
ಕೋಲಾರ,ಆ.12: ಬೆಂಗಳೂರಿನ ನಾಗರಬಾವಿಯಲ್ಲಿ ಜಪಾನ್ ಕರಾಟೆ ಶೂಟೋಕಾನ್ ಅಕಾಡೆಮಿ ಇವರ ನೇತೃತ್ವದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಗರದ ಸೆಂಟ್ ಆನ್ಸ್ ಶಾಲೆಯ 3ನೇ ತಗರತಿ ವಿದ್ಯಾರ್ಥಿ ಸಿಯಾನ್ ಜಾನ್ ಕರಾಟೆ ಸ್ಪರ್ಧೆಯ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಇದೇ ತಿಂಗಳು ಬಾಂಬೆಯಲ್ಲಿ ನಡೆಯಲಿರುವ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಕರಾಟೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ 2ನೇ ಡಾನ್ ಬ್ಲಾಕ್ ಬೆಲ್ಟ್ ಸಹ ಪಡೆದುಕೊಂಡಿದ್ದಾರೆ.ಬ್ರೂಸ್ಲಿ ಕರಾಟೆ ಶಾಲೆಯ ಸಂಸ್ಥಾಪಕ ಹಾಗೂ ಚಿತ್ರನಟ ಕರಾಟೆ ಶ್ರೀನಿವಾಸರ ಬಳಿ ಕರಾಟೆ […]

ಶ್ರೀನಿವಾಸಪುರ : ಪಟ್ಟಣದ ಬಾಲಕೀಯರ ಪಿಯುಸಿ ಕಾಲೇಜು ಆವಣರದಿಂದ ಸೋಮವಾರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶ್ರೀನಿವಾಸಪುರ ಘಟಕದವತಿಯಿಂದ ರಾಜ್ಯ ಸಂಘದ ನಿರ್ಣಯದಂತೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಿ ಅಂಡ್ ಆರ್ ತಿದ್ದುಪಡಿಗಾಗಿ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಡಶಾಲಾ ಶಿಕ್ಷಕರಾಗಿ ಬಡ್ತಿ ನೀಡಲು, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ನೀಡಲು ಒತ್ತಾಯಿಸಿ ಫ್ರೀಡಂ ಪಾರ್ಕ್ ಚಲೋ ಸಭೆಗೆ ಹೊರಡುತ್ತಿರುವುದು.ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಯ್ಯಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಜಿಲ್ಲಾ ಖಜಾಂಚಿ […]

ಶ್ರೀನಿವಾಸಪುರ : ತಾಲೂಕಿನ ಯರ್ರಂವಾಪಲ್ಲಿ ಗ್ರಾಮದಲ್ಲಿ ಜೆಜೆಎಂ ಕಾಮಾಗಾರಿ ಮುಗಿದರೋ ಸಹ ಕಾಮಗಾರಿಗಾಗಿ ತೆಗೆದ ಕಾಲುವೆಗಳು ಸರಿಯಾಗಿ ಮುಚ್ಚಿಲ್ಲ ಇದರಿಂದ ಮಕ್ಕಳು , ಮುದಕರು, ವಾಹನ ಸವಾರರಿಗೆ ಓಡಾಡಲು ತೊಂದರೆ ಯಾಗುತ್ತಿದೆ ಎಂದು ಗ್ರಾ.ಪಂ.ಸದಸ್ಯ ವೈ.ಆರ್.ಶ್ರೀನಿವಾಸರೆಡ್ಡಿ ಆರೋಪಿಸಿದ್ದಾರೆ.ಕಾಮಗಾರಿ ಮುಗಿದು ನಾಲ್ಕೈದು ತಿಂಗಳು ಆದರೂ ಸಹ ಕಾಲುವೆಗಳನ್ನು ಗುತ್ತಿಗೆದಾರರು ಮುಚ್ಚದೆ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ ತಕ್ಷಣ ಇದಕ್ಕೆ ಸಂಬಂದಿಸಿದ ಅಧಿಕಾರಿಗಳು ಗುತ್ತಿಗೆದಾರರಿಗೆ ಕಾಲುವೆಗಳನ್ನು ಸರಿಯಾಗಿ ಮುಚ್ಚಲು ಸೂಚನೆ ನೀಡುವಂತ ಆಗ್ರಹಿಸಿದರು.

