
ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ರವರ ನಿಯೋಗದಿಂದ ಸನ್ಮಾನ ಮಂಗಳೂರು ;ವಿಧಾನ್ ಪರಿಷತ್ ಕಲಾಪದಲ್ಲಿ ಅಲ್ಪಸಂಖ್ಯಾತರ ಪರವಾಗಿ ಹೊಸ ಪ್ರಸ್ತಾವನೆಯನ್ನು ಸಲ್ಲಿಸಿದ MLC ಐವನ್ ಡಿಸೋಜಾ ಮಂಗಳೂರು ಇವರನ್ನು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ವತಿಯಿಂದ ಅಭಿನಂದಿಸುವ ಕಾರ್ಯಕ್ರಮವು ಮಂಗಳೂರಿನಲ್ಲಿ ನಿನ್ನೆ ಮಾರ್ಚ್ 22ರಂದು ಶನಿವಾರ ನಡೆಯಿತು.“ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ವಿಧೇಯಕ” ತಿದ್ದುಪಡಿ 2025 ರಲ್ಲಿ ಪ್ರವರ್ಗ-2ಬಿ ನಲ್ಲಿ – ಕರ್ನಾಟಕ ಸರಕಾರವು, ತನ್ನ ನಿರ್ಮಾಣದ ಕೆಲಸ ಕಾರ್ಯಗಳಿಗೆ ಕಾಂಟ್ರಾಕ್ಟ್ ಗಳನ್ನು ನೀಡುವಾಗ […]

ಕುಂದಾಪುರ: ಭಾರತವು 21ನೇ ಶತಮಾನದಲ್ಲಿ ಅಭಿವೃದ್ಧಿಪರ ಕನಸನ್ನು ಸಾಕಾರಗೊಳಿಸುವತ್ತ ಸಾಗುತ್ತಿದೆ. ಈ ದಿಸೆಯಲ್ಲಿ ನಮ್ಮ ಪ್ರಯತ್ನವಿದೆ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಮ್.ಎಸ್.ಜಯಕರ ಶೆಟ್ಟಿ ಹೇಳಿದರು.ಅವರು 22 ಮಾರ್ಚ್ ರಂದು ನಡೆದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ದಿನಗಳ ಕಾಲ ನಡೆಯುತ್ತಿರುವ ಕಾಲೇಜು ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಈಗ ಕೆಲಸ ಬೇಕು ಅಂದ್ರೆ 21ನೇ ಶತಮಾನ ಬಯಸುವ ಶಿಕ್ಷಣ ಬೇಕು. ಅಂದರೆ ಉದ್ಯೋಗ ಆಧಾರಿತ ಕೌಶಲ್ಯ ಆಧಾರಿತ ಶಿಕ್ಷಣದ ಅಗತ್ಯವಿದೆ. ಈ ಶತಮಾನ ಭಾರತೀಯ ವಾಗುತ್ತದೆ ಎನ್ನುವುದರಲ್ಲಿ ಎರಡು […]

