ಕುಂದಾಪುರದಲ್ಲಿ 76ನೇ ಗಣರಾಜ್ಯೋತ್ಸವದ೦ದು ರಾಷ್ಟ್ರಮತ್ತು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ಸನ್ಮಾನ

ಕುಂದಾಪುರದಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದದಂದು ರಾಷ್ಟ್ರಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ವಿವಿಧ ಶಾಲೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ವಿದ್ಯಾರ್ಥಿಗಳ ಪ್ರತಿಭೆಗೆ ಮನ್ನಣೆ ನೀಡುವ ಉದ್ದೇಶದಿಂದ ಸನ್ಮಾನಿಸಲಾಯಿತು
ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಕುಂದಾಪುರದ ಹೋಲಿ ರೋಜರಿ ಇಂಗ್ಲಿಷ್ ಮಾಧ್ಯಮ ಶಾಲೆಯ ಯೋಗ ಪಟು, ಯೋಗಕುಮಾರಿ ಬಿರುದಂಕಿತ ಲಾಸ್ಯ ಮಧ್ಯಸ್ಥ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಈಕೆ ಕುಂದಾಪುರದ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯಲ್ಲಿ ಓದುತ್ತಿದ್ದು, ಲತಾ ಮಧ್ಯಸ್ಥ ಮತ್ತು ಅರುಣ ಮಧ್ಯಸ್ಥ ದಂಪತಿಗಳ ಪುತ್ರಿ ಆಗಿದ್ದಾಳೆ.

ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳಲ್ಲಿ 76ನೇ ಗಣರಾಜ್ಯೋತ್ಸವ ಆಚರಣೆ.

ಕುಂದಾಪುರ (ಜ.26): ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ. ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಇಂದು ಭಾರತದ 76ನೇ ಗಣರಾಜ್ಯೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಸಂಸ್ಥೆಯ ಅಕಾಡೆಮಿಕ್ ಕೋ ಆರ್ಡಿನೇಟರ್ ಆಗಿರುವ ಶ್ರೀಮತಿ ವಿಲ್ಮಾ ಡಿ.ಸಿಲ್ವ, ಮಹಾತ್ಮಾ ಗಾಂಧೀಜಿ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೆ ಗೈದು, ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವದ ಶುಭ ಸಂದೇಶವನ್ನು ತಿಳಿಸಿದರು. ಶಿಕ್ಷಕಿ ಆಶಾ ಎಸ್ ಗಣರಾಜ್ಯೋತ್ಸವದ ಮಹತ್ವ ಮತ್ತು ಆ ನಿಟ್ಟಿನಲ್ಲಿ ಭಾರತೀಯರಾಗಿ, ಶಿಕ್ಷಕರಾಗಿ ತಮ್ಮ ಜವಾಬ್ದಾರಿಗಳನ್ನು ನೆನಪಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು, ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೌಢಶಾಲಾ ಶಿಕ್ಷಕಿ ಸರೋಜಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳಲ್ಲಿ 76ನೇ ಗಣರಾಜ್ಯೋತ್ಸವ ಆಚರಣೆ

ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ – ಬ್ಲಾಕ್ ಕಾಂಗ್ರೆಸ್ ಕುಂದಾಪುರ

ಇಂದು ಗಣರಾಜ್ಯೋತ್ಸವ ಪ್ರಯುಕ್ತ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು. ಧ್ವಜಾರೋಹಣವನ್ನು ನಗರ ಕಾಂಗ್ರೆಸ್ ಅಧ್ಯಕ್ಷರಾದ ಗಣೇಶ್ ಶೇರಿಗಾರ್ ನೆರವೇರಿಸಿದರು. ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ, ಪುರಸಭಾ ಸದಸ್ಯರಾದ ಶ್ರೀಧರ್ ಶೇರಿಗಾರ್, ಸೋಶಿಯಲ್ ಮೀಡಿಯಾ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ , ಜಿಲ್ಲಾಧ್ಯಕ್ಷ ರೋಶನ್ ಶೆಟ್ಟಿ , ಯೋಜನಾ ಪ್ರಾಧಿಕಾರ ಸದಸ್ಯ ಚಂದ್ರ ಅಮೀನ್, ಅಲ್ಫಾಜ್ ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ರೇವತಿ ಶೆಟ್ಟಿ, ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾದ ಅಭಿಜಿತ್ ಪೂಜಾರಿ , ವಿ ಗಣೇಶ್ ,ಕುಂದೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸೀಮಾ ಚಂದ್ರ ಪೂಜಾರಿ , ಶುಭಾಷ್ ಪೂಜಾರಿ, ಅಶೋಕ್ ಸುವರ್ಣ, ಶಶಿ ರಾಜ್ ಪೂಜಾರಿ ,ಶಶಿಧರ ನಂದಿಬೆಟ್ಟು, ಸದಾನಂದ ಖಾರ್ವಿ, ಜಾನ್ ಎಫ್ ಡಿಸೋಜಾ ,ರಿಯಾಜ್ ಕೋಡಿ, ಅರುಣ್ ಪಟೇಲ್ , ಕುಮಾರ ಖಾರ್ವಿ, ಚಂದ್ರಕಾಂತ ಖಾರ್ವಿ ,ಎಡಾಲ್ಫ್ ಡಿ ಕೊಸ್ಟಾ, ಮಧುಕರ ,ನಿತಿನ್ ಡಿಸೋಜಾ , ಡೆಪೋಡಿಲ್ ಕ್ರಾಸ್ಟೋ ,ಪ್ರಭಾಕರ ಕಡಗಿಮನೆ ,ಶಶಿರ ಇನ್ನಿತರರು ಉಪಸ್ಥಿತರಿದ್ದರು.

ಕೋಲಾರ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮಕ್ಕಾಗಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ರೈತ ಸಂಘ ಒತ್ತಾಯ

ಶಿಕ್ಷಣದಲ್ಲಿ ಪಠ್ಯಾಧಾರಿತ ಬೋಧನೆಯಷ್ಟೇ ವಿದ್ಯಾರ್ಥಿಯ ಮನಸ್ಸು ಮುಟ್ಟಲು ಸಾಧ್ಯವಿಲ್ಲ . ಪ್ರಾಯೋಗಿಕ ಶಿಕ್ಷಣವೂ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ – ಬಿಆರ್‌ಸಿ ಕೆ.ಸಿ.ವಸಂತ

°

ನರೇಗಾ ಯೋಜನೆಯು ಗ್ರಾಮಗಳ ಅಭಿವೃದ್ದಿಗೆ ಸಹಕಾರಿ, ನಾಗರೀಕರು ಗ್ರಾಮಗಳ ಅಭಿವೃದ್ಧಿಗಾಗಿ ಕೈಜೋಡಿಸಬೇಕು – ಜಿ.ಪಂ ಸಿಇಒ ಡಾ.ಪ್ರವೀನ್‍ಕುಮಾರ್

ನಗರ ಯೋಜನಾ ಪ್ರಾಧಿಕಾರ ಕಚೇರಿಯಲ್ಲಿ ಏಕ ವಿನ್ಯಾಸ ನಕ್ಷೆ ರಚನೆಯ ಕಾರ್ಯಗಾರ

ಕುಂದಾಪುರ; ರೋಜರಿ ಮಾತಾ ಚರ್ಚಿನಲ್ಲಿ ವಲಯ ಮಟ್ಟದ ಕ್ರೈಸ್ತ ಐಕ್ಯತೆ ಪ್ರಾರ್ಥನಾ ಕೂಟ