ಶ್ರೀನಿವಾಸಪುರ 4 : ಪಟ್ಟಣವು ಸೇರಿದಂತೆ ತಾಲ್ಲೂಕಿನಾದ್ಯಂತ ನಾಗರಪಂಚಮಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿ ಮಳೆ, ಬೆಳೆ, ಜೀವನ ಸಂವೃದ್ದಿಗೊಳಿಸುವಂತೆ ನಾಗದೇವರಿಗೆ ಪೂಜೆಯನ್ನು ಸಲ್ಲಿಸಿದರು.ಪಟ್ಟಣದ ಪೊಲೀಸ್ ವಸತಿ ಗೃಹಗಳ ಅವರಣದಲ್ಲಿ ಶುಕ್ರವಾರ ಪ್ರತಿ ವರ್ಷದಂತೆ ಈ ವರ್ಷವು ಸಹ ಪಟ್ಟಣದ ಪೊಲೀಸ್ ವಸತಿ ಗೃಹಗಳ ಅವರಣದಲ್ಲಿ ನಾಗದೇವತೆ , ವಿದ್ಯಾಗಣಪತಿ ದೇವರುಗಳಿಗೆ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿತ್ತು. ನಾಡಿಗೆ ದೊಡ್ಡ ಹಬ್ಬ ಎಂದು ಖ್ಯಾತಿಪಡೆದ ನಾಗರಪಂಚಮಿ ಹಬ್ಬವನ್ನು ಸಡಗರದಿಂದ ಆಚರಿಸಿ ಶ್ರಾವಣ ಮಾಸದ ಮೊದಲ ಹಬ್ಬವಾದ […]

ಶ್ರೀನಿವಾಸಪುರ : ಎಲ್ಐಸಿ ಕಂಪನಿಯು ಸಾರ್ವಜನಿಕರ ರಕ್ಷಣೆಗೆ ನಿಂತಿದೆ. ಖಾಸಗಿ ಕಂಪನಿಗಳಿಂದ ಸಾರ್ವಜನಿಕರು ಮೋಸ ಹೋಗುತ್ತಿದ್ದು ಅದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಶ್ರೀನಿವಾಸಪುರ ಶಾಖೆ ವ್ಯವಸ್ಥಾಪಕ ಎಸ್.ವಿ.ಪ್ರಸಾದ್ ಹೇಳಿದರು.ಪಟ್ಟಣದ ಶ್ರೀನಿವಾಸಪುರ ಎಲ್ಐಸಿ ಉಪಶಾಖೆಯಲ್ಲಿ ಶುಕ್ರವಾರ ತಾಲೂಕಿನ ಪ್ರತಿನಿದಿಗಳ ಸಭೆಗೆ ಚಾಲನೆ ನೀಡಿ ಮಾತನಾಡಿದರು.ದೇಶದಲ್ಲಿ ಅತಿ ದೊಡ್ಡ ಇನ್ಸೋರೆನ್ಸ್ ಕಂಪನಿ ಇದಾಗಿದ್ದು, ಮಾರುಕಟ್ಟೆಯಲ್ಲಿ ಹತ್ತು ಹಲವಾರು ಕಂಪನಿಗಳು ಇದ್ದು ಅದರಲ್ಲಿ ಎಲ್ಐಸಿ ಕಂಪನಿಯ 64.02% ಕೋಟಿ ಹೂಡಿಕೆ ಇದೆ. ಉಳಿದವು ಬೇರೆ ಕಂಪನಿಗಳಿದ್ದು, ಈ ಒಂದು […]

ಶ್ರೀನಿವಾಸಪುರ : ಮಾನಸಿಕ ಹಾಗು ದೈಹಿಕವಾಗಿ ಸದೃಡವಾಗಲು ಸಾದ್ಯ ಇದಲ್ಲದೆ ಪ್ರತಿ ದಿನ ಭಜನೆ, ದೇವರಸ್ಮರಣೆ, ದ್ಯಾನ, ಮಾಡುವುದರಿಂದ ಆರೋಗ್ಯ ಜೀವನವನ್ನು ನಡೆಸಬಹುದಾಗಿದೆ ಎಂದು ಕೈವಾರ ಕ್ಷೇತ್ರ ಮಠದ ಧರ್ಮಾಧಿಕಾರಿ ಡಾ|| ಎಂ.ಎರ್. ಜಯರಾಮ್ ನುಡಿದರು.ಪಟ್ಟಣದ ಕಟ್ಟೆಕೆಳಗಿನ ಪಾಳ್ಯದಲ್ಲಿ ಶ್ರೀ ನೀಳಾ ಮತ್ತು ಭೂನೀಳಾ ಸಮೇತ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಯ ನೂತನ ಶಿಲಾ ಬಿಂಬ ಮತ್ತು ಅಭಯಾಂಜನೇಯಸ್ವಾಮಿ ಮತ್ತು ಮಹಾಗಣಪತಿ ಮತ್ತು ಗರುಡ , ಜಯವಿಜಯ ದ್ವಾರಪಾಲಕ ನೂತನ ಶಿಲಾ ಬಿಂಬಗಳ ಪ್ರತಿಷ್ಠಾಪನೆ ಮತ್ತು […]