ಮಂಗಳೂರು, ಮಾರ್ಚ್ 22, 2025 : ಕರಾವಳಿ ಕರ್ನಾಟಕದ ಪ್ರತಿಷ್ಠಿತ ರಿಯಲ್ ಎಸ್ಟೇಟ್ಡೆ ವಲಪರ್ ರೋಹನ್ ಕಾರ್ಪೊರೇಷನ್, ತನ್ನ ಹೊಸ ರೆಸಿಡೆನ್ಶಿಯಲ್ ಪ್ರಾಜೆಕ್ಟ್ ‘ರೋಹನ್ ನೆಸ್ಟ್’ ಇದರ ಭೂಮಿಪೂಜೆಯು ಮಾರ್ಚ್ 24, 2025, ಸಂಜೆ 4:00 ಗಂಟೆಗೆ ಮಂಗಳೂರಿನ ಅತ್ತಾವರ-ಬಾಬುಗುಡ್ಡ ಪ್ರದೇಶದಲ್ಲಿ ನಡೆಯಲಿದೆ. ರೋಹನ್ ನೆಸ್ಟ್:ರೋಹನ್ ನೆಸ್ಟ್ ಮಂಗಳೂರಿನ ನಗರ ಜೀವನವನ್ನು ಪುನರ್ವ್ಯಾಖ್ಯಾನಿಸುವ ಉದ್ದೇಶದಿಂದ ಯೋಜನಾಬದ್ಧವಾಗಿ ರೂಪಿಸಲಾದ ಒಂದು ವಾಸಯೋಗ್ಯ ನಿವೇಶನವಾಗಿದೆ. ಈ ಪ್ರಾಜೆಕ್ಟ್ 58 ಉತ್ತಮವಾಗಿ ವಿನ್ಯಾಸಗೊಳಿಸಲಾದ 2 ಬಿ.ಎಚ್.ಕೆ. ಅಪಾರ್ಟ್’ಮೆಂಟ್’ಗಳನ್ನು ಒಳಗೊಂಡಿದೆ, ಇದು ಮೂರು […]

ಮಂಗಳೂರು;ಇಂದಿಲ್ಲಿ ಶನಿವಾರ ಸಂಜೆ ಸುಮಾರು 6.00 ಗಂಟೆ ವೇಳೆಗೆ ಮಂಗಳೂರು ಪದುವ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರೆಡ್ಮಿಕ್ಸ್ ಕಾಂಕ್ರೀಟ್ ಸಾಗಿಸುವ ಟ್ರಕ್ನ ನಿರ್ಲಕ್ಷ್ಯದಿಂದಾಗಿ, ಮಾರ್ಗದಲ್ಲಿ ಕಾಂಕ್ರೀಟ್ ಚೆಲ್ಲಿದ್ದರಿಂದ ದ್ವಿಚಕ್ರ ವಾಹನವೊಂದು ಜಾರಿ ರಸ್ತೆಗೆ ಅಪ್ಪಳಿಸಿತು. ಆದ್ದರಿಂದ ಉಳಿದ ವಾಹನಗಳ ಸಂಚಾರಕೆಜೆ ಅಡ್ಡಿಯಾಯಿತು. ಇದನ್ನು ಗಮನಿಸಿದ ಸ್ಥಾನಿಯವಾಗಿ ಧರ್ಮಾರ್ಥ ಸೇವೆ ನೀಡುತ್ತಿರುವ ಟ್ರಾಫಿಕ್ ವಾರ್ಡನ್ ಫ್ರಾನ್ಸಿಸ್ ಮ್ಯಾಕ್ಸಿಮ್ ಮೊರಾಸ್ ತಕ್ಷಣವೇ ಎಚ್ಚರ ವಹಿಸಿ ಪೊರಕೆಯೊಂದನ್ನು ತಂದು ರಸ್ತೆಯನ್ನು ಸ್ವಚ್ಛಗೊಳಿಸಿ ತನ್ನ ಪ್ರಾಮಾಣಿಕ ಸೇವೆಗಾಗಿ ಸಾರ್ವಜನಿಕರ ಪ್ರಶಂಗೆ ಪಾತ್ರರಾದರು.

