JANANUDI.COMNETWORK ಕುಂದಾಪುರ,ಜ. ಇಲ್ಲಿನ ಸಂತ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಕೀರ್ತನ್ ಹೆಣ್ಣು ಮಕ್ಕಳ ಕುರಿತು ಅರಿವು ಮೂಡಿಸಿದರು. ಸಂತ ಜೋಸೆಫ್ ಪ್ರಾಥಮಿಕ ಮತ್ತು ಪ್ರೌಢಶಾಲೆಯು ಈ ಕಾರ್ಯಕ್ರಮವನ್ನು ಜಂಟಿಯಾಗಿ ಆಚರಿಸಿದ್ದರು.ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕಿಯರು ಉಪಸ್ಥಿತರಿದ್ದರು. ಪ್ರೌಢಶಾಲೆ ಗೈಡ್ ಶಿಕ್ಷಕಿ ಸೆಲಿನ್ ಡಿಸೋಜಾ ಸ್ವಾಗತಿಸಿದರು. ಶಿಕ್ಷಕಿ ಶಾರದ ವಂದಿಸಿದರು.
ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ : ಕರ್ನಾಟಕ ರಾಜ್ಯದಲ್ಲಿ ಗೊಲ್ಲ ಅಥವಾ ಯಾದವ ಸಮುದಾಯದ ಸಂಘಟನೆ ತೀರಾ ದುರ್ಬಲವಾಗಿದೆ. ಇಲ್ಲಿ 35 ಲಕ್ಷ ಮಂದಿ ಗೊಲ್ಲ ಸಮುದಾಯದವರಿದ್ದರೂ ನಮಗೆ ರಾಜಕೀಯ ಪ್ರಾತಿನಿಧ್ಯ ಮತ್ತು ಸರ್ಕಾರಿ ಸೌಲಭ್ಯಗಳಿಲ್ಲ. ಗೊಲ್ಲ ಅಭಿವೃದ್ಧಿ ನಿಗಮವನ್ನು ಸರ್ಕಾರ ರಚಿಸಿದ್ದರೂ ಅಲ್ಲಿ ಕಾಡುಗೊಲ್ಲ ಎಂದು ನಮೂದಿಸಿದ್ದರಿಂದ ಯಾದವ ಜನಾಂಗದವರಾದ ಈ ರಾಜ್ಯದ ಗೊಲ್ಲರು ಸೌಲಭ್ಯವಂಚಿತರಾಗಿದ್ದಾರೆ. ಗೊಲ್ಲ ಎಂದರೆ ಕಾಡುಗೊಲ್ಲ ಮತ್ತು ಯಾದವ ಎಂದರೆ ಉತ್ತರ ಪ್ರದೇಶ ಮೂಲದವರೆಂದು ಸರ್ಕಾರ ಗುರುತಿಸುವುದರಿಂದ ದುರ್ಬಲ ವರ್ಗದವರಾದ ಕರ್ನಾಟಕದ […]
JANANUDI.COM NETWORK ಭಾರತ ದೇಶದ ಸಂವಿಧಾನವನ್ನು ಜಾರಿಗೆ ತಂದ ದಿನ ಗಣರಾಜ್ಯೋತ್ಸವ ದ ಆಚರಣೆಯನ್ನು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಬೆಳಿಗ್ಗೆ ಗಂಟೆ 9.00ಕ್ಕೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ, ಕೆ.ಎಫ್.ಡಿ.ಸಿ. ಮಾಜಿ ಅಧ್ಯಕ್ಷರಾದ ಬಿ. ಹಿರಿಯಣ್ಣರವರು , ಬ್ಲಾಕ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ , ಇಂಟಕ್ ಅಧ್ಯಕ್ಷ ರಾದ ಚಂದ್ರ ಅಮೀನ್, ಶಂಕರ ಪೂಜಾರಿ, ಆಶಾ ಕಾರ್ವೆಲ್ಲೋ, ಜ್ಯೋತಿ ಡಿ. ನಾಯ್ಕ, ಶೋಭಾ ಸಚ್ಚಿದಾನಂದ, ಅಬ್ದುಲ್ ಕೋಡಿ, ಅಶೊಕ್ ಸುವರ್ಣ, […]
JANANUDI.COM NETWORK ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನ-2021 ಆಚರಣೆಯ ಅಂಗವಾಗಿ ಮತದಾರರ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಿತು.ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ರೇಕಾ ಬನ್ನಾಡಿ ಮಾತನಾಡಿ ಮತದಾನ ನಮ್ಮ ಹಕ್ಕು. ಕೆಲವು ಕಡೆ ನಗರ ಪ್ರದೇಶಗಳಲ್ಲಿ ಮತದಾನದಿಂದ ವಿದ್ಯಾವಂತರೆನಿಸಿಕೊಂಡವರು ಮತದಾನದಿಂದ ಹಿಂದೆ ಉಳಿಯುತ್ತಾರೆ. ಹಾಗೆ ಕೆಲವು ಕಡೆ ಅವಿದ್ಯಾವಂತರಿಗೆ ಮತದಾನದ ಮಹತ್ವದ ಬಗ್ಗೆ ಸಾಕಷು ತಿಳುವಳಿಕೆ ಇರುವುದಿಲ್ಲ. ನಾವು ನೀವು ಮತದಾನದ ಮಹತ್ವವನ್ನು ಕುರಿತು ಅರಿವು […]
ವರದಿ : ಮಝರ್, ಕುಂದಾಪುರ ಹಸಿಮೀನು ವ್ಯಾಪಾರಸ್ಥರ ಗಂಗೊಳ್ಳಿ ಇದರ 2021-22 ರ ಮೇ ಸಾಲಿನ ನೂತನ ಅಧ್ಯಕ್ಷರಾಗಿ, ಶ್ರೀ ರಕ್ತೇಶ್ವರಿ ಫಿಶರೀಸ್‍ನ ಗಾಳಿ ಜನಾರ್ಧನ (ಧನು) ಖಾರ್ವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಘವೇಂದ್ರ ಖಾರ್ವಿ ಕಾರ್ಯದರ್ಶಿಯಾಗಿ ರವಿಶಂಕರ್ ಖಾರ್ವಿ , ಉಪಕಾರ್ಯದರ್ಶಿಯಾಗಿ ಮಂತಿ ರಾಘವೇಂದ್ರ ಖಾರ್ವಿ, ಕೋಶಾಧಿಕಾರಿಯಾಗಿ ದಿನೇಶ್ ಮುನ್ನಾ, ಲೆಕ್ಕಪರಿಶೋಧಕರಾಗಿ ಗಂಗಾಧರ ಖಾರ್ವಿ ಹಾಗೂ ಕಾರ್ಯಕಾರಿ ಸಮಿತಿಗೆ ಹತ್ತುಜನ ಸದಸ್ಯರು ಆಯ್ಕೆಗೊಂಡಿದ್ದಾರೆ.
JANANUDI.COM NETWORK ಕುಂದಾಪುರ,ಜ.23 ಕೊಟೇಶ್ವರ ಕಟ್ಕರೆಯ ಬಾಲ ಯೇಸುವಿನ ಕಾರ್ಮೆಲ್ ಮಠಾಶ್ರಮದಲ್ಲಿ ಬಾಲಾ ಯೇಸುವಿನ ವಾರ್ಷಿಕ ಮಹೊತ್ಸೋವವು ಜನವರಿ 23 ಶನಿವಾರದಂದು ಸಂಜೆ ಭಕ್ತಿ ಬಲಿದಾನದ ಮೂಲಕ ನಡೆಯಿತು. ಕಾರ್ಮೆಲ್ ಯಾಜಕ ಸಂಸ್ಥೆ ಕರ್ನಾಟಕ – ಗೋವಾದ ಪ್ರೋವಿನ್ಸೀಯಲ್ ಅತೀ ವಂ ಫಾ| ಪಿಯುಸ್ ಜೆಮ್ಸ್ ಡಿಸೋಜಾ ಇವರು ಉತ್ಸವದ ದಿವ್ಯ ಬಲಿಪೂಜೆಯನ್ನು ಅರ್ಪಿಸಿ ನಾವೆಲ್ಲಾ ಅಣ್ಣ ತಮ್ಮಂದಿರಂತೆ ಬಾಳಿದರೆ ದೇವರ ಮಕ್ಕಳಾಗುತ್ತೇವೆ’ ಎಂದು ಸಂದೇಶ ಸಾರಿ ‘ಯೇಸು ಸ್ವಾಮಿ, ತಮ್ಮ ರಕ್ತ ಸಂಬಂಧದ ಅಣ್ಣ ತಮಂದಿರು […]
