ಕೋಟೆಶ್ವರ,ನ. 1; ಸ್ಥಳೀಯ ಸಂತ ಅಂತೋನಿ ಚರ್ಚಿನಲ್ಲಿ ಸರ್ವಧರ್ಮ ಸಮಿತಿಯ ನೇತೃತ್ವದಲ್ಲಿ ಧರ್ಮಕೇಂದ್ರದ ಸಮುದಾಯ ಮತ್ತು ಆಸುಪಾಸಿನ ಹಿಂದೂ ಬಾಂಧವರೊಂದಿಗೆ ಕೂಡಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.     ಕಾರ್ಯಕ್ರಮದಲ್ಲಿ ಧರ್ಮಕೇಂದ್ರದ ಧರ್ಮಗುರು ಫಾ. ಪ್ರವೀಣ್ ಪಿಂಟೋ ‘ದೀಪಾವಳಿ ಬೆಳಕಿನ ಹಬ್ಬ, ಇದು ಕತ್ತಲೆಯ ಮೇಲೆ ಬೆಳಕಿನ ವಿಜಯ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯತನವನ್ನು ಸಂಕೇತಿಸುತ್ತದೆ, ಅಂದರೆ ನಮ್ಮ ಹ್ರದಯದೊಳೊಗೆ ಇರುವ ಕತ್ತಲೆ ಮಾಯವಾಗಿ ಬೆಳಕಾಗಬೇಕು, ಈ ದೀಪಾವಳಿ ನಮ್ಮೆಲ್ಲರ ಪ್ರೀತಿ ಭಾಂಧವ್ಯದ ಹಬ್ಬವಾಗಲಿ’ ಎಂದು ಆತ್ಮೀಯ ಸಂದೇಶ […]

Read More

ಕುಂದಾಪುರ ಅ.31 ಜಗತ್ತಿನಲ್ಲಿ ಅತಿ ದೊಡ್ಡ ಬಹು ಸಂಸ್ಕೃತಿಯನ್ನು ಒಳಗೊಂಡು , ಏಕತೆಯನ್ನು ಪಸರಿಸುವ ದೇಶ ಭಾರತ. ಮಾಜಿ ಪ್ರಧಾನಿ ಇಂದಿರಾಗಾಂಧಿ ಮತ್ತು ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ದೃಢ ನಿರ್ಧಾರ ಇತಿಹಾಸದಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಮಂಚೂಣಿ ಸ್ಥಾನಕ್ಕೆ ತರುವಂತಾಯಿತು ಎಂದು ನಾಯಕರಾದ ದಿನೇಶ್ ಹೆಗ್ಡೆ ಯವರು ನುಡಿದರು. ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಇಂದಿರಾಗಾಂಧಿ ಪುಣ್ಯತಿಥಿ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ […]

Read More

ಉಡುಪಿ: ನಮ್ಮಲ್ಲಿರುವ ಕೊಂಕಣಿ ಸಂಪ್ರದಾಯ ಜಾನಪದೀಯ ಸಂಸ್ಕೃತಿಗಳು ವಿಶಿಷ್ಠ ಮತ್ತು ವೈವಿಧ್ಯಮಯಾಗಿದ್ದು ಅದನ್ನು ಉಳಿಸಿ ಪೋಷಿಸುವ ಅಗತ್ಯತೆ ಇದೆ ಎಂದು ತೊಟ್ಟಂ ಸಂತ ಅನ್ನಮ್ಮ ದೇವಾಲಯದ ಧರ್ಮಗುರು ವಂ|ಡೆನಿಸ್ ಡೆಸಾ ಹೇಳಿದರು. ಅವರು ಗುರುವಾರ ತೊಟ್ಟಂ ಚರ್ಚಿನ ಸಭಾಂಗಣದಲ್ಲಿ ಉಡುಪಿ ಧರ್ಮಪ್ರಾಂತ್ಯದ ಯುವ ಕಥೊಲಿಕ ವಿದ್ಯಾರ್ಥಿ ಸಂಚಾಲನ ಹಾಗೂ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ವೈಸಿಎಸ್ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಕೊಂಕಣಿ ಜಾನಪದ ಹಾಡು ಹಾಗೂ ವಾದ್ಯಗಳ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಪಾಶ್ಚಾತಿಕರಣವಾಗುತ್ತಿರುವ […]

