
ಕೋಲಾರ: ಇಂದು ಭಾನುವಾರ ರಜಾದಿನ ಇದ್ದು ಸಹ ಫೀಲ್ಡ್ ಗೆ ಇಳಿದ ಜಿಲ್ಲಾಧಿಕಾರಿ ಅಕ್ರಂ ಪಾಷಾ ರವರು ಕೋಲಾರ ನಗರದ ವಿವಿಧ ರಸ್ತೆಗಳಲ್ಲಿ ಪಾದಚಾರಿ ರಸ್ತೆ ಕಾಮಗಾರಿ, ಪುಡ್ ಕೋರ್ಟ್ ನಿರ್ಮಾಣ, ನಗರಸಭೆ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣಗಳ ಕಾಮಗಾರಿ ಹಾಗೂ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಅನಧಿಕೃತ ಅಂಗಡಿಗಳ ತೆರವುಗೊಳಿಸುವ ಕುರಿತು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀನಿವಾಸಪುರ: ದೈಹಿಕ ಶಿಕ್ಷಣ ಪರಿವೀಕ್ಷಕರಾಗಿ ಈ ಕ್ಷೇತ್ರದಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ವಿದ್ಯಾರ್ಥಿಗಳ ಹಾಗೂ ಪಾಲಕರ ಮನ ಗೆದ್ದಿದ್ದಾರೆ. ಇಂದಿನ ಶಿಕ್ಷಕ ವರ್ಗದವರಿಗೆ ಕೆ.ವಿ ನಾರಾಯಣಸ್ವಾಮಿ ಮಾದರಿಯಾಗಿದ್ದಾರೆಂದ ನಿವೃತ್ತಿ ಹೊಂದಿದ ಬಿಇಓ ರೇಣುಕಮ್ಮ ಮೆಚ್ಚುಗೆಯನ್ನು ವ್ಯಕ್ತಿಪಡಿಸಿದರು.ಪಟ್ಟಣದ ಸರ್ಕಾರಿ ನೌಕರ ಭವನದಲ್ಲಿ ಈ ತಾಲ್ಲೂಕಿನಲ್ಲಿ 5 ವರ್ಷಗಳ ಕಾಲ ದೈಹಿಕ ಪರೀವೀಕ್ಷಣ ಅಧಿಕಾರಿಯಾಗಿ ಕೆಜಿಎಫ್ ತಾಲ್ಲೂಕಿಗೆ ವರ್ಗಾವಣೆಯಾದ ನಾರಾಯಣಸ್ವಾಮಿಗೆ ಸಮುದಾಯ ವತಿಯಿಂದ ಅತ್ಮೀಯ ಬೀಳ್ಕೊಡಿಗೆಯನ್ನು ಮಾಡಿ ಮಾತನಾಡಿದ ರೇಣುಕಮ್ಮ ದೈಹಿಕ ಶಿಕ್ಷಕರಾಗಿ ಇರುವಷ್ಟು ಕಾಲ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ […]

ಕೋಲಾರ., ಆ. 3 : ಕೋಲಾರ ತಾಲ್ಲೂಕು, ನರಸಾಪುರ ಸಮೀಪದ ನಾಗಲಾಪುರ ಗ್ರಾಮದ ಶ್ರೀಮದ್ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಶ್ರೀಗಳಿಂದ 12ನೇ ವರ್ಷದ ಶ್ರಾವಣ ಶಿವಸಂಜೆ ಶಿವಾನುಭವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಶ್ರೀಮದ್ ರಂಬಾಪುರಿ ಪೀಠದ ನಾಗಲಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ ಸಾನ್ನಿದ್ಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಲೋಕಕಲ್ಯಾಣಾರ್ಥವಾಗಿ ಕ್ರೋಧಿನಾಮ ಸಂವತ್ಸರ ಶ್ರಾವಣ ಮಾಸದ ಮನೆ ಮನೆಗಳಲ್ಲಿ ಶ್ರಾವಣ ಶಿವಸಂಜೆ, ಮಹಾ ಶಿವಪೂಜೆ ಶಿವಾನುಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಶ್ರಾವಣ ಮಾಸದ ಪ್ರಥಮ […]

