್ಯವಿಲ್ಲದಂತಿದೆ.ಅದನ್ನು ಸರಿಪಡಿಸಬೇಕಾದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕಣ್ಣಿದ್ದೂ ಕುರುಡರಂತೆ ವರ್ತಿಸುವ ಮೂಲಕ ಮಕ್ಕಳು […]
ಶ್ರೀನಿವಾಸಪುರ : ಐಎಎಸ್ ಪರೀಕ್ಷೆಯ ಫಲಿತಾಂಶದಲ್ಲಿ ಪಟ್ಟಣದ ಮಾರುತಿ ನಗರದ ಜಿ.ಎಮ್.ಗಂಗಪ್ಪರವರ ಜಯಲಕ್ಷ್ಮಿ ದಂಪತಿಗಳ ಎರಡನೇ ಮಗನಾದ ಡಾ. ಗೌತಮ್ ರವರು 939 ರ್‍ಯಾಂಕ್ ಬಂದಿದ್ದು ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ ಡಾ.ಗೌತಮ್ ಮಾತನಾಡಿ ಪ್ರಾಥಮಿಕ ಶಿಕ್ಷಣ ಶ್ರೀನಿವಾಸಪುರ ಪಟ್ಟಣದ ಎಸ್‍ಎಫ್‍ಎಸ್ ಶಾಲೆಯಲ್ಲಿ , ನಂತರ ನವೋದಯ ಶಾಲೆಗೆ ಆಯ್ಕೆಯಾಗಿ ಅಲ್ಲಿ ಶಿಕ್ಷಣವನ್ನು ಪಡೆದು ನಂತರ ಎಸ್‍ಎಫ್‍ಎಸ್ ಶಾಲೆಯಲ್ಲಿ ವ್ಯಾಸಂಗ ಮಾಡಿ ಮತ್ತೆ ಮುದ್ದೇನಹಳ್ಳಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ನಂತರ ಬೆಂಗಳೂರಿನ ಬಿಎಂಸಿ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದಿದ್ದು, […]
ಶ್ರೀನಿವಾಸಪುರ : ಅಮ್ಮಗಾರಿಪೇಟೆಯಿಂದ ಎಸ್.ಜೀಡಮಾಕಲಪಲ್ಲಿ ಮತ್ತು ಸುಣ್ಣಕಲ್ ನಿಂದ ಜಿಂಕಲವಾರಿಪಲ್ಲಿ ಗ್ರಾಮಕ್ಕೆ ಮತಗಟ್ಟೆ ವೀಲಿನಗೊಂಡಿರುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಈ ಒಂದು ಚುನಾವಣೆಗೆ ಮಾತ್ರ ಮತಗಟ್ಟೆ ವಿಲೀನಗೊಂಡಿರುವ ಕಾರಣ ಗ್ರಾಮಸ್ಥರು ಯಾವುದೇ ಗೊಂದಲಕ್ಕೆ ಒಳಗಾಗದೆ ಹೋಗಿ ಮತ ಚಲಾಯಿಸಬೇಕು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎ.ಎನ್.ರವಿ ಎಂದು ತಿಳಿಸಿದರು.ಶ್ರೀನಿವಾಸಪುರ ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ರಾಯಲ್ಪಾಡು ಗ್ರಾ.ಪಂ.ವ್ಯಾಪ್ತಿಯ ಸುಣ್ಣಕಲ್ ಪಿಎಸ್-57, ಅಮ್ಮಗಾರಿಪೇಟೆ ಪಿಎಸ್-49 ಮತಗಟ್ಟೆಗಳಿಗೆ ಬೇಟಿ ನೀಡಿ ಸ್ಥಳ ಪರಿಶೀಲಿಸಿ ಮಾತನಾಡಿದರು.ಇದೇ ಸಮಯದಲ್ಲಿ ಮನೆ […]