Read More

ಬುಧವಾರ ಮಧ್ಯಾಹ್ನ ಬೈಂದೂರು ತಾಲೂಕಿನ ನಾಗೂರು ಉಪ್ರಳ್ಳಿ ರಸ್ತೆಯ ತಿರುವಿನಲ್ಲಿ ಮಣ್ಣು ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ವಾಲಿ ಮಗುಚಿ ಬಿದ್ದಿದೆ. ಅದೇ ಸಂದರ್ಭದಲ್ಲಿ ಲಾರಿಯ ಪಕ್ಕದಲ್ಲಿ ಮಹಿಳೆ ಚಲಾಯಿಸುತ್ತಿದ್ದ ಸ್ಕೂಟಿಯೊಂದು ಸಾಗುತ್ತಿತ್ತು ಸ್ಕೂಟಿಯ ಮೇಲೆ ಲಾರಿ ಮಗುಚಿ ಬಿದ್ದು ಲಾರಿಯಲ್ಲಿದ್ದ ಮಣ್ಣಿನ ಅಡಿಯಲ್ಲಿ ಸ್ಕೂಟಿ ಸಮೇತ ಸವಾರೆ ಸ್ಥಳೀಯ ನಿವಾಸಿ ಆರತಿ ಶೆಟ್ಟಿ ಸಿಲುಕಿಕೊಂಡರು. ಲಾರಿ ಚಾಲಕನಿಗೆ ಹೊರಬರಲು ಸಾಧ್ಯವಾಗದೆ ಲಾರಿಯೊಳಗೆ ಸಿಲುಕಿಕೊಂಡಿದ್ದಾನೆ.  ಅದೇ ಮಾರ್ಗದಲ್ಲಿ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದ ಕೋಡಿ […]

Read More

ಕುಂದಾಪುರ,ಸಿದ್ದಾಪುರ; ಬೈಕ್ ನಲ್ಲಿ ಜಿಂಕೆ ಮಾಂಸ ಸಾಗಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಸಿದ್ದಾಪುರ ವನ್ಯಜೀವಿ ವಲಯ ದ ಸಿಬ್ಬಂದಿಗಳು ಬಂದಿಸಿದ್ದು ಇಬ್ಬರು ಪರಾರಿ ಆಗಿರುತ್ತಾರೆ. ಬಂದಿತ ವ್ಯಕ್ತಿ ಕೊಡ್ಲಾಡಿ ಗ್ರಾಮದ ಜಗದೀಶ್ ಮೇಸ್ತ(49) ನನ್ನು ನವೆಂಬರ್ 8 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತ ವ್ಯಕ್ತಿಯಿಂದ 23kg ಜಿಂಕೆ ಮಾಂಸ, ಬೈಕ್, ಚೂರಿ, ಗನ್ ಪೌಡರ್ ವಶಪಡಿಸಿ ಕೊಳ್ಳಲಾಗಿದೆ. ಪ್ರಕರಣವನ್ನು ಕುಂದಾಪುರ ಪ್ರಾದೇಶಿಕ ವಲಯಕ್ಕೆಒಪ್ಪಿಸಲಾಗಿದ್ದು ತನಿಖೆ ಮುಂದುವರೆದಿದೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ನಿಂಗಪ್ಪ ವಾಲಿ, […]

Read More

ಮಂಗಳೂರು, ಅಕ್ಟೋಬರ್ 30: ಸೇಂಟ್ ಆಗ್ನೆಸ್ ಪಿಯು ಕಾಲೇಜಿನಲ್ಲಿ ಹೆಣ್ಣು ಮಗುವಿನ ಸ್ಥೈರ್ಯ, ಶಕ್ತಿ ಮತ್ತು ಚೈತನ್ಯಕ್ಕಾಗಿ ಅಕ್ಟೋಬರ್ 30 ರಂದು ಬುಧವಾರ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ರಾಜ್ಯ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಉಪ-ರಿಜಿಸ್ಟ್ರಾರ್ ಅಮ್ಲೈನ್ ​​ಡಿಸೋಜ ಗೌರವ ಅತಿಥಿಯಾಗಿದ್ದರು. “ಕನಸುಗಳನ್ನು ಹೊಂದಿರುವ ಹುಡುಗಿಯರು ದೃಷ್ಟಿ ಹೊಂದಿರುವ ಮಹಿಳೆಯರಾಗುತ್ತಾರೆ ಎಂದು ಹೇಳಲಾಗುತ್ತದೆ. ಅಂತಹ ದೃಷ್ಟಿಕೋನವನ್ನು ಕೈಗೊಳ್ಳಲು ನಾವು ಪರಸ್ಪರ ಶಕ್ತಿಯನ್ನು ನೀಡೋಣ. ”ಹೆಣ್ಣುಮಕ್ಕಳು ಪ್ರೀತಿ ಮತ್ತು ಅವಕಾಶದಿಂದ ಪೋಷಿಸಿದಾಗ ಎಲ್ಲರಿಗೂ ನೆರಳು ನೀಡುವ ಪ್ರಬಲ […]

