ಕುಂದಾಪುರ; ಟಿ.ಸಿ.ಎ ಉಡುಪಿ ಇವರ ಆಶ್ರಯದಲ್ಲಿ ನಡೆಯುತ್ತಿರುವ ಶಾಲಾ ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟದ 2 ದಿನವಾದ ಮಂಗಳವಾರ ನಡೆದ ಹೈಸ್ಕೂಲ್ ವಿಭಾಗದ ಪಂದ್ಯಾಟದಲ್ಲಿ ಟಿ.ಎ ಪೈ ಪ್ರೌಢಶಾಲೆ ಉಡುಪಿ ಜಯ ಸಾಧಿಸಿತು. ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಟಿ.ಸಿ.ಎ ಉಡುಪಿ ಅಧ್ಯಕ್ಷ ಗೌತಮ್ ಶೆಟ್ಟಿ “ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ,ಸೋತಾಗ ಕುಗ್ಗದೇ ಗೆದ್ದಾಗ ಹಿಗ್ಗದೆ,ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ” ಎಂದರು. ಹೈಸ್ಕೂಲ್ ವಿಭಾಗದಲ್ಲಿ ಒಟ್ಟು ಎಂಟು ತಂಡಗಳ ನಡುವೆ ಲೀಗ್ ಹಂತದಲ್ಲಿ ರೋಚಕ […]
ಕುಂದಾಪುರ : ಸಂಗೀತ ಭಾರತಿ ಟ್ರಸ್ಟ್ ಕುಂದಾಪುರ ಹಾಗೂ ಎಸ್.ಜಿ.ಜಿ.ಜಿ.ಡಿ ಚಾರಿಟೆಬಲ್ ಟ್ರಸ್ಟ್ ಕೋಟೇಶ್ವರ ಸಂಯುಕ್ತ ಆಶ್ರಯದಲ್ಲಿ ದೀಪಾವಳಿ ಅಂಗವಾಗಿ ನ.12 ರಂದು ರವಿವಾರ ಮುಂಜಾನೆ 6:30 ರಿಂದ ಭಕ್ತಿ ಸಂಗೀತ ಲಹರಿ ಕಾರ್ಯಕ್ರಮ ಕುಂದಾಪುರದಲ್ಲಿ ಏರ್ಪಡಿಸಲಾಗಿದೆ.ಕುಂದಾಪುರ ವಿಠಲವಾಡಿಯ ಗೋವಿಂದ ನಗರದ ಡೌನ್ ಟೌನ್ ರೆಸಿಡೆನ್ಸಿಯಲ್ ಲೇಔಟ್‍ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.ಖ್ಯಾತ ಸಂಗೀತಗಾರ ಸಿದ್ಧಾರ್ಥ ಬೆಳ್ಮಣ್ಣು ಹಾಡಲಿದ್ದು, ತಬಲಾದಲ್ಲಿ ವಿಘ್ನೇಶ್ ಕಾಮತ್ ಕೋಟೇಶ್ವರ, ಹಾರ್ಮೋನಿಯಂನಲ್ಲಿ ಪ್ರಸಾದ ಕಾಮತ್ ಸಹಕರಿಸಲಿದ್ದಾರೆ. ನಿರಂತರ ಎರಡೂ ಗಂಟೆಗೂ ಹೆಚ್ಚು ಕಾಲ ಶಾಸ್ತ್ರೀಯ […]
ಉಡುಪಿ: ಉಡುಪಿ ಧರ್ಮಪ್ರಾಂತ್ಯದ ನೂತನ ಕಾರ್ಯಾಲಯ /ಬಿಷಪ್ ಹೌಸ್‌ನ ಆಶೀರ್ವಾದ ಮತ್ತು ಶಿಲಾನ್ಯಾಸವು ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್‌ನ ಏವ್ ಮರಿಯಾ ಹಾಲ್‌ನಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಿತು.ವೇದಿಕೆಯಲ್ಲಿ ಉಡುಪಿಯ ಬಿಷಪ್ ಡಾ ಜೆರಾಲ್ಡ್ ಐಸಾಕ್ ಲೋಬೋ, ವಿಕಾರ್ ಜನರಲ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಶ್ರೀ ಮತ್ತು ಶ್ರೀಮತಿ ಮೈಕೆಲ್ ಮತ್ತು ಫ್ಲಾವಿಯಾ ಡಿಸೋಜಾ ಮತ್ತು ಡಾ ಜೆರಿ ವಿನ್ಸೆಂಟ್ ಡಯಾಸ್ ಉಪಸ್ಥಿತರಿದ್ದರು.ಉಡುಪಿ ಧರ್ಮಪ್ರಾಂತ್ಯದ ಐದು ವಲಯ ಪ್ರಧಾನರಾದ, ಕಲ್ಯಾಣಪುರ ವಲಯದ ಅ|ವಂ| ಫಾದರ್ ವಲೇರಿಯನ್ ಮೆಂಡೋನ್ಕಾ, […]
