
ಕರ್ನಾಟಕದ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ, ಚಿತ್ರ ನಿರ್ದೇಶಕ, ಚಿತ್ರ ನಿರ್ಮಾಪಕ ರವಿ ಬಸ್ರೂರು ಅವರನ್ನು “ಕುಂದಪ್ರಭ” ಸಂಸ್ಥೆಯ ಆಶ್ರಯದಲ್ಲಿ ಪ್ರದಾನ ಮಾಡುವ ಕೋ. ಮ. ಕಾರಂತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಖ್ಯಾತ ಪತ್ರಕರ್ತ, ಅಂಕಣಗಾರ, ಬ್ಯಾಂಕರ್ ಹಾಗೂ ತರಬೇತುದಾರ ಕೋಣಿ ಮಹಾಬಲೇಶ್ವರ ಕಾರಂತರ ಹೆಸರಲ್ಲಿ ಕಳೆದ 22 ವರ್ಷಗಳಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಂದಾಪುರ ಮೂಲದ ಸಾಧಕರಿಗೆ ಕೋ. ಮ. ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ವರ್ಷ ಸಂಗೀತ ಕ್ಷೇತ್ರದಲ್ಲಿ ಸಾಧನೆ ಹಾಗೂ ಕುಂದ […]

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪೂರ್ವಿಕಾ ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭರತನಾಟ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಭರತನಾಟ್ಯ ಕಲಾವಿದೆ ಪೂರ್ವಿಕಾಳ ಈ ಸಾಧನೆಯನ್ನು ಮೆಚ್ಚಿ ಕಾಲೇಜಿನ ಸಂಚಾಲಕರಾದ ಶ್ರೀ ಬಿ. ಎಮ್. ಸುಕುಮಾರ್ ಶೆಟ್ಟಿಯವರು, ಆಡಳಿತ ಮಂಡಳಿ, ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಹಾಗೂ ಬೋಧಕ- […]

ಕುಂದಾಪುರ: ಡಿಸೆಂಬರ್ 2ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಅಂತರ್ ಕಾಲೇಜು ಸಂಗೀತ ಸ್ಪರ್ಧೆಗಳು ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸ್ತ್ರೀಯ ಸಂಗೀತ ಕಲಾವಿದ ವಿದ್ವಾನ್ ರವಿಕಿರಣ್ ಮಣಿಪಾಲ ಅವರು ಜೀವನದ ಸಂತೋಷಕ್ಕೆ ಕಲೆ ಸಾಹಿತ್ಯ ಸಂಗೀತ ಬೇಕು. ಕಲೆಯ ಆರಾಧನೆಯಲ್ಲಿ ಸೌಂದರ್ಯದ ಅನುಭವ ಆಗುತ್ತದೆ. ಕಲೆಯಲ್ಲಿ ಬದುಕಿನ ಎಲ್ಲಾ ಸಂಘರ್ಷ ಮತ್ತು ಸಮಾಧಾನವನ್ನು ತಂದುಕೊಳ್ಳಬಹುದು ಮತ್ತು ಕಾಣಬಹುದಾಗಿದೆ. ಕಲೆ ಅಂದರೆ ಸಂಗೀತ ಸಾಹಿತ್ಯ, ನಾಟಕ, ಚಿತ್ರಕಲೆ, ಕರಕುಶಲ ಕಲೆಗಳು ಹೀಗೆ ಹಲವು ಇವೆ. […]

ಕುಂದಾಪುರ, ಡಿ. 3: ಸ್ಥಳೀಯ ಸಂತ ಜೋಸೆಫರ ಪ್ರೌಢಶಾಲಾ ವಾರ್ಷಿಕ ಕ್ರೀಡೋತ್ಸವ ಸಂತ ಜೋಸೆಫ್ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ 02-12-2022 ರಂದು ನಡೆಯಿತು. ಕುಂದಾಪುರ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಪ್ರಕಾಶ್ಚಂದ್ರ ಶೆಟ್ಟಿ ಕ್ರೀಡಾ ಜ್ಯೋತಿ ಬೆಳಗಿಸಿ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡುತ್ತಾ “ಕ್ರೀಡೆ ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ದೃಢತೆಗೆ ಸಹಕಾರಿಯಾಗುತ್ತದೆ. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ” ಎಂದರು. ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿದರು. ಕ್ರೀಡೋತ್ಸವದ ಅಧ್ಯಕ್ಷರಾದ ಸಿಸ್ಟರ್ ಸಂಗೀತಾ […]

