ಮಂಗಳೂರು: ಈ ಪ್ರದೇಶದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದುದನ್ನು ಸಂಪೂರ್ಣವಾಗಿ ನಿಷೇಧಿಸಿದಕ್ಕಾಗಿ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್ ರವರಿಗೆ ಕಥೊಲಿಕ್ ಸಭಾ ಸಂಘಟನೆಯಿಂದ ಸಮಸ್ತ ದ್ವೀಪ ನಿವಾಸಿಗಳ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು. ಮಂಗಳೂರು ತಾಲೂಕು ಗ್ರಾಮದ ಪಾವೂರು ಉಳಿಯ ಎಂಬಲ್ಲಿ ನೇತ್ರಾವತಿ ನದಿ ಹರಿಯುತ್ತಿದ್ದು ಈ ನದಿ ತೀರದಲ್ಲಿ ದ್ವೀಪವಿದ್ದು,ಈ ದ್ವೀಪದ ಸುತ್ತ ಪ್ರದೇಶವು ನದಿಯು ಹರಿಯುತ್ತಿದ್ದು, ಈ ದ್ವೀಪದಲ್ಲಿ 58 ಮನೆಗಳು ಹಾಗೂ ಕ್ರೈಸ್ತ ದೇವಾಲಯ ಇರುತ್ತದೆ. ಈ ದ್ವೀಪ ಪ್ರದೇಶದ ನಿವಾಸಿಗಳು ಪೇಟೆಗೆ ಹಾಗೂ ದಿನ ನಿತ್ಯ […]
ಕುಂದಾಪುರ (ಅ.19) : ಶಿಕ್ಷಕರಾದವರು ಸಾಧುಸಂತರ ಹಾಗೆ ವೇದಿಕೆಯಲ್ಲಿ ನಿಂತು ಪ್ರವಚನ ನೀಡುವುದಕ್ಕಿಂತ ವಿದ್ಯಾರ್ಥಿಗಳ ಜೊತೆಗಿದ್ದು, ಅವರ ಮನೋಬಲವನ್ನು ಅರಿತು ಮಾರ್ಗದರ್ಶಕರಾಗಬೇಕು ಎಂದು ಖ್ಯಾತ ಶಿಕ್ಷಣ ತಜ್ಞ ಸಿಕ್ಕಿಂ ಮಣಿಪಾಲ ವಿಶ್ವವಿದ್ಯಾನಿಲಯದ ಪ್ರೊ. ಚಾನ್ಸಲರ್ ಆಗಿರುವ ಡಾ. ರಾಮನಾರಾಯಣ್ ಹೇಳಿದರು. ಅವರು ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳಲ್ಲಿ ಶಿಕ್ಷಕರಿಗಾಗಿ ಆಯೋಜಿಸಿದ ಪುನಶ್ಚೇತನ ಕಾರ್ಯಾಗಾರದಲ್ಲಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮಾತನಾಡುತ್ತಾ ತರಗತಿಯಲ್ಲಿ ಸಮಸ್ಯೆಗಳು ಎಲ್ಲಿವೆ ಎಂದು ಯೋಚಿಸುವುದಕ್ಕಿಂತ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ಇಂದಿನ […]
ಕುಂದಾಪುರ: ಅಕ್ಟೋಬರ್ 18 ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಮಹಿಳಾ ವೇದಿಕೆಯ ಆಶ್ರಯದಲ್ಲಿ ” ಸ್ವಯಂ ಕಾಳಜಿ ಮತ್ತು ಸ್ವಚ್ಛತೆ ” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರದ ಆಯುಷ್ ಧಾಮ ಆಸ್ಪತ್ರೆಯ ವ್ಯವಸ್ಥಾಪಕರಾದ ಡಾ.ಸೋನಿ ಡಿಕೊಸ್ತಾ ಮಾತನಾಡಿ ಮೊದಲು ಆಧ್ಯಾತ್ಮಿಕ ನೆಲೆಯಲ್ಲಿ ಸ್ವಯಂ ಕಾಳಜಿ ಮಾಡಬೇಕು. ಅಂದರೆ ಸಕಾರಾತ್ಮಕ ಆಲೋಚನೆ ಮತ್ತು ಮನಸ್ಥಿತಿಯನ್ನು ರೂಡಿಸಿಕೊಳ್ಳಬೇಕು. ತುಂಬಾ ಭಾವನಾತ್ಮಕತೆಗೆ ಒಳಗಾಗದೆ ಮಾನಸಿಕವಾಗಿ ಗಟ್ಟಿತನ ಬೆಳೆಸಿಕೊಳ್ಳಬೇಕು. ಜೊತೆಗೆ ದೈಹಿಕ ಸ್ವಾಸ್ಥ್ಯ ಮತ್ತು […]
ಮಂಗಳೂರು: 17 ಅಕ್ಟೋಬರ್ 2024 ರಂದು, ಸಿಒಡಿಪಿಯ ಮದರ್ ಥೆರೆಸಾ ಸಭಾಂಗಣದಲ್ಲಿ ಶ್ರೀಮಾನ್ ಮೈಕಲ್ ಡಿ ಸೋಜ ಮತ್ತು ಕುಟುಂಬದವರಿಂದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಶಿಕ್ಷಣ ನೆರವು ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ.ವಂ.ಪೀಟರ್ ಪೌಲ್ ಸಲ್ಡಾನ್ಹ ವಹಿಸಿ, ಸಾಂಕೇತಿಕವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಬಡ್ಡಿರಹಿತ ಸಾಲರೂಪದ ನೆರವನ್ನು ಹಸ್ತಾಂತರಿಸಿ ಈ ಕಾರ್ಯಕ್ರಮಕ್ಕೆ ಶುಭ ನುಡಿದರು.ಶ್ರೀಮಾನ್ ಮೈಕಲ್ ಡಿ ಸೋಜ ರವರು ಹೆತ್ತವರ ಬಗ್ಗೆ ಕಾಳಜಿ ವಹಿಸಿ, ಸಮಾಜದಲ್ಲಿ ಉತ್ತಮ ನಡವಳಿಕೆ […]
ಕಥೋಲಿಕ್ ಸಭಾ ಕುಂದಾಪುರ ವಲಯ ಮಟ್ಟದ ಭಾಷಣ ಸ್ಪರ್ಧೆಗಳು 2024 ರ ಅಕ್ಟೋಬರ್ 17 ರಂದು ಗುರುವಾರ ಬೆಳಿಗ್ಗೆ 9.30 ಕ್ಕೆ ಕುಂದಾಪುರ ಸಂತ ಮೇರಿಸ್ ಪಿಯು ಕಾಲೇಜು ಸಭಾಂಗಣದಲ್ಲಿ ಕೊಂಕಣಿ ಮತ್ತು ಕನ್ನಡದಲ್ಲಿ ಭಾಷಣ ಸ್ಪರ್ಧೆಗಳನ್ನು ಆಯೋಜಿಸಿತ್ತು. ಹನ್ನೊಂದು ಚರ್ಚ್ ಘಟಕ್ಗಳ ವಿವಿಧ ಶಾಲೆಗಳ ಯುವ ವಾಗ್ಮಿಗಳನ್ನು, ಘಟಕ ಮಟ್ಟದ ವಿಜೇತರನ್ನು ಒಟ್ಟುಗೂಡಿಸಿತು. ಕಾರ್ಯಕ್ರಮವು ಸಾರ್ವಜನಿಕ ಮಾತನಾಡುವ ಕೌಶಲಗಳನ್ನು ಬೆಳೆಸುವ ಗುರಿಯನ್ನು ಹೊಂದಿತ್ತು, ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಸಂಬಂಧಿತ ಸಾಮಾಜಿಕ ವಿಷಯಗಳ ಬಗ್ಗೆ ತಮ್ಮ ಆಲೋಚನೆಗಳನ್ನು […]
ಕುಂದಾಪುರ; ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ತಾಲೂಕು ಘಟಕದ 2023 -24 ಸಾಲಿನ ವಾರ್ಷಿಕ ಮಹಾಸಭೆಯು ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಶ್ರೀ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿತು. ಉಪಸಭಾಪತಿ ಡಾ. ಉಮೇಶ್ ಪುತ್ರನ್ ಆಹ್ವಾನಿತ ಸದಸ್ಯರನ್ನು ಸ್ವಾಗತಿಸಿದರು. ಅಧ್ಯಕ್ಷ ಶ್ರೀ ಜಯಕರ್ ಶೆಟ್ಟಿಯವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಕುಂದಾಪುರ ರೆಡ್ ಕ್ರಾಸ್ ಸಂಸ್ಥೆ ನಡೆದು ಬಂದ ದಾರಿ, ಸಂಸ್ಥೆ ನಡೆಸುತ್ತಿರುವ ರಕ್ತ ನಿಧಿ ಹಾಗೂ […]
Mangaluru; On October 15, 2024, the Catholic Association of South Kanara (CASK) launched its inaugural program, “Reinventing Yourself: Through Paradigm Shifts in Thinking,” as part of the ‘IgniteU’ project, in collaboration with the Center for Professional Excellence and the Department of English at the School of Social Work, Roshni Nilaya, Mangaluru. The event was inaugurated […]
ಕುಂದಾಪುರ : ಬಿಜೆಪಿಯ ನಿರಂತರ ಸುಳ್ಳು ಅಪಾದನೆಗಳಿಂದ ಜನಪರ ರಾಜ್ಯ ಸರ್ಕಾರವನ್ನು ಅಸ್ಥಿರ ಗೊಳಿಸುವುದು ಅಸಾಧ್ಯ ವಿಧಾನಪರಿಷತ್ತಿನಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳ ಜನಪ್ರತಿನಿಧಿಗಳ ಧ್ವನಿ ಆಗಬಲ್ಲ ರಾಜು ಪೂಜಾರಿ ಅವರನ್ನು ಬೆಂಬಲಿಸಿದರೆ ,ಕರಾವಳಿಯ ಸ್ಥಳೀಯ ಆಡಳಿತಕ್ಕೆ ಶಕ್ತಿ ಬಂದಂತಾಗುತ್ತದೆ ,ಮಾತ್ರವಲ್ಲದೆ ಸಿದ್ದರಾಮಯ್ಯನವರ ಕೈ ಬಲಪಡಿಸಿದಂತಾಗುತ್ತದೆ ಎಂದು ಉಡುಪಿ ಜಿಲ್ಲಾ ಕೆಪಿಸಿಸಿ ಉಸ್ತುವಾರಿ ಮತ್ತು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ಹೇಳಿದರು.ಇಂದು ಕೋಟೇಶ್ವರ ಸಹನಾ ಹೋಟೆಲ್ ನಾ ಸುಮುಖ ಹಾಲಿನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಕುಂದಾಪುರ […]