ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚಿನ ವಾರ್ಷಿಕ ತೆರಾಲಿ ಹಬ್ಬವು ಫೆಬ್ರವರಿ 14ನೇ ಮಂಗಳವಾರ ಬೆಳಿಗ್ಗೆ 10.15ಕ್ಕೆ ಚರ್ಚಿನ ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೊರವರ ನೇತ್ರತ್ವದಲ್ಲಿ ಜರುಗಲಿರುವುದು ಇದಕ್ಕೆ ಪೂರ್ವಭಾವಿಯಾಗಿ ಫೆಬ್ರವರಿ 12 ಭಾನುವಾರ ಸಂಜೆ 4ಕ್ಕೆ ಕೋಂಪ್ರಿ ಫೆಸ್ತ್ ಅಂಗವಾಗಿ ಇರ್ಗಜಿ ವಠಾರದಿಂದ ಯಡ್ತರೆ ತನಕ ಪುರಮೆರವಣಿಗೆ,13ರಂದು ಸಂಜೆ 7ಕ್ಕೆ ಹಬ್ಬದ ಪೂರ್ವಭಾವಿ ಧಾರ್ಮಿಕ ವಿಧಿವಿಧಾನಗಳು ಜರುಗಲಿರುವುದು. ಫೆಬ್ರವರಿ 19ರಂದು ಸಂಜೆ4.45ಕ್ಕೆ ಇತಿಹಾಸ ಪ್ರಸಿದ್ಧ ಇಗರ್ಜಿಗುಡ್ಡದ ಮೇಲೆ ನೂತನವಾಗಿ ನಿರ್ಮಿಸಿದ ಕಲ್ವಾರಿ ಬೆಟ್ಟದ ಪ್ರತಿರೂಪದ ಯೋಜನೆಯ ಉದ್ಘಾಟನೆ […]
ಕುಂದಾಪುರ, ಫೆ.1: ಕುಂದಾಪುರ ರೋಜರಿ ಚರ್ಚ್ ವ್ಯಾಪ್ತಿಗೆ ಒಳಪಟ್ಟ ಹೇರಿಕುದ್ರು ಸೇತುವೆ ಹತ್ತಿರದಲ್ಲಿ ಒಂದು ಬಡ ಕ್ರೈಸ್ತ ಕುಟುಂಬ ಹರಕಲು ಮುರುಕಲು ಮನೆಯಲ್ಲಿ ವಾಸಿಸುತಿತ್ತು. ಮನೆಯ ಅರ್ಧ ಗೋಡೆಗಳ, ಛಾವಣಿ ಇಲ್ಲದೆ ಪ್ಲಾಸ್ಟಿಕ್ ಹೊದಿಕೆ ಮಾತ್ರ ಇದ್ದು, ಮಣ್ಣಿನ ಜಗುಲಿಯಿದ್ದು, ಮಳೆ ಬಿಸಿಲಿನಲ್ಲಿ ಮನೆಯವರು ವಾಸಿಸುತಿದ್ದರು. ಇದು ರೋಜರಿ ಚರ್ಚಿನ ಆಡಳಿತ ಮಂಡಳಿಯ ಗಮನಕ್ಕೆ ಬಂದ ಮೇಲೆ ಇವರ ಮನೆಗೆ ಹೊಸ ರೂಪ ಕೊಡಲು ಶ್ರಮಿಸತೊಡಗಿತು. ಮೊದಲು ರೋಜರಿ ಚರ್ಚಿನ ಐ.ಸಿ.ವೈ.ಎಮ್ (ಯುವ ಸಂಘಟನೆ) ಶ್ರಮದಾನದ ಮೂಲಕ […]
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನೇತೃತ್ವದ ಭಾರತ್ ಜೋಡೋ ಯಾತ್ರೆಯು 2022ರ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭಗೊಂಡು 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳನ್ನು ಹಾದು, ಆ ಮೂಲಕ 3970 ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸಿ ಇಂದು ಕಾಶ್ಮೀರದ ಶ್ರೀನಗರದಲ್ಲಿ ಸಮಾರೋಪಗೊಳ್ಳುವ ಅಂಗವಾಗಿ ಇಂದು ದೇಶದಾದ್ಯಂತ ರಾಜ್ಯ, ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಕಚೇರಿಗಳಲ್ಲಿ ರಾಷ್ಟ್ರಧ್ವಜ ಆರೋಹಣ ಕಾರ್ಯಕ್ರಮ ಆಯೋಜಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕರೆನೀಡಿದ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ 10ಗಂಟೆಗೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ […]
