ಶ್ರೀನಿವಾಸಪುರ : ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಬುಧವಾರ ತ್ಯಾಗರಾಜ ಬಡವಾಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬೈರೇಗೌಡರವರ ವರ್ಗಾವಣೆ ರದ್ದುಪಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ನಡೆಸಿ ಮಾತನಾಡಿದರು.ಪ್ರಸ್ತುತ ಈ ಶಾಲೆಯಲ್ಲಿ ಎಲ್ ಕೆ ಜಿ ಯಿಂದ 8 ನೇತರಗತಿಯವರಿಗೂ 520 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಈ ಶಾಲೆಗೆ ಮುಖ್ಯ ಶಿಕ್ಷಕ ಎಂ.ಬೈರೇಗೌಡರು ಹಗಲಿರಳು ಶ್ರಮವಹಿಸಿ ಮಾದರಿ ಶಾಲೆಯನ್ನಾಗಿ ರೂಪಿಸಿದ್ದಾರೆ. ಈ ಶಾಲೆಗೆ ರಾಜ್ಯ ಮಟ್ಟದ ಸ್ವಾಭಿಮಾನಿ ಸಾರ್ವಜನಿಕ ಶಾಲಾ ಪ್ರಶಸ್ತಿ ಹಾಗೂ ಸ್ವಚ್ಛ […]
ಶ್ರೀನಿವಾಸಪುರ : ಸರ್ಕಾರಿ ಸೇವೆ ಸೇರಿದಾಗ ವರ್ಗಾವಣೆ ಹಾಗು ನಿವೃತ್ತಿ ಎಂಬ ಈ ಎರೆಡು ವಿಷಯಗಳು ಗ್ಯಾರಂಟಿ . ಆದರೆ ಇವೆರಡರ ನಡುವಿನ ಅವಧಿಯಲ್ಲೆ ಹೇಗೆ ಕಾರ್ಯನಿರ್ವಹಿಸಿದ್ದೇವೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ ಎಂದು ಸನ್ಮಾನವನ್ನು ಸ್ವೀಕರಿಸಿ ಪ್ರಧಾನ ನ್ಯಾಯಾಯದೀಶ ಬಿ.ಕೆ.ಮನು ಅಭಿಪ್ರಾಯಪಟ್ಟರು.ಪಟ್ಟಣದ ನ್ಯಾಯಾಯಲದ ಆವರಣಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ಮಂಗಳವಾರ ನಡೆದ ಬೀಳ್ಕೊಡಿಗೆ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಕೆಲವೊಮ್ಮೆ ನ್ಯಾಯಾಧೀಶರು ವಕೀಲರ ಮೇಲೆ ಹೆಚ್ಚಿನ ಒತ್ತಡ ಹಾಕುತ್ತಿರುತ್ತೇವೆ. ಕಕ್ಷಿದಾರರಿಗೆ ತ್ವರಿತವಾಗಿ ನ್ಯಾಯ […]
ಶ್ರೀನಿವಾಸಪುರ : ಪಟ್ಟಣದ ಪುರಸಭೆ ಮೀಸಲಾತಿ ಸೋಮವಾರ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗು ಉಪಾಧ್ಯಕ್ಷ ಎಸ್ಸಿ ಮಹಿಳಗೆ ಒಲಿದಿದೆ.ಮೀಸಲಾತಿ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಸ್ಥಳೀಯ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿದೆ. ಸಾರ್ವಜನಿಕ ಲೆಕ್ಕಚಾರಗಳ ಕುರಿತಾಗಿ ಚರ್ಚೆಗಳೂ ಆರಂಭವಾಗಿದೆ. ಕಳೆದ ಹದಿನೈದು ತಿಂಗಳಿನಿಂದ ರಾಜಕೀಯ ಚಟುವಟಿಕೆ ಇಲ್ಲದೆ ಪುರಸಭೆಯಲ್ಲಿ ಅಧಿಕಾರಿಗಳಿದೆ ಕಾರ್ಯಕಲಾಪ ಸಾಗಿತ್ತು. ಈಗ ಮೀಸಲಾತಿ ಪ್ರಕಟವಾಗಿರುವುದು ಸ್ಥಳೀಯ ಪುರಸಭೆ ಸದಸ್ಯರಲ್ಲಿ ರಾಜಕೀಯ ಗರಿಗೆದರಿದೆ.ಒಟ್ಟು 23 ಸದಸ್ಯ ಶ್ರೀನಿವಾಸಪುರ ಪುರಸಭೆಯಲ್ಲಿ ಜೆಡಿಎಸ್ 11 ಹಾಗು ಕಾಂಗ್ರೆಸ್ 12 […]
