
ಕೋಲಾರ : ಜಿಲ್ಲೆಯಾದಾದ್ಯಂತ ಸುಮಾರು 10ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಅಂದಾಜಿಸಲಾಗಿದೆ, ಒತ್ತುವರಿ ತೆರವು ಕಾರ್ಯ ಮುಂದುವರೆಸಲಾಗಿದೆ ಮತ್ತು ತೇರಹಳ್ಳಿ ಬೆಟ್ಟ ಹಾಗೂ ಅಂತರಗಂಗೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ದಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅನುದಾನ ಬಿಡುಗಡೆಯಾದರೆ ಕ್ರಮವಹಿಸುವುದಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್ ತಿಳಿಸಿದರು. ಕೋಲಾರ ನಗರ ಹೊರವಲಯದ ಉಪ ಅರಣ್ಯ ಸಂರಕ್ಷಣಾ ಇಲಾಖೆ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೇರಹಳ್ಳಿ ಬೆಟ್ಟದಲ್ಲಿ ಅರಣ್ಯ ಒತ್ತುವರಿಯಾಗಿದ್ದರೆ ಅಲ್ಲಿಯೂ ತೆರವುಗೊಳಿಸಲು ಬದ್ದವಾಗಿರುವುದಾಗಿ ತಿಳಿಸಿದರು. […]

ಶ್ರೀನಿವಾಸಪುರ : 2025-26 ನೇ ಸಾಲಿಗೆ ಸರ್ಕಾರಿ ಸುತ್ತೋಲೆಯಂತೆ ಆಸ್ತಿ ತೆರಿಗೆ ಪರಿಷ್ಕರಣೆ, ವಿವಿಧ ಬಾಬ್ತುಗಳ ಮೊತ್ತವನ್ನು ಸ್ಥಿರೀಕರಣ ಮಾಡುವ ಬಗ್ಗೆ , ಕಟ್ಟೆಕೆಳಗಿನ ಪಾಳ್ಯವನ್ನು ಕೊಳಚೆ ನಿರ್ಮೂಲನ ಪ್ರದೇಶ ಎಂದು ಘೋಷಣೆ ಮಾಡುವ ವಿಚಾರ, ಪಟ್ಟಣ ವ್ಯಾಪ್ತಿಯ ಪ್ರಮುಖ ರಸ್ತೆಗಳಿಗೆ ಪುಟ್‍ಪಾತ್ ನಿರ್ಮಾಣ ಮಾಡುವ ವಿಚಾರವಾಗಿ ಚರ್ಚೆ ಹಮ್ಮಿಕೊಳ್ಳಲಾಗಿತ್ತು. ಈಸಭೆಯಲ್ಲಿ 87.56ಲಕ್ಷ ಉಳಿತಾಯ ಬಜೆಟ್‍ನ್ನು ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ಮಂಡಿಸಿದರು.ಪಟ್ಟಣದ ಪುರಸಭಾ ಕಚೇರಿಯಲ್ಲಿ ಬುಧವಾರ 2025-26 ನೇ ಸಾಲಿನ ಆಯ-ವ್ಯಯ ಸಭೆ ಹಾಗು ಸಾಮಾನ್ಯ ಸಭೆಗೆ […]

ಶ್ರೀನಿವಾಸಪುರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ವತಿಯಿಂದ ಶುಕ್ರವಾರ ಡಿವಿಜಿ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಡಿವಿಜಿ ಬದುಕು ಬರಹ ಸರ್ವಕಾಲಿಕ ಮಾದರಿಶ್ರೀನಿವಾಸಪುರ: ಡಿವಿಜಿ ಅವರು ವಿದ್ವತ್ತು ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದರು. ಸಾಹಿತ್ಯ ಹಾಗೂ ಪತ್ರಿಕಾ ಕ್ಷೇತ್ರಕ್ಕೆ ಅವರು ಸಲ್ಲಿಸಿರುವ ಸೇವೆ ಸರ್ವಕಾಲಿಕ ಮಾದರಿಯಾಗಿದೆ ಎಂದು ಉಪನ್ಯಾಸಕ ಹಾಗೂ ಸಾಹಿತಿ ಎನ್.ಶಂಕರೇಗೌಡ ಹೇಳಿದರು.ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಡಿವಿಜಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕ ಸರ್ವಜ್ಞ […]

ಶ್ರೀನಿವಾಸಪುರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕುಪ್ಪಹಳ್ಳಿ ಗ್ರಾಮದ 14 ವರ್ಷದ ಯುವ ಈಜುಗಾರ್ತಿ ಡಿಂಪಲ್ ಸೋನಾಕ್ಷಿ ಎಂ ಗೌಡ ಅವರು ಗುಜರಾತ್‌ನ ಅದ್ರಿ ಬೀಚಿನಿಂದ ವೀರವಾಲ್ ಜೆಟ್ಟಿಯವರೆಗೆ ನಡೆದ 30 ಕಿಮೀ ಸಮುದ್ರ ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಶ್ರೇಯಸ್ಸು ಸಾಧಿಸಿದ್ದಾರೆ. ಡಿಂಪಲ್ ಅವರು 2023ರಲ್ಲಿ ರಾಷ್ಟ್ರಮಟ್ಟದ 10 ಕಿಮೀ ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ಹಾಂಕಾಂಗ್‌ನಲ್ಲಿ ನಡೆದ ಏಷ್ಯನ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅಲ್ಲದೆ, ವಿಜಯದುರ್ಗ, ಮಾಲ್ವನ್ ಮತ್ತು […]

ಶ್ರೀನಿವಾಸಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರೀನಿವಾಸಪುರ 1 ತಾಲೂಕು ವ್ಯಾಪ್ತಿಯ ರಾಯಲ್ಪಾಡು ವಲಯದ ಚಿಂತಮನಪಲ್ಲಿ ಗ್ರಾಮದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ “ವಾತ್ಸಲ್ಯ ಮನೆ” ಹಸ್ತಾಂತರ ಕಾರ್ಯಕ್ರಮ ಜರುಗಿತು. ಈ ಸಂದರ್ಭ ಬೆಂಗಳೂರು ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ಮಾತನಾಡುತ್ತಾ, ವಾತ್ಸಲ್ಯ ಫಲಾನುಭವಿಗಳಾದ ವೆಂಕಟರಮಣ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಮಾತೃಶ್ರೀ ಹೇಮಾವತಿ ಅಮ್ಮನವರ ಪ್ರೀತಿಯ ಕಾರ್ಯಕ್ರಮವಾದ “ವಾತ್ಸಲ್ಯ ಮನೆ” ನಿರ್ಮಿಸಲಾಗಿದೆ. ಇದರಿಂದ ಅವರ ಇಳಿವಯಸ್ಸಿನಲ್ಲಿ […]

ಶ್ರೀನಿವಾಸಪುರ: ಕಳೆದ ಕೆಲವು ತಿಂಗಳಿನಿಂದ ಮಳೆಯಿಲ್ಲದೆ ತೀವ್ರ ಬಿಸಿಲಿನ ಹೊತ್ತಿನಲ್ಲಿ ತತ್ತರಿಸಿದ್ದ ಶ್ರೀನಿವಾಸಪುರದ ಜನತೆ ಹಾಗೂ ಜಾನುವಾರುಗಳಿಗೆ ಕೊನೆಗೂ ಸ್ವಲ್ಪ ನೆಮ್ಮದಿಯ ಕ್ಷಣ ಒದಗಿ ಬಂದಿದೆ. ಬಿರುಬಿಸಿಲಿನ ಪರಿಣಾಮವಾಗಿ ನೀರಿನ ಕೊರತೆಯಿಂದ ಕೃಷಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ವಿಶೇಷವಾಗಿ ಶೇಕಡಾ 70ರಷ್ಟು ಮಾವು, ಟೊಮ್ಯಾಟೋ ಹಾಗೂ ತರಕಾರಿ ಬೆಳೆಗಾರರು ಭಾರೀ ಕಷ್ಟ ಅನುಭವಿಸುತ್ತಿದ್ದರು. ಆದರೆ ಇಂದು ಪಟ್ಟಣ, ತಾಲೂಕಿನ ಕೆಲವು ಭಾಗಗಳು ಹಾಗೂ ಜಿಲ್ಲೆಯ ಕೆಲವೆಡೆ ಸ್ವಲ್ಪ ಮಳೆ ತಲುಪಿದ್ದು, ಸ್ವಲ್ಪ ಮಟ್ಟಿಗೆ ತಂಪು ತಂದಿದೆ. ಇನ್ನು […]