ಮಂಗಳೂರು ; ಎಸ್.ಸಿ.ಎಸ್ ಕಾಲೇಜ್ ಮತ್ತು ಇನ್ಸ್ಟಿಟ್ಯೂಟ್ ಆಫ್ ನಸಿರ್ಂಗ್ ಸೈನ್ಸಸ್ನ ಪದವಿ ಮತ್ತು ಡಿಪ್ಲೊಮಾ ಪ್ರದಾನ ಸಮಾರಂಭವು ಬುಧವಾರ ಮಾರ್ಚ್ 19, 2025 ರಂದು ಮಂಗಳೂರಿನ ಬೆಂದೂರಿನಲ್ಲಿರುವ ಸೇಂಟ್ ಸೆಬಾಸ್ಟಿಯನ್ ಪ್ಲಾಟಿನಂ ಜುಬಿಲಿ ಹಾಲ್ನಲ್ಲಿ ನಡೆಯಿತು. ಕಾರ್ಯಕ್ರಮವು ಸ್ವಾಗತ ನೃತ್ಯದೊಂದಿಗೆ ಪ್ರಾರಂಭವಾಯಿತು, ನಂತರ ಗಣ್ಯರು ವೇದಿಕೆಯಲ್ಲಿ ದೀಪ ಬೆಳಗಿಸಿದರು. ಸಮಾರಂಭದ ಮುಖ್ಯ ಅತಿಥಿ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ. ಸಂತೋಷ್ ಸುಭಾಷ್ ಇಂಡಿ ಪದವೀಧರರನ್ನು ಪ್ರೀತಿ, ಸಹಾನುಭೂತಿ ಮತ್ತು […]

ಗಂಗೊಳ್ಳಿ; ಕುಟುಂಬ ಆಯೋಗ ಮತ್ತು 2025 ಜುಬಿಲಿ ಸಮಿತಿಯ ಮುಂದಾಳತ್ವದಲ್ಲಿ ಅಪ್ಪಂದಿರ ಜಯಂತೋತ್ಸವ ಆಚರಣೆಯನ್ನು ಮಾರ್ಚ್ 16 ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು. ಒಟ್ಟು 71 ತಂದೆಯಂದಿರು ಈ ಕಾರ್ಯಕ್ರಮಕ್ಕೆ ಹಾಜರಿದ್ದರು. ದೇವಾಲಯದ ಧರ್ಮ ಗುರುಗಳಾದ ವಂದನೀಯ ಗುರು ಥಾಮಸ್ ರೋಶನ್ ಡಿಸೋಜರವರ ಮುಂದಾಳತ್ವದಲ್ಲಿ ಪವಿತ್ರ ಬಲಿ ಪೂಜೆ ನೆರವೇರಿತು. ನಂತರ ಬಣ್ಣದ ಕೊಡೆಗಳ ಮೂಲಕ ಮೆರವಣಿಗೆಯಲ್ಲಿ ದಂಪತಿಗಳನ್ನು ಸಂತ ಜೋಸೆಫ್ ವಾಜರ ಸಭಾಂಗಣಕ್ಕೆ ಸ್ವಾಗತಿಸಲಾಯಿತು. ಸಭಾಂಗಣದಲ್ಲಿ ತಂದೆಯಂದಿರಿಗಾಗಿ ನೃತ್ಯ, ಮೈಮ್, ಅಭಿನಂದನೆ ಗೀತೆ, ವಿಡಿಯೋ ಕ್ಲಿಪ್ಪಿಂಗ್ ಕಾರ್ಯಕ್ರಮ […]

