
ಬ್ಯಾಂಕ್ ರಾಷ್ಟ್ರೀಕರಣ, ಭೂ ಸುಧಾರಣೆ ಮತ್ತು ಗರೀಬಿ ಹಟಾವೋ ಮೂಲಕ ದೇಶವನ್ನು ಅಭಿವೃದ್ಧಿಯತ್ತ ತಂದ ಭಾರತದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾಗಾಂಧಿ. ಅವರ ದೂರ ದೃಷ್ಟಿಯ ಪ್ರತಿಫಲವಾಗಿ ಇಂದು ಈ ದೇಶ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ಅಗ್ರಗಣ್ಯ ಎನಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಹರಿಪ್ರಸಾದ್ ಶೆಟ್ಟಿಯವರು ಹೇಳಿದರು . ಇಂದು ಬೆಳಿಗ್ಗೆ ಕುಂದಾಪುರದ ಶಾಸ್ತ್ರಿ ಸರ್ಕಲ್ ನಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಉಪಹಾರವನ್ನು ಬ್ಲಾಕ್ ಕಾಂಗ್ರೆಸ್ ವತಿಯಿಂದ ನೀಡಿ ಅವರು […]

ಕುಂದಾಪುರ, ನ.19: ನವೆಂಬರ್ 10 ರಂದು ನಡೆದ ಕುಂದಾಪುರ ವಲಯ ಮಟ್ಟದ ಸ್ಥಳದಲ್ಲೆ ಪಾಕೋಪಕರಣ ತಯಾರಿಕೆ ವಿಭಾಗದಲ್ಲಿ ಸಂತ ಮೇರಿಸ್ ಪ್ರೌಢ ಶಾಲೆಯ ಶಿಕ್ಷಕಿ ಸ್ಮಿತಾ ಇವರಿಗೆ ದ್ವೀತಿಯ ಬಹುಮಾನ ಲಭಿಸಿದೆ. ಈ ಬಹುಮಾನವನ್ನು ಕುಂದಾಪುರ ಬ್ಲಾಕ್ ಸಂಪನ್ಮೂಲ ವ್ಯಕ್ತಿ ಸಂತೋಷ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಲ ಮುಖ್ಯೋಪಾಧ್ಯಾಯಿನಿ ಅಸುಂಪ್ತಾ ಲೋಬೊ ಮತ್ತು ಇತರರು ಉಪಸ್ಥಿತರಿದ್ದರು. ಶಾಲಾ ಜಂಟಿ ಕಾರ್ಯದರ್ಶಿ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರಿ ಅ|ವಂ|ಸ್ಟ್ಯಾನಿ ತಾವ್ರೊ ಅವರು ಅಭಿನಂದಿಸಿದ್ದಾರೆ.

ಕುಂದಾಪುರ, ನ.19: ಹೋಲಿ ರೋಸರಿ ಆಂಗ್ಲ ಮಾದ್ಯಮ ಶಾಲೆಯ ವಾರ್ಷಿಕ ಕ್ರಿಡೋತ್ಸವವು ನವೆಂಬರ್ 17 ರಂದು ಗಾಂಧಿ ಮೈದಾನದಲ್ಲಿ ಆರಂಭವಾಗಿ ನ.18 ರಂದು ಸಮಾರೋಪಗೊಂಡಿತು. ಶಾಲೆಯ ಕಿರುಮಕ್ಕಳಿಂದ ಹಿಡಿದು ಹೈಸ್ಕೂಲ್ ಮಟ್ಟದಲ್ಲಿ ವಿದ್ಯಾರ್ಥಿಗಳು ಕ್ರೀಡೋತ್ಸವದಲ್ಲಿ ಭಾಗಿಯಾದರು.ವಿಜೇತ ಮಕ್ಕಳನ್ನು ಬಹುಮಾನ ನೀಡಿ ಗೌರವಿಸಲಾಯಿತು.

