
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ದ ಪ್ರತಿಭಾನ್ವಿತ ಕರಾಟೆ ಪಟು ಸೌರವ್, 16 ನೇ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ರಾಜ್ಯ ಮಟ್ಟದ ಕೆಡೆಟ್, ಜೂನಿಯರ್, 21 ವರ್ಷದೊಳಗಿನವರ ಮತ್ತು ಹಿರಿಯ ಚಾಂಪಿಯನ್‌ಶಿಪ್ 2025 ರಲ್ಲಿ ತಮ್ಮ ಅಸಾಧಾರಣ ಕೌಶಲ್ಯವನ್ನು ಪ್ರದರ್ಶಿಸಿದರು. ಕುಮಿಟೆ ವಿಭಾಗದಲ್ಲಿ ಸ್ಪರ್ಧಿಸಿದ ಅವರು, ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಕಂಚಿನ ಪದಕವನ್ನು ಗೆದ್ದರು. ಯಶೋಧರ ರಾವ್ ಮತ್ತು ಮಂಜುಳಾ ಅವರ ಪುತ್ರ […]

ಮಂಗಳೂರು; ಬ್ರಿಸ್ಟನ್ ಮಾರಿಯೋ ರೊಡ್ರಿಗಸ್ ಅವರನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ – ಭಾರತೀಯ ಯುವ ಕಾಂಗ್ರೆಸ್ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಮಂಗಳೂರಿನ ನಿವಾಸಿ ಮತ್ತು ಕಾರ್ಡೆಲ್‌ನ ಹೋಲಿ ಕ್ರಾಸ್ ಚರ್ಚ್‌ನ ಪ್ಯಾರಿಷನರ್ ಆಗಿರುವ ಬ್ರಿಸ್ಟನ್ ರೊಡ್ರಿಗಸ್ ಪ್ರಸ್ತುತ ವಾಮಂಜೂರಿನ ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾರೆ.ಬ್ರಿಸ್ಟನ್ ರೊಡ್ರಿಗಸ್ ತಮ್ಮ ಹೊಸ ಪಾತ್ರಕ್ಕೆ ಯುವ ನಾಯಕತ್ವದಲ್ಲಿ ಬಲವಾದ ಹಿನ್ನೆಲೆಯನ್ನು ತರುತ್ತಾರೆ. ಅವರು ಯುವ ಕ್ಯಾಥೋಲಿಕ್ ವಿದ್ಯಾರ್ಥಿಗಳು/ಯುವ ವಿದ್ಯಾರ್ಥಿಗಳ ಚಳವಳಿಯ (YCS/YSM) ಕರ್ನಾಟಕ ಪ್ರಾದೇಶಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ […]

ಬೈಂದೂರು; ರೈಲು ಹಳಿ ದಾಟುತ್ತಿರುವ ವೇಳೆ ರೈಲು ಡಿಕ್ಕಿಯಾಗಿ ಯುವಕನೊಬ್ಬ ಮ್ರತಪಟ್ಟ ಘಟನೆ ಕಿರಿಮಂಜೆಶ್ವರ ಗ್ರಾಮದ ನಾಗೂರು ಶೆಟ್ರಹಿತ್ಲು ಎಂಬಲ್ಲಿ ನಡೆದಿದೆ. ಮೃತನನ್ನು ಬಿಜೂರು ಗ್ರಾಮದ ದಿಟಿಮನೆ ನಿವಾಸಿ ಮುತ್ತಯ್ಯ ದೇವಾಡಿಗ ಪುತ್ರ ವಾಸುದೇವ ದೇವಾಡಿಗ (25) ಎಂದು ಗುರುತಿಸಲಾಗಿದೆ. ಘಟನೆ ಫೆಬ್ರವರಿ 05 ರಂದು ನಡೆದಿದೆ ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದ ವಾಸುದೇವ ರೈಲ್ವೆ ಹಳಿಯ ಇನ್ನೊಂದು ಬದಿಯ ಗದ್ದೆಯಲ್ಲಿ ಕಲ್ಲಂಗಡಿ ಬೆಳೆಸಿದ್ದರು. ನಾಗೂರಿನಲ್ಲಿ ತನ್ನ ಸೆಂಟ್ರಿಂಗ್ ಕೆಲಸ ಮುಗಿಸಿ ಕಲ್ಲಂಗಡಿ ಹಣ್ಣುಗಳನ್ನು ಲೋಡ್ ಮಾಡುತ್ತಿದ್ದ ಕಾರ್ಮಿಕರ […]

ಕುಂದಾಪುರ ; ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷರಾಗಿ ರಾಜೀವ ಎನ್ ಶ್ರೀಯಾನ್ ಆಯ್ಕೆಯಾಗಿದ್ದಾರೆ ಉಪಾಧ್ಯಕ್ಷರಾಗಿ ಸುಮತಿ ಬಿ ಮೊಗ ವೀರ ಆಯ್ಕೆಯಾಗಿದ್ದಾರೆ.ಫೆ 5ರಂದು ನೂತನ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ನಿರ್ದೇಶಕರಾದ ಲೋಹಿತಾಶ್ವ ಆರ್ ಕುಂದರ್ ಬಾಳಿಕೆರೆ, ರವೀಂದ್ರ ಜಿ ಮೆಂಡನ್ ಗುಡ್ಡಮಾಡಿ,ಶ್ಯಾಮಲಾ ಜಿ ಚಂದನ್, ರಾಮ ಮೊಗವೀರ ಕೊಡ್ಲಾಡಿ, ರಾಮ ಮೊಗವೀರ ಬೈಂದೂರು, ವನಿತ ಎಸ್ ಮೊಗವೀರ ಕೋಟೇಶ್ವರ, ಸುಶೀಲ ಮೊಗವೀರ ಬೈಂದೂರು ಉಪಸ್ಥಿತರಿದ್ದರು.ಚುನಾವಣಾ ಅಧಿಕಾರಿಯಾಗಿ ಸುಮಿತ್ರ […]

ಉಡುಪಿ : ಒಂದೇ ಜಾತಿ, ಒಂದೇ ಧರ್ಮ, ಒಬ್ಬರೇ ದೇವರು ಎಂಬ ಸಾರ್ವಕಾಲಿಕ ಸತ್ಯ ಸಂದೇಶದ ಯುಗ ಪ್ರವರ್ತಕ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಮುಖ್ಯ ತತ್ವವಾಗಿಸಿಕೊಂಡು ಅಸ್ತಿತ್ವದಲ್ಲಿರುವ ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ) ಉಡುಪಿ ಇದರ ಪ್ರಥಮ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಫೆಬ್ರವರಿ 8 ಶನಿವಾರದಂದು ಉದ್ಯಾವರದ ಶ್ರೀ ಶಂಭುಕಲ್ಲು ವೀರಭದ್ರ ದೇವಸ್ಥಾನದ ಬಳಿ ‘ವರ್ಷದ ಹರ್ಷ’ ಕಾರ್ಯಕ್ರಮ ಜರುಗಲಿದೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ. ಬೆಳಿಗ್ಗೆ ಗಂಟೆ 10:30 ಕ್ಕೆ ಗುರುಕಟ್ಟೆಯಲ್ಲಿ […]

ಮಂಗಳೂರು ಬಿಜೈ ನಲ್ಲಿ ಫೆಬ್ರವರಿ 9 ರಂದು ಸ್ಟ್ಯಾನ್ ನೈಟ್. ಮಂಗಳೂರು ಬಿಜೈ ನಲ್ಲಿ ಫೆಬ್ರವರಿ 9ರಂದು ಸಂಜೆ 6ಗಂಟೆಗೆ ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಮೈದಾನ ದಲ್ಲಿ ಅರ್ಲ್ಫ್ರೆಡ್ ಬೆನ್ನಿಸ್ ಕ್ರಿಯೇಷನ್ ಮಂಗಳೂರು ಇವರು ನಡೆಸುವ 19 ನೇ ಸ್ಟ್ಯಾನ್ ನೈಟ್ ಜರುಗಲಿದೆ. ಶ್ರೀ ಅಲ್ಫ್ರೆ ಡ್ ಬೆನ್ನಿಸ್ ರವರು ಕಳೆದ 18ವರ್ಷ ಗಳಿಂದ ಇಂತಹ 35 ಕಾರ್ಯಕ್ರಮ ಗಳನ್ನು ನಡೆಸಿ ಸುಮಾರು 1 ಕೋಟಿ ಯಷ್ಟು ಹಣ ವನ್ನು ದಾನಿ ಗಳಿಂದ ಸಂಗ್ರಹಣೆ ಮಾಡಿ […]

ಕುಂದಾಪುರ, ಫೆ.6 ; ರಾಜ್ಯ ಸರ್ಕಾರದಿಂದ ಕುಂದಾಪುರ ಪುರಸಭೆಗೆ ನೂತನ ನಾಮನಿರ್ದೇಶಕ ನೇಮಕಗೊಂಡ ಸದಸ್ಯರಿಗೆ ಆದೇಶ ಪತ್ರ ವಿತರಣೆ ಹಾಗೂ ಅಭಿನಂದನ ಕಾರ್ಯಾಕ್ರಮವು ಫೆ.6 ರಂದು ಕುಂದಾಪುರ ಪುರಸಭೆಯ ಸಭಾಂಗಣದಲ್ಲಿ ನಡೆಯಿತು.ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಆನಂದ ಅವರು ಸದಸ್ಯರಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ನಾಮನಿರ್ದೇಶಕ ನೇಮಕಗೊಂಡ ಸದಸ್ಯರಾದ ಗಣೇಶ್ ಶೇರಿಗಾರ್, ಅಶೋಕ್ ಸುವರ್ಣ, ಸದಾನಂದ ಖಾರ್ವಿ, ಶಶಿ ರಾಜ್ ಪೂಜಾರಿ ಮತ್ತು ಶಶಿಧರ ಅವರಿಗೆ ಆದೇಶ ಪತ್ರಗಳನ್ನು ವಿತರಿಸಿದಿದರು.ಈ ಸಂದರ್ಭದ ಸಭಾಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿ ಪಿ ಎಲ್ […]

ಉಡುಪಿ: ಕಥೊಲಿಕ ಧರ್ಮಪ್ರಾಂತ್ಯ ಉಡುಪಿ ಇದರ ಧರ್ಮಾಧ್ಯಕ್ಷರಾದ ಅತೀ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರ ಎರಡು ಜುಬಿಲಿ ಮಹೋತ್ಸವಕ್ಕೆ ಭಕ್ತವೃಂದ ಸಜ್ಜಾಗಿದೆ. ಧರ್ಮಾಧ್ಯಕ್ಷರು 75 ವರ್ಷಗಳ ಆಚರಣೆಯ ಅಮೃತ ಮಹೋತ್ಸವ ಹಾಗೂ ಧರ್ಮಾಧ್ಯಕ್ಷ ದೀಕ್ಷೆಯ 25 ವರ್ಷಗಳ ಬೆಳ್ಳಿ ಹಬ್ಬದ ಮಹೋತ್ಸವ 2025 ರ ಫೆಬ್ರವರಿ 9 ರಂದು ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ತೆರೆದ ಮೈದಾನದಲ್ಲಿ ಜರುಗಲಿದೆ.ಭಾನುವಾರ ಸಂಜೆ 4 ಗಂಟೆಗೆ ಕೃತಜ್ಞತಾ ಬಲಿಪೂಜೆ ಹಾಗೂ ಸಾರ್ವಜನಿಕ ಸನ್ಮಾನ ಸಮಾರಂಭ ಜರುಗಲಿದ್ದು, ಜಗದ್ಗುರು ಪೋಪ್ […]

ಬಂಟ್ವಾಳ ಕ್ಯಾಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ನಿ) ಇದರ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷಗಳ ಅವಧಿಗೆ ದಿನಾಂಕ 18-01-2025 ರಂದು ಸಾಮಾನ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 14 ಅಭ್ಯರ್ಥಿಗಳಲ್ಲಿ 11 ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.ಲಯನ್ಸ್ ಕ್ಲಬ್, ಬಿ.ಸಿ. ರೋಡ್ ಇಲ್ಲಿ ಮತದಾನ ನಡೆದಿದ್ದು, ಮಂಗಳೂರು ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿಯ ಬಂಟ್ವಾಳ ಸಹಕಾರಿ ಅಭಿವೃದ್ದಿ ಅಧಿಕಾರಿ ಡಾ. ಜ್ಯೋತಿ ಡಿ. ಚುನಾವಣಾಧಿಕಾರಿಯಾಗಿದ್ದು, ಚುನಾವಣಾ ಪ್ರಕ್ರಿಯೆ ನಡೆಸಿದರು. ಸಿಇಓ (ಅಇಔ) ಸೆಲಿನ್ ಗ್ರೇಸಿ ಡಿಸೋಜ […]