ಶ್ರೀನಿವಾಸಪುರ : ಕೋಲಾರ ಜಿಲ್ಲೆಯ ಮೂರು ನಗರಸಭೆ ಸೇರಿದಂತೆ ರಾಜ್ಯದ 61 ನಗರಸಭೆಗಳ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿಯನ್ನು ನಿಗಧಿಪಡಿಸಿ ಸರಕಾರ ಆದೇಶ ಹೊರಡಿಸಿದೆ. ಶ್ರೀನಿವಾಸಪುರ ಪುರಸಭೆ ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೂ ಹಾಗೂ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳಾ ವರ್ಗಕ್ಕೆ ಮೀಸಲಾಗಿದೆ.ಕೋಲಾರ ನಗರಸಭೆ ಅಧ್ಯಕ್ಷ ಸ್ಥಾನವು ಬಿಸಿಎಂ ಎ ವರ್ಗಕ್ಕೂ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳಾ ವರ್ಗಕ್ಕೆ ಮೀಸಲಾಗಿದೆ.ಮುಳಬಾಗಿಲು ನಗರಸಭೆ ಅಧ್ಯಕ್ಷ ಸ್ಥಾನವು ಬಿಸಿಎಂ ಎ ಮಹಿಳಾ ವರ್ಗಕ್ಕೂ ಹಾಗೂ […]
ಶ್ರೀನಿವಾಸಪುರ : ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದವತಿಯಿಂದ ಸೋಮವಾರ ವಿವಿಧ ಬೇಡಿಕೆಗಳನ್ನು ಸರ್ಕಾರವು ಈಡೇರಿಸುವ ಸಲುವಾಗಿ ಸರ್ಕಾರಕ್ಕೆ ಬಿಇಒ ಹಾಗೂ ತಹಶೀಲ್ದಾರ್ ರವರ ಮೂಲಕ ಮನವಿ ಪತ್ರ ಸಲ್ಲಿಸಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬ್ಯಯಾರೆಡ್ಡಿ ಮಾತನಾಡಿಕರ್ನಾಟಕ ರಾಜ್ಯವು ಶಾಲಾ ಶಿಕ್ಷಣದಲ್ಲಿ ಅನೇಕ ಹೊಸ ಉಪಕ್ರಮಗಳನ್ನು ತರುವುದರ ಮೂಲಕ ದೇಶದಲ್ಲಿ ಮಾದರಿಗಳನ್ನು ನಿರ್ಮಿಸಿದೆ, ಕಾಲಕಾಲಕ್ಕೆ ಆಗುವ ಶೈಕ್ಷಣಿಕ ಬದಲಾವಣೆಗಳನ್ನು ನಮ್ಮ ರಾಜ್ಯದಲ್ಲೂ ಶಾಲಾ ಶಿಕ್ಷಣ ಇಲಾಖೆ ಸಮರ್ಪಕವಾಗಿ ನಿರ್ವಹಿಸುತ್ತಾ ಬಂದಿರುವುದು ಶ್ಲಾಘನೀಯ.ಪ್ರಾಥಮಿಕ ಶಾಲೆಗಳಲ್ಲಿ 2017ರ […]
ಕೋಲಾರ: ಶೋಷಿತ ಸಮುದಾಯಗಳ ಜನನಾಯಕರಾದ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಶೋಕಸ್ ನೋಟಿಸ್ ನೀಡಿದ್ದು ರಾಜ್ಯಪಾಲರ ಈ ನಡೆಯನ್ನು ಖಂಡಿಸಿ ಕೋಲಾರ ಜಿಲ್ಲಾ ಕುರುಬರ ಸಂಘದ ವತಿಯಿಂದ ನಗರದ ಕೆಎಸ್‍ಆರ್‍ಟಸಿ ಬಸ್ ನಿಲ್ದಾಣದ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಕುರುಬರ ಸಂಘದ ಅದ್ಯಕ್ಷ ತಂಬಳ್ಳಿ ಮುನಿಯಪ್ಪ ಮಾತನಾಡಿ, ಸಿಎಂ ಸಿದ್ದರಾಮಯ್ಯ ರಾಜ್ಯದ ಅಹಿಂದ ಹಾಗೂ ದೀನದಲಿತರು, ಶೋಷಿತ ಸಮುದಾಯಗಳ ನಾಯಕರಾಗಿದ್ದಾರೆ. ರಾಜ್ಯಪಾಲರು ನೀಡಿರುವ ಶೋಕಸ್ ನೋಟಿಸ್‍ನ್ನು ವಾಪಸ್ಸು ಪಡೆಯುವಂತೆ […]
