ಕುಂದಾಪುರ: ಡಿ.21, ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾಲೇಜಿನ ಅಧ್ಯಕ್ಷರಾದ ಶ್ರೀ ಸಿದ್ಢಾರ್ಥ ಜೆ ಶೆಟ್ಟಿ ಅವರು ಕ್ರಿಸ್ಮಸ್ ಕೇಕ್ ಕತ್ತರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ಇಂಜಿನಿಯರಿಂಗ್, ಎಮ್ ಬಿ ಎ, ಬಿಸಿಎ, ಬಿಕಾಂ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನೀಡಿದ್ದಲ್ಲದೆ ಬಿಸಿಎ ವಿಧ್ಯಾರ್ಥಿ ದಿಶಾಂಕ್ ಸಾಂತಾಕ್ಲಾಸ್ ವೇಷ ಧರಿಸಿ ಸಭಿಕರನ್ನು ರಂಜಿಸಿದರು. ಐ ಎಂ ಜೆ ಸಂಸ್ಥೆಗಳ ನಿರ್ದೇಶಕರಾದ ಪ್ರೊ. ದೋಮ ಚಂದ್ರಶೇಖರ್, ಎಂ ಐ ಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರರಾವ್ […]
ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಸ್ವರ್ಣ ಪಲ್ಲಕಿ ನಿರ್ಮಾಣಕ್ಕೆ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಚಾಲನೆ ನೀಡಿದರು.ಕುಂದಾಪುರದ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಭರಣ ಜ್ಯುವೆಲ್ಲರ್ಸ್‍ನ ಮಹೇಶ್ ಕಾಮತ್ ಅವರಿಗೆ ಪ್ರಸಾದ ನೀಡಿ ಜವಾಬ್ದಾರಿ ಒಪ್ಪಿಸುವ ಮೂಲಕ ಸ್ವಾಮೀಜಿಯವರು ಚಾಲನೆ ನೀಡಿದರು.ದೇವಾಲಯದ ಆಡಳಿತ ಮೊಕ್ತೇಸರರಾದ ಕೆ. ರಾಧಾಕೃಷ್ಣ ಶೆಣೈ ಜತೆ ಮೊಕ್ತೇಸರರಾದ ಜನಾರ್ಧನ ಮಲ್ಯ, ತ್ರಿವಿಕ್ರಮ ಪೈ ಹಾಗೂ ಅಕ್ಷಯ ಶೆಣೈ, ಕೆ. ಪದ್ಮನಾಭ ಶೆಣೈ, ಯು. ಅರ್ಜುನ್ ಶೆಣೈ, ವಿನಾಯಕ ಪೈ, ರಮೇಶ್ […]
ಶಿಕ್ಷಣ ಜ್ಞಾನ ಸಂಸ್ಥೆಯ ವತಿಯಿಂದ ಕೊಡ ಮಾಡುವ ಈ ಬಾರಿಯ ರಾಜ್ಯ ಮಟ್ಟದ ಶಿಕ್ಷಣ ಜ್ಞಾನ ಪ್ರಶಸ್ತಿ ಪ್ರದಾನ ಮಾಡಲಾಗಿದೆ.ಉಡುಪಿ ಜಿಲ್ಲೆಯಿಂದ ಕಾಲೇಜು, ಪ್ರೌಢಶಾಲೆ, ಪ್ರಾಥಮಿಕ, ಪೂರ್ವ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕ್ರಮವಾಗಿ ತೆಂಕನಿಡಿಯೂರು ಕಾಲೇಜಿನ ಕನ್ನಡ ಉಪನ್ಯಾಸಕ, ಪ್ರಾಂಶುಪಾಲ ವಿಶ್ವನಾಥ ಎನ್. ಕರಬ, ಕುಂದಾಪುರ ವಲಯದ ಕೋಡಿ ಬ್ಯಾರಿಸ್ ಸಂಸ್ಥೆಯ ಮುಖ್ಯೋಪಾಧ್ಯಾಯ ಜಯಶೀಲ ಶೆಟ್ಟಿ, ಬೈಂದೂರು ವಲಯದ ಆಲೂರು-ಕಳಿಯ ಶ್ರೀಮತಿ ಜಿ. ಹೆಗಡೆ ಬ್ರಹ್ಮಾವರ ವಲಯದ ಮುಂಡಾಡಿ ಅಂಗನವಾಡಿ ಕೇಂದ್ರದ ಶಿಕ್ಷಕಿ ಜ್ಯೋತಿ ಶೆಟ್ಟಿ ಆಯ್ಕೆಯಾಗಿದ್ದಾರೆ. […]
