ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ ಇವರ ಎಪ್ಪತ್ತೆರನೇ ಹುಟ್ಟು ಹಬ್ಬದ ಅಂಗವಾಗಿ ದೇಶದಾದ್ಯಂತ ರಕ್ತ ದಾನ ಶಿಬಿರ ಆಯೋಜಿಸಲಾಯಿತು. ಭಾರತೀಯ ರೆಡ್ ಕ್ರಾಸ್‌ ಸಂಸ್ಥೆಯ ರಕ್ತ ನಿಧಿ ಕೇಂದ್ರ ದಲ್ಲಿ ಈದಿನ ಆಯೋಜಿಸಲಾದ ರಕ್ತ ದಾನ ಶಿಬಿರ ವನ್ನು ಶಾಸಕರಾದ ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ ಉದ್ಗಾಟಿಸಿ ಉದ್ಘಾಟನಾ ಭಾಷಣ ಮಾಡಿದರು. ಸಭಾಪತಿ ಎಸ್ ಜಯಕರ ಶೆಟ್ಟಿ ಸರ್ವರಿಗೂ ಸ್ವಾಗತ ಕೋರಿದರು. ಸಭೆಯಲ್ಲಿ ಕರ್ಣಾಟಕ ಆಹಾರ ನಿಗಮದ ಉಪಾಧ್ಯಕ್ಷ ರಾದ ಕಿರಣ ಕುಮಾರ್ ಕೊಡ್ಗಿ, ಪುರಸಭಾ […]

Read More

ಬೈಂದೂರು: ಸ್ಥಳೀಯ ಹೋಲಿ ಕ್ರಾಸ್ ಚರ್ಚಿನಲ್ಲಿ ಭಾನುವಾರದಂದು ಶೋಕ ಮಾತೆಯ ದಿನಾಚರuಯನ್ನು ಆಚರಿಸಲಾಯಿತು. ಉಡುಪಿ ದಿವ್ಯ ಜ್ಯೋತಿ ಕೇಂದ್ರದ ನಿರ್ದೇಶಕರಾದ ರೆ.ಫಾ.ಸಿರಿಲ್ ಲೋಬೊ ಅವರು ದಿವ್ಯಬಲಿ ಪೂಜೆಯನ್ನು ನೇರವೇರಿಸಿದರು.ಈ ಸಂಭ್ರಮದಲ್ಲಿ ಉಡುಪಿಯ ರೆ.ಫಾ. ಹೆರಾಲ್ಡ್ ಡಿಸೋಜಾ, ಹೋಲಿ ಕ್ರಾಸ್ ಚರ್ಚಿನ ಧರ್ಮಗುರು ರೆ.ಫಾ. ವಿನ್ಸೆಂಟ್ ಕುವೆಲ್ಲೊ, ಆಚರಣೆಗಾರ ಅಂತೋನಿ ಲೋಬೊ ಮತ್ತು ಅವರ ಕುಟುಂಬ ಹಾಗೂ ಧರ್ಮಕೇಂದ್ರದ ಭಕ್ತಾಧಿಗಳು ಹಾಜರಿದ್ದರು.

Read More

ಮಕ್ಕಳು ಮನೆಯ ಸಂಪತ್ತು. ಆ ಮಕ್ಕಳ ಆಗು ಹೋಗುಗಳನ್ನು ಪೋಷಕರು ಅರಿತುಕೊಳ್ಳಬೇಕು.ಪರಸ್ಪರ ಪ್ರೀತಿ ,ವಿಶ್ವಾಸ ಅವರಲ್ಲಿ ಬೆಳೆಸಬೇಕು ಎಂದು ಉಡುಪಿ ಧರ್ಮ ಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶಕರು ಹಾಗೂ ಆಪ್ತ ಸಮಾಲೋಚರಾದ ಲೆಸ್ಲಿ ಆರೋಜಾರವರು ಹೇಳಿದರು. ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ರಕ್ಷಕ-ಶಿಕ್ಷಕ ಸಭೆಯಲ್ಲಿ ಉಡುಪಿ ಧರ್ಮ ಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶರು ಹಾಗೂ ಆಪ್ತ ಸಮಾಲೋಚಕರಾದ ಶ್ರೀ ಲೆಸ್ಲಿ ಆರೋಜಾರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಪೋಷಕರ ಕರ್ತವ್ಯವಿದೆ. […]

Read More

ಗ್ರಾಮೀಣಾಭಿವೃದ್ಧಿ ಹಾಗೂ ಕುಂದ ಕನ್ನಡ ಸಾಹಿತ್ಯ ಅಭಿವೃದ್ಧಿಯಲ್ಲಿ ಉತ್ತಮ ಸಾಧನೆ ಮಾಡಿದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಕುಂದ ಅಧ್ಯಯನ ಕೇಂದ್ರ ಉಪ್ಪುಂದ ಸಂಸ್ಥೆಯ ಮುಖ್ಯಸ್ಥ ಉಪ್ಪುಂದ ಚಂದ್ರಶೇಖರ ಹೊಳ್ಳ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ವರಮಹಾಲಕ್ಷ್ಮಿ ಹೊಳ್ಳ ದಂಪತಿಯನ್ನು ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ಅವರ ಉಪ್ಪುಂದದ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ್, ಸುರೇಖಾ ಪುರಾಣಿಕ, ಕಾರ್ಯದರ್ಶಿ ಸಚಿನ್ ನಕ್ಕತ್ತಾಯ, ಮಾಜಿ ಅಧ್ಯಕ್ಷ […]

