

ಕೋಟೇಶ್ವರದ ಖ್ಯಾತ ವ್ಯವಹಾರೋದ್ಯಮಿ,ಮೆ.ಆಟಕೆರೆ ಅನಂತ ಶ್ರೀನಿವಾಸ ಪೈ ಎಂಡ್ ಸನ್ಸ್,ಮಹಾಮಾಯ ಸಂಸ್ಥೆಗಳ ಮುಖ್ಯಸ್ಥರಾದ ಆಟಕೆರೆ ರಾಮಚಂದ್ರ ಅನಂತ ಪೈ, (58) ದಿನಾಂಕ 16ರಂದು ರವಿವಾರ ನಿಧನರಾದರು.ಉಡುಪಿ ಜಿಲ್ಲೆಯ ರಖಂ ದಿನಸಿ ವ್ಯವಹಾರದಲ್ಲಿ ಪ್ರಸಿದ್ಧವಾಗಿದ್ದ ಕುಟುಂಬದ ವ್ಯವಹಾರವನ್ನು ಸಹೋದರರೊಂದಿಗೆ ಇನ್ನಷ್ಟು ಅಭಿವೃದ್ಧಿ ಪಡಿಸಿ,ಆಧುನೀಕರಣ ಗೊಳಿಸಿದ ಖ್ಯಾತಿ ಇವರದ್ದು. ಇವರು ಪತ್ನಿ,ಇಬ್ಬರು ಪುತ್ರರು ಹಾಗೂ ಅಪಾರಬಂಧುಗಳನ್ನು ಅಗಲಿದ್ದಾರೆ.
