
ಕುಂದಾಪುರ: ಖಾಸಗಿ ಬಸ್ ಹಾಗೂ ಬೈಕಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಕುಂದಾಪುರದ ಪುರಸಭೆಯ ಪೌರ ಕಾರ್ಮಿಕ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ದುರ್ಗಾಂಬ ಬಸ್ ಡಿಪೋ ಎದುರುಗಡೆ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಕುಂದಾಪುರದ ಪೌರಕಾರ್ಮಿಕ, ಬಾರ್ಕೂರಿನ ಬಂಡಿ ಮಠ ನಿವಾಸಿ ಶಂಕರ ಹಾಗೂ ಬೀಚು ಎಂಬುವರ ಪುತ್ರ ಸುಂದರ್ (39) ಎಂದು ಗುರುತಿಸಲಾಗಿದೆ. ಕಳೆದ 15 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕುಂದಾಪುರದ ಪುರಸಭೆಯಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ […]

ಕುಂದಾಪುರದ ಮೆ| ಟಿ. ಎನ್. ಪ್ರಭು ಎಂಡ್ ಕೋ. ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯಲ್ಲಿ ತರಬೇತು ಪಡೆದ ಚೈತ್ರಾ ದಿನಕರ ಪ್ರಭು ಮೇ ತಿಂಗಳಲ್ಲಿ ನಡೆದ ಸಿ. ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು ಸಿ. ಎ. ಪದವಿ ಪಡೆದಿದ್ದಾರೆ.ಇವರು ಭಟ್ಕಳ ಬೆಂಗ್ರೆಯ ಶಿರಾಲಿ ಮಾವಿನಕಟ್ಟೆ ನಿವಾಸಿಯಾಗಿದ್ದು, ದಿನಕರ ಪ್ರಭು ಮತ್ತು ದೀಪಾ ಡಿ. ಪ್ರಭು ಅವರ ಪುತ್ರಿ.

ರೋಟರಿ ಕ್ಲಬ್ ಸನ್ರೈಸ್ ವತಿಯಿಂದ ಕುಂದಾಪುರ ಶ್ರೀ ನಾರಾಯಣಗುರು ಕಾಂಪ್ಲೆಕ್ಸ್ನಲ್ಲಿ ಪತ್ರಿಕಾ ದಿನಾಚರಣೆ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಯು. ಎಸ್. ಶೆಣೈಯವರನ್ನು ಅಧ್ಯಕ್ಷ ನಾಗರಾಜ ನಾಯ್ಕ ಹಾಗೂ ನಿಯೋಜಿತ ಅಧ್ಯಕ್ಷ ಪ್ರಶಾಂತ ಹವಾಲ್ದಾರ್ ಗೌರವಿಸಿದರು.ಕ್ಲಬ್ನ ಮಾಜಿ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು. ಯು. ಎಸ್. ಶೆಣೈ ಪತ್ರಿಕಾ ದಿನದ ಮಹತ್ವ ತಿಳಿಸಿದರು. ಚಂದ್ರಶೇಖರ್ ವಂದಿಸಿದರು.

ಬಸ್ರೂರೂ ಸರಕಾರಿ ಪ್ರೌಢಶಾಲೆಯ ನಕ್ಷ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ -2 ರಲ್ಲಿ 616 ಅಂಕಗಳನ್ನು ಗಳಿಸಿ ರಾಜ್ಯಮಟ್ಟದಲ್ಲಿ ಒಂಬತ್ತನೇ ರ್ಯಾಂಕ್ ಪಡೆದಿರುತ್ತಾಳೆ, ಇವಳು ಸಾಂತಾವರದ ಶ್ರೀ ಎಸ್ ಸುರೇಶ್ ಹಾಗೂ ಶ್ರೀಮತಿ ಸರೋಜ ದಂಪತಿಗಳ ಪುತ್ರಿಯಾಗಿದ್ದು, ಈ ಹಿಂದೆ ಎಸ್ ಎಲ್ ಸಿ ಪರೀಕ್ಷೆಯಲ್ಲಿ 605 ಅಂಕಗಳನ್ನು ಪಡೆದಿದ್ದು, ಇದೀಗ ಪೂರಕ ಪರೀಕ್ಷೆ ಯಲ್ಲಿ 11 ಹೆಚ್ಚುವರಿ ಅಂಕಗಳನ್ನು ಪಡೆದಿರುತ್ತಾಳೆ ಸಂಸ್ಥೆ ಅವಳನ್ನು ಅಭಿನಂದಿಸಿರುತ್ತದೆ

ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರು ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ಮಾಲೀಕ ಹಾಗೂ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಹೆಂಡತಿ ಮತ್ತು ಓರ್ವ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ನಗರದ ಸೈoಟ್ ಮೇರಿಸ್ ಪದವಿಪೂರ್ವ ಕಾಲೇಜಿನಲ್ಲಿ ಜುಲೈ ತಿಂಗಳ 10ನೇ ತಾರೀಖಿನಂದು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇದರ ವತಿಯಿಂದ ದೀಪ ಬೆಳಗುವುದರೊಂದಿಗೆ ಜೂನಿಯರ್ ರೆಡ್ ಕ್ರಾಸ್ ಸಾಂಕೇತಿಕ ಉದ್ಘಾಟನೆ ಹಾಗೂ ಪ್ರಥಮ ಚಿಕಿತ್ಸೆ ಅರಿವು ಕಾರ್ಯಕ್ರಮ ಜರುಗಿತು.ಸಮಾರಂಭದಲ್ಲಿ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮ ಗುರುಗಳು ಹಾಗೂ ವಿದ್ಯಾ ಸಂಸ್ಥೆಗಳ ಜೊತೆ ಕಾರ್ಯದರ್ಶಿಯವರಾದ ರೆ. ಫಾ. ಪಾವ್ಲ್ ರೇಗೊರವರು ಅಧ್ಯಕ್ಷತೆ ವಹಿಸಿ, ದೀಪ ಬೆಳಗಿಸಿ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯ ಸಾಧನೆಗಳನ್ನು ಶ್ಲಾಘಿಸಿ, ನಮ್ಮ […]

ಕುಂದಾಪುರ: “ವಿದ್ಯಾರ್ಥಿಗಳು ಅದಮ್ಯ ಉತ್ಸಾಹದಿಂದ ಕ್ರಿಯಾಶೀಲರಾದರೆ ತಮ್ಮ ವ್ಯಕ್ತಿತ್ವವನ್ನು ವಿವಿಧ ಆಯಾಮಗಳಲ್ಲಿ ಬೆಳೆಸಿಕೊಳ್ಳಬಹುದು. ಕಲೆಗೆ ಸಂಬಂಧಿಸಿದ ಯಾವುದೇ ಒಂದು ಕ್ಷೇತ್ರದಲ್ಲಿ ಈ ಪ್ಯಾಶನ್ ಇದ್ದರೂ ಅದರಲ್ಲಿ ಆಳವಾಗಿ ತೊಡಗಿಸಿಕೊಂಡು ಹಂತ ಹಂತವಾಗಿ ಸಮಾಜದಲ್ಲಿ ಮಹತ್ವದ ಸ್ಥಾನವನ್ನು ತಲುಪಬಹುದು ಎಂದು ನವಸಂಕೇತ್ – ಫ್ರೆಷರ್ಸ್ ಫಿಯೆಸ್ಟಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದಕಾಲೇಜಿನ ಹಳೆ ವಿದ್ಯಾರ್ಥಿನಿ ಹೆಸರಾಂತ ನಿರೂಪಕಿ, 92.7 ಬಿಗ್ ಎಫ್.ಎಮ್ ನ ಆರ್.ಜೆ, ಸ್ಪೂರ್ತಿ ತೇಜ್ ಇವರು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ […]

Mangaluru : ICYM, Commission for Ecology ( Parisar Ayog ) and Youth Commission ( Yuva Ayog ) of Bajjodi Unit organised Laudate Si Sunday on 07th July, 2024 at 7.30 am to mark the occasion of World Environment Day. The programme started with a Prayer Song by the ICYM members. Fr. Dominic Vas, Parish Priest […]

ಮಂಗಳೂರು, ಜುಲೈ 7, 2024 ರಂದು ಮಂಗಳೂರಿನ ಉರ್ವಾ ಚರ್ಚ್ ಹಾಲ್ನಲ್ಲಿ ನಡೆದ ಧರ್ಮಪ್ರಾಂತ್ಯದ ವಾರ್ಷಿಕ ಮಹಾಸಭೆಯಲ್ಲಿ ವಾಮಂಜೂರಿನ ಸೇಂಟ್ ಜೋಸೆಫ್ ವರ್ಕರ್ ಚರ್ಚ್ನಿಂದ YCS ನ ನೂತನ ಡಯೋಸಿಸನ್ ಅಧ್ಯಕ್ಷ ವರುಣ್ ದೆಯೋನ್ ಸಲ್ಡಾನ್ಹಾ ಅವರು ಇತರ ಪದಾಧಿಕಾರಿಗಳೊಂದಿಗೆ ಅಧಿಕಾರ ವಹಿಸಿಕೊಂಡರು.ಸಮಾರಂಭದ ಅಧ್ಯಕ್ಷತೆಯನ್ನು ವಂದನೀಯ ಫಾದರ್ ಬೆಂಜಮಿನ್ ಪಿಂಟೋ, ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಚರ್ಚ್ ಉರ್ವಾ ಮತ್ತು ಐವೈಸಿಎಸ್ ಪ್ರಧಾನ ಕಾರ್ಯದರ್ಶಿ ಅಡ್ವೊಕೇಟ್ ರೋಶನ್ ಲೋಬೋ ಅವರು ಉದ್ಘಾಟಿಸಿದರು. ಶ್ರೀ ರೋಶನ್ ಲೋಬೋ, ವಾಮಂಜೂರ್ ಅವರನ್ನು ಐವೈಸಿಎಸ್ನ […]