ಕುಂದಾಪುರ: ಡಿಸೆಂಬರ್ 21ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಎಜುಕೇಶನ್ ಇದರ ಸಾಂಸ್ಕೃತಿಕ ಸಹಕಾರ ಸಮಿತಿಯ ಸಹಯೋಗದಲ್ಲಿ ದೆಹಲಿಯ ಸ್ಟಿಕ್ ಮೆಕೆಯಿಂದ ಕಥಕ್ ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನಡೆಯಿತು.ರಾಷ್ಟ್ರೀಯ ಕಥಕ್ ನೃತ್ಯ ಕಲಾವಿದ ಪಂಡಿತ್ ರಾಜೇಂದ್ರ ಗಂಗಾನಿ ಅವರು ಕಥಕ್ ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಜನಮನ ಸೆಳೆಯಿತು.ಮೋಹಿತ್ ಗಂಗಾನಿಯವರು ತಬಲಾ, ವಿನೋದ್ ಕುಮಾರ್ ಅವರು ಹಾಡುಗಾರಿಕೆ ಮತ್ತು ಹಾರ್ಮೋನಿಯಂ, ಕಿಶೋರ್ ಕುಮಾರ್ ಮೃದಂಗ ಮತ್ತು ರವಿಶಂಕರ್ ಶರ್ಮಾ ಅವರು […]
ಬೈಂದೂರು: ಕಥೊಲಿಕ್ ಸಭಾ ಬೈಂದೂರು, ಕುಂದಾಪುರ ವಲಯ ಕಥೊಲಿಕ್ ಸಭಾ ಮತ್ತು ಶೆವೊಟ್ ಶ್ರತಿಷ್ಟಾನ್, ಸಿ.ಎಸ್.ಐ., ಕ್ರೈಸ್ತ ಸಮಿತಿ ಕುಂದಾಪುರ ಮತ್ತು ಪವಿತ್ರ ಶಿಲುಭೆಯ ಇಗರ್ಜಿ ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ, ಬೈಂದೂರು ಇಗರ್ಜಿಯ ಸಮುದಾಯ ಭವನದಲ್ಲಿ ಡಿ.೧೮ ರಂದು, ಕುಂದಾಪುರ ವಲಯ ಮಟ್ಟದಲ್ಲಿ “ಸೌರ್ಹಾದ ಕ್ರಿಸ್ಮಸ್” ಕಾರ್ಯಕ್ರಮ ಮತ್ತು ಶೆವೊಟ್ ಶ್ರತಿಷ್ಟಾನ್ ಇವರಿಂದ ಅಶಕ್ತರಿಗೆ ಸಹಾಯಧನ ವಿತರಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಕ್ಷೆ ಶಾಂತಿ ಪಿರೇರಾ […]
ಜೇಸಿಐ ಕುಂದಾಪುರದ 49ನೇ ಅಧ್ಯಕ್ಷರಾಗಿ ಸುಧಾಕರ್ ಕಾಂಚನ್ ಕಾರ್ಯದರ್ಶಿಯಾಗಿ ರಾಕೇಶ್ ಶೆಟ್ಟಿ ಆಯ್ಕೆಜೇಸಿಐ ಕುಂದಾಪುರ ಘಟಕದ 49ನೇ ನೂತನ ಅಧ್ಯಕ್ಷರಾಗಿ ಜೇ.ಎಪ್.ಎಮ್.ಸುಧಾಕರ್ ಕಾಂಚನ್ ನಿಕಟಪೂರ್ವಧ್ಯಕ್ಷರಾಗಿ ಶ್ರೀಮತಿ ನಾಗರತ್ನ ಜಿ ಹೆರ್ಳೆ ಉಪಾಧ್ಯಕ್ಷರುಗಳಾಗಿ ಪ್ರವೀಣ್ ಎಮ್ , ಶ್ರೀಮತಿ ಶರ್ಮಿಳಾ ಕಾರಂತ್, ಚಂದನ್ ಗೌಡ , ಸುಬ್ರಮಣ್ಯ ಆಚಾರ್ಯ , ಶಶಿಧರ್ ಶೆಟ್ಟಿ ಆಯ್ಕೆಯಾಗಿರುತ್ತಾರೆ.ಕಾರ್ಯದರ್ಶಿಯಾಗಿ ರಾಕೇಶ್ ಶೆಟ್ಟಿ ವಕ್ವಾಡಿ , ಜೊತೆ ಕಾರ್ಯದರ್ಶಿಯಾಗಿ ಚೇತನ್ ದೇವಾಡಿಗ , ಕೋಶಾಧಿಕಾರಿಯಾಗಿ ಧನುಷ್ ಕುಮಾರ್, ಜ್ಯೂನಿಯರ್ ಜೇ.ಸಿ ಅಧ್ಯಕ್ಷರಾಗಿ ಸತ್ಯನ್ ಎಸ್ […]
