
ಮುಳಬಾಗಿಲು ಸೆ-13, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡಿ ಜನಸಾಮಾನ್ಯರ ಪ್ರಾಣ ರಕ್ಷಣೆ ಮಾಡಬೇಕೆಂದು ರೈತ ಸಂಘದಿಂದ ಪುರಸಭೆ ಆಯುಕ್ತರಾದ ಶ್ರೀಧರ್ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.ಪ್ರತಿ ವರ್ಷ ಬೀದಿನಾಯಿಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಸಾಮ್ರಾಜ್ಯವನ್ನು ಹೆಚ್ಚಳ ಮಾಡಿಕೊಂಡು ಪ್ರತಿ ದಿನ ಒಂದಲ್ಲಾ ಒಂದು ರೀತಿಯಲ್ಲಿ ಮಕ್ಕಳು, ಹಿರಿಯರು, ಮತ್ತು ಮಹಿಳೆಯರ ಮೇಲೆ ದಾಳಿ ಮಾಡುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ನೀಡುವಲ್ಲಿ ತಾಲ್ಲೂಕು […]

ಶ್ರೀನಿವಾಸಪುರ:ಪಟ್ಟಣದ ಜಿ.ಜಿ.ವೇಣು ಗ್ರೂಪ್ಸ್ ಇನ್ಸಿಟ್ಯೂಶನ್ ಶಾಲಾವರಣದಲ್ಲಿ ಇದೇ ತಿಂಗಳು 14 ರಂದು ಶನಿವಾರ ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ರ ವರೆಗೆ ಸ್ಮೈಲ್ಸ್ ಇನ್ಸಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟೆರೊಲೊಜಿ ಮತ್ತಕರೆ ಇವರ ಸಹಯೋಗದೊಂದಿಗೆ ಪೈಲ್ಸ್( ಮೊಳೆರೋಗ) ಫಿಷಲ್, ಫಿಸ್ತುಲಾ ಮೂಲ ವ್ಯಾಧಿಗೆ ಸಂಬಂದಿಸಿದ ಖಾಯಿಲೆಗಳಿಗಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿ ವೈದ್ಯರಾದ ಡಾ|| ಸಿ.ಎಂ.ಪರಮೇಶ್ವರ್ ರವರ ನೇತೃತ್ವದಲ್ಲಿ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ.ಆದ್ದರಿಂದ ಈ ಕ್ಷೇತ್ರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೋಂಡು […]

ಶ್ರೀನಿವಾಸಪುರ ಡೈರಿಗಳಿಗೆ ಉತ್ಪಾದಕರು ಗುಣಮಟ್ಟ ಹಾಲು ಹಾಕಿದಾಗ ಮಾತ್ರ ನಿಮ್ಮ ಹಾಲಿಗೆ ಪ್ರೋತ್ಸಾಹಧನ ಮತ್ತು ಬೋನಸ್ ಜೊತೆಗೆ ಒಕ್ಕೂಟದಿಂದ ಬರುವ ಎಲ್ಲಾ ಸೌಲಬ್ಯಗಳು ನಿಮ್ಮ ಸಂಘಗಳಿಗೆ ಶೀಘ್ರವಾಗಿ ದೊರೆಯುತ್ತವೆ, ಗುಣಮಟ್ಟ ಹಾಲು ಹಾಕಲು ಪ್ರತಿಯೊಬ್ಬ ಉತ್ಪಾದಕರು ದೃಢಮನಸ್ಸು ಮಾಡಬೇಕೆಂದು ಕೆ.ಎಂ.ಎಪ್ ಉಪ ವ್ಯವಸ್ಥಾಪಕ ಮುನಿರಾಜು ತಿಳಿಸಿದರು.ತಾಲ್ಲೂಕಿನ ಆರಮಾಕಲಹಳ್ಳಿ ಚೌಡನಹಳ್ಳಿ, ಶೆಟ್ಟಿಹಳ್ಳಿ ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ 2023-24 ನೇ ಸಾಲಿನ ವಾರ್ಷಿಕ ಸಾಮಾನ್ಯಸಭೆಗಳಲ್ಲಿ ಬಾಗವಹಿಸಿ ಮಾತನಾಡಿದ ಮುನಿರಾಜು ಆರಮಾಕಲಹಳ್ಳಿಯಲ್ಲಿ ಗ್ರಾಮದಲ್ಲಿ ಹಾಲಿನ ಗುಣಮಟ್ಟ ಚೆನ್ನಾಗಿದೆ ಪಣಸ […]