ದೇರಳಕಟ್ಟೆ : ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ 26 ನೇ ವಾರ್ಷಿಕ ರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನವನ್ನು 2023 ರ ನವೆಂಬರ್ 5 ರಂದು ದೇರಳಕಟ್ಟೆಯ ಫಾದರ್ ಮುಲ್ಲರ್ ಸಭಾಂಗಣದಲ್ಲಿ ನಡೆಯಿತು. ಡಾ.ಶ್ರೀಕರ್ ಮನು, ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಡಾ ಮನುಸ್ ಹೋಮಿಯೋಪತಿ ಸಂಸ್ಥಾಪಕರು ಮತ್ತು ಕಲ್ಕತ್ತಾ ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರು ಮತ್ತು ಆಡಳಿತಾಧಿಕಾರಿ ಡಾ.ರಾಜತ್ ಚಟ್ಟೋಪಾಧ್ಯಾಯ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸಮ್ಮೇಳನದಲ್ಲಿ ಸುಮಾರು 720 ಪ್ರತಿನಿಧಿಗಳು ಭಾಗವಹಿಸಿದ್ದರು. ಡಾ.ಶ್ರೀಕರ್ ಮನುಸ್ಪೋಕ್ […]
ಉಡುಪಿ, ತಾ.05,11.2023 ರಂದು ತೊಟ್ಟಂ ಸಂತಾ ಅನ್ನಮ್ಮ ಸಭಾಂಗಣದಲ್ಲಿ ಚರ್ಚಿನ ಅಂತರ್ ಧರ್ಮಿಯ ಆಯೋಗ ಹಾಗು ಸರ್ವ ಧರ್ಮ ಸೌಹಾರ್ದ ಸಮಿತಿಯ ಸಹಯೋಗದೊಂದಿಗೆ ಸರ್ವಧರ್ಮ ದೀಪಾವಳಿ ಹಬ್ಬವನ್ನು, ದೀಪದಿಂದ ದೀಪವ ಹಚ್ಚೋಣ ಪ್ರೀತಿಯಿಂದ ಪ್ರೀತಿಯ ಹಂಚೋಣ ಎಂಬ ಧ್ಯೇಯ ವಾಕ್ಯದೊಂದಿಗೆ ತುಂಬಾ ಸಡಗರದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೊರವರು ವಹಿಸಿದ್ದರು. ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಶ್ರೀ ಪಾಂಡುರಂಗ ರಾವ್ ಪ್ರಧಾನ ಅರ್ಚಕರು […]
ಕುಂದಾಪುರದ ಸಂಗೀತ ಭಾರತಿ ಟ್ರಸ್ಟ್ ಆಶ್ರಯದಲ್ಲಿ ದಿ. ವೈಕುಂಠ ಹೆಬ್ಬಾರ್-ದಿ. ಅವಿನಾಶ ಹೆಬ್ಬಾರ್ ಸ್ಮರಣಾರ್ಥ ಹಿಂದುಸ್ಥಾನಿ ಸಿತಾರ್ ವಾದನ ಕಾರ್ಯಕ್ರಮ ಪಾರಿಜಾತ ಹೋಟೆಲ್‍ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಜರುಗಿತು.ಖ್ಯಾತ ಯುವ ಪ್ರತಿಭೆಗಳಾದ ವಿಜಯ ಬಿ. ಗೊಣಹಲು ಸಿತಾರ್‍ನಲ್ಲಿ ಹಾಗೂ ಅವರ ಸಹೋದರ ಪುಟ್ಟರಾಜ ಬಿ. ಗೊಣಹಲು ತಬಲಾದಲ್ಲಿ ತಮ್ಮ ಅಪೂರ್ವ ಪಾಂಡಿತ್ಯದ ಮೂಲಕ ಉತ್ತಮ ಕಾರ್ಯಕ್ರಮ ನೀಡಿದರು.ವಿಜಯ ಬಿ. ಗೊಣಹಲು ನಂದಾದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಗೀತ ಭಾರತಿ ಟ್ರಸ್ಟ್‍ನ ವಿಶ್ವಸ್ಥರಾದ ಎ.ಎಸ್.ಎನ್. ಹೆಬ್ಬಾರ್ ಅತಿಥಿಗಳನ್ನು ಗೌರವಿಸಿದರು. […]