ಶ್ರೀನಿವಾಸಪುರ : ತಾಲ್ಲೂಕಿನ ತೆರ್ನಹಳ್ಳಿ ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕ ಟಿ.ಎ.ನಾರಾಯಣಸ್ವಾಮಿ , ಯಶೋದಮ್ಮ ದಂಪತಿಯ ಪುತ್ರನಾದ ಟಿ.ಎನ್.ಜಯಶಂಕರ್ ರವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜನೀಯರಿಂಗ್ ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಾಕ ಡಾ.ಪಿ.ಎಸ್.ನಾಗರಾಜ್ ರವರ ಮಾರ್ಗದರ್ಶನದಲ್ಲಿ ಮಂಡಿಸಿದ “ ಎಕ್ಸಪರಿಮೆಂಟಲ್ ಇನ್ವೆಸ್ಟಿಗೇಷನ್ಸ್ ಆನ್ ಫ್ಯಬರ್ ರೀಇನ್ಫೋಸ್ರ್ಟ್ ಜಿಯೋ ಪಾಲಿಮಾರ್ ಕಾಂಕ್ರಿಟ್ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್ಡಿ ಪದವಿ ಪ್ರಧಾನ ಮಾಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಶ್ರೀನಿವಾಸಪುರ : ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳ ಬಗ್ಗೆ ಇತ್ತೀಚಿಗೆ ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ 57 ಕಳ್ಳತನವಾಗಿದ್ದ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚಲಾಗಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ದ್ವಿಚಕ್ರ ವಾಹನ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಬಿ.ನಿಖಿಲ್ ಮಾಹಿತಿ ನೀಡಿದರು.ಪಟ್ಟಣದ ಪೊಲೀಸ್ ಠಾಣೆಗೆ ಗುರುವಾರ ಬೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ , ಸುದ್ದಿಗಾರರೊಂದಿಗೆ ಮಾತನಾಡಿದ ಅವರುಪಬ್ಲಿಕ್ ಸೇಫ್ಟಿ ಆಕ್ಟ್ ಪ್ರಕಾರ 50 ಜನರಿಕ್ಕಿಂತ ಹೆಚ್ಚು ಸೇರುವ ಅಂಗಡಿಗಳಲ್ಲಿ ಮಾಲೀಕರು ಸಿಸಿ ಕ್ಯಾಮಾರ ಖಂಡಿತ ಅಳವಡಿಸಬೇಕಾಗಿದೆ. […]

ಕೋಲಾರ,ಆ.07: ನಗರದಲ್ಲಿ ಮಂಗಳವಾರ ಸಂಜೆ ಸುರಿದ ಬಾರಿ ಮಳೆಗೆ ಕೋಲಾರ ಚಿಕ್ಕಬಳ್ಳಾಪುರ ಮುಖ್ಯರಸ್ತೆಯ ಅರಹಳ್ಳಿ ಗೇಟ್ ರೈಲ್ವೆ ಬ್ರಿಡ್ಜ್ ಬಳಿ ಮಳೆಯ ನೀರು ಹೊರಗಡೆ ಹೋಗದೇ ನಿಂತಿದ್ದರಿಂದಾಗಿ ಅ ಭಾಗದಲ್ಲಿ ಸಂಚರಿಸುವ ಸಾರ್ವಜನಿಕವರಿಗೆ ತೀವ್ರ ತೊಂದರೆ ಅನುಭವಿಸಬೇಕಾಯಿತು.ಕೂಡಲೇ ಶಾಸಕ ಕೊತ್ತೂರು ಮಂಜುನಾಥ್ ನಗರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಿ ರೈಲ್ವೆ ಬ್ರಿಡ್ಜ್ ಬಳಿಯ ಮಳೆ ನೀರಿನ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹಾರ ಕಂಡುಕೊಳ್ಳುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು ಬುಧವಾರ ಬೆಳಗ್ಗೆ ಅಧಿಕಾರಿಗಳು ಪೈಪ್ ಗಳಿಗೆ ಅಡ್ಡಲಾಗಿದ್ದ ಕಸಕಡ್ಡಿ, ಪ್ಲಾಸ್ಟಿಕ್ […]