ಶ್ರೀನಿವಾಸಪುರ: ಮೊಟ್ಟ ಮೊದಲಬಾರಿಗೆ ಪುರಸಭಾ ವಾಣಿಜ್ಯ ಮಳಿಗೆಗಳ ಸಂಕೀರ್ಣದಲ್ಲಿ ಹಿಂದೂ ಮುಸ್ಲೀಂ ಬಾಂದವ ವ್ಯಾಪಾರಿಗಳು ಗಣೇಶ ಮೂರ್ತಿಯನ್ನು ಪೂಜಿಸಿ ವಿಜೃಂಭಣೆಯಿಂದ ಮೆರವಣಿಗೆ ಮಾಡಿ ಜಲವಿಸರ್ಜನೆ ಮಾಡಿದರು.ಇದೇ ಪ್ರಥಮಬಾರಿಗೆ ಪುರಸಭಾ ಮಾರುಕಟ್ಟೆ ವಾಣಿಜ್ಯ ಮಳಿಗೆಗಳ ಸಂಕೀರ್ಣ ವರ್ತಕರ ಸೇವಾ ಟ್ರಸ್ಟ್ ವತಿಯಿಂದ ಗೌರಿ ಗಣೇಶ ಹಬ್ಬದಪ್ರಯುಕ್ತ ವಿನಾಯಕನ ಮೂರ್ತಿಯನ್ನು ಆವರಣದಲ್ಲಿ 5 ದಿನಗಳು ಪೂಜಿಸಿ ಎಲ್ಲಾ ವರ್ತಕರು ಮತ್ತು ಮುಸ್ಲೀಂ ಬಾಂದವ ವ್ಯಾಪಾರಸ್ಥರು ಶಾಂತಿ ಸೌಹಾರ್ದತೆಯಿಂದ ಒಗ್ಗಟ್ಟಿನಿಂದ ಅಂಗಡಿಗಳನ್ನು ಮುಚ್ಚುವುದರಮೂಲಕ ಡೋಳ್ಳು ಕುಣಿತಗಳೊಂದಿಗೆ ಟ್ಯಾಕ್ಟರ್ ಮೂಲಕ ಗಣಪತಿಯನ್ನು ವಿಶೇಷ […]

ಶ್ರೀನಿವಾಸಪುರ ತಾಲೂಕಿನ ಆರಿಕುಂಟೆ ಗ್ರಾಮದ ಲಕ್ಷ್ಮಣರೆಡ್ಡಿ ಪತ್ನಿ ಆರ್.ಅನುಷಾ ರವರಿಗೆ ಬೆಂಗಳೂರಿನ ವಿಶ್ವವಿದ್ಯಾನಿಯದಲ್ಲಿನ ಕನ್ನಡ ಅಧ್ಯಾಯನ ಕೇಂದ್ರದ ಪ್ರಾದ್ಯಾಪಕರಾದ ಡಾ. ಡಿ. ಡೋಮಿನಿಕ್ ರವರ ಮಾರ್ಗದರ್ಶನದಲ್ಲಿ ದಲಿತ ಆತ್ಮ ಕಥನಗಳಲ್ಲಿ ನಿರೂಪಿತವಾಗಿರುವ ಪ್ರಜ್ಞೆಯ ಸ್ವರೂಪ ಎಂಬ ಸಂಶೋಧನಾ ಮಹಾಪ್ರಬಂದಕ್ಕೆ ಪಿಎಚ್‍ಡಿ ಪದವಿ ಪ್ರದಾನ ಮಾಡಿದೆ.ಪೋಟೋ ಆರ್.ಅನುಷಾ

ಶ್ರೀನಿವಾಸಪುರ : ಮೊದಲನೇ ಬಾರಿಗೆ ಕೋಲಾರ ಜಿಲ್ಲೆಗೆ ಬೇಟಿ ನೀಡಿದ್ದೇನೆ. ಜಿಲ್ಲಾಧಿಕಾರಿಗೆ ಮಾಹಿತಿ ನೀಡಿ ಅಧಿಕಾರಿಗಳು ಕರೆಸಿಕೊಳ್ಳುವ ಪರಿಸ್ಥಿತಿ. ಎಲ್ಲರಿಗೂ ಮಾಹಿತಿ ಹೋಗಿದೆ ಆದರೆ ಯಾರು ಬಂದಿಲ್ಲ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ|| ನಾಗಲಕ್ಷ್ಮಿ ಚೌದರಿ ಬೇಸರ ವ್ಯಕ್ತಪಡಿಸಿದರು. ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಹಕ್ಕಿ ಪಿಕ್ಕಿ ಕಾಲೋನಿಗೆ ಬುಧವಾರ ಬೇಟಿ ನೀಡಿ ಕುಂದುಕೂರತೆಗಳ ಬಗ್ಗೆ ಸಾರ್ವಜನಿಕರೊಂದಿಗೆ ಮಾಹಿತಿ ಪಡೆದು ಚರ್ಚಿಸಿ ಮಾತನಾಡಿದರು.ಸ್ಥಳೀಯ ಅಧಿಕಾರಿಗಳು ಗ್ರಾಮಕ್ಕೆ ಬೇಟಿ ನೀಡಿ ಕಾರ್ಯಕ್ರಮದ […]

