ದೇಶದ 74ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈ ದೇವಕ್ಕಾಗಿ ಸೈನಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದ ಶ್ರೀ ಯುತ ಮಂಜು ಮೊಗವೀರ ಅವರನ್ನ ಜೇಸಿಐ ಕುಂದಾಪುರದ ವತಿಯಿಂದ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿದ ಮಂಜು ಮೊಗವೀರ ಅವರು ಸೈನಿಕ ವೃತ್ತಿ ಮತ್ತು ಶ್ರೀಲಂಕಾ , ಕಾಶ್ಮೀರ ಗಡಿಗಳ ಸೇವೆಯ ಅನುಭವವನ್ನು ಹಂಚಿಕೊಂಡರು.ಈ ಸಂದರ್ಭದಲ್ಲಿ ಪೂರ್ವ ವಲಯಾಧಿಕಾರಿ ಜೇಸಿ ಅಶೋಕ್ ತೆಕ್ಕಟ್ಟೆ ಉಪಸ್ಥಿತರಿದ್ದು ಸೇನೆ ಮತ್ತು ಸೈನಿಕ ವೃತಿಯ ಬಗ್ಗೆ ಮಾತನಾಡಿದರು.ಸಭೆಯ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರದ ಅಧ್ಯಕ್ಷರಾದ ಜೇಸಿ ಸುಧಾಕರ್ ಕಾಂಚನ್ ವಹಿಸಿದರು.ಜೇಸಿ ಕುಂದಾಪುರದ […]
ಜೆಸಿಐ ಕುಂದಾಪುರಸಿಟಿ ವತಿಯಿಂದ ಗಣರಾಜ್ಯೋತ್ಸವ ಆಚರಣೆ ಕೆ ಜಿ ಜಗನ್ನಾಥ ರಾವ್ ಸರಕಾರಿ ಪ್ರೌಢ ಶಾಲೆ ಕೋಣಿ ಕುಂದಾಪುರದಲ್ಲಿ ಆಚರಿಸಲಾಯಿತು ಧ್ವಜಾರೋಹಣ ನೆರವೇರಿಸಿ ಶಾಲಾ ವಿದ್ಯಾರ್ಥಿಗಳಿಗೆ ಭಾಷಣ, ಪ್ರಭಂದ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಿ ಅವರಿಗೆ ಬಹುಮಾನ ವಿತರಿಸಲಾಯಿತು ಮತ್ತು ಎಲ್ಲರಿಗೆ ಸಿಹಿ ತಿಂಡಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪೂರ್ವವಲಯಾಧ್ಯಕ್ಷರು ಮತ್ತು ಜೆಸಿಐ ಭಾರತದ NLTS ವಿಭಾಗದ ರಾಷ್ಟ್ರೀಯ ಸಂಯೋಜಕರಾದ ಜೆಸಿ ಕಾರ್ತಿಕೇಯ ಮಧ್ಯಸ್ಥ, ಜೆಸಿಐ ಕುಂದಾಪುರಸಿಟಿ ಅಧ್ಯಕ್ಷರಾದ ಜೆಸಿ ಸೋನಿ ಡಿ ಕಾಸ್ಟ , ಜೆಸಿಐ […]
ಕುಂದಾಪುರ : ಜನೆವರಿ 21ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ. ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ಚರ್ಮ ಚಿಕಿತ್ಸಾ ವಿಭಾಗ ಮತ್ತು ಹೆಗ್ಡೆ ಆಂಡ್ ಹೆಗ್ಡೆ ಫಾರ್ಮಾಸ್ಯುಟಿಕಲ್ ಲಿಮಿಟೆಡ್, ಮುಂಬೈ ಇವರ ಸಹಯೋಗದಲ್ಲಿ “ಉಚಿತ ಚರ್ಮದ ಆರೈಕೆ ಚಿಕಿತ್ಸೆ ಮತ್ತು ಔಷಧಿ ವಿಚಾರಣಾ ಶಿಬಿರ ನಡೆಯಿತು.ಕಾರ್ಯಕ್ರಮವನ್ನು ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ ಶಾಂತಾರಾಮ್ ಪ್ರಭು ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ಚರ್ಮ ಚಿಕಿತ್ಸಾ ವಿಭಾಗದ ವೈದ್ಯರಾದ ಡಾ. ಸತೀಶ್ ಪೈ ಆಗಮಿಸಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ […]