Read More

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಎನ್.ಸಿ.ಸಿ ಆರ್ಮಿ ಕೆಡೆಟ್ ಗಳಾದ ಎಸ್.ಯು.ಒ.ರಂಜಿತ್ ಹಾಗೂ ಜೆ.ಯು.ಒ ಆನ್ಸ್ಟನ್ ಇಮ್ಯಾನ್ಯುಯಲ್ ರೆಬೆಲ್ಲೊ ಇವರುಗಳು ಇದೆ 14ನೇ ಸೆಪ್ಟೆಂಬರ್ 2022ರಿಂದ 25ನೇ ಸೆಪ್ಟೆಂಬರ್ 2022ರವರೆಗೆ ದೆಹಲಿಯಲ್ಲಿ ನಡೆಯಲಿರುವ “ಥಲ್ ಸೈನಿಕ್ ಶಿಬಿರ”ದಲ್ಲಿ ಭಾಗವಹಿಸುತ್ತಿದ್ದಾರೆ.ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗ ಅಭಿನಂದನೆಗಳನ್ನು ತಿಳಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇವರಿಗೆ ಕಾಲೇಜಿನಎನ್ ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಅಂಜನ್ ಕುಮಾರ್ ಎಂ.ಎಲ್ ತರಬೇತಿ ನೀಡಿದ್ದರು.

Read More

ಉಡುಪಿ: ಕೇಂದ್ರ ಮಾಜಿ ಸಚಿವ ದಿ. ಆಸ್ಕರ್‌ ಫೆರ್ನಾಂಡಿಸ್‌ ಪ್ರಥಮ ಪುಣ್ಯತಿಥಿಯನ್ನು ರೋಗಿಗಳಿಗೆ ಹಣ್ಣುಹಂಪಲು ವಿತರಿಸುವ ಮೂಲಕ ಸೆಪ್ಟಂಬರ್ 13 ರಂದು ಉಡುಪಿ ಜಿಲ್ಲೆಯ ಆಸ್ಕರ್‌ ಫೆರ್ನಾಂಡಿಸ್‌ ಅಭಿಮಾನಿ ಬಳಗವರು ಆಚರಿಸಿದರು. ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.     ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಆಸ್ಕರ್‌ ಫರ್ನಾಂಡಿಸ್‌ ಅಭಿಮಾನಿ ಬಳಗ ಗೌರವ ಅಧ್ಯಕ್ಷ ರೊನಾಲ್ಡ್‌ ಮನೋಹರ್‌ ಕರ್ಕಡ, ಪ್ರಮುಖರಾದ ಮಂಜಿತ್‌ […]

Read More

2021-22 ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ನೋಟೀಸುಸನ್ಮಾನ್ಯ ಸದಸ್ಯರೇ,ನಮ್ಮ ಸಂಘದ 2021-22 ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ದಿನಾಂಕ 24-09-2022ನೇ ಶನಿವಾರ ಮಧ್ಯಾಹ್ನ ಗಂಟೆ 3:00ಕ್ಕೆ ಅಧ್ಯಕ್ಷರಾದ ಶ್ರೀ ಎಸ್. ಜನಾರ್ಧನ ಇವರ ಅಧ್ಯಕ್ಷತೆಯಲ್ಲಿ ಸಂಘದ ಆವರಣದಲ್ಲಿ ನಡೆಯಲಿದೆ. ಮಾನ್ಯ ಸದಸ್ಯರು ತಪ್ಪದೇ ಸಕಾಲದಲ್ಲಿ ಹಾಜರಾಗಲು ಕೋರಲಾಗಿದೆ.

Read More

ಯಾರು ಶ್ರೇಷ್ಠ ವ್ಯಕ್ತಿಗಳಾಗಿರುತ್ತಾರೋ ಅವರೆಲ್ಲಾ ತುಂಬಾ ಸಂಸ್ಕಾರವಂತರು, ಮೌಲ್ಯವಂತರು ಆಗಿರುತ್ತಾರೆ ಎಂದು ಶ್ರೀಮತಿ ಭೀಮವ್ವ ಅಧ್ಯಕ್ಷರು ಗ್ರಾಮ ಪಂಚಾಯತ್ ತಲ್ಲೂರು ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ) ಬಾಳ್ಕುದ್ರು ಹಂಗಾರಕಟ್ಟೆ ಗ್ರಾಮ ಪಂಚಾಯತ್ ತಲ್ಲೂರು ಸರಕಾರಿ ಪ್ರೌಢಶಾಲೆ ಉಪ್ಪಿನಕುದ್ರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ “ವ್ಯಕ್ತಿತ್ವ ವಿಕಸನ ಮತ್ತು ಜೀವನ ಮೌಲ್ಯಗಳು” ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದರು. ಸಭಾದ್ಯಕ್ಷತೆಯನ್ನು ಶ್ರೀ ಉಮೇಶ್ ಮೊಗವೀರ ಅಧ್ಯಕ್ಷರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ […]

Read More