ಶ್ರೀನಿವಾಸಪುರ ; ಪಟ್ಟಣದಲ್ಲಿ ಬೀದಿ ನಾಯಿಗಳ ಕಾಟ ಜೋರಾಗಿದ್ದು, ಕೆಲ ಕಡೆ ಜನರು ಸಂಚರಿಸುವುದೇ ಕಷ್ಟವಾಗಿದೆ ಪಟ್ಟಣದಲ್ಲಿನ ಬಹುತೇಕ ರಸ್ತೆಗಳಲ್ಲಿ ಬೀದಿ ನಾಯಿಗಳು ಹೆಚ್ಚಿವೆ. ಹೆಜ್ಜೆ ಹೆಜ್ಜೆಗೂ ಗುರ್ ಎನ್ನುವ ನಾಯಿಗಳು ಸಹಜವಾಗಿಯೇ ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸುತ್ತಿವೆ. ಬೀದಿ ನಾಯಿಗಳ ಹಾವಳಿಯಿಂದ ಜನರು ರೋಸಿ ಹೋಗಿದ್ದಾರೆ. ಪಾದಚಾರಿಗಳು ಮತ್ತು ದ್ವಿ ಚಕ್ರ ವಾಹನಗಳ ಸವಾರರ ಸಂಚಾರಕ್ಕೆ ಸಂಚಕಾರ ಎದುರಾಗಿದೆ. ಬಡಾವಣೆಗಳಲ್ಲಿತಿಂಡಿ, ತಿನಿಸುಗಳನ್ನು ಹಿಡಿದು ಸಾಗುವ ಪುಟ್ಟ ಮಕ್ಕಳ ಮೈಮೇಲೆ ಬೀದಿ ನಾಯಿಗಳು ದಾಳಿ ಇಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ […]

ಕೋಲಾರ,ಸೆ.10: ಕಳೆದ ಆಗಸ್ಟ್-2024ರಲ್ಲಿ ನಡೆದ ಕಂಪ್ಯೂಟರ್ ಪರೀಕ್ಷೆಯಲ್ಲಿ ನಗರದ ರಾಜರಾಜೇಶ್ವರಿ ವಾಣಿಜ್ಯ ಮತ್ತು ಕಂಪ್ಯೂಟರ್ವಿದ್ಯಾಸಂಸ್ಥೆಗೆ ಕಂಪ್ಯೂಟರ್ ಪರೀಕ್ಷೆಯಲ್ಲಿ ಶೇಕಡ 100ರಷ್ಟು ಫಲಿತಾಂಶ ಲಭಿಸಿದೆ.20 ಅತ್ಯುತ್ತಮ ಶ್ರೇಣಿ, 05 ಪ್ರಥಮ ಶ್ರೇಣಿ, 06 ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಶಾಲೆಗೆ ಉತ್ತಮ ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಮತ್ತು ಬೋಧಕ ವೃಂದದವರು ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲ ಟಿ.ಎಸ್.ರಾಜಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋಲಾರ,ಸೆ.10: ನಗರದ ಸಹ್ಯಾದ್ರಿ ಪದವಿ ಕಾಲೇಜು ವತಿಯಿಂದ 2021-24ನೇ ಸಾಲಿನ ಪದವಿಯನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸರ್ಕಾರಿ ಮಹಿಳಾ ಕಾಲೇಜು ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕ ಪ್ರಕಾಶ್ ಎನ್, ವಿದ್ಯಾರ್ಥಿಗಳು ತಾವು ಇಲ್ಲಿಂದ ನಿರ್ಗಮಿಸುತ್ತಿದ್ದೀರ ಎಂದರೆ ನಿಮ್ಮ ಜೀವನವನ್ನು ನೀವೇ ರೂಪಿಸಿಕೊಳ್ಳುತ್ತಿದ್ದೀರ ಹಾಗೂ ಜವಾಬ್ದಾರಿಗಳು ಹೆಚ್ಚಾಗುತ್ತದೆ ಎಂದು ತಿಳಿಸಿದರು. ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ಎ.ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ಮುಂದಿನ ಜೀವನವನ್ನು ಹೇಗೆ ಛಲದಿಂದ ಬದುಕಬೇಕು. ಛಲ ಇದ್ದರೆ ಗುರಿ […]