Read More

ಲಯನ್ಸ್ ಕ್ಲಬ್ ಬಾರ್ಕೂರು ರಾಷ್ಟ್ರೀಯ ಹೆಚ್.ಆರ್.ಪ್ರೈ ಸ್ಕೂಲ್ ಹನೇಹಳ್ಳಿಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು29 ಅಕ್ಟೋಬರ್, 2024 ರಂದು ಲಯನ್ಸ್ ಕ್ಲಬ್ ಆಯೋಜಿಸಿದ ಉಚಿತ ವೈದ್ಯಕೀಯ ತಪಾಸಣೆ ಶಿಬಿರದ ಕುರಿತು ವರದಿ ಮಾಡಿ.ಸಮುದಾಯದಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ರಕ್ತದೊತ್ತಡ, ಮಧುಮೇಹ ತಪಾಸಣೆ ಸೇರಿದಂತೆ ಉಚಿತ ವೈದ್ಯಕೀಯ ಸೇವೆ ಒದಗಿಸುವುದು ಶಿಬಿರದ ಉದ್ದೇಶವಾಗಿತ್ತು.ರಕ್ತದೊತ್ತಡ ತಪಾಸಣೆ, ಮಧುಮೇಹಕ್ಕೆ ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ಸಾಮಾನ್ಯ ಆರೋಗ್ಯ ಸಮಾಲೋಚನೆ ಅರಿವು ಮತ್ತು ಜೀವನಶೈಲಿಯ ಮಾರ್ಪಾಡುಗಳ ಕುರಿತು ಆರೋಗ್ಯ ಶಿಕ್ಷಣವನ್ನು ಶಿಬಿರದಲ್ಲಿ ಹಂಚಿಕೊಂಡರು.ಪುರುಷರು, […]

Read More

ಕುಂದಾಪುರದ ಆರ್. ಎನ್.‌ ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ಮಹಮ್ಮದ್ ರೈಫ್ ಇವರು ಮೂಡುಗೋಪಾಡಿಯಲ್ಲಿ ಜರುಗಿದ ‘ಸಾಹಿತ್ಯೋತ್ಸವ ‘ ದ ಅಂಗವಾಗಿ SSF ಸಂಘಟನೆಯ ಕುಂದಾಪುರ ಡಿವಿಶನ್  ಆಯೋಜಿಸಿದ ಇಂಗ್ಲೀಷ್ ಪ್ರಬಂದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ದಿನಪತ್ರಿಕೆ ವರದಿ ಸ್ಪರ್ಧೆಯಲ್ಲಿ‌ ಪ್ರಥಮ‌ ಸ್ಥಾನ ಹಾಗೂ ಸೋಶಲ್ ಟ್ವೀಟ್ ಸ್ಪರ್ಧೆಯಲ್ಲಿ ಪ್ರಥಮಸ್ಥಾನ‌ ಪಡೆದು ಈ‌ ಮೂರು ಸ್ಪರ್ಧೆಗಳಲ್ಲಿ ಉಡುಪಿಯಲ್ಲಿ ನಡೆಯುವ ಜಿಲ್ಲಾ‌ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ಇನ್ನೋರ್ವ […]

Read More

ಕುಂದಾಪುರ ; ದಿನಾಂಕ 26-10 – 2024 ರಂದು ಶ್ರೀ ವಾಣಿ ಪ್ರೌಢಶಾಲೆ, ನಡೂರಿನಲ್ಲಿ ಜರುಗಿದ 2024-25 ರ ಸಾಲಿನ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ವಸ್ತು ಪ್ರದರ್ಶನ ಶೈಕ್ಷಣಿಕ ಹಾಗೂ ಮಕ್ಕಳ ವೃತ್ತಿ ಶಿಕ್ಷಣ ಕಲಿಕೋತ್ಸವದಲ್ಲಿ ಭಾಗವಹಿಸಿದ ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯು ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಅರ್ಹತೆಯನ್ನು ಪಡೆದಿರುತ್ತದೆ. ವೃತ್ತಿ ಶಿಕ್ಷಣ ಶಿಕ್ಷಕಿ ಸೆಲಿನ್ ಡಿಸೋಜಾ ಹಾಗೂ ವಿದ್ಯಾರ್ಥಿನಿಯರಾದ ಕುಮಾರಿ ಭವ್ಯ ಹಾಗೂ ಕುಮಾರಿ ನೇಹಾ ಭಾಗವಹಿಸಿದ್ದರು. ರಾಜ್ಯಮಟ್ಟಕ್ಕೆ ಆಯ್ಕೆಯಾದ ತಂಡವನ್ನು […]

Read More
1 33 34 35 36 37 392