ಉಡುಪಿ ; ಮಾನವೀಯತೆ ಮರೆತ ಉಡುಪಿ ನಾಗರಿಕ ಸಮಾಜ ಪರಶುರಾಮ ದೇವರ ಮೂರ್ತಿ ಹೆಸರಲ್ಲಿ ಕೋಟಿ ಕದ್ದವನನ್ನು ಓಟು ಹಾಕಿ ಗೆಲ್ಲಿಸುತ್ತಾರೆ. ಉಡುಪಿಯ ಜೀವನಾಡಿಯಂತಿದ್ದ ಸಕ್ಕರೆ ಕಾರ್ಖಾನೆಯ ಸಂಪತ್ತು ಕೊಳ್ಳೆ ಹೊಡೆದವರನ್ನು ಸಮರ್ಥನೆ ಮಾಡುತ್ತಾರೆ. ಹಗರಣಗಳ ಮೇಲೆ ಹಗರಣ ಮಾಡಿದವರಿಗೆ ಇಲ್ಲಿ ಹಿಂಬಾಲಕರು ನಾಯಿ ಬಾಲದಂತೆ ಛವಣಿ ಬಿಸುತ್ತಾರೆ. ಆದರೆ ನೆಲದಲ್ಲಿ ಕಾಲಡಿಗೆ ಬಿದ್ದ ನಾಲ್ಕು ಮೀನುಗಳನ್ನು ಪದಾರ್ಥಕ್ಕೆಂದು ಹೆಕ್ಕಿಕೊಂಡು ಹೋದರೆ ಮರಕ್ಕೆ ಕಟ್ಟಿಹಾಕಿ ಬಡಿಯುತ್ತಾರೆ.ಇಂದು ಉಡುಪಿ ಮಲ್ಪೆ ಬಂದರಿನಲ್ಲಿ ಮಹಿಳೆಯೋರ್ವರನ್ನು ಮೀನು ಕದ್ದರೆಂಬ ಕಾರಣ ನೀಡಿ […]

ಬ್ರಹ್ಮಾವರ ; ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಬಹು ಕೋಟಿ ವಂಚನೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ 27ನೇ ದಿನದಂದು ಜಿಲ್ಲಾ ಕ್ರೈಸ್ತ ನಾಯಕರುಗಳು ಭಾಗವಹಿಸಿದ್ದರು.ರಾಜ್ಯ ಸಾಬೂನು ಮತ್ತು ಡಿಟರ್ಜೆಂಟ್ ಲಿಮಿಟೆಡ್ ನಿಗಮ ಮಾಜಿ ಅಧ್ಯಕ್ಷೆ ವೇರೊನಿಕಾ ಕರ್ನೆಲಿಯೋ ಮಾತನಾಡಿ, 15 ಕೋಟಿ ಅಕ್ರಮದ ಆರೋಪವಿದ್ದರೂ ಜಿಲ್ಲಾ ಜನಪ್ರತಿನಿಧಿಗಳ ಜಾಣ ಮೌನ ಜನಸಾಮಾನ್ಯರ ಸಂಶಯಕ್ಕೆ ಕಾರಣವಾಗಿದೆ ಎಂದರು. ರೈತ ಸಂಘದ ಅಧ್ಯಕ್ಷರಾದ ಪ್ರತಾಪ್ ಚಂದ್ರ ಶೆಟ್ಟಿ ಅವರು ಸರ್ವರನ್ನು ಸ್ವಾಗತಿಸಿ, ಬ್ರಹ್ಮಾವರ […]

ಮಂಗಳೂರು; ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಮಾಜಿ ಅಧ್ಯಕ್ಷರಾದ ದಿವಂಗತ ಕಾಸ್ಮಿರ್ ಮಿನೇಜಸ್ ಇವರಿಗೆ ಶೃದ್ಧಾಂಜಲಿ ಅರ್ಪಿಸುವ ಸಲುವಾಗಿ ಹಾಗೂ ಅವರು ಸಮಾಜಕ್ಕೆ ನೀಡಿದ ದೇಣಿಗೆಯನ್ನು ಪರಿಗಣಿಸಿ “ಧೀರ್ ತಾಂಡೆಲಿ” ಎಂಬ ಬಿರುದನ್ನು ನೀಡಿ ಗೌರವಿಸುವ ಸಲುವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ದಿನಾಂಕ 17/3/2025 ರಂದು ಮಂಗಳೂರಿನ ಬಿಜೈಯಲ್ಲಿರುವ ಬಿಜೈ ಚರ್ಚ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮವನ್ನು ದಿವ್ಯ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ|ಪೀಟರ್ ಪೌಲ್ ಸಲ್ಡಾನ್ಹಾರವರು ಹಾಗೂ ಕಥೊಲಿಕ್ ಸಭಾ […]