ಕೋಲಾರ,ಆ.02: ಕೋಲಾರ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ವತಿಯಿಂದ ನಗರದ ಶತಶೃಂಗ ಸಮುದಾಯ ಭವನದಲ್ಲಿ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ನಿಖಿಲ್ ರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ನಿಖಿಲ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಅನುಭವ ಹೊಂದಿರುವ ನೀವು ನಿಮ್ಮ ಅನುಭವ ವ್ಯರ್ಥವಾಗದೆ ಇಲಾಖೆಗೆ ಉಪಯೋಗವಾಗಬೇಕು. ನೀವು ನಿಮ್ಮ ಬಿಡುವಿನ ವೇಳೆಯಲ್ಲಿ ಇಲಾಖೆಗೆ ಬೇಟಿ ನೀಡಿ ಈಗಿನ ಸಿಬ್ಬಂದಿಗೆ ತನಿಖೆ, ಚಾರ್ಜ್ಶೀಟ್ ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಬೇಕೆಂದು ತಿಳಿಸಿದರು.ನಿಮಗೆ ಏನೇ ಸಮಸ್ಯೆಗಳಿದ್ದರೂ […]

ಕೋಲಾರ,ಆ.02: ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಹಾಯಕ ನಿರ್ದೇಶಕರಾಗಿ ನೂತನವಾಗಿ ಆಗಮಿಸಿರುವ ವಿಜಯಲಕ್ಷ್ಮಿರನ್ನು ಕೋಲಾರ ಜಿಲ್ಲೆಯ ಕಲಾವಿದರ ಒಕ್ಕೂಟದಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.ನೂತನವಾಗಿ ಅಧಿಕಾರ ವಹಿಸಿಕೊಂಡ ವಿಜಯಲಕ್ಷ್ಮಿರನ್ನು ಕಲಾವಿದರು ಸನ್ಮಾನಿಸಿ, ಶುಭ ಹಾರೈಸುವುದರ ಜೊತೆಗೆ ಕಲಾವಿದರ ಸಮಸ್ಯೆಗಳು ಹಾಗೂ ಅಗತ್ಯ ಕ್ರಮಗಳ ಬಗ್ಗೆ ಗಮನಕ್ಕೆ ತಂದರು.ಕಲಾವಿದರ ಪರವಾಗಿ ಮಾತನಾಡಿದ ಮತ್ತಿಕುಂಟೆ ಕೃಷ್ಣ, ಇಲಾಖೆಯಲ್ಲಿ ಕೆಲವು ಬದಲಾವಣೆಗಳು ಹಾಗೂ ರಂಗಮAದಿರದಲ್ಲಿ ಸೌಂಡ್ ಬದಲಾವಣೆ ಮಾಡಬೇಕು, ಸೌಂಡ್ ಆಪರೇಟರ್ಗಳನ್ನು ನೇಮಕ ಮಾಡಬೇಕು, ಅಧಿಕಾರಿಗಳು ತಾಯಿಯ ಮನಸ್ಸನ್ನು ಹೊಂದಿರಬೇಕು ಎಲ್ಲಾ ಕಲಾವಿದರನ್ನು ಮಕ್ಕಳಂತೆ […]

ಕೋಲಾರ : ಆರೋಗ್ಯವಂತ ಶಿಶು ಸಧೃಡ ಪ್ರಜೆಯಾಗಿ ಸಮಾಜದಲ್ಲಿ ಬದುಕಬೇಕಾದರೆ ಇದಕ್ಕೆ ಒಂದೇ ಮದ್ದು ತಾಯಿ ಹಾಲು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆಯೋಜಿಸಿದ್ದ, ವಿಶ್ವಸ್ತನ್ಯಪಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಯಿ ಹಾಲು ಮಕ್ಕಳಿಗೆ ಸಂಜೀವಿನಿ, ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ತಾಯಿ ಹಾಲು ಉತ್ತಮವಾದ ಆಹಾರ ಎಂದರು. ಹಿಂದಿನ ಕಾಲದಲ್ಲಿ ಈ ಹಾಲುಣಿಸುವ ಬಗ್ಗೆ ಅರಿವು ನೀಡುವುದು ತಾಯಂದಿರಿಂದ ಮಕ್ಕಳಿಗೆ ಮುಂದುವರಿಯುತ್ತಿತ್ತು. ಆದರೆ […]