ಕುಂದಾಪುರ,ಜ.30: ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪ.ಪೂ.ಕಾಲೇಜು ವಠಾರದಲ್ಲಿ ಫೆ.19ರಂದು ನಡೆಯುವ ಕುಂದಾಪುರ ತಾಲೂಕು ಹದಿನೆಂಟನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಖ್ಯಾತ ಸಾಹಿತಿ,ಅಂಕಣಗಾರ,ರಂಗ ನಿರ್ದೇಶಕ,ನಿವ್ರೃತ್ತ ಪ್ರಾಧ್ಯಾಪಕ ಕೋ.ಶಿವಾನಂದ ಕಾರಂತರು ಆಯ್ಕೆಯಾಗಿದ್ದಾರೆ ಎಂದು ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಉಮೇಶ ಪುತ್ರನ್ ತಿಳಿಸಿದ್ದಾರೆ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ,ಗೌರವ ಕಾರ್ಯದರ್ಶಿ ಗಳಾದ ಸುಬ್ರಹ್ಮಣ್ಯ ಶೆಟ್ಟಿ,ನರೇಂದ್ರ ಕುಮಾರ್ ಕೋಟ,ಕೋಶಾಧ್ಯಕ್ಷ ಮನೋಹರ ಪಿ.,ತಾಲೂಕು ಪದಾಧಿಕಾರಿಗಳಾದ ದಿನಕರ ಶೆಟ್ಟಿ, ಅಕ್ಷತಾ ಗಿರೀಶ್ಐತಾಳ,ಕೆ.ಎಸ್.ಮಂಜುನಾಥ […]
ಮಂಗಳೂರು, ಜ 30: ಮಂಗಳೂರಿನ ಜೆಪ್ಪುವಿನ ಸಂತಅಂತೋನಿ ಆಶ್ರಮದಲ್ಲಿ ನಡೆದ ಮೂರು ದಿನಗಳ ಬೈಬಲ್ ಪ್ರದರ್ಶನ ಶನಿವಾರ ಮುಕ್ತಾಯಗೊಂಡಿತು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಟ ಗುರುವಂದನೀಯ ಮ್ಯಾಕ್ಸಿಮ್‍ಎಲ್. ನೊರೊನ್ಹಾ ಮಾತನಾಡಿ, “ಬೈಬಲ್ ಎಂದಿಗೂ ಅಕ್ಷಯ ಪಾತ್ರೆಯಂತೆ ಖಾಲಿಯಾಗದ ಸಂಪತ್ತು. ಇದು ಹೊಸತನ ಮತ್ತು ಜೀವ ನೀಡುವ ಪುಸ್ತಕವಾಗಿದೆ ಮತ್ತು ಯಾವುದೇ ಸಂದರ್ಭಕ್ಕೂ, ಕಾಲಕ್ಕೂ ಸಕಾಲವಾದುದು. ಬೈಬಲ್ ಅನೇಕರಿಗೆ ಸ್ಫೂರ್ತಿ ನೀಡಿದೆ, ಅನೇಕರ ಜೀವನವನ್ನು ಪರಿವರ್ತಿಸಿದೆ, ನಾಸ್ತಿಕರು ಆಸ್ತಿಕರಾಗಿದ್ದಾರೆ, ಏಕೆಂದರೆ ಇದು ದೇವರ […]