JANANAUDI.COM NETWORK “ವೇಗದ ಮಿತಿಯ ಅರಿವು ಮತ್ತು ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಹಾಕಿರುವ ಅನೇಕ ಸೈನ್ ಬೋರ್ಡ್ ಗಳ ನಿಖರವಾದ ಮಾಹಿತಿ ಪಡೆದು ವಾಹನ ಚಲಾಯಿಸಬೇಕು. ಅಪಘಾತಗಳನ್ನು ತಪ್ಪಿಸುವಲ್ಲಿ ವಾಹನ ಸಂಚಾರದ ಮೂಲದಾಖಲಾತಿಯಿಲ್ಲದೇ ನಿಯಮಗಳನ್ನು ಉಲ್ಲಂಘಿಸುವುದರಿಂದ ಉಂಟಾಗುವ ಗಂಭೀರ ದುಷ್ಪರಿಣಾಮಗಳನ್ನು ನಿವಾರಿಸುವಲ್ಲಿ ಯವಜನತೆ ಪ್ರಮುಖ ಪಾತ್ರ ವಹಿಸಬೇಕು” ಎಂದು ಕುಂದಾಪುರ ಪೊಲೀಸ್ ಠಾಣೆಯ ಸ್ಟೇಷನ್ ರೈಟರ್ ಶ್ರಿ ನವೀನ ಕುಮಾರ ಎಸ್ ರವರು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಕುಂದಾಪುರ ಪೊಲೀಸ್ ಠಾಣೆಯವರ ‘ […]
ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ : ಯಾವುದೇ ಧರ್ಮದ ಶ್ರದ್ಧಾ ಕೇಂದ್ರಗಳಾದರೂ ಅವು ಸಮಾಜದ ಕಣ್ಣುಗಳಂತೆ. ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನ ರಾಜ್ಯದಲ್ಲಿನ ಪ್ರಮುಖ ಶ್ರದ್ಧಾಕೇಂದ್ರಗಳಲ್ಲಿ ಒಂದು. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೂ ಕೋಟೇಶ್ವರಕ್ಕೂ ಅವಿನಾಭಾವ ಸಂಬಂಧವಿದೆ. ಈ ಕ್ಷೇತ್ರದ ಪುನರುತ್ಥಾನದ ಪವಿತ್ರ ಕಾರ್ಯದಲ್ಲಿ ಧರ್ಮಸ್ಥಳ ಕ್ಷೇತ್ರವೂ ಪಾಲ್ಗೊಳ್ಳುತ್ತಿರುವುದು ಶ್ರದ್ಧಾಳುಗಳಾದ ನಮಗೆಲ್ಲರಿಗೂ ಸಂತಸದ ವಿಷಯ. ಶ್ರೀ ಮಂಜುನಾಥನ ಪ್ರಸಾದರೂಪವಾಗಿ ಖಾವಂದರು ಕೊಡಮಾಡಿದ ದೇಣಿಗೆಯನ್ನು ಶ್ರೀ ಕ್ಷೇತ್ರಕ್ಕೆ ಹಸ್ತಾಂತರಿಸಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮುರಳೀಧರ ಶೆಟ್ಟಿ […]
ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ : ಬ್ರಾಹ್ಮಣರು ಅಲ್ಪತೃಪ್ತರು. ಯಾವ ಪದವಿ ಅಥವಾ ಯಾರ ವಿನಾಶಕ್ಕಾಗಿ ಅವರೆಂದೂ ಹೋರಾಡಿದವರಲ್ಲ. ಅವರಲ್ಲಿರುವ ಉತ್ತಮ ಸಂಸ್ಕಾರಗಳಿಂದಲೇ ಅವರಿಗೆ ಉನ್ನತ ಪದವಿಗಳು ಒಲಿದುಬಂದಿವೆ. ಆದರೆ ಇಂದು ಬ್ರಾಹ್ಮಣರು ಸಂಸ್ಕಾರ, ಅನುಷ್ಠಾನಗಳಿಂದ ವಿಮುಖರಾಗುತ್ತಿರುವುದು ಕಂಡುಬರುತ್ತಿದೆ. ಬ್ರಾಹ್ಮಣರಾದ ನಾವು ನಮ್ಮ ಕರ್ತೃತ್ವ ಶಕ್ತಿಯನ್ನು ಮರೆಯುತ್ತಿದ್ದೇವೆ. ಬ್ರಾಹ್ಮಣ ಎಂದುಕೊಳ್ಳಲೂ ಹಿಂಜರಿಯುತ್ತಿದ್ದೇವೆ. ಬ್ರಾಹ್ಮಣರೂ ಈ ಸಮಾಜದ ಅವಿಭಾಜ್ಯ ಅಂಗ. ತಮಗೆ ಸಲ್ಲುವಂಥದ್ದನ್ನು ಕೇಳಿ ಪಡೆಯಲು ಹಿಂಜರಿಕೆ ಬೇಡ ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಅನುಭವಿಕ ರಾಜ್ಯಾಧ್ಯಕ್ಷ […]