ಬಾರ್ಕೂರು ಬೆಣ್ಣೆ ಕುದ್ರುವಿನ ಚಾರ್ಲೆಟ್ ಮತ್ತು ಜೇಮ್ಸ್ ಡಾಯಸ್ ದಂಪತಿಯ ಪುತ್ರಿ ಜೆಸ್ವಿಟಾ ಡಾಯಸ್, ಈ ಸಾಲಿನ ಕರ್ನಾಟಕ ರಾಜ್ಯ ಪಿಯುಸಿ ಪರೀಕ್ಷೆಯಲ್ಲಿ, 600ಕ್ಕೆ 595 ಅಂಕ ಗಳಿಸುವ ಮೂಲಕ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ರೇಂಕ್ ಪಡೆದಿದ್ದು, ರಾಜ್ಯ ಮಟ್ಟದಲ್ಲಿ ದ್ವಿತೀಯ ರೇಂಕ್ ಪಡೆದಿದ್ದಾಳೆ. ಈಕೆ. ಉಡುಪಿಯ ಪೂರ್ಣಪ್ರಜ್ಞ ಪಿಯು ವಿದ್ಯಾರ್ಥಿನಿಯಾಗಿದ್ದಾಳೆ.. ಈ ಅಪೂರ್ವ ಸಾಧನೆಗೆ ಎಲ್ಲಡೆಯಿಂದ ಪ್ರಶಂಸೆಗಳು ಬರುತ್ತೀವೆ, ಜನನಡಿ ವಾರ್ತಾಸಂಸ್ಥೆ ಇವಳ ಸಾಧನೆಗೆ ಅಭಿನಂದಿಸುತ್ತೀದೆ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜು 2022-23ನೇ ಶೈಕ್ಷಣಿಕ ವರ್ಷದ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 97% ಫಲಿತಾಂಶ ಬಂದಿದೆ.ವಿಜ್ಞಾನ ವಿಭಾಗದಲ್ಲಿ ಪ್ರಾಂಜಲ್ ಮ್ಯಾಥ್ಯೂ ಲೋಬೋ (96.16%), ಶುಭಶ್ರೀ (95.5%) ದಿಶಾ.ಜೆ.ಶೆಟ್ಟಿ (93.33%)ಅತ್ಯತ್ತಮ ಶ್ರೇಣಿಯಲ್ಲಿಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ದಶಮಿ (97.66%) ನಿಶ್ಮಿತಾ(96), ಪ್ರಣಮ್ಯ ಛಾತ್ರ(95.5%) ಅತ್ಯತ್ತಮ ದರ್ಜೆಯಲ್ಲಿ ಪಾಸಾಗಿದ್ದಾರೆ.ವಿಶೇಷ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ, ಶಿಕ್ಷಕರು, ಶಿಕ್ಷಕೇತರರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಕುಂದಾಪುರದ ಸೈಂಟ್ ಮೇರಿಸ್ ಪ.ಪೂ. ಕಾಲೇಜಿನ 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಶೇಕಡಾ 100 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇಕಡಾ 93.10 ಫಲಿತಾಂಶ ಲಭಿಸಿದೆ.ವಾಣಿಜ್ಯ ವಿಭಾಗದಲ್ಲಿ ಕು. ರೀಮಾ ಮಿನೇಜಸ್ ಶೇಕಡಾ 96.83 ಫಲಿತಾಂಶ ಪಡೆದು ಕಾಲೇಜಿಗೆ ಪ್ರಥಮಳಾಗಿ ಕೀರ್ತಿ ತಂದಿದ್ದಾಳೆ, ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ಎಂ.ಐ.ಟಿ. ಕುಂದಾಪುರದ ವಾರ್ಷಿಕ ಕ್ರೀಡಾಕೂಟ ಇತ್ತೀಚೆಗೆ ನಡೆಯಿತು. ಪ್ರಾಂಶುಪಾಲರಾದ ಡಾ. ಅಬ್ದುಲ್ ಕರೀಮರವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಕಳೆದ ವರ್ಷದ ವಿಜೇತ ಇಶಾನ್ ಕ್ರೀಡಾಜ್ಯೋತಿಯನ್ನು ಉಪಪ್ರಾಂಶುಪಾಲರಾದ ಪ್ರೊ. ಮೆಲ್ವಿನ್ ಡಿಸೋಜರವರಿಗೆ ಹಸ್ತಾಂತರಿಸಿದರು. ವಿದ್ಯಾರ್ಥಿಗಳ ಎಂಟು ತಂಡಗಳು 12 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಬೈಸನ್ಸ್ ತಂಡದವರು ಈ ಬಾರಿಯ ಚಾಂಪಿಯನ್ಸ್ ಹಾಗೂ ಪ್ಯಾಂತರ್ಸ್ ತಂಡದವರು ರನ್ನರ್ಸ್. ಎಂ.ಬಿ.ಎ ವಿಭಾಗದಿಂದ ಪೀಕಿ ಬ್ಲಿಂಡರ್ಸ್ ತಂಡ ಚಾಂಪಿಯನ್ಸ್ ಹಾಗೂ ಹುಡುಗರ ವಿಭಾಗದಲ್ಲಿ ಸ್ಪಂದನ್ ಹಾಗೂ ಹುಡುಗಿಯರ ವಿಭಾಗದಲ್ಲಿ ಪ್ರಜ್ಞ ಚಾಂಪಿಯನ್ರಾದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕ ದಿಂದ ಮೂಡ್ಲಕಟ್ಟೆ ತಾಂತ್ರಕ ವಿದ್ಯಾಲಯದಲ್ಲಿ ಯುವ ರೆಡ್ ಕ್ರಾಸ್ ಘಟಕ ಉದ್ಘಾಟನೆ ಹಾಗೂ ಪ್ರಥಮ ಚಿಕಿತ್ಸಾ ಶಿಭಿರವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು IMJISC ಪ್ರಾಂಶುಪಾಲರಾದ ಪ್ರತಿಭಾ ಪಾಟಿಲ್ ಎಮ್ ಇವರು ವಹಿಸಿದ್ದರು. ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಕಾರ್ಯಕ್ರಮ ವನ್ನು ಉದ್ಘಾಟಿಸಿದರು ಮತ್ತು ಪ್ರಾಸ್ತಾವಿಕ ಮಾತನಾಡಿದರು. ಯುವ ರೆಡ್ ಕ್ರಾಸ್ ಸಂಯೋಜಕ ಶ್ರೀ ಸತ್ಯನಾರಾಯಣ ಪುರಾಣಿಕ ವಿದ್ಯಾರ್ಥಿ ಗಳಿಗೆ ಪ್ರತಿಜ್ನಾ ವಿಧಿ ಬೋಧಿಸಿದರು. ಸಂಪನ್ಮೂಲ […]
Youth Red Cross wing of IMJ Institute of Science and Commerce was inaugurated by Sri Jayakar shetty President of Indian Red Cross Kundapura. Speaking on the occasion he told that every college should have youth red cross wing and objective of the society is to serve the people on humanitarian grounds irrespective of caste, creed and […]
Temporary Profession of four Novices of Rosa Mystica Novitiate, Kinnikambla took place on the 18 of April 2023. The Eucharistic celebration was officiated by Fr Daniel Veigas OP, the Episcopal Vicar for Religious of Mangalore Diocese, along with ten other Priest. Sr CiciliaMendonca the Provincial Superior of Mangalore Province accepted the Vows of Sr Amitha […]
ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ, ಕುಂದಾಪುರ ಇಲ್ಲಿಯ ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್ ವಿಭಾಗದ ವಿದ್ಯಾರ್ಥಿಗಳಾದ ಅಮರ್ ಮತ್ತು ವಿಷ್ಣುಮೂರ್ತಿಯವರು ತಮಿಳುನಾಡಿನ ರಾಮಪುರದ ಎಸ್.ಆರ್.ಎಮ್. ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ ರಾಷ್ಟ್ರಮಟ್ಟದ “ಪ್ರಾಜೆಕ್ಟ್ ಕಲ್ಪನಾ ಪ್ರಸ್ತುತಿ” ಸ್ಫರ್ಧೆಯಲ್ಲಿ “ಸ್ವಯಂಚಾಲಿತ ಘನತ್ಯಾಜ್ಯ ಸಂಸ್ಕರಣೆ” ಎಂಬ ಪ್ರಾಜೆಕ್ಟ್ಗೆ “ಭವಿಷ್ಯದ ತಂತ್ರಜ್ಞಾನ ಪ್ರಶಸ್ತಿ”ಯನ್ನು ಪಡೆದು ಕಾಲೇಜಿನ ಹಿರಿಮೆ ಹೆಚ್ಚಿಸಿದ್ದಾರೆ. ಒಂದು ಸಾವಿರಕ್ಕೂ ಅಧಿಕ ತಂಡಗಳು ಭಾಗವಹಿಸಿದ ಈ ಸ್ಫರ್ಧೆಯಲ್ಲಿ ದೇಶದ 50 ತಂಡಗಳು ಮಾತ್ರ ಅಂತಿಮ ಸುತ್ತಿಗೆ ತೇರ್ಗಡೆ ಹೊಂದಿದ್ದು, ಅದರಲ್ಲಿ ಕರ್ನಾಟಕದಿಂದ ಎರಡು ತಂಡಗಳಿಗೆ ಮಾತ್ರ […]
ಪಕ್ಷಿಗಳಿಗೆ ಬಿಸಿಲಿನ ತಾಪದಿಂದ ಹಾಗೂ ನೀರಿನ ದಾಹ ನೀಗಿಸುವ ಉದ್ದೇಶದಿಂದ ಪಕ್ಷಿ ಸಂಕುಲಕ್ಕೆ ನೀರು ಉಣಿಸುವ ಅಭಿಯಾನದ ಮೂಲಕ ನಾವೆಲ್ಲರೂ ಸ್ವಯಂ ಪ್ರೇರಣೆಯಿಂದ ಮನೆ, ಮರಗಳ ಮೇಲೆ ಪಕ್ಷಿಗಳಿಗಾಗಿ ನೀರು, ಧಾನ್ಯಗಳನ್ನು ಇಟ್ಟು ಪಕ್ಷಿ ಸಂಕುಲದ ರಕ್ಷಣೆಗೆ ಕೈ ಜೋಡಿಸೋಣ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ಸಂಚಾಲಕರು ಸಂದೀಪ್ ವಿ. ಪೂಜಾರಿ ಅಬ್ಬನಡ್ಕ ಹೇಳಿದರು.ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ, ನಂದಳಿಕೆ ಅಬ್ಬನಡ್ಕ ಶ್ರೀ […]