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರ 2022-23 ಡಿಸೆಂಬರ್23 ರಿಂದ ಡಿಸೆಂಬರ್29ರವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೂರಿ, ಹಾಲಾಡಿ ಎಂಬಲ್ಲಿ ನಡೆಯಲಿದೆ.ಡಿಸೆಂಬರ್ 23ರಂದು ಶಿಬಿರದ ಉದ್ಘಾಟನಾ ನಡೆಯಲಿದೆ. ಶಿಬಿರವನ್ನು ಹಾಲಾಡಿ ಶ್ರೀನಿವಾಸ ಶೆಟ್ಟಿ ಶಾಸಕರು ಕುಂದಾಪುರ ಕ್ಷೇತ್ರ ಇವರು ಉದ್ಘಾಟಿಸಲಿದ್ದಾರೆ.25ರಂದು ಕಸ್ತೂರಬಾ ಆಸ್ಪತ್ರೆ ಮಣಿಪಾಲ ಮತ್ತು ಹಾಲಾಡಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಲಯನ್ಸ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮಸ್ಥರಿಗೆ ನುರಿತ ವೈದ್ಯರಿಂದ ಬ್ರಹತ್ ಉಚಿತ […]
ಕುಂದಾಪುರ ಡಿಸೆಂಬರ್ 20ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕರಾಟೆ ಚಾಂಪಿಯನ್ ಶಿಪ್ 2022-23 ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಿಶ್ವಸ್ಥರಾದ ಪ್ರಕಾಶ್ ಟಿ.ಸೋನ್ಸ್ ಅವರು ಸಾವಿರಾರು ಮಕ್ಕಳು ಕರಾಟೆಯಿಂದ ಶಿಸ್ತು ಕಲಿಯುತ್ತಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಪಡೆದ ಕರಾಟೆ ಪಟುಗಳಿಗೆ ವಿಶ್ವವಿದ್ಯಾಲಯದ ವತಿಯಿಂದ ಆರ್ಥಿಕ ನೆರವು ನೀಡಬೇಕು ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ […]
ಕುಂದಾಪುರ, ಡಿಸೆಂಬರ್.17: ಐ.ಎಮ್. ಜೆ ವಿದ್ಯಾ ಸಂಸ್ಥೆಯ ಅಂಗ ಸಂಸ್ಥೆ ಆಗಿರುವ ವಿದ್ಯಾ ಅಕಾಡೆಮಿ ಯಲ್ಲಿ ಎರಡನೇ ವರ್ಷದ ಕ್ರೀಡೋತ್ಸವ ಕಾರ್ಯಕ್ರಮವು, ವಿದ್ಯಾರ್ಥಿಗಳು ಹಾಗೂ ಪೋಷಕರ ಉಪಸ್ಥಿತಿಯಲ್ಲಿ ಸಂಭ್ರಮದಿಂದ ನೆರೆವೇರಿತು.ಈ ಕಾರ್ಯಾರಂಭವನ್ನು ಐ ಎಂ ಜೆ ವಿದ್ಯಾಸಂಸ್ಥೆಯ ನಿರ್ದೇಶಕರಾದ ಪ್ರೊ. ದೋಮ ಚಂದ್ರಶೇಖರ್ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು, ಉದ್ಘಾಟನಾ ಸಮಾರಂಭದಲ್ಲಿ ಎಂ ಐ ಟ ಕಾಲೇಜಿನ ಅಡ್ಮಿನಿಸ್ಟ್ರೇಷನ್ ಆಫೀಸರ್ ಶ್ರೀ ಪ್ರದೀಪ್ ಕುಮಾರ್, ಪಿ ರ್ ಓ ಶ್ರೀ ಸುಧೀರ್ ಹೆಗ್ಡೆ ಹಾಗೂ […]