ಶ್ರೀನಿವಾಸಪುರ ತಾಲ್ಲೂಕು ಕಛೇರಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷ ರವರು ಭೇಟಿ ನೀಡಿ ಸಿಬ್ಬಂದಿಯ ಕಾರ್ಯವೈಖರಿ ಹಾಗೂ ಅಭಿಲೇಖಾಲಯ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದ್ದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಎನ್. ಸುದೀಂದ್ರ, ಪುರಸಭೆಯ ಮುಖ್ಯಾಧಿಕಾರಿ ವೈ.ಎನ್. ಸತ್ಯನಾರಾಯಣ, ಕಸಬಾ ರಾಜಸ್ವ ನಿರೀಕ್ಷಕರು ಮುನಿರೆಡ್ಡಿ ಹಾಗೂ ಸಂಬಂಧಪಟ್ಟ ಸಿಬ್ಬಂದಿ ಉಪಸ್ಥಿತರಿದ್ದರು.

ಶ್ರೀನಿವಾಸಪುರ : ಪಟ್ಟಣದ ಪುರಸಭೆ ಕಚೇರಿಯ ಸಭಾಂಗಣದಲ್ಲಿ ವಯೋನಿವೃತ್ತಿ ಹೊಂದಿದ ಡಿ ದರ್ಜೆ ನೌಕರರಾದ ಶಾಂತಮ್ಮ ಮತ್ತು ನೀರು ಸರಬರಾಜು ಸಹಾಯಕರಾದ ಕೃಷ್ಣಪ್ಪ ರವರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಪುರಸಬಾ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಪರಿಸರ ಅಭಿಯಂತರರಾದ ಕೆ.ಎಸ್.ಲಕ್ಷ್ಮೀಶ್, ಕಂದಾಯ ಅಧಿಕಾರಿ ವಿ.ನಾಗರಾಜು,ಕಂದಾಯ ನಿರೀಕ್ಷಕ ಎನ್.ಶಂಕರ್ ಹಿರಿಯ ಆರೋಗ್ಯ ನಿರೀಕ್ಷಕರಾದ ಕೆ.ಜಿ.ರಮೇಶ್, ಪುರಸಭಾ ಸದಸ್ಯರಾದ ಎಂ.ಬಿ.ಸರ್ದಾರ್ ಹಾಗೂ ಕಚೇರಿ ಸಿಬ್ಬಂಧಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶ್ರೀನಿವಾಸಪುರ : ಭಗವಾನ್ ಬುದ್ದ ಶಾಲೆಯಲ್ಲಿ ವಯೋನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕ ಅರ್.ವಿ ಅಶ್ವತ್ ರೆಡ್ಡಿಗೆ ನಿವೃತ್ತಿ ಬೀಳ್ಕೋಡುಗೆ ಕಾರ್ಯಕ್ರಮ ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್ ಕ್ರಾಸ್ ನಲ್ಲಿರುವ ಭಗವಾನ್ ಬುದ್ದ ಶಾಲೆಯಲ್ಲಿ 33 ವರ್ಷ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಅರ್.ವಿ ಅಶ್ವತ್ ರೆಡ್ಡಿ ಬೀಳ್ಕೊಡಿಗೆ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಹಳೆಯ ವಿದ್ಯಾರ್ಥಿಗಳು ಹಾಗೂ ಹಲವು ಶಿಕ್ಷಕರು ಸನ್ಮಾನ ವನ್ನು ಹಮ್ಮಿಕೊಂಡಿದ್ದರು ಈ ವೇಳೆಯಲ್ಲಿ ಮಾತಾನಾಡಿದ ಅರ್. ವಿ ಅಶ್ವತ್ ರೆಡ್ಡಿಯವರು ಮಕ್ಕಳಿಗೆ ಚೆನ್ನಾಗಿ […]