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ವಿವಿಧ ಕ್ಷೇತ್ರ ಕ್ರೀಡೆ( ಫೀಲ್ಡ್ ಇವೆಂಟ್) ಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ಶೆರಿಲ್ ಡಿಸೋಜಾ ಇವರು ಶಾಟ್ ಪುಟ್ ತ್ರೋ ನಲ್ಲಿ, ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ಶ್ರಾವ್ಯ ಜ್ಯಾವೆಲಿನ್ ತ್ರೋನಲ್ಲಿ ಹಾಗೂ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ಸಂಹಿತಾ. ಕೆ. ಶೆಟ್ಟಿ ಹ್ಯಾಮರ್ ತ್ರೋ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈ ಮೂವರು ಕ್ರೀಡಾ ಸಾಧಕ ವಿದ್ಯಾರ್ಥಿನಿಯರನ್ನು ಕಾಲೇಜಿನ ಸಂಚಾಲಕರಾದ […]

ಶೈಕ್ಷಣಿಕ ಅಭಿವೃದ್ಧಿಗೆ ನೆರವು ನೀಡಿ ಶ್ರೀನಿವಾಸಪುರ: ದಾನಿಗಳು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನೆರವು ನೀಡಬೇಕು ಎಂದು ಸಿಆರ್‍ಪಿ ಸುಬ್ರಮಣಿ ಹೇಳಿದರು.ಮಾಲೂರು ತಾಲ್ಲೂಕಿನ ಅಗಲಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಸಮವಸ್ತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ತಮ್ಮ ಸಂಬಳದಲ್ಲಿ ಉಳಿಸಿ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನೆರವಾಗುತ್ತಿದ್ದಾರೆ. ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುತ್ತಿದ್ದಾರೆ. ಅವರ ನಡೆ ಸ್ತುತ್ಯಾರ್ಹ ಎಂದು ಹೇಳಿದರು.ಧರ್ಮೇಶ್ ಮಕ್ಕಳಿಗೆ ಸಮವಸ್ತ್ರ […]

ಶ್ರೀನಿವಾಸಪುರ : ಬದುಕು ಒಂದೇ ದಿನದಲ್ಲಿ ಬದಲಾಗುತ್ತದೆ ಎನ್ನಲು ಸಾಧ್ಯವಿಲ್ಲ ಆದರೆ ಒಂದು ಒಳ್ಳೇಯ ನಿರ್ಧಾರ ಬದಕನ್ನೇ ಬದಲಾಯಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಅವನ ದೃಡ ನಿರ್ಧಾರವೇ ಪ್ರೇರಕ ಶಕ್ತಿಯಾಗಿದ್ದು , ಈ ಮಾರ್ಗದಲ್ಲಿ ಗಟ್ಟಿ ಹೆಜ್ಜೆಗಳನ್ನಿಟ್ಟಾಗಲೇ ಯಶಸ್ಸು ದೊರೆಯುತ್ತದೆ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ಅಭಿಪ್ರಾಯಪಟ್ಟರು.ತಾಲೂಕಿನ ಲಕ್ಷ್ಮೀಪುರ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘ ನಿ. ವತಿಯಿಂದ ರೈತರಿಗೆ ಕೆಸಿಸಿ ಸಾಲ ಮತ್ತು ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳಿಗೆ ಬುಧವಾರ 1ಕೋಟಿ 15 ಲಕ್ಷ ಸಾಲದ ಚೆಕ್ […]

ನಂದಳಿಕೆ : ಪ್ರತಿಯೊಂದು ಸಮಸ್ಯೆಯನ್ನು ಜಾಣ್ಮೆಯಿಂದ ಪರಿಹರಿಸುವವನೇ ನಿಜವಾದ ನಾಯಕ, ನಾಯಕತ್ವ ಕೇವಲ ಒಂದು ಹುದ್ದೆಯಲ್ಲ ಅದೊಂದು ಜವಾಬ್ದಾರಿ. ಎಲ್ಲರನ್ನೂ ಸೇರಿಸಿಕೊಂಡು ಮುನ್ನಡೆಯಬಲ್ಲ ಚಾಣಾಕ್ಷನೇ ನಿಜವಾದ ನಾಯಕ. ಪ್ರತಿ ಬಾರಿ ಹೊಸತನದ ಯೋಜನೆ ಹಾಗೂ ಹೊಸ ಕಾರ್ಯಕ್ರಮಗಳ ಮೂಲಕ ಸಂಘಟನೆಯನ್ನು ಬೆಳೆಸಬಲ್ಲ ವ್ಯಕ್ತಿಯೇ ನಿಜವಾದ ನಾಯಕ, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಎನ್ನುವುದು ಜನ ಸಾಮಾನ್ಯರ ಸಂಘ ಇಲ್ಲಿ ಎಲ್ಲರಿಗೂ ಮುಕ್ತ ಅವಕಾಶಗಳ ತೆರೆದಿದೆ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಪೂರ್ವಾಧ್ಯಕ್ಷರಾದ ಅಬ್ಬನಡ್ಕ ಸತೀಶ್ […]