ಕುಂದಾಪುರ, ನ.17: ಹೋಲಿ ರೋಸರಿ ಆಂಗ್ಲ ಮಾದ್ಯಮ ಶಾಲೆಯ ವಾರ್ಷಿಕ ಕ್ರಿಡೋತ್ಸವವು ನವೆಂಬರ್ 17 ರಂದು ಗಾಂಧಿ ಮೈದಾನದಲ್ಲಿ ವಿಜ್ರಂಭಣೆಯಿಂದ ನಡೆಯಿತು. ್ಘಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಜಂಟಿ ಕಾರ್ಯದರ್ಶಿ ಹೋಲಿ ರೋಸರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಅವರು ಸ್ಪರ್ಧಾಳುಗಳಿಂದ ಪಥಸಂಚಲನದ ಗೌರವನ್ನು ಸ್ವೀಕರಿಸಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ “ಜೀವನದಲ್ಲಿ ಶಿಕ್ಷಣ ಹೇಗೆ ಮುಖ್ಯವೊ, ಕ್ರೀಡೆಯು ಮುಖ್ಯ, ಎಲ್ಲಾ ಮಕ್ಕಳಿಗೆ ಕ್ರೀಡೆ ಅಂದರೆ ಬಹಳ ಇಷ್ಟ, ಇದನ್ನು ಜೀವನವಿಡಿ ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಲಭ್ಯವಾಗುತ್ತೆ’ […]

ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಕುಂದಾಪುರ, ಇಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಡಾ. ನಾಗಭೂಷಣ ಉಡುಪ, ಜಿಲ್ಲಾ ಆರೋಗ್ಯ ಅಧಿಕಾರಿ, ಉಡುಪಿ, ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.“ವಿದ್ಯಾರ್ಥಿಗಳು ಹೂವಿನ ಮೊಗ್ಗಿನ ತರಹ. ಮೊಗ್ಗು ಅರಳಿ ಹೂವಾಗುವ ಹಾಗೆ, ಪ್ರತಿಯೊಬ್ಬರಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ವಿದ್ಯಾರ್ಥಿಗಳು ತಮ್ಮಲ್ಲಿ ಸೂಪ್ತವಾಗಿರುವ ಪ್ರತಿಭೆಯನ್ನು ಹೊರತರಬೇಕು” ಎಂದು ಡಾ. ನಾಗಭೂಷಣ ಉಡುಪರವರು ಹೇಳಿದರು.ಪ್ರಾಂಶುಪಾಲರಾದ ಪ್ರೊ| ಜೆನ್ನಿಫರ್ ಫ್ರೀಡಾ ಮೆನೇಜಸ್ ರವರು ಶೈಕ್ಷಣಿಕ ವರದಿಯನ್ನು ಮಂಡಿಸಿದರು.ವೇದಿಕೆಯಲ್ಲಿ ಸಹ ಪ್ರಾಧ್ಯಾಪಕಿ ವೆಲ್ಮಿರಾ ಅವಿಟಾ ಡಯಾಸ್, ಉಪನ್ಯಾಸಕಿ […]

ನಮ್ಮ ಹಿರಿಯರು ಆಚಾರ, ವಿಚಾರದಂತಹ “ಸಂಸ್ಕಾರ”ವು ಅನಾದಿ ಕಾಲದಿಂದಲೂ ಆಳವಾದ ಪದ್ಧತಿ ಮತ್ತು ಪರಂಪರೆಯ ಮೂಲಕ ಎತ್ತಿಹಿಡಿದವರು. ಇಂತಹ ಅಗಾಧವಾದ ಪರಂಪರೆಯ ಕಟ್ಟುಪಾಡು ಸಂಭ್ರಮಗಳು ಕಡಿಮೆ ಆಗುತ್ತಿರುವ ಇಂದಿನ ದಿನಗಳಲ್ಲಿ ್ಲ ಕಲಾತ್ಮಕತೆಯ ರೂಪದಲ್ಲಿ ನಮ್ಮ ವಿದ್ಯಾರ್ಥಿಯರಿಂದ ಅನುಭವ, ಕೃತಿ ಮತ್ತು ಪ್ರದರ್ಶನದ ಮೂಲಕ ಶ್ರೀಮಂತಗೊಳಿವ ಪ್ರಯತ್ನ.ಪ್ರತಿ ವರ್ಷವು ನಮ್ಮ ತ್ರಿವರ್ಣ ಕಲಾ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆಯ ಅವಕಾಶವನ್ನು ಕಲ್ಪಿಸಿ, ಅವರ ಅದ್ಭುತ ಪ್ರತಿಭೆಯನ್ನು ಅನಾವರಣಗೊಳಿಸವುದರೊಂದಿಗೆ, ತಮ್ಮ ಅನುಭವ ಮತ್ತು ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವಲ್ಲಿ ಸತತ […]