ಕೋಲಾರ:- ಎಸ್ಸೆಸ್ಸೆಲ್ಸಿ ಪರೀಕ್ಷೆ-3ಜಿಲ್ಲೆಯ 10 ಕೇಂದ್ರಗಳಲ್ಲಿ ಸುಸೂತ್ರವಾಗಿ ನಡೆದಿದೆ. ಇಂದಿನ ವಿಜ್ಞಾನ ವಿಷಯಕ್ಕೆ ಒಟ್ಟು 508 ಮಂದಿ ಗೈರಾಗಿದ್ದು, ಜಿಲ್ಲಾಧಿಕಾರಿ ಅಕ್ರಂ ಪಾಷಾ ಹಾಗೂ ಡಿಡಿಪಿಐ ಕೃಷ್ಣಮೂರ್ತಿ ನಗರದ ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಪಿಯು ಕಾಲೇಜು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪರೀಕ್ಷೆ ಸುಗಮವಾಗಿ ನಡೆದಿರುವ ಕುರಿತು ಮಾಹಿತಿ ನೀಡಿರುವ ಡಿಡಿಪಿಐ ಕೃಷ್ಣಮೂರ್ತಿ, ಜಿಲ್ಲೆಯಲ್ಲಿ 2322 ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, ಅವರಲ್ಲಿ 1814 ಮಂದಿ ಹಾಜರಾಗಿದ್ದಾರೆ ಮತ್ತು 508 ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದ್ದಾರೆ.ಕೋಲಾರದ 2 […]
ಕೋಲಾರ: ಇಂದು ಭಾನುವಾರ ರಜಾದಿನ ಇದ್ದು ಸಹ ಫೀಲ್ಡ್ ಗೆ ಇಳಿದ ಜಿಲ್ಲಾಧಿಕಾರಿ ಅಕ್ರಂ ಪಾಷಾ ರವರು ಕೋಲಾರ ನಗರದ ವಿವಿಧ ರಸ್ತೆಗಳಲ್ಲಿ ಪಾದಚಾರಿ ರಸ್ತೆ ಕಾಮಗಾರಿ, ಪುಡ್ ಕೋರ್ಟ್ ನಿರ್ಮಾಣ, ನಗರಸಭೆ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣಗಳ ಕಾಮಗಾರಿ ಹಾಗೂ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಅನಧಿಕೃತ ಅಂಗಡಿಗಳ ತೆರವುಗೊಳಿಸುವ ಕುರಿತು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀನಿವಾಸಪುರ: ದೈಹಿಕ ಶಿಕ್ಷಣ ಪರಿವೀಕ್ಷಕರಾಗಿ ಈ ಕ್ಷೇತ್ರದಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ವಿದ್ಯಾರ್ಥಿಗಳ ಹಾಗೂ ಪಾಲಕರ ಮನ ಗೆದ್ದಿದ್ದಾರೆ. ಇಂದಿನ ಶಿಕ್ಷಕ ವರ್ಗದವರಿಗೆ ಕೆ.ವಿ ನಾರಾಯಣಸ್ವಾಮಿ ಮಾದರಿಯಾಗಿದ್ದಾರೆಂದ ನಿವೃತ್ತಿ ಹೊಂದಿದ ಬಿಇಓ ರೇಣುಕಮ್ಮ ಮೆಚ್ಚುಗೆಯನ್ನು ವ್ಯಕ್ತಿಪಡಿಸಿದರು.ಪಟ್ಟಣದ ಸರ್ಕಾರಿ ನೌಕರ ಭವನದಲ್ಲಿ ಈ ತಾಲ್ಲೂಕಿನಲ್ಲಿ 5 ವರ್ಷಗಳ ಕಾಲ ದೈಹಿಕ ಪರೀವೀಕ್ಷಣ ಅಧಿಕಾರಿಯಾಗಿ ಕೆಜಿಎಫ್ ತಾಲ್ಲೂಕಿಗೆ ವರ್ಗಾವಣೆಯಾದ ನಾರಾಯಣಸ್ವಾಮಿಗೆ ಸಮುದಾಯ ವತಿಯಿಂದ ಅತ್ಮೀಯ ಬೀಳ್ಕೊಡಿಗೆಯನ್ನು ಮಾಡಿ ಮಾತನಾಡಿದ ರೇಣುಕಮ್ಮ ದೈಹಿಕ ಶಿಕ್ಷಕರಾಗಿ ಇರುವಷ್ಟು ಕಾಲ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ […]