Reported by : Richard Dsouza ಉಡುಪಿ: ಕಾರ್ಕಳದಲ್ಲಿ ನಡೆಯುತ್ತಿದ್ದ ಪ್ರಾರ್ಥನೆಯ ವೇಳೆ ಹಿಂದೂ ಸಂಘಟನೆಯ ಕಾರ್ಯಕರ್ತರು ಏಕಾಏಕಿ ದಾಳಿ ನಡೆಸಿ ದಾಂಧಲೆ ಎಬ್ಬಿಸಿರುವುದ ಖಂಡನೀಯ. ಪ್ರಾರ್ಥನೆಗೆ ತೆರಳಿದವರ ಮೇಲೆ ದಾಳಿ ನಡೆಸುವ ಬದಲು ಅವರ ಮನವೊಲಿಸಿ ಸಮಸ್ಯೆ ಅರಿಯುವ ಕೆಲಸ ಮಾಡಬೇಕಿತ್ತು ಎಂದು ಕ್ರೈಸ್ತ ನಾಯಕಿ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.ನೇರವಾಗಿ ಹೋಗಿ ದಾಳಿ ಮಾಡಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಪ್ರಾರ್ಥನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದ್ದು ಎಲ್ಲಾ ಧರ್ಮದವರ ಪ್ರಾರ್ಥನೆಗಳು ಎಲ್ಲಾ ಕಡೆಯಲ್ಲೂ ನಡೆಯುತ್ತಿದ್ದು ಕೊನೆಯಲ್ಲಿ […]
JANANUDI.COM NETWORK ಕಾಂತಾವರ ಗ್ರಾಮದ ಬೇಲಾಡಿಯಲ್ಲಿ ಅರ್ಥಿಕವಾಗಿ ತೀರಾ ಹಿಂದುಳಿದ ಮನೆಯೊಂದಕ್ಕೆ ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸಿನ ಅಧ್ಯಕ್ಷರಾದ “ಅನಿತಾ ಡಿಸೋಜ ಬೆಳ್ಮಣ್” ಭೇಟಿ ನೀಡಿ ಗಣೇಶ ಚತುರ್ಥಿಯ ಪ್ರಯುಕ್ತ ದಿನಬಳಕೆ ವಸ್ತುಗಳು ಮತ್ತು ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದರು. ಹಾಗೂ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ತೀವ್ರ ಸ್ವರೂಪದ ಗಾಯಗೊಂಡು ದುಡಿಯಲಾಗದೇ ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತ್ತಿರುವ ಬೋಳ ಗ್ರಾಮದ “ಸಂದೀಪ್” ಅವರ ಮನೆಗೂ ಭೇಟಿ ನೀಡಿ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ […]
JANANUDI.COM NETWORK ಬೆಳ್ಳೆ ಗ್ರಾಮ ಪಂಚಾಯತ್, ಸಂತ ಲಾರೆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳು, ಲಯನ್ಸ್ ಕ್ಲಬ್, ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಪರಿಸರ ಸಂಘ ಮೂಡುಬೆಳ್ಳೆ ಇವರ ಜಂಟಿ ಆಶ್ರಯದಲ್ಲಿ ಪ್ಲಾಸ್ಟಿಕ್ ಮುಕ್ತ ಮೂಡುಬೆಳ್ಳೆ ಕಾರ್ಯಕ್ರಮಕ್ಕೆ ಪ್ರಾಯೋಗಿಕ ಚಾಲನೆಯನ್ನು ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ನೀಡಲಾಯಿತು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಧಾಕರ್ ಪೂಜಾರಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ವಲೇರಿಯನ್ ನೊರೊನಾ ಎನ್ಎಸ್ಎಸ್ ಯೋಜನಾಧಿಕಾರಿ ಜಸಿಂತಾ ಲೋಬೋ , ಲಯನ್ಸ್ ಕ್ಲಬ್ಬಿನ ಪದಾಧಿಕಾರಿಗಳು, ಗ್ರಾಮ ಪಂಚಾಯತ್ […]
JANANUDI.COM NETWORK ಅಜೆಕಾರ್, ಸೆ.8: ಅಜೆಕಾರ್ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಚರ್ಚಿನಲ್ಲಿ ಮಾತೆ ಮೇರಿಯವರ ಜನ್ಮದಿನದ ಹಬ್ಬವನ್ನು ಧರ್ಮಕೇಂದ್ರವು ಒಂದು ಕುಟುಂಬದಂತೆ ಸಂತೋಷದಿಂದ ಆಚರಿಸಿದರು. ಈ ಹಬ್ಬದ. ಸಿದ್ಧತೆಗಾಗಿ ಮಕ್ಕಳು ಮತ್ತು ಪೋಷಕರು ಸತತ 9 ದಿನಗಳ ನೊವೆನಾ ಪ್ರಾರ್ಥನೆ ಮತ್ತು ಪವಿತ್ರ ಬಲಿದಾನದಲ್ಲಿ ಭಾಗವಹಿಸಿದರು. ಚರ್ಚಿನ ಧರ್ಮಗುರು ವಂ| ಪ್ರವೀಣ್ ಅಮೃತ್ ಮಾರ್ಟಿಸ್ ನೊವೆನಾ ಮತ್ತು ಬಲಿದಾನವನ್ನು ನಡೆಸಿಕೊಟ್ಟರು. ಇವತ್ತು ಮೊಂತಿ ಸಂಭ್ರಮ ಭಕ್ತಿಯ ಹಬ್ಬಬಲಿ ಪೂಜೆಯನ್ನು ಅರ್ಪಿಸಿ ಫಾ| ಪ್ರವೀಣ್ ಅಮೃತ್ ಮಾರ್ಟಿಸ್ […]
JANANUDI.COM NETWORK ಗಂಗೊಳ್ಳಿ: ದಿನಾಂಕ 06-09-2021 ಸೋಮವಾರದಂದು 8ನೇ ತರಗತಿಯ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಅಪರಹ್ನ 1:00 ಗಂಟೆಗೆ ವಿದ್ಯಾರ್ಥಿಗಳು ಆಗಮಿಸಿದರು. ಮುಖ್ಯಶಿಕ್ಷಕಿಯ ಅನುಪಸ್ಥಿತಿಯಲ್ಲಿ ಹಿರಿಯ ಶಿಕ್ಷಕಿ ಶ್ರೀಮತಿ ಫೆಲ್ಸಿಯಾನ ಡಿಸೋಜ ವಿದ್ಯಾರ್ಥಿಗಳಿಗೆ ಸ್ವಾಗತಿಸಿದರು. ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಪುಷ್ಪವನ್ನು ನೀಡಿದರು. ವಿದ್ಯಾರ್ಥಿಗಳ ಪರಿಚಯವನ್ನು ಮಾಡಿಕೊಂಡ ಶಿಕ್ಷಕರು, ತಮ್ಮ ಪರಿಚಯವನ್ನು ತಿಳಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಯನ್ನು ಹಂಚಲಾಯಿತು.
JANANUDI.COM NETWORK ಮೂಡುಬೆಳ್ಳೆ: ಶಿಕ್ಷಕರು ಮಕ್ಕಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಒಂದು ಮಗುವನ್ನು ಮಾನವನನ್ನಾಗಿ ಮಾಡುವ ಸಂಪೂರ್ಣ ಜವಾಬ್ದಾರಿ ಶಿಕ್ಷಕರಿಗೆ ಇದೆ .ಪ್ರತಿಯೊಂದು ಮಗುವಿನ ಸಾಮರ್ಥ್ಯವನ್ನು ಅರಿತು ಮಗುವಿನ ಬೆಳವಣಿಗೆಗೆ ಪೂರಕ ವಾತಾವರಣವನ್ನು ನಿರ್ಮಿಸುವುದು ಶಿಕ್ಷಕರ ಮಹತ್ತರ ಜವಾಬ್ದಾರಿಯಾಗಿದೆ ಎಂದು ಮೂಡುಬೆಳ್ಳೆ ಸಂತ ಲಾರೆನ್ಸ್ ಸಮಾ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಜಾರ್ಜ್ ಡಿಸೋಜಾ ಹೇಳಿದರು . ಅವರು ಮೂಡುಬೆಳ್ಳೆ ಸಂತ ಲಾರೆನ್ಸ್ ಸಮೂಹ ಶಿಕ್ಷಣಸಂಸ್ಥೆಗಳ ಶಿಕ್ಷಕರ ದಿನಾಚರಣೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು .ಕಾರ್ಯಕ್ರಮದ ಮುಖ್ಯ […]
JANANUDI.COM NETWORK ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ವಹಿಸುತ್ತಿದ್ದ ಸ್ವಯಂ ಸೇವಾ ಸಂಸ್ಥೆಗಳ ನೆರವಿನಿಂದ ಕಾರ್ಯಾಚರಿಸುತ್ತಿದ್ದ ಸಾಂತ್ವನ ಕೇಂದ್ರಗಳನ್ನು ಆರ್ಥಿಕ ಕೊರತೆಯ ನೆಪವೊಡ್ಡಿ ರಾಜ್ಯ ಸರಕಾರ ಸ್ಥಗಿತಗೊಳಿಸಲು ಹೊರಟಿರುವುದು ಮಹಿಳಾ ವಿರೋಧಿ ಕ್ರಮವಾಗಿದೆ ಇದು ಖಂಡನೀಯ ಎಂದು ಕಾರ್ಕಳ ಮಹಿಳಾ ಬ್ಲಾಕ್ ಅಧ್ಯಕ್ಷೆ ಅನಿತಾ ಡಿಸೋಜ ಬೆಳ್ಮಣ್ ಖಂಡಿಸಿದ್ದಾರೆ. ’ರಾಜ್ಯದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಸಮಯದಲ್ಲಿ ದೌರ್ಜನ್ಯಕ್ಕೊಳಗಾದವರಿಗೆ ಸಮಾಲೋಚನೆ ಸೇರಿದಂತೆ ನೊಂದ ಮಹಿಳೆಯರಿಗೆ ಶಿಕ್ಷಣ-ಉದ್ಯೋಗ ಆರ್ಥಿಕ ನೆರವು ಉಚಿತ ಕಾನೂನು ನೆರವು […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ:- ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲಾ ರೈತರು,ಹೆಣ್ಣು ಮಕ್ಕಳಿಗೆ ಒಂದೇ ಸಮಾನವಾಗಿ ಸಾಲ ವಿತರಿಸಲಾಗಿದೆ ಸಾಲ ವಿತರಣೆಯಲ್ಲಿ ತಾರತಮ್ಯದ ಆರೋಪ ಮಾಡುತ್ತಿರುವ ಕೆಲವರು ಕೇಂದ್ರ ಕಚೇರಿಗೆ ಬಂದು ಪರಿಶೀಲಿಸಿ ವಾಸ್ತವಾಂಶ ಅರಿತು ನಂತರ ಮಾತನಾಡಲಿ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸಲಹೆ ನೀಡಿದರು.ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಸೋಮವಾರ ಸ್ತ್ರೀಶಕ್ತಿಯ 11 ಸಂಘಗಳಿಗೆ ಸುಮಾರು 58 ಲಕ್ಷ ಸಾಲ ನೀಡಿ ಮಾತನಾಡಿದ ಅವರು ನಾನು ಡಿಸಿಸಿ ಬ್ಯಾಂಕಿನ ಎರಡೂ ಜಿಲ್ಲೆಗೆ ಅಧ್ಯಕ್ಷನಾಗಿದ್ದೇನೆ, […]
JANANUDI.COM NETWORK ಗಂಗೊಳ್ಳಿ ಸೆ :6 ಅಪೋಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಅಧೀನದ ಸ್ಟೆಲ್ಲಾ ಮಾರಿಸ್ ಸಮೂಹ ಶಾಲೆಗಳಲ್ಲಿ ಶಿಕ್ಷಕರ ದಿನಾಚರಣೆಯಯನ್ನು ಸಂಭ್ರಮದಿಂದ ಆಚರಿಸಲಾಯಿತು.ಭ.ಜ್ಯೋತಿ ಪ್ರಿಯಾ ಸ್ವಾಗತಿಸಿದರು,ಆದರ್ಶ್ ಶಿಕ್ಷಕ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ರವರ ಜೀವನ ಮತ್ತು ಸಾಧನೆಗಳನ್ನು ವಿಡಿಯೋ ತುಣುಕನ್ನು ಪ್ರದರ್ಶಿಸಲಾಯಿತು. ಜಂಟಿ ಕಾರ್ಯದರ್ಶಿ ಭ. ಜ್ಯೋತಿ ಸಂದೇಶಗಳನ್ನು ತಿಳಿಸಿದರು. ಶಿಕ್ಷಕರಿಗೆ ವಿವಿಧ ವಿನೋದ ಆಟಗಳನ್ನು ಆಡಿಸಲಾಯಿತು.ಕೊನೆಯಲ್ಲಿ ಸಹಭೋಜನವನ್ನು ಏರ್ಪಡಿಸಲಾಯಿತು. ಮುಖ್ಯೋಪಾಧ್ಯಾಯಿನಿರಾ ದ ಭ. ಕ್ರೆಸೆನ್ಸ್, ಭ. ಡೋರಿನ್ ಉಪಸ್ಥಿತರಿದ್ದರು. ಗಣೇಶ ಹೆಬ್ಬಾರ್ ವಂದಿಸಿದರು.