ಕಾರ್ಕಳ : ಅತ್ತೂರಿನ ಪ್ರತಿಷ್ಠಿತ ಸಂತ ಲಾರೆನ್ಸರ ಬಾಸಿಲಿಕದ ಆವರಣ ಮತ್ತು ಮುಂಭಾಗದಲ್ಲಿ ಐಸಿವೈಎಂ ಯುವಕರು ಹಣತೆ ಹಚ್ಚುವ ಮೂಲಕ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಹಿಂದೂ-ಮುಸ್ಲಿಂ- ಕ್ರೈಸ್ತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕ್ಯಾಂಡಲ್ ಹೊತ್ತಿಸಿ ಹರಕೆ ಹಾಕುವುದು ಇಲ್ಲಿ ಮಾಮೂಲು. ಆದರೆ ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ಐಸಿವೈಎಂ ಯುವ ಸಂಘಟನೆಯ ಸದಸ್ಯರು ಮತ್ತು ಕ್ರೈಸ್ತ ಬಾಂಧವರು ಹಣತೆ ಹಚ್ಚುವ ಮೂಲಕ ದೀಪಾವಳಿ ಹಬ್ಬದ ಸೌಹಾರ್ದತೆಯ ಮಹತ್ವವನ್ನು ಸಮಾಜಕ್ಕೆ ಸಾರಿದರು. ಅತ್ತೂರು ಬಾಸಿಲಿಕಾದ ನಿರ್ದೇಶಕರಾದ […]

ಕುಂದಾಪುರ, ನ.15: ದಿನಾಂಕ 8-11-23 ರಂದು ಜನತಾ ಕಾಲೇಜು ಹೆಮ್ಮಾಡಿ ಇವರು ಆಯೋಜಿಸಿದ ತಾಲ್ಲೂಲು ಮಟ್ಟದ ಜನತಾ ಅವಿಷ್ಕಾರ್ 2ಕೆ23 ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಕುಂದಾಪುರದ ಸಂತ ಮೇರಿಸ್ ಪ್ರೌಢ ಶಾಲೆಯ 5 ವಿದ್ಯಾರ್ಥಿನ್ನೋಳಗೊಂಡ ತಂಡಕ್ಕೆ ದ್ವೀತಿಯ ಸ್ಥಾನವ ಪಡೆಯಿತು. ಇವರಿಗೆ ಶಾಲಾ ವಿಜ್ಞಾನ ಶಿಕ್ಷಕಿಯಾದ, ಸ್ಮಿತಾ ಡಿಸೋಜಾ ಮಾರ್ಗದರ್ಶನ ನೀಡಿದ್ದರು. ಶಾಲಾ ಜಂಟಿ ಕಾರ್ಯದರ್ಶಿ ಅ|ವಂ|ಧರ್ಮಗುರು ಸ್ಟ್ಯಾನಿ ತಾವ್ರೊ, ಶಾಲಾ ಮುಖ್ಯೋಪಾಧ್ಯಾಯಿನಿ ಅಸುಂಪ್ತಾ ಲೋಬೊ ಹಾಗೂ ಇತರ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

ಕುಂದಾಪುರ ಪೇಟೆ ವೆಂಕಟರಮಣ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ಪ್ರತಿ ವರ್ಷ ನಡೆಯುವ “ವಿಶ್ವರೂಪ ದರ್ಶನ” ಕಾರ್ಯಕ್ರಮ ನವೆಂಬರ್ 19 ರಂದು ಪ್ರಾತ:ಕಾಲ ನಡೆಯಲಿದೆ.ದೇವಾಲಯವನ್ನು ಸಂಪೂರ್ಣವಾಗಿ ರಂಗೋಲಿ ನಂದಾ ದೀಪಗಳಿಂದ ಸಿಂಗರಿಸಿ ಪೂಜೆ ನಡೆಸಲಾಗುತ್ತದೆ. ನಂದಾ ದೀಪಾಲಂಕಾರದ ವೈಭವ ಕಣ್ತುಂಬಿಕೊಳ್ಳಲು ನೂರಾರು ಮಂದಿ ಭಕ್ತಾಧಿಗಳು ಮುಂಜಾನೆ 5 ಗಂಟೆಗೆ ಆಗಮಿಸುತ್ತಾರೆ. ಭಕ್ತಾಭಿಮಾನಿಗಳು ಕುಟುಂಬ ಸಮೇತ ಆಗಮಿಸಿ, “ವಿಶ್ವರೂಪ ದರ್ಶನ”ದಲ್ಲಿ ಪಾಲ್ಗೊಳ್ಳಬೇಕೆಂದು ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ಆಹ್ವಾನಿಸಿದ್ದಾರೆ.