ಬೀಜಾಡಿ: ಜಿಲ್ಲಾ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ಪುರಸ್ಕøತ ಬೀಜಾಡಿ ಗೋಪಾಡಿ ಮಿತ್ರ ಸಂಗಮದ ರಜತ ಮಹೋತ್ಸವವು ಫೆ.3ರಿಂದ ಫೆ.5 ತನಕ ಮೂರು ದಿನಗಳ ಕಾಲ ಬೀಜಾಡಿ ಮಿತ್ರಸೌಧದ ವಠಾರದಲ್ಲಿ ಸಂಭ್ರಮದಿಂದ ಜರುಗಲಿದೆ.25 ಸಾರ್ಥಕ ವಸಂತಗಳ ಸಂಭ್ರಮಾಚರಣೆ “ರಜತಪಥ” ನೆರಳು-ಬೆಳಕಿನ ಸಹಯಾನವನ್ನು ಫೆ.3ರಂದು ಶುಕ್ರವಾರ ಬೆಳಿಗ್ಗೆ 10.30ಕ್ಕೆ ನಾಡೋಜ ಡಾ.ಜಿ.ಶಂಕರ್ ಉದ್ಘಾಟಿಸಲಿದ್ದು, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ರಜತ ಮಹೋತ್ಸವದ ನೆನಪಿಗಾಗಿ ಸ್ವಉದ್ಯೋಗಕ್ಕಾಗಿ ಗೋ(ದನ) ಒಂದನ್ನು ಶಾಸಕ […]
January 28th 2023 the Golden Jubilee of Religious Profession of Sr Benignus BS belonging to St Joseph’s Convent, Shubadha, Suralpady was celebrated at Ozanam Home for the Aged, Santhekatte, Kallianpur. The thanksgiving Eucharistic Celebration was held at 11.00am. it was officiated by Rev Fr Valerian Mendonca the Rector of Milagres Cathedral, Kallianpur and co-officiated by […]
ಕುಂದಾಪುರ: ‘ರಾಷ್ಟ್ರದಲ್ಲಿ ಆಗಬೇಕಾದ ಇನ್ನೂ ಹೆಚ್ಚಿನ ಸಾಧನೆಗೆ, ಅಭಿವೃದ್ಧಿಗೆ ಅಗತ್ಯವಿದ್ದಾಗ ಪ್ರತಿಯೊಬ್ಬರೂ ತಮ್ಮಿಂದಾದ ಸೇವೆ, ಕೊಡುಗೆಗಳನ್ನು ನೀಡಬೇಕು. ಆ ಮೂಲಕ ನಾವು ನಿಜವಾದ ಅರ್ಥದಲ್ಲಿ ಒಳ್ಳೆಯ ನಾಗರೀಕರಾಗಬೇಕು’ ಎಂದು ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಕರೆ ನೀಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ರಾಮ್ ಶೆಟ್ಟಿಯವರು ಧ್ವಜಾರೋಹಣ […]
ನಂದಳಿಕೆ: ನೆಹರು ಯುವ ಕೇಂದ್ರ ಉಡುಪಿ, ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಇದರ ಸಹಯೋಗದಲ್ಲಿ ನಂದಳಿಕೆ ವರಕವಿ ಮುದ್ದಣನ 153ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ರಂಗಮಂದಿರದಲ್ಲಿ ಮಂಗಳವಾರ ನಡೆಸಲಾಯಿತು.ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಪ್ರಶಾಂತ್ ಪೂಜಾರಿ ಮುದ್ದಣನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದವರು ನಂದಳಿಕೆಯ ಪುಣ್ಯ ಮಣ್ಣಿನಲ್ಲಿ ಜನಿಸಿದ ಮುದ್ದಣ (ಲಕ್ಷ್ಮೀನಾರಾಯಣಪ್ಪ) ನಂದಳಿಕೆಯ ಹೆಸರನ್ನು ಸಾಹಿತ್ಯ […]