ಶ್ರೀನಿವಾಸಪುರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪುರಸಭಾ ಕಚೇರಿಯ ಸಭಾಂಗಣದಲ್ಲಿ 2025-26ನೇ ಸಾಲಿನ ವಿವಿಧ ಬಾಬ್ತುಗಳ ಬಹಿರಂಗ ಹರಾಜು ಪುರಸಭಾ ಅಧ್ಯಕ್ಷ ಬಿ.ಆರ್. ಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು. ಈ ಹರಾಜಿನಲ್ಲಿ ದಿನವಹಿ ಮಾರುಕಟ್ಟೆ, ವಾರದ ಸಂತೆ, ಬಸ್ ಸ್ಟ್ಯಾಂಡ್ ಶುಲ್ಕ, ಮುಸಾಫೀರ್ ಖಾನ್ ವಾಣಿಜ್ಯ ಸಂಕೀರ್ಣದ ನೆಲ ಮಹಡಿಯಲ್ಲಿ (ಸೆಲ್ಲರ್) ದ್ವಿಚಕ್ರ ವಾಹನ ನಿಲುಗಡೆ ಶುಲ್ಕ ವಸೂಲಿ ಹಕ್ಕುಗಳ ಹರಾಜು ಪ್ರಕ್ರಿಯೆ ನಡೆದಿದೆ. ಈ ಹರಾಜು ಪ್ರಕ್ರಿಯೆಯಿಂದ ₹20,40,000 (ಇಪ್ಪತ್ತು ಲಕ್ಷ ನಲವತ್ತು ಸಾವಿರ ರೂಪಾಯಿ) […]

ಶ್ರೀನಿವಾಸಪುರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪುರಸಭಾ ಕಚೇರಿಯ ಸಭಾಂಗಣದಲ್ಲಿ 2025-26ನೇ ಸಾಲಿನ ವಿವಿಧ ಬಾಬ್ತುಗಳ ಬಹಿರಂಗ ಹರಾಜು ಪುರಸಭಾ ಅಧ್ಯಕ್ಷ ಬಿ.ಆರ್. ಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು. ಈ ಹರಾಜಿನಲ್ಲಿ ದಿನವಹಿ ಮಾರುಕಟ್ಟೆ, ವಾರದ ಸಂತೆ, ಬಸ್ ಸ್ಟ್ಯಾಂಡ್ ಶುಲ್ಕ, ಮುಸಾಫೀರ್ ಖಾನ್ ವಾಣಿಜ್ಯ ಸಂಕೀರ್ಣದ ನೆಲ ಮಹಡಿಯಲ್ಲಿ (ಸೆಲ್ಲರ್) ದ್ವಿಚಕ್ರ ವಾಹನ ನಿಲುಗಡೆ ಶುಲ್ಕ ವಸೂಲಿ ಹಕ್ಕುಗಳ ಹರಾಜು ಪ್ರಕ್ರಿಯೆ ನಡೆದಿದೆ. ಈ ಹರಾಜು ಪ್ರಕ್ರಿಯೆಯಿಂದ ₹20,40,000 (ಇಪ್ಪತ್ತು ಲಕ್ಷ ನಲವತ್ತು ಸಾವಿರ ರೂಪಾಯಿ) […]

ಕೋಲಾರ:- ಡಿಸಿಸಿ ಬ್ಯಾಂಕಿನಿಂದ ಅಸ್ಥಿತ್ವದಲ್ಲಿರದ ಯಾವುದೇ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಿಲ್ಲ, ದಾಖಲೆಗಳ ನಿರ್ವಹಣೆ ಸರಿಯಾಗಿದೆ ಎಂದು ಸರ್ಕಾರವೇ ನೇಮಿಸಿದ್ದ ಸಹಕಾರ ಸಂಘಗಳ ಜಂಟಿ ನಿರ್ದೇಶಕ ಕಲ್ಲಪ್ಪ ಓಬಣ್ಣಗೋಳ್ ನೇತೃತ್ವದ ಪರಿಶೀಲನಾ ಸಮಿತಿ ವರದಿ ನೀಡಿದ್ದರೂ ವಿನಾಕಾರಣ ಆರೋಪ ಮಾಡಲಾಗುತ್ತಿದೆ, ಆಡಳಿತ ಮಂಡಳಿ ಬ್ಯಾಂಕನ್ನು ಕಣ್ಣಲ್ಲಿಕಣ್ಣಿಟ್ಟು ಕಾಪಾಡಿದ್ದೇವೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಈ ಸಂಬಂಧ ಸುದ್ದಿಗೋಷ್ಟಿ ನಡೆಸಿ, ದಾಖಲೆಗಳನ್ನು ಪ್ರದರ್ಶಿಸಿ ಮಾತನಾಡಿದ ಅವರು, ಮಹಿಳಾ […]