“ಸತ್ಯ ಮತ್ತು ಪ್ರಾಮಾಣಿಕತೆ ಸದಾಕಾಲ ಬಾಳುವ ಸದ್ಗುಣಗಳು. ಇವುಗಳಿಂದಾಗಿ ನವಸಮಾಜ ನಿರ್ಮಾಣ ಸಾಧ್ಯ. ಕೌಟುಂನಿಕ ಬದುಕಿನಲ್ಲೂ ಇದರ ಅಗತ್ಯ ನಮಗಿದೆ. ಶಾಂತಿ ಹಾಗೂ ಪ್ರೀತಿಯಿಂದ ಬದುಕಿದಾಗ, ನಾವು ದೇವರಿಗೆ ಸಾಕ್ಷಿಯಾಗಲು ಸಾಧ್ಯ” ಹೀಗೆಂದರು ಬೆಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡೊ| ಬರ್ನಾರ್ಡ್ ಮೋರಸ್ರವರು. ಅವರು ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ಮಹೋತ್ಸವದ ಐದನೆಯ ಹಾಗೂ ಕೊನೆಯ ದಿನವಾದ ಗುರುವಾರದಂದು ಪ್ರಮುಖ ಬಲಿಪೂಜೆಯನ್ನು ಅರ್ಪಿಸಿ ಪ್ರಬೋಧನೆಯನ್ನು ನೀಡುತ್ತಿದ್ದರು.ಜನವರಿ 22 ರಂದು ಆರಂಭಗೊಂಡ ಸಂತ ಲಾರೆನ್ಸ್ […]
ವರದಿ: ವಂದನೀಯ ಅನಿಲ್ ಫೆನಾರ್ಂಡಿಸ್, ಚಿತ್ರಗಳು: ಸ್ಟ್ಯಾನ್ಲಿಡಿಕುನ್ಹಾ ಬಂಟ್ವಾಳ ಮಂಗಳೂರು, ಜ 26: “’ಬೈಬಲ್ ಆಲಿಸಿ, ಬೈಬಲ್ ಓದಿ, ಬೈಬಲ್ ಅಧ್ಯಯನ ಮಾಡಿ, ಬೈಬಲ್ನಲ್ಲಿ ಪ್ರಾರ್ಥಿಸಿ ಮತ್ತು ಬೈಬಲ್ನ್ನೇ ಜೀವಿಸಿ.’ ಸುಮಾರು 40 ವರ್ಷಗಳ ಹಿಂದೆ ಮಂಗಳೂರು ಬಂದರಿಗೆ ಬಂದ ಲೋಗೋಸ್ ಶಿಪ್ನಲ್ಲಿ ಸೆಟ್ ಮಾಡಿದ ಬೈಬಲ್ ಲೈಬ್ರರಿಯಲ್ಲಿ ಕೇಳಿದ ಈ ಸುಂದರವಾದ ಪದಗಳು ನನಗೆ ನೆನಪಿಗೆ ಬರುತ್ತವೆ. ಈ ಮಾತುಗಳು ಖಂಡಿತವಾಗಿಯೂ ನಮ್ಮಜೀವನವನ್ನು ಸಮೃದ್ಧಗೊಳಿಸುತ್ತದೆ,”ಎಂದು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತಧರ್ಮಗುರು ಮತ್ತುಇಂಗ್ಲಿμï ಹೊಸ ಒಡಂಬಡಿಕೆಯನ್ನುಕೊಂಕಣಿ ಭಾμÉಗೆ ಭಾμÁಂತರಿಸಿ […]
ಶಿರ್ವ:ಪ್ರತೀ ವರ್ಷದಂತೆ ಈ ವರ್ಷವೂ 74ನೆ ಗಣರಾಜ್ಯೋತ್ಸವ ದಿನಾಚರಣೆಯನ್ನು ಕಾಲೇಜಿನ ಎನ್.ಸಿ.ಸಿಯ ಭೂಯುವ ಸೇನಾದಳ ನೇತೃತ್ವದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಸಂತ ಮೇರಿ ಪಿಯು ಕಾಲೇಜಿನ ಪ್ರಾಂಶುಪಾಲೆ ಅಮಂಡಾ ಮ್ಯೂರಲ್ ಸಿಕ್ವೇರಾ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ ಇಂದು ಈ ಗಣರಾಜ್ಯೋತ್ಸವ ದಿನಾಚರಣೆಯನ್ನು 75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಪ್ರಯುಕ್ತ ಸರ್ಕಾರದ ಆದೇಶದಂತೆ ಶಾಲಾ-ಕಾಲೇಜಿನಲ್ಲಿ ಮಾರ್ಗಸೂಚಿ ಅನ್ವಯ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ ಆಚರಿಸುತ್ತಿದ್ದೇವೆ. ಇಂದು ನಮ್ಮ ರಾಷ್ಟ್ರ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು ಪ್ರತಿಯೊಬ್ಬ ಭಾರತೀಯನಲ್ಲೂ […]
ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾರೀಖು 25 ರಂದು ಯುವ ರೆಡ್ ಕ್ರಾಸ್ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸಾ ತರಬೇತಿಯನ್ನು ನೀಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲರಾದ ಶ್ರೀ ಉಮೇಶ್ ಶೆಟ್ಟಿ ವಹಿಸಿದರು. ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾದ ಡಾ. ಸೋನಿ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸಾ ತರಬೇತಿ ನೀಡಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ […]
ಮಂಗಳೂರು, ಜನವರಿ.24:ಮಂಗಳೂರು ಧರ್ಮಕ್ಷೇತ್ರದ ಬೈಬಲ್, ಸುವಾರ್ತ ಪ್ರಸಾರ, ಸಾಮಾಜಿಕಸಂಪರ್ಕ ಮತ್ತು ಕಿರು ಕ್ರೈಸ್ತ ಸಮುದಾಯದ ಆಯೋಗಗಳ ಸಹ-ಭಾಗಿತ್ವದಲ್ಲಿ ಸಂತ ಅಂತೋನಿ ಆಶ್ರಮ, ಸಂತ ಜೋಸೆಫ್ ಸೆಮಿನರಿ, ಕಾಸ್ಸಿಯಾ, ಜೆಪ್ಪು ಮತ್ತು ವೆಲೆನ್ಸಿಯಾ ಚರ್ಚ್ಗಳು ಜಂಟಿಯಾಗಿ ನಗರದ ಜೆಪ್ಪು, ಸಂತ ಅಂತೋನಿ ಆಶ್ರಮದಲ್ಲಿ ಗುರುವಾರ, ಜನವರಿ 26, 2023 ರಿಂದ ಮೂರು ದಿನಗಳ ಬೈಬಲ್ ಪ್ರದರ್ಶನವನ್ನು ಆಯೋಜಿಸಿವೆ.ಕಥೊಲಿಕ ಕ್ರೈಸ್ತರ ಪೂಜಾವಿಧಿಯ ಕ್ಯಾಲೆಂಡರ್ನ ಮೂರನೇ ಭಾನುವಾರದಂದು‘ಬೈಬಲ್ ಭಾನುವಾರ’ವನ್ನು ಸಾರ್ವತ್ರಿಕವಾಗಿಆಚರಿಸಲಾಗುತ್ತಿದೆ. ಈ ವರ್ಷ ಜನವರಿ 22, 2023 ರಂದು ಇದನ್ನು ಆಚರಿಸಿದ್ದು, […]
ಅತ್ತೂರು: “ಪ್ರಾಪಂಚಿಕ ಅನುಭವಗಳಾದ ಕಷ್ಟಕಾರ್ಪಣ್ಯಗಳು, ದುಷ್ಟತನಗಳು ನಮ್ಮನ್ನು ಧೃತಿಗೆಡುವಂತೆ ಮಾಡುತ್ತವೆ. ಪವಿತ್ರ್ ಆತ್ಮರ ಕೃಪೆಯಿಂದ ಅವುಗಳ ಮೇಲೆ ಜಯ ಸಾಧಿಸಿ, ದೇವರಲ್ಲಿ ಅಚಲ ನಂಬಿಕೆಯಿಟ್ಟು ಅವರ ಸಾಕ್ಷಿಗಳಾಗಿ ಬಾಳಿದಾಗ ಮತ್ತು ಒಳಿತನ್ನು ಮಾಡಿದಾಗ ನಾವು ಆಶಿರ್ವಾದವನ್ನು ಪಡೆಯುತ್ತೇವೆ” ಎಂದು ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡೊ. ಲೋರೆನ್ಸ್ ಮುಕುಝಿ ಪ್ರಬೋಧನೆ ನೀಡಿದರು. ಅವರು ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ಮಹೋತ್ಸವದ ಮೂರನೇ ದಿನವಾದ ಮಂಗಳವಾರದಂದು ಪ್ರಮುಖ ಬಲಿಪೂಜೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.ಜನವರಿ […]