ಕುಂದಾಪುರ-ಇಲ್ಲಿನ ಗಾಂಧಿಮೈದಾನದಲ್ಲಿ ಟಿ.ಸಿ.ಎ ಉಡುಪಿ ಆಶ್ರಯದಲ್ಲಿ ಉಡುಪಿ-ದ.ಕ ಜಿಲ್ಲಾ ಶಾಲಾ ಕಾಲೇಜು ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ದೊರಕಿತು. ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ಪ್ರಶಾಂತ್ ಕುಂದರ್ “ಗಿಡ ಸುಂದರವಾಗಿ ಕಾಣಲು ಹೂವು ಎಷ್ಟು ಮುಖ್ಯವೋ ,ಪದಾರ್ಥಕ್ಕೆ ಉಪ್ಪು ಖಾರ ಎಷ್ಟು ಮುಖ್ಯವೋ ಅಂತೆಯೇ ಮನುಷ್ಯನ ಜೀವನದಲ್ಲಿ ಕ್ರೀಡೆಯೂ ಮುಖ್ಯವಾಗಿರುತ್ತದೆ ಈ ನಿಟ್ಟಿನಲ್ಲಿ ಅಳಿವಿನಂಚಿನಲ್ಲಿರುವ ಟೆನಿಸ್ ಬಾಲ್ ಕ್ರಿಕೆಟ್ ಉಳಿಸುವ ಟಿ.ಸಿ.ಎ ಪ್ರಯತ್ನ ಶ್ಲಾಘನೀಯ” ಎಂದರು. 64 ವಿದ್ಯಾಸಂಸ್ಥೆಗಳು ಈ ಟೂರ್ನಮೆಂಟ್ ನ ಭಾಗವಾಗಲಿವೆ […]
ಕುಂದಾಪುರ: ಭಾರತೀಯ ಕಥೋಲಿಕ್ ಯುವ ಸಂಚಲನ ಕುಂದಾಪುರ ವಲಯದ ವತಿಯಿಂದ ಆಯೋಜಿಸಲಾದ “ಯುವ ಸ್ಪೋರ್ಟ್ಸ್ ಫಿಯೇಸ್ಟಾ – 2023” ನಡೆದ ಕ್ರೀಡೋತ್ಸವದ ಸಮಾರೋಪ ಮತ್ತು ಟ್ರೋಫಿ ವಿತರಣೆ ಸಮಾರಂಭವು ನವೆಂಬರ್ 05 ರಂದು ಸಂಜೆ ನಡೆಯಿತು.ಈ ಕ್ರೀಡಾ ಫಿಯೆಸ್ಟಾ ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಐದು ವಲಯಗಳಿಂದ ಸುಮಾರು 200 ಯುವ ಯುವತಿಯರು ಭಾಗವಹಿಸಿದ್ದು ಕ್ರೀಡೋತ್ಸವ ಬಹಳ ಯಶಸ್ವಿಯಾಗಿ ಮುಕ್ತಾಯವಾಯಿತು.ಇದರ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರದ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ| ವಂ| ಸ್ಟ್ಯಾನಿ ತಾವ್ರೊ […]
ಕುಂದಾಪುರ, ನ.5: ಭಾರತೀಯ ಕಥೋಲಿಕ್ ಯುವ ಸಂಚಲನ ಕುಂದಾಪುರ ವಲಯದ ವತಿಯಿಂದ ಆಯೋಜಿಸಲಾದ “ಯುವ ಸ್ಪೋರ್ಟ್ಸ್ ಫಿಯೇಸ್ತಾ – 2023 ಇದರ ಉದ್ಘಾಟನೆಯು ಕುಂದಾಪುರದ ಗಾಂಧಿ ಮೈದಾನದಲ್ಲಿ 05-11-2023 ಭಾನುವಾರ ಬೆಳಿಗ್ಗೆ 9.30 ಘಂಟೆಗೆ ವಿಜೃಂಭಣೆಯಿಂದ ನೆರವೇರಿತು. ಈ ಕ್ರೀಡೊತ್ಸವದಲ್ಲಿ ಕುಂದಾಪುರ, ಕಾರ್ಕಳ, ಉಡುಪಿ, ಕಲ್ಯಾಣಪುರ ಹಾಗೂ ಶಿರ್ವ ವಲಯದ ಭಾರತೀಯ ಕಥೋಲಿಕ್ ಯುವ ಸಂಚಲನದ ಸ್ಪರ್ಧಾಳುಗಳು ಭಾಗವಹಿಸಿದ್ದರು. ಎಲ್ಲಾ ವಲಯದ ಸ್ಪರ್ಧಾಳುಗಳಿಂದ ಆಕರ್ಷಕ ಪಥಸಂಚಲನ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಾದ್ಯವ್ರಂ ದದೊಂದಿಗೆ ಎನ್. […]