
JANANUDI.COM NETWORK ಶಿರ್ವ: ಶಿರ್ವದಲ್ಲಿ ಜ್ಯುವೆಲ್ಲರಿ ಶಾಪ್ ಒಂದರಲ್ಲಿ ಗ್ರಾಹಕರ ಸೋಗಿನಲ್ಲಿ ಬಂದಿರುವ ಅಪರಿಚಿತರಿಬ್ಬರು ಲಕ್ಷಾಂತರ ರೂ. ಮೌಲ್ಯದ ನೆಕ್ಸೆಸ್ ನೊಂದಿಗೆ. ಪರಾರಿಯಾಗಿರುವ ಘಟನೆ ನಡೆದಿದೆ. ಕುತ್ಯಾರುವಿನ ಕೆ.ವಿವೇಕಾನಂದ ಆಚಾರ್ಯ ಅವರ ಶಿರ್ಪ ಪೇಟೆಯಲ್ಲಿರುವ ಕೃಪಾ ಜ್ಯುವೆಲ್ಲರ್ಸ್ ನಲ್ಲಿ ಜೂ.6ರಂದು ಈ ಘಟನೆ ನಡೆದಿದ್ದು, ಜೂನ್ ೯ ರಂದು ಸಿಸಿ ಟಿವಿ ಪರಿಶೀಲನೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.ಲಪರಿಚಿತರಿಬ್ಬರು ಚಿನ್ನ ಖರೀಸಿಸುವ ನೆಪದಲ್ಲಿ ನೆಕ್ಸೆಸ್ ಅನ್ನು ಎಗರಿಸಿದ್ದು ದಾಖಲಾಗಿದೆ. ಖದೀಮರು ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ […]

JANANUDI.COM NETWORK ಕುಂದಾಪುರ,ಜೂ.10: ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಶಾಲಾ ಗುಮಾಸ್ತೆಯಾದ ವಿನಯಾ ಡಿಕೋಸ್ತಾರವರು ಕೊಡಮಾಡಿದ ಸುಮಾರು 50 ಸಾವಿರ ರೂಪಾಯಿ ಬೆಲೆ ಬಾಳುವ ಇನವರ್ಟರನ್ನು (ಜೂ.10) ಪತಿ ಬರ್ನಾಡ್ ಡಿಕೋಸ್ತಾ ಜೊತೆ ಉದ್ಘಾಟಿಸಿ ಶಾಲೆಗೆ ಹಸ್ತಾತಂರಿಸಿದರು. “ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತ ಮಕ್ಕಳು ಎಂದಿಗೂ ಕೀಳರಿಮೆ ಮಾಡಿಕೊಳ್ಳಬಾರದು, ಇಲ್ಲಿ ದೊರಕುವ ಜ್ನಾನ ಸಂಪತ್ತಿನಿಂದ ಸಮಾಜದಲ್ಲಿ ಉನ್ನತ ಸ್ಥಾನ ಮಾನ ಗಳಿಸಿ, ಮುಂದೆ ನೀವು ಇತರರಿಗೆ ದಾನ ಮಾಡುವ ಕ್ಷಮತೆಯನ್ನು ಪಡೆದುಕೊಳ್ಳಬೇಕು. ದಾನವನ್ನು ಸೂಕ್ತ ಸಂದರ್ಭದಲ್ಲಿ, ಸೂಕ್ತವಾದ […]

ವರದಿ : ಮಝರ್, ಕುಂದಾಪುರ ಕುಂದಾಪುರ : ವಿಶ್ವ ಪರಿಸರ ದಿನಾಚರಣೆ ಯ ಅಂಗವಾಗಿ ಸಮೀಪದ ಮೂಡುಬಗೆಯ ವಾಗ್ಜ್ಯೋತಿ ಮೂಗ ಮತ್ತು ಕಿವುಡ ಮಕ್ಕಳ ಶಾಲೆಯ ತೋಟದಲ್ಲಿ ಹೂವಿನ ಹಾಗೂ ಹಣ್ಣಿನ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷರಾದ ಕೋಡಿ ರತ್ನಾಕರ ಪೂಜಾರಿಯವರು ಚಾಲನೆ ನೀಡಿದರು. ಆರಂಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ರವೀಂದ್ರ ರವರು ಮಾತನಾಡಿ ವಿಶೇಷ ಚೇತನ ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಹಸಿರು ಮತ್ತು ಪರಿಸರವು ಬೀರುವ ಮಹತ್ವವನ್ನು ಹೇಳಿದರು. ತನ್ನ ಹುಟ್ಟು ಹಬ್ಬದ ಸಲುವಾಗಿ […]

JANANUDI.COM NETWORK ಬೆಂಗಳೂರು,ಜೂ.8: ಉಡುಪಿ ಜಿಲ್ಲೆಯಲ್ಲಿ 9ರಿಂದ 11ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ನಿನ್ನೆ ಸಂಜೆಯಿಂದ ಇಂದು ಉಡುಪಿ ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆಯಾಗಿದೆ. ಈ ನಡುವೆ ಹವಮಾನ ಇಲಾಖೆ 9ರಿಂದ 11ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ತಿಳಿಸಿದೆ.

ವರದಿ: ವಾಲ್ಟರ್ ಮೊಂತೇರೊ, ಬೆಳ್ಮಣ್ಣು 65 ವರ್ಷ ಮೇಲ್ಪಟವರಿಗೆ ಸರಕಾರ 1200 ರೂ ಗಳ ಪಿಂಚಣಿ ನೀಡುತ್ತಿದ್ದು ಆದರೆ ಇದು ಜನರಿಗೆ ಸಮರ್ಪಕವಾಗಿ ಕೈ ಸೇರುತ್ತಿಲ್ಲ ಈ ಹಿಂದೆ ವಿಧವ ವೇತನ 600 ಪಡೆಯುತ್ತಿದ್ದ 65 ವರ್ಷ ಮೇಲ್ಪಟ್ಟವರು ಸರಕಾರ ನೀಡುವ ರೂ 1200 ಪಿಂಚಣಿ ಪಡೆಯಲು ಅರ್ಹರಿದ್ದರೂ ಮಾಹಿತಿ ಕೊರತೆಯಿಂದ ಹಾಗೂ ಇನ್ನಿತರ ಕಾರಣಗಳಿಂದಾಗಿ 80 ವರ್ಷವಾದರೂ ಪಿಂಚಣಿ ಪರಿಷ್ಕರಣೆಗೊಂಡಿಲ್ಲ. ಸರ್ವೆ ಮೂಲಕ ಇದನ್ನು ಕಂಡುಕೊಂಡ ನಂದಳಿಕೆ ಗ್ರಾಮ ಪಂಚಾಯತ್ ಅದ್ಯಕ್ಷರು ಮತ್ತು ಸದಸ್ಯರ ತಂಡ […]

ವರದಿ : ಮಝರ್, ಕುಂದಾಪುರ ಕುಂದಾಪುರ : ವಿವಾಹಿತ ಪುರುಷನೊಂದಿಗೆ ಲೀವ್ ಇನ್ ರಿಲೇಶನ್ ನಲ್ಲಿದ್ದ ಮಹಿಳೆ ಯೋರ್ವಳು ತಾನು ವಾಸ್ತವ್ಯವಿದ್ದ ಬಾಡಿಗೆ ಮನೆಯೊಂದರಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಪ್ರಕರಣ ನಿನ್ನೆ ಬೆಳಿಗ್ಗೆ ಖಾರ್ವಿ ಕೇರಿಯಲ್ಲಿ ನಡೆದಿದೆ.ಮೃತಳನ್ನು ಸುರೋಜಾ ಯಾನೆ ಪೂಜಾರಿ(36) ಎಂದು ಗುರ್ತಿಸಲಾಗಿದೆ.ಮೂಲತಃ ಯಲ್ಲಾ ಪುರದವಳಾಗಿರುವ ಸರೋಜಾಳಿಗೆ ಮದುವೆಯಾಗಿ ಓರ್ವ ಪುತ್ರನಿದ್ದಾನೆ. ಪತಿಯು ತ್ಯಜಿಸಿ ಹೋದನಂತರ ಸಹೋದರಿಯೊಂದಿಗೆ ತ್ರಾಸಿಯಲ್ಲಿ ನೆಲೆ ನಿಂತ ಸರೋಜಾ ಕುಂದಾಪುರದ ಕೆಲವು ಅಂಗಡಿ ಗಳಲ್ಲಿ ಕೆಲಸಮಾಡಿ ಜೀವನ ನಡೆಸುತ್ತಿದ್ದಾಳೆನ್ನಲಾಗಿದೆ. ಈ […]

JANANUDI.COM NETWORK ಶಿರ್ವ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಕರು ಯಾವುದೇ ಪರೀಕ್ಷೆಯನ್ನು ಎದುರಿಸಬೇಕಾದದಲ್ಲಿ ಅವರಲ್ಲಿ ಪರೀಕ್ಷೆಯ ಸಂಪೂರ್ಣ ಮಾಹಿತಿ, ಮಾರ್ಗದರ್ಶನವನ್ನು ಪಡೆದು ಪೂರ್ವಸಿದ್ಧತೆಯನ್ನು ಮಾಡಿದ್ದಲ್ಲಿ ಮುಂದೆ ಎಂಥಾ ಸವಾಲುಗಳನ್ನು ಎದುರಿಸುವ ಗುಣಗಳನ್ನು ಪಡೆಯಬಹುದು. ಕಠಿಣ ಪರಿಶ್ರಮದ ಜೊತೆಗೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಕೌಶಲ್ಯಗಳನ್ನು ಅರಿತುಕೊಂಡು ಪ್ರಯತ್ನ ಪಡುವ ಮೂಲಕ ಉದ್ಯೋಗವನ್ನು ಪಡೆದು ಅವರ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಇಂತಹ ಕಾರ್ಯಗಾರಗಳು ಅತ್ಯಗತ್ಯ ಎಂದು ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿದರು.ಶಿರ್ವ […]

JANANUDI.COM NETWORK ಹಳೆ ವಿದ್ಯಾರ್ಥಿ ಸಂಘ (ರಿ), ಬೋರ್ಡ್ ಹೈಸ್ಕೂಲ್ ಕುಂದಾಪುರದ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರದಲ್ಲಿ ಶತಮಾನೋತ್ತರ ಬೆಳ್ಳಿ ಹಬ್ಬದ ಭವನ ಹಸ್ತಾಂತರ ಜೂನ್ 12ರಂದು ನಡೆಯಲಿದೆ.ಈ ಸಮಾರಂಭದೊಂದಿಗೆ ಶಾಲೆಗೆ ಕೀರ್ತಿ ತಂದ ಕಾರಂತ, ಮುದ್ದಣ್ಣ, ಅಡಿಗರ ಪುತ್ಥಳಿ ಅನಾವರಣ ಕಾರ್ಯಕ್ರಮ ಸಹ ನಡೆಯಲಿದೆ. ಕರ್ನಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ. ಎಸ್. ಪುತ್ಥಳಿ ಅನಾವರಣ ಮಾಡಲಿದ್ದಾರೆ. ಸಮಾರಂಭವನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಉದ್ಘಾಟಿಸಲಿದ್ದಾರೆ.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೊಲಮನ್ […]

JANANUDI.COM NETWORK ಸಂತ ಮೇರಿಯ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಸಂತ ಮೇರಿ ಫ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಅಸುಂತಾ ಲೋಬೊ ಅತಿಥಿಯಾಗಿ ಆಗಮಿಸಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಡೋರಾ ಸುವಾರಿಸ್ ಇವರು ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ಸಂರಕ್ಷಣೆ ಮಾಡುವ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ‘ಪ್ರಕೃತಿ ಇಕೋ ಕ್ಲಬ್ ‘ ವತಿಯಿಂದ ವಿದ್ಯಾರ್ಥಿಗಳಿಗೆ ಚಿತ್ರ ಕಲಾ ಸ್ಪರ್ಧೆ ನಡೆಸಲಾಯಿತು.ಕಾರ್ಯಕ